ಬಲ್ಲಂಗುಡೆಲು ಶ್ರೀ ಪಾಡಂಗರೇ ಭಗವತೀ ಕ್ಷೇತ್ರದ ವಾರ್ಷಿಕ ಕಳಿಯಾಟ ಮಹೋತ್ಸವ ಸಂದರ್ಭದಲ್ಲಿ ಸತತ ಕಳೆದ ಐವತ್ತು ವರ್ಷಗಳಿಂದ ಯಕ್ಷಗಾನ ಸೇವೆಯನ್ನು ಮಾಡುತ್ತಿರುವ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರಾದ ನ್ಯಾ.ಎಂ ದಾಮೋದರ ಶೆಟ್ಟಿ ಮಜಿಬೈಲ್ ರವರಿಗೆ ಗೆಳೆಯರ ಬಳಗ (ರಿ) ಬಲ್ಲಂಗುಡೆಲು ವತಿಯಿಂದ ಸನ್ಮಾನಿಸಲಾಯಿತು. ಗೆಳೆಯರ ಬಳಗ (ರಿ) ಬಲ್ಲಂಗುಡೆಲು ಇವರ 33 ನೇ ವರ್ಷದ ವಾರ್ಷಿಕೋತ್ಸವದ ಸಭಾ ವೇದಿಕೆಯಲ್ಲಿ ನ್ಯಾಯವಾದಿ ಎಂ.ದಾಮೋದರ ಶೆಟ್ಟಿಯವರ ಸೇವೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು.

ಸಭಾ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರು ಹಾಗೂ ಪ್ರಸಂಗಕರ್ತರಾದ ಯೋಗಿಶ್ ರಾವ್ ಚಿಗುರುಪಾದೆ, ಕ್ಷೇತ್ರದ ಪ್ರದಾನ ಮನೆತನದವರಾದ ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು, ಕ್ಷೇತ್ರದ ಸೇವಾ ಸಮಿತಿಯ ಮಾಜಿ ಅಧ್ಯಕ್ಷರಾದ ಶೇಖರ ಎಂ ಸೊಯಿಪಕಲ್ಲು, ಕ್ಷೇತ್ರದ ಸೇವಾ ಸಮಿತಿಯ ಅಧ್ಯಕ್ಷರಾದ ಜಯರಾಮ ಬಲ್ಲಂಗುಡೆಲು, ಗೆಳೆಯರ ಬಳಗದ ಅಧ್ಯಕ್ಷರಾದ ಮಾದವ ಉಳಿಯ, ರಮೇಶ್ ಸುವರ್ಣ, ಗೆಳೆಯರ ಬಳಗದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಅರವೀಂದಾಕ್ಷ ಭಂಡಾರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸನ್ಮಾನಿತರ ಪರಿಚಯವನ್ನು ಮಾಡಿಕೊಂಡರು. ಕಾರ್ತಿಕ್ ಶೆಟ್ಟಿ ಸೋಯಿಪಕಲ್ಲು ಸ್ವಾಗತಿಸಿ ಪ್ರದೀಪ್ ಶೆಟ್ಟಿ ಬಲ್ಲಂಗುಡೆಲು ಧನ್ಯವಾದವಿತ್ತರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಗೆಜ್ಜೆಗಿರಿ ಮೇಳದವರಿಂದ ಗೆಜ್ಜೆಗಿರಿ ಕ್ಷೇತ್ರ ಮಾಹತ್ಮೆ ಯಕ್ಷಗಾನ ನಡೆಯಿತು.