Author: admin
ಅಯ್ಯಪ್ಪ ಸ್ವಾಮಿ ಮಂದಿರ ಆಸೈಗೋಳಿ ವತಿಯಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮುಂದಾಳು, ಸಹಕಾರಿ ಧುರೀಣ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು ಅವರನ್ನು ಅಭಿನಂದಿಸಲಾಯಿತು. ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆಯ ನಿವೃತ ಮುಖ್ಯ ಶಿಕ್ಷಕರು ರವೀಂದ್ರ ರೈ ಅವರು ಅಭಿನಂದನಾ ಭಾಷಣ ಮಾಡಿ, ಸಮಾಜ ಸೇವೆಯಿಂದ ಸಂತೃಪ್ತಿ ಸಿಗುತ್ತದೆ. ಅಂಥ ವ್ಯಕ್ತಿತ್ವ ಕೃಷ್ಣ ಶೆಟ್ಟಿ ಅವರದ್ದಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ, ಯಾವುದೇ ಪ್ರತಿಫಲ ಬಯಸದೆ ಮಾಡಿದ ಸೇವೆ ಭಗವಂತನ ಸೇವೆಯಾಗಿ ಉಳಿಯುತ್ತದೆ ಎಂದರು. ಅಯ್ಯಪ್ಪ ಸ್ವಾಮಿ ಮಂದಿರದ ಗೌರವ ಅಧ್ಯಕ್ಷ ಸುರೇಶ್ ಚೌಟ, ಅಸೈಗೋಳಿ ವ್ಯವಸಾಯ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಭಾಸ್ಕರ್ ದಾಸರಮೂಲೆ, ಮಂದಿರದ ಟ್ರಸ್ಟಿಗಳಾದ ಮಂಜುನಾಥ್ ಆಳ್ವ, ವಿಶ್ವನಾಥ್ ನಾಯ್ಕ್, ಗಣೇಶ್ ಸೈಟ್, ರಾಮಕೃಷ್ಣ ಪಟ್ಟೋರಿ, ಸುಧಾಕರ್ ಭಟ್, ಮಂದಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ರಮೇಶ್ ರೈ ಕೆಳಗಿನ ಮನೆ ಪಟ್ಟೋರಿ, ವಸಂತ್ ಪಟ್ಟೋರಿ, ಮಂದಿರದ ಗುರುಸ್ವಾಮಿ ಜಗನ್ನಾಥ್,…
ಐಕಳ ಶ್ರೀ ಹರೀಶ್ ಶೆಟ್ಟಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಐಕಳ ಎಂಬ ಪುಟ್ಟ ಊರಿನಲ್ಲಿ ಹುಟ್ಟಿ ಬೆಳೆದು ಇಂದು ವಿಶ್ವ ವಿಖ್ಯಾತರಾಗಿದ್ದಾರೆ. ಕಾರಣ ಐಕಳ ಹರೀಶ್ ಶೆಟ್ಟಿ ಅವರ ಅಸಾಧಾರಣ ಸಂಘಟನಾ ಚಾತುರ್ಯ, ಅಪ್ರತಿಮ ಸಂಘ ನೇತೃತ್ವ ಹಾಗೂ ದೂರಾಲೋಚನೆಯ ಕಾರ್ಯಪಟುತ್ವ. ಎರಡು ಗುತ್ತು ಮನೆತನಗಳ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿದ್ದ ರಾಮಣ್ಣ ಶೆಟ್ಟಿ ದೇವಕಿ ಶೆಟ್ಟಿ ದಂಪತಿಯರಿಗೆ ಪುತ್ರನಾಗಿ ಜನಿಸಿದ ಐಕಳ ಅವರು ಬಾಲ್ಯದ ದಿನಗಳಿಂದಲೇ ವಿಶಿಷ್ಟ ಗುಣ ಸ್ವಭಾವವನ್ನು ಹೊಂದಿದ್ದು ಓರಗೆಯ ಮಕ್ಕಳಿಗಿಂತ ಭಿನ್ನವಾಗಿ ಗುರುತಿಸಲ್ಪಡುತ್ತಿದ್ದರು. ಆಕರ್ಷಕ ಕಂಗಳ ಗುಂಗುರು ಕೂದಲಿನ ಗೌರವ ವರ್ಣದ ಐಕಳ ಅವರು ಸ್ಫುರದ್ರೂಪಿಯಾಗಿದ್ದರು. ಬೆಳೆಯುತ್ತಿದ್ದಂತೆ ಹುಡುಗರ ಗುಂಪಿಗೆ ಮುಖಂಡನಾಗಿ, ಆಟ ಪಾಠಗಳೆರಡರಲ್ಲೂ ಮುಂದಿದ್ದು ಶಿಕ್ಷಕ ವರ್ಗದ ಪ್ರೀತಿಗೆ ಪಾತ್ರರಾಗಿದ್ದರು. ತನ್ನ ದೇಹ ಸೌಷ್ಠವವನ್ನು ಕಾಪಾಡುವುದರಲ್ಲಿ ಮೊದಲ ಆದ್ಯತೆ ನೀಡುತ್ತಿದ್ದ ಕಾರಣ ಕಾಲೇಜು ಮೆಟ್ಟಿಲು ಹತ್ತುವ ವೇಳೆಗೆ ಮಧ್ಯಮ ಆಳ್ತನ ಆಕರ್ಷಕ ಮೈಕಟ್ಟು. ಮುಖದಲ್ಲಿ ಮಿನುಗುವ ಆತ್ಮ ವಿಶ್ವಾಸದ ಮಂದಹಾಸದಿಂದ ಚಿತ್ರ ನಟರೊಬ್ಬರನ್ನು ಹೋಲುತ್ತಿದ್ದರು.…
ವಿದ್ಯಾಗಿರಿ : ನಮ್ಮನ್ನು ನಾವು ಮೊದಲು ಬದಲಿಸಿಕೊಳ್ಳದೆ ಹೊರತು, ಸಮಾಜವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಆಳ್ವಾಸ್ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹ ಪ್ರಾಧ್ಯಪಕಿ ಡಾ. ಮೂಕಾಂಬಿಕಾ ಜಿ. ಎಸ್ ಹೇಳಿದರು. ಆಳ್ವಾಸ್ ಪದವಿ ಪೂರ್ವ ವಿಭಾಗದ ವತಿಯಿಂದ ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಗುರುವಾರ ಆಂತರಿಕ ಸಮಿತಿ ಆಯೋಜಿಸಿದ್ದ ‘ಮಹಿಳಾ ದೌರ್ಜನ್ಯ ತಡೆ ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ದೇಶದ ‘ಯತ್ರಾ ನಾರ್ಯಂತು ಪೂಜ್ಯಂತೆ’ ಶ್ಲೋಕವನ್ನು ನಾವು ಒಪ್ಪುತ್ತೇವೆ, ಆದರೆ ಪಾಲಿಸುವುದಿಲ್ಲವೇಕೆ? ಎಲ್ಲರಿಗೂ ದೌರ್ಜನ್ಯವಾಗುತ್ತದೆ, ಆದರೆ ಈ ತಕ್ಕಡಿಯಲ್ಲಿ ಮಹಿಳಾ ದೌರ್ಜನ್ಯದ ತಕ್ಕಡಿ ಮಾತ್ರ ನೆಲಮುಟ್ಟುವಷ್ಟು ತೂಕ ಹೊಂದಿದೆ. ಎಲ್ಲರನ್ನ ಗೌರವಿಸುವ ವ್ಯಕ್ತಿತ್ವ ಇದ್ದರೆ ಸಮಸ್ಯೆಗೆ ಪರಿಹಾರ ಸಾಧ್ಯ. ಪ್ರತಿ ಕಾನೂನುಗಳ ಹಿಂದೆ ಒಂದು ಇತಿಹಾಸವಿದೆ. ರಕ್ಷಣೆ ಕೊಡುವ ಕಾನೂನು ಇರುವಾಗ ಸಮಸ್ಯೆಗಳನ್ನು ತಿಳಿಸಲು ಹಿಂಜರಿಯುವುದು ಸೂಕ್ತವಲ್ಲ. ಪ್ರಕೃತಿಯ ಮುಂದೆ ಎಲ್ಲರೂ ಸಮಾನರು. ಅಸಮಾನತೆಯನ್ನು ನಮ್ಮಿಂದ ಮೊದಲು ದೂರ ತಳ್ಳಬೇಕು, ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಪದವಿಪೂರ್ವ…
ಮೂಡುಬಿದಿರೆ: ಸ್ನಾತಕೋತ್ತರ ಹಂತದಲ್ಲಿ ಪ್ರತಿ ವಿದ್ಯಾರ್ಥಿ ತಾನು ಆಯ್ಕೆ ಮಾಡಿಕೊಂಡಿರುವ ವಿಷಯದ ಕ್ಷೇತ್ರದಲ್ಲಿ ಬದುಕನ್ನು ರೂಪಿಸಿಕೊಳ್ಳುವ ನೆಲೆಯಲ್ಲಿ ತನ್ನನ್ನು ತಯಾರಿ ಮಾಡಿಕೊಳ್ಳುತ್ತಿರಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ನುಡಿದರು. ಆಳ್ವಾಸ್ ಕಾಲೇಜಿನ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗುರುವಾರ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಸಕ್ತಿಯ ಕ್ಷೇತ್ರದ ಉದ್ದೇಶಗಳ ಅರಿವು ಅತ್ಯವಶ್ಯಕ. ಯಾವುದೇ ಕ್ಷೇತ್ರಕ್ಕೆ ಹೆಜ್ಜೆಯನ್ನಿಡುವ ಮೊದಲು ಆ ಕ್ಷೇತ್ರಕ್ಕೆ ಸಂಬಂಧಿಸಿದ ಜವಾಬ್ದಾರಿ ಮತ್ತು ಪ್ರಾಯೋಗಿಕ ಕೌಶಲದ ತಿಳುವಳಿಕೆ ಅಪೇಕ್ಷಿಣೀಯ. ಪ್ರತಿಯೊಬ್ಬರು ತಮ್ಮ ಮನೋರಂಜನೆಯ ವ್ಯಾಖ್ಯಾನವನ್ನು ಮರುವ್ಯಾಖ್ಯಾನಿಸಬೇಕು. ಈ ಹಂತದಲ್ಲಿ ಓದು, ಕೌಶಲಗಳ ವೃದ್ಧಿ, ಕ್ರೀಯಾಶೀಲ ಚಟುವಟಿಕೆಗಳು ಬದುಕಿನ ಆನಂದದ ಮೂಲವಾಗಬೇಕು. ಸ್ನಾತಕೋತ್ತರ ಪದವಿ ಆಯ್ಕೆ ಮಾಡಿಕೊಂಡ ನಂತರ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವುದು ಅತ್ಯಗತ್ಯ. ಭಾರತದಲ್ಲಿ 14 ಶೇಕಡಾದಷ್ಟು ವಿದ್ಯಾರ್ಥಿಗಳು ಮಾತ್ರ ಸ್ನಾತಕೋತ್ತರ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆ ವರ್ಗದಲ್ಲಿ ತಾವು ಒಳಗೊಂಡಿರುವುದಕ್ಕೆ ಹೆಮ್ಮೆ ಪಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್…
ಮುಂಬಯಿಯ ಹೆಸರಾಂತ ತೆರಿಗೆ ಸಲಹೆಗಾರ, ಜನಪ್ರಿಯ ಸಂಘಟಕ, ಸಾಮಾಜಿಕ ಚಿಂತಕ, ಸಾಹಿತ್ಯ ಪ್ರೇಮಿ, ಕಲಾಪೋಷಕ, ಮಹಾದಾನಿ ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಯಾದ ಶ್ರೀ ಪ್ರವೀಣ್ ಭೋಜ ಶೆಟ್ಟಿಯವರು ಯಶಸ್ಸಿನ ಹಾದಿಯಲ್ಲಿ ನಡೆದು ಬಂದ ಹಾದಿಯ ಹೆಜ್ಜೆ ಗುರುತುಗಳನ್ನು ಸಮಸ್ತ ಬಂಟ ಸಮಾಜದ ಮುಂದೆ ಇಡಲು ಇಚ್ಛಿಸುತ್ತಿದ್ದೇವೆ. ಇತಿಹಾಸ ಪ್ರಸಿದ್ಧ ಎಲ್ಲೂರು ಕ್ಷೇತ್ರ ಶ್ರೀಮಹತೋಭಾರ ವಿಶ್ವೇಶ್ವರ ದೇವರು ನೆಲೆನಿಂತ ಪುಣ್ಯ ಸ್ಥಳ. ಇಲ್ಲಿನ ಮಲ್ಲಬೆಟ್ಟು ಪರಾರಿ ಭೋಜ ಶೆಟ್ಟಿ ಹಾಗೂ ಅಜೆಕಾರು ಮೂಲದ ಪ್ರತಿಷ್ಠಿತ ಮನೆತನದ ಶ್ರೀಮತಿ ನಳಿನಾ ಶೆಟ್ಟಿ ದಂಪತಿಗೆ ಮುದ್ದಿನ ಮಗನಾಗಿ ಜನಿಸಿದ ಪ್ರವೀಣ್ ಶೆಟ್ಟಿ ತನ್ನ ಬಾಲ್ಯದ ದಿನಗಳಿಂದಲೇ ಪ್ರತಿಭಾವಂತರು. ಕನ್ನಡ ಸಾಹಿತ್ಯ, ಯಕ್ಷಗಾನ ಅವರ ಆಸಕ್ತಿಯ ವಿಷಯಗಳು. ಪ್ರವೀಣ್ ಶೆಟ್ಟಿ ಅವರ ತೀರ್ಥರೂಪರು ಇರಂದಾಡಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಓರ್ವ ಆದರ್ಶ ಶಿಕ್ಷಕರಾಗಿ ಪರಿಶ್ರಮಿ ಕೃಷಿಕರಾಗಿದ್ದ ಭೋಜ ಶೆಟ್ಟಿಯವರು ತನ್ನ ಶಿಸ್ತು, ಸಿದ್ಧಾಂತ ಬದ್ಧ ಜೀವನ ಶೈಲಿ, ತನ್ನ ದಿಟ್ಟ ನೇರ ನಡೆ ನುಡಿಗಳಿಂದ…
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನ ನ.21 ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಮ್ಮೇಳನ ಬೆಳಗ್ಗೆ 9 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10 ರಿಂದ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಮ್ಮೇಳನದಲ್ಲಿ ‘ಪತ್ರಿಕೋದ್ಯಮದ ಹೊಸ ಆಯಾಮಗಳು’ ಎಂಬ ವಿಷಯದಲ್ಲಿ ಸಮ್ಮೇಳನದ ಪ್ರಮುಖ ಗೋಷ್ಠಿ ನಡೆಯಲಿದೆ. ಈ ಗೋಷ್ಠಿ ಉದಯವಾಣಿ ದೈನಿಕದ ಸಂಪಾದಕ ಅರವಿಂದ ನಾವುಡರ ಅಧ್ಯಕ್ಷತೆಯಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕ ಬಿ.ರವೀಂದ್ರ ಶೆಟ್ಟಿ, ಡೆಕ್ಕನ್ ಹೆರಾಲ್ಡ್…
ನ್ಯೂ ಪನ್ವೆಲ್ ನ ಶ್ರೀ ನೃತ್ಯಕಲಾ ಮಂದಿರದ ವತಿಯಿಂದ ನವೆಂಬರ್ 19 ರಂದು ಅಪರಾಹ್ನ 3 ಗಂಟೆಗೆ ಆದ್ಯ ಕ್ರಾಂತಿವೀರ ವಾಸುದೇವ ಬಲವಂತ ಪಡ್ಕೆ ನಾಟ್ಯಗೃಹ ಓಲ್ಡ್ ಪನ್ವೆಲ್ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನ್ಯೂ ಪನ್ವೆಲ್ ನಗರ ಸೇವಕ, ಜನಪ್ರಿಯ ಸಮಾಜ ಸೇವಕ ಸಂತೋಷ್ ಶೆಟ್ಟಿ ಮತ್ತು ಶ್ವೇತಾ ಸಂತೋಷ್ ಶೆಟ್ಟಿಯವರ ಸುಪುತ್ರಿ ಶ್ಲೋಕಾ ಸಂತೋಷ್ ಶೆಟ್ಟಿಯವರು ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಪನ್ವೆಲ್ ನ ಮಾಜಿ ಸಂಸದ ರಾಮ್ ಸೇಟ್ ಠಾಕೂರ್, ಮಾಜಿ ಕಾರ್ಪೊರೇಟರ್ ಪರೇಶ್ ರಾಮ್ ಸೇಟ್ ಠಾಕೂರ್, ಪನ್ವೆಲ್ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ (ಪದ್ಮ) ಆಗಮಿಸಲಿದ್ದು ಶ್ರೀ ನೃತ್ಯಕಲಾ ಮಂದಿರದ ಇತರ ಪ್ರತಿಭೆಗಳು ಭಾಗವಹಿಸಲಿದ್ದಾರೆ. ಶ್ವೇತಾ ಮತ್ತು ಸಂತೋಷ್ ಶೆಟ್ಟಿಯವರ ಸುಪುತ್ರಿ ಶ್ಲೋಕಾ ಸಂತೋಷ್ ಶೆಟ್ಟಿ ನ್ಯೂ ಪನ್ವೆಲ್ ನ ಡಿ. ಎ. ವಿ. ಪಬ್ಲಿಕ್ ಸ್ಕೂಲ್ ನಲ್ಲಿ 8 ನೇ ತರಗತಿಯಲ್ಲಿ ಕಲಿಯುತ್ತಿದ್ದು, ಐದನೇ ವರ್ಷದಲ್ಲಿರುವಾಗ ಗುರು ಪದ್ಮಶ್ರೀ ಲಕ್ಷ್ಮಿನಾರಾಯಣನ್ ಇವರಿಂದ ಭರತನಾಟ್ಯ…
ಸನಾತನ ಧರ್ಮ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು : ಸಿಎ ಸುರೇಂದ್ರ ಕೆ. ಶೆಟ್ಟಿ
ಸನಾತನ ಧರ್ಮ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು. ಭಜನೆ, ಕುಣಿತ ಭಜನೆಗಳಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ಆಯೋಜಿಸುವುದರಿಂದ ಮಕ್ಕಳಲ್ಲಿ ಧರ್ಮ, ದೇವರ ಮೇಲೆ ಭಕ್ತಿ ಶ್ರದ್ಧೆ ಹೆಚ್ಚಾಗುತ್ತದೆ ಎಂದು ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ತಿಳಿಸಿದರು. ಬಾಂಬೆ ಬಂಟ್ಸ್ ಅಸೋಸಿಯೇಶನ್ನ ಮಹಿಳಾ ವಿಭಾಗವು ಜುಯಿ ನಗರದ ಬಂಟ್ಸ್ ಸೆಂಟರ್ ನಲ್ಲಿ ಆಯೋಜಿಸಿದ್ದ ಭಜನೆ ಮತ್ತು ಕುಣಿತ ಭಜನಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಟ್ಸ್ ಅಸೋಸಿಯೇಶನ್ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮಹಿಳಾ ವೇದಿಕೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವುದು ಅಭಿನಂದನೀಯ. ಇಂದಿನ ಕಾಲಘಟ್ಟದಲ್ಲಿ ಇಂತಹ ಧಾರ್ಮಿಕ ಯೋಜನೆ ಅಗತ್ಯವಿದೆ. ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಿರುವುದು ಸಂತೋಷದ ವಿಷಯ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಶ್ರೀ ವಜ್ರಮಾತಾ…
ಬಂಟರ ಯಾನೆ ನಾಡವರ ಸಂಘ ಹೆಬ್ರಿ ಅಜೆಕಾರು ವಲಯ ಇದರ ಆಶ್ರಯದಲ್ಲಿ ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ ಹಾಗೂ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯಧನ ವಿತರಣೆ ಕಾರ್ಯಕ್ರಮ ಹೆಬ್ರಿ ಬಂಟರ ಸಭಾಂಗಣದಲ್ಲಿ ನಡೆಯಿತು. ಹೆಬ್ರಿ ಅಜೆಕಾರು ವಲಯ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತೃ ಸಂಘದ ನಿರ್ದೇಶಕ ಭೂತುಗುಂಡಿ ಕರುಣಾಕರ ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಬಾನು ಪಿ.ಬಲ್ಲಾಳ್, ಸೇವಾದಾರರಾದ ರಮಾನಂದ ಹೆಗ್ಡೆ, ಸವಿತಾ ರಮಾನಂದ ಹೆಗ್ಡೆ, ಸಂಘದ ಉಪಾಧ್ಯಕ್ಷರಾದ ವಾದಿರಾಜ್ ಶೆಟ್ಟಿ, ಹರ್ಷ ಶೆಟ್ಟಿ, ಕುಂಠಿನಿ ಭಾಸ್ಕರ್ ಶೆಟ್ಟಿ, ಆಶಾ ಬಿ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನವೀನ್ ಕೆ. ಅಡ್ಯಂತಾಯ, ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಡಾ.ರವಿಪ್ರಸಾದ್ ಹೆಗ್ಡೆ, ಡಾ.ಸುಷ್ಮಾ ಆರ್ ಹೆಗ್ಡೆ, ಸದಾನಂದ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಪ್ರಕಾಶ್ ಶೆಟ್ಟಿ, ಉದಯಕುಮಾರ್ ಶೆಟ್ಟಿ, ರಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಿಲ್ಲು ಹಾಗೂ ಬಾಣ ಒಂದಕ್ಕೊಂದು ಸಂಬಂಧ ಇದ್ದಂತೆ, ಭಗವಂತ ಬಿಲ್ಲಾದರೆ, ಭಕ್ತರು ಬಾಣದಂತೆ. ಬಿಲ್ಲನ್ನು ಹೇಗೆ ಬೇಕಾದರೂ ಭಾಗಿಸಬಹುದು. ಆದರೆ ಬಾಣವನ್ನು ಗುರಿಯ ಕಡೆಗೆ ಇಡಬೇಕು. ಭಕ್ತರಾದ ನಾವು ಭಗವಂತನ ಪುಣ್ಯ ಕಾರ್ಯಕ್ಕಾಗಿ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಬಾಣದ ಗುರಿಯಂತೆ, ದಾನಿಗಳ ನೆರವಿನಿಂದ ಹಾಗೂ ಭಕ್ತರ ಸಹೃದಯದಿಂದ ಸಹಕಾರವನ್ನು ನೀಡಿದಲ್ಲಿ ಕ್ಷೇತ್ರದ ಜೀರ್ಣೋದ್ದಾರ ಸಾಧ್ಯವೆಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಅವರು ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ನಡೆದ ಶ್ರೀ ಪಾಡಾಂಗರೆ ಭಗವತೀ ಮಾತೆಯ ಹಾಗೂ ವೀರಪುತ್ರ ದೈವದ ಗರ್ಭಗುಡಿಗೆ ನಡೆದ ಶಿಲಾನ್ಯಾಸ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಉದ್ಘಾಟಿಸಿ, ಆಶೀರ್ವಚನ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗೋಪಾಲ ಬಂದ್ಯೋಡು ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಮೂಡುಮನೆ ಅಶೋಕ ರಾಮಚಂದ್ರ ಪದಕಣ್ಣಾಯ, ಶ್ರೀ ಕೇಶವ ಕಾರ್ನವರು, ಶ್ರೀ ನಾರಾಯಣ ಭಗವತೀ ಪೂಜಾರಿ, ಜೀರ್ಣೋದ್ಧಾರ ಸಮಿತಿ…