ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದರಾದ ಐರ್ ಬೈಲ್ ಆನಂದ ಶೆಟ್ಟಿಯವರಿಗೆ ಬೆಂಗಳೂರು ಬಂಟರ ಸಂಘದ ವತಿಯಿಂದ ಫೆಬ್ರವರಿ 9 ರಂದು ಯಕ್ಷಗಾನ ಮತ್ತು ರಂಗ ತರಬೇತಿ ಸಮಿತಿ ಸಾದರ ಪಡಿಸಿದ ಯಕ್ಷಗಾನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ, ವಿಜಯನಗರ ಶಾಸಕರಾದ ಕೃಷ್ಣಪ್ಪ, ಗೋವಿಂದರಾಜ ನಗರ ಶಾಸಕ ಪ್ರಿಯಕೃಷ್ಣ, ಬಿಬಿಎಂಪಿ ಅಡಿಷನಲ್ ಕಮಿಷನರ್ ಅಜಿತ್ ಹೆಗ್ಡೆ ಶಾನಾಡಿ ಆಗಮಿಸಿದ್ದರು. ಬೆಂಗಳೂರು ಬಂಟರ ಸಂಘದ ಅದ್ಯಕ್ಷ ಸಿಎ ಅಶೋಕ್ ಶೆಟ್ಟಿ, ಉಪಾಧ್ಯಕ್ಷ ಜಪ್ತಿ ಸಂತೋಷ್ ಶೆಟ್ಟಿ, ಮಹಿಳಾ ಉಪಾಧ್ಯಕ್ಷೆ ಕಾಂತಿ ಶೆಟ್ಟಿ, ಗೌರವ ಕಾರ್ಯದರ್ಶಿ ವಿಜಯ ಶೆಟ್ಟಿ ಹಾಲಾಡಿ, ಖಜಾಂಚಿ ಅಶೋಕ ಶೆಟ್ಟಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ಆನಂದ ಶೆಟ್ಟಿ ಅವರ ಸುಧೀರ್ಘ 49 ವರ್ಷದ ಯಕ್ಷಗಾನ ಕಲಾ ಸೇವೆ ಮೆಚ್ಚಿ ವಿಜಯನಗರ ಶಾಸಕ ಕೃಷ್ಣಪ್ಪ ಅವರು ವೇದಿಕೆಯಲ್ಲಿ 1ಲಕ್ಷದ ಚೆಕ್ ಹಾಗೂ ಸಂಘದ ವತಿಯಿಂದ 25000 ರೂಪಾಯಿ ನೀಡಿ ಗೌರವಿಸಿದರು.