Author: admin

ನ್ಯೂ ಪನ್ವೆಲ್ ನ ಶ್ರೀ ನೃತ್ಯಕಲಾ ಮಂದಿರದ ವತಿಯಿಂದ ನವೆಂಬರ್ 19 ರಂದು ಅಪರಾಹ್ನ 3 ಗಂಟೆಗೆ ಆದ್ಯ ಕ್ರಾಂತಿವೀರ ವಾಸುದೇವ ಬಲವಂತ ಪಡ್ಕೆ ನಾಟ್ಯಗೃಹ ಓಲ್ಡ್ ಪನ್ವೆಲ್ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನ್ಯೂ ಪನ್ವೆಲ್ ನಗರ ಸೇವಕ, ಜನಪ್ರಿಯ ಸಮಾಜ ಸೇವಕ ಸಂತೋಷ್ ಶೆಟ್ಟಿ ಮತ್ತು ಶ್ವೇತಾ ಸಂತೋಷ್ ಶೆಟ್ಟಿಯವರ ಸುಪುತ್ರಿ ಶ್ಲೋಕಾ ಸಂತೋಷ್ ಶೆಟ್ಟಿಯವರು ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಪನ್ವೆಲ್ ನ ಮಾಜಿ ಸಂಸದ ರಾಮ್ ಸೇಟ್ ಠಾಕೂರ್, ಮಾಜಿ ಕಾರ್ಪೊರೇಟರ್ ಪರೇಶ್ ರಾಮ್ ಸೇಟ್ ಠಾಕೂರ್, ಪನ್ವೆಲ್ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ (ಪದ್ಮ) ಆಗಮಿಸಲಿದ್ದು ಶ್ರೀ ನೃತ್ಯಕಲಾ ಮಂದಿರದ ಇತರ ಪ್ರತಿಭೆಗಳು ಭಾಗವಹಿಸಲಿದ್ದಾರೆ. ಶ್ವೇತಾ ಮತ್ತು ಸಂತೋಷ್ ಶೆಟ್ಟಿಯವರ ಸುಪುತ್ರಿ ಶ್ಲೋಕಾ ಸಂತೋಷ್ ಶೆಟ್ಟಿ ನ್ಯೂ ಪನ್ವೆಲ್ ನ ಡಿ. ಎ. ವಿ. ಪಬ್ಲಿಕ್ ಸ್ಕೂಲ್ ನಲ್ಲಿ 8 ನೇ ತರಗತಿಯಲ್ಲಿ ಕಲಿಯುತ್ತಿದ್ದು, ಐದನೇ ವರ್ಷದಲ್ಲಿರುವಾಗ ಗುರು ಪದ್ಮಶ್ರೀ ಲಕ್ಷ್ಮಿನಾರಾಯಣನ್ ಇವರಿಂದ ಭರತನಾಟ್ಯ…

Read More

ಸನಾತನ ಧರ್ಮ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು. ಭಜನೆ, ಕುಣಿತ ಭಜನೆಗಳಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ಆಯೋಜಿಸುವುದರಿಂದ ಮಕ್ಕಳಲ್ಲಿ ಧರ್ಮ, ದೇವರ ಮೇಲೆ ಭಕ್ತಿ ಶ್ರದ್ಧೆ ಹೆಚ್ಚಾಗುತ್ತದೆ ಎಂದು ಬಾಂಬೆ ಬಂಟ್ಸ್ ಅಸೋಸಿಯೇಶನ್‌ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ತಿಳಿಸಿದರು. ಬಾಂಬೆ ಬಂಟ್ಸ್ ಅಸೋಸಿಯೇಶನ್‌ನ ಮಹಿಳಾ ವಿಭಾಗವು ಜುಯಿ ನಗರದ ಬಂಟ್ಸ್ ಸೆಂಟರ್ ನಲ್ಲಿ ಆಯೋಜಿಸಿದ್ದ ಭಜನೆ ಮತ್ತು ಕುಣಿತ ಭಜನಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಟ್ಸ್ ಅಸೋಸಿಯೇಶನ್ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮಹಿಳಾ ವೇದಿಕೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವುದು ಅಭಿನಂದನೀಯ. ಇಂದಿನ ಕಾಲಘಟ್ಟದಲ್ಲಿ ಇಂತಹ ಧಾರ್ಮಿಕ ಯೋಜನೆ ಅಗತ್ಯವಿದೆ. ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಿರುವುದು ಸಂತೋಷದ ವಿಷಯ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಶ್ರೀ ವಜ್ರಮಾತಾ…

Read More

ಬಂಟರ ಯಾನೆ ನಾಡವರ ಸಂಘ ಹೆಬ್ರಿ ಅಜೆಕಾರು ವಲಯ ಇದರ ಆಶ್ರಯದಲ್ಲಿ ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ ಹಾಗೂ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯಧನ ವಿತರಣೆ ಕಾರ್ಯಕ್ರಮ ಹೆಬ್ರಿ ಬಂಟರ ಸಭಾಂಗಣದಲ್ಲಿ ನಡೆಯಿತು. ಹೆಬ್ರಿ ಅಜೆಕಾರು ವಲಯ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತೃ ಸಂಘದ ನಿರ್ದೇಶಕ ಭೂತುಗುಂಡಿ ಕರುಣಾಕರ ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಬಾನು ಪಿ.ಬಲ್ಲಾಳ್, ಸೇವಾದಾರರಾದ ರಮಾನಂದ ಹೆಗ್ಡೆ, ಸವಿತಾ ರಮಾನಂದ ಹೆಗ್ಡೆ, ಸಂಘದ ಉಪಾಧ್ಯಕ್ಷರಾದ ವಾದಿರಾಜ್ ಶೆಟ್ಟಿ, ಹರ್ಷ ಶೆಟ್ಟಿ, ಕುಂಠಿನಿ ಭಾಸ್ಕರ್ ಶೆಟ್ಟಿ, ಆಶಾ ಬಿ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನವೀನ್ ಕೆ. ಅಡ್ಯಂತಾಯ, ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಡಾ.ರವಿಪ್ರಸಾದ್ ಹೆಗ್ಡೆ, ಡಾ.ಸುಷ್ಮಾ ಆರ್ ಹೆಗ್ಡೆ, ಸದಾನಂದ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಪ್ರಕಾಶ್ ಶೆಟ್ಟಿ, ಉದಯಕುಮಾರ್ ಶೆಟ್ಟಿ, ರಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Read More

ಬಿಲ್ಲು ಹಾಗೂ ಬಾಣ ಒಂದಕ್ಕೊಂದು ಸಂಬಂಧ ಇದ್ದಂತೆ, ಭಗವಂತ ಬಿಲ್ಲಾದರೆ, ಭಕ್ತರು ಬಾಣದಂತೆ. ಬಿಲ್ಲನ್ನು ಹೇಗೆ ಬೇಕಾದರೂ ಭಾಗಿಸಬಹುದು. ಆದರೆ ಬಾಣವನ್ನು ಗುರಿಯ ಕಡೆಗೆ ಇಡಬೇಕು. ಭಕ್ತರಾದ ನಾವು ಭಗವಂತನ ಪುಣ್ಯ ಕಾರ್ಯಕ್ಕಾಗಿ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಬಾಣದ ಗುರಿಯಂತೆ, ದಾನಿಗಳ ನೆರವಿನಿಂದ ಹಾಗೂ ಭಕ್ತರ ಸಹೃದಯದಿಂದ ಸಹಕಾರವನ್ನು ನೀಡಿದಲ್ಲಿ ಕ್ಷೇತ್ರದ ಜೀರ್ಣೋದ್ದಾರ ಸಾಧ್ಯವೆಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಅವರು ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ನಡೆದ ಶ್ರೀ ಪಾಡಾಂಗರೆ ಭಗವತೀ ಮಾತೆಯ ಹಾಗೂ ವೀರಪುತ್ರ ದೈವದ ಗರ್ಭಗುಡಿಗೆ ನಡೆದ ಶಿಲಾನ್ಯಾಸ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಉದ್ಘಾಟಿಸಿ, ಆಶೀರ್ವಚನ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗೋಪಾಲ ಬಂದ್ಯೋಡು ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಮೂಡುಮನೆ ಅಶೋಕ ರಾಮಚಂದ್ರ ಪದಕಣ್ಣಾಯ, ಶ್ರೀ ಕೇಶವ ಕಾರ್ನವರು, ಶ್ರೀ ನಾರಾಯಣ ಭಗವತೀ ಪೂಜಾರಿ, ಜೀರ್ಣೋದ್ಧಾರ ಸಮಿತಿ…

Read More

ಬಂಟ್ಸ್ ಫ್ಯಾಮಿಲಿ ಯು.ಎ.ಇ. ವತಿಯಿಂದ ವರ್ಷಂಪ್ರತಿ ನಡೆಸುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ನವಂಬರ್ 19 ರಂದು ದುಬಾಯಿಯಲ್ಲಿ ನಡೆಯಲಿದೆ. ನವಂಬರ್ 19 ರಂದು ದುಬಾಯಿಯ ಅಲ್ ಗಿಸಾಸ್ ನ ಇಂಡಿಯನ್ ಅಕಾಡೆಮಿಕ್ ಸ್ಕೂಲ್ ಸಭಾಂಗಣದಲ್ಲಿ ಬೆಳಿಗ್ಗೆ ಒಂಬತ್ತರಿಂದ ಮಧ್ಯಾಹ್ನ ಎರಡು ಗಂಟೆಯ ವರೆಗೆ ಹಲವಾರು ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಹಾಗೂ ಯು.ಎ.ಇ.ಯಲ್ಲಿ ಇರುವ ಎಲ್ಲರೂ ಈ ಪೂಜೆಗೆ ಬಂದು ಶ್ರೀ ಸತ್ಯನಾರಾಯಣ ದೇವರ ಕೃಪೆಗೆ ಪಾತ್ರರಾಗಬೇಕೆಂದು ಯು.ಎ.ಇ. ಬಂಟ್ಸ್ ನ‌ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದ್ರೆ ಆಶ್ರಯದಲ್ಲಿ ನ.17 ರಂದು ಸಂಜೆ 6.30 ಕ್ಕೆ ಮೂಡುಬಿದ್ರೆ ಸ್ಕೌಟ್ ಗೈಡ್ ಕನ್ನಡಭವನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯಿಸುವ ಡಾ.ನಾಡೋಜ ಹಂಪನಾ ವಿರಚಿತ ಚಾರುವಸಂತ ದೇಸೀ ಕಾವ್ಯದ ರಂಗರೂಪದ ಪ್ರದರ್ಶನವನ್ನು ಎರಡನೇ ಬಾರಿಗೆ ಏರ್ಪಡಿಸಲಾಗಿದೆ. ಈಗಾಗಾಲೇ ಬೆಂಗಳೂರು, ಮೈಸೂರು, ಗೌರಿಬಿದನೂರು, ತುಮಕೂರು, ಚಿತ್ರದುರ್ಗ, ಧಾರವಾಡ, ದಾವಣಗೆರೆ ಮುಂತಾದೆಡೆ ಅಪಾರ ಜನಮೆಚ್ಚುಗೆ ಪಡೆದ ಈ ನಾಟಕವನ್ನು ಪ್ರಸಿದ್ಧ ರಂಗನಿರ್ದೇಶಕ ಡಾ.ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದು ಸಾಹಿತಿ ಡಾ.ನಾ.ದಾಮೋದರ ಶೆಟ್ಟಿಯವರು ರಂಗರೂಪ ನೀಡಿದ್ದಾರೆ. ಬಹುಜನರ ಅಪೇಕ್ಷೆಯ ಮೇರೆಗೆ ಈ ಪ್ರದರ್ಶನವನ್ನು ಮತ್ತೆ ಮೂಡುಬಿದ್ರೆಯಲ್ಲಿ ಏರ್ಪಡಿಸಲಾಗಿದ್ದು, ಸಮಯಕ್ಕೆ ಸರಿಯಾಗಿ ನಡೆಯುವ ಈ ನಾಟಕ ನೋಡಲು ಪ್ರವೇಶ ಉಚಿತವಾಗಿದೆ ಯೆಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

Read More

ಕತ್ತಲೆಯ ಮೇಲೆ ಬೆಳಕಿನ ವಿಜಯ, ಅಜ್ಞಾನದ ಮೇಲೆ ಜ್ಞಾನದ ವಿಜಯ, ಕೆಟ್ಟದ್ದರ ಮೇಲೆ ಒಳ್ಳೆಯತನದ ವಿಜಯವನ್ನು ಸಂಕೇತಿಸುವ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಪ್ರತಿ ಮನ ಮನೆಗಳಲ್ಲಿ ವಿಜ್ರಂಬಿಸುತಿರಲು, ನಮ್ಮ ತುಳು ಭಾಂದವರ ಮನಸ್ಸುಗಳ ಮನೆ ತುಳುಕೂಟದ ಕಚೇರಿಯಲ್ಲಿ ದೀಪಾವಳಿ ಸಡಗರದಿಂದ ಆಚರಿಸಿ ಮನ ತುಂಬಿದೆ. ಮೈ ಮನಸ್ಸುಗಳನ್ನು ಸ್ವಚ್ಛಗೊಳಿಸುವ ಮತ್ತು ಹೊಸತನ ವೊಂದು ಮೂಡಿ ಬರಲು ಮನ ಮನಸ್ಸುಗಳು ಕೂಡಿ ಮಾಡುವ ಹಬ್ಬದ ಆಚರಣೆಗೆ ಮಹತ್ವವಿದೆ. ಇಂತಹ ದೀಪಾವಳಿ ಹಬ್ಬವನ್ನು ನಮ ಕಚೇರಿಯಲ್ಲಿ ಲಕ್ಷ್ಮಿ ಪೂಜೆ ಮಾಡಿ ದೀಪ ಜ್ಯೋತಿ ಬೆಳಗಿಸಿ ತುಳುನಾಡ ಸಂಪ್ರದಾಯದ ಪ್ರಕಾರ ಬಲಿಯೇಂದ್ರ ಕರೆಯುವ ಮೂಲಕ ನಮ್ಮ ತುಳು ಸಂಸ್ಕ್ರತಿಯ ಅನಾವರಣವೆ ಇಲ್ಲಿ ಆಗಿದೆ ಎಂದರೆ ತಪ್ಪಾಗಲಾಗದು. ಸಾಂಸ್ಕ್ರತಿಕ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಮತ್ತು ಸಮಿತಿ,  ಮಹಿಳಾ ವಿಭಾಗದವರ ಕೂಡುವಿಕೆಯಲ್ಲಿ ಸಂಪ್ರದಾಯ ಪ್ರಕಾರ ದೀಪಾವಳಿಯ ಆಚರಣೆಯಲ್ಲಿ ತುಳು ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದೀರಿ, ದೀಪಗಳ ಹಬ್ಬ ದೀಪಾವಳಿಯು ಎಲ್ಲರ ಬಾಳಿನಲ್ಲಿ ಶುಭವನ್ನು ತರಲಿ, ಸರ್ವರಿಗೂ ಸುಖ…

Read More

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಪ್ರತಿಷ್ಠಿತ ಆಳ್ವಾಸ್ ವಿರಾಸತ್ – 2023 ಇದೇ ಡಿ. 14ರಿಂದ 17ರ ವರೆಗೆ ನಡೆಯಲಿದೆ. ಈ ಸಾಂಸ್ಕøತಿಕ ಕಾರ್ಯಕ್ರಮದ ಭಾಗವಾಗಿ ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಹಣ ಸ್ಪರ್ಧೆ ಹಾಗೂ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯಲ್ಲಿ ದೇಶ ವಿದೇಶದ ಛಾಯಾಗ್ರಾಹಕರು ಉಚಿತ ಹಾಗೂ ಮುಕ್ತವಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಕಾರ್ಯಕ್ರಮದ ಮುಖ್ಯ ಆಯೋಜಕರು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಟ್ಟು 1 ಲಕ್ಷ 25 ಸಾವಿರ ಮೊತ್ತದ ನಗದು ಪ್ರಶಸ್ತಿ ವನ್ಯಜೀವಿ ಛಾಯಾಗ್ರಹಣದಲ್ಲಿ ಪ್ರಥಮ ಸ್ಥಾನ ಪಡೆದ ಛಾಯಾಗ್ರಹಣಕ್ಕೆ 25,000ರೂ, ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ, ದ್ವಿತೀಯ 15,000ರೂ, ಬೆಳ್ಳಿಯ ಪದಕ ಹಾಗೂ ಪ್ರಮಾಣ ಪತ್ರ, ತೃತೀಯ ಸ್ಥಾನ ಪಡೆದ ಛಾಯಾಗ್ರಹಣಕ್ಕೆ 10,000ರೂ. ಕಂಚಿನ ಪದಕ ಹಾಗೂ ಪ್ರಮಾಣ ಪತ್ರದ ಪುರಸ್ಕಾರ ನೀಡಲಾಗುವುದು. ಇದಲ್ಲದೇ ತೀರ್ಪುಗಾರರ ಆಯ್ಕೆಗೆ ಪಾತ್ರವಾಗುವ ಮೂರು ಛಾಯಚಿತ್ರಕ್ಕೆ ತಲಾ…

Read More

ಶಾಸಕ ಅಶೋಕ್‌ ಕುಮಾರ್‌ ರೈ ಅವರು ಟ್ರಸ್ಟ್‌ ಮೂಲಕ ತನ್ನ ದುಡಿಮೆಯ ಒಂದು ಪಾಲನ್ನು ದಾನ, ಧರ್ಮಕ್ಕೆ ವಿನಿಯೋಗಿಸುತ್ತಿರುವುದು ಅತ್ಯಂತ ಪುಣ್ಯದ ಕೆಲಸ. ವಸ್ತ್ರ ವಿತರಣೆಯ ಮೂಲಕ ಇಲ್ಲಿ ಸಂಪತ್ತಿನ ಮೌಲ್ಯವರ್ಧನೆ ಹಾಗೂ ಮಾನವೀಯತೆ ಅಭಿವ್ಯಕ್ತಗೊಂಡಿದೆ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ರೈ ಎಸ್ಟೇಟ್ಸ್‌ ಎಜುಕೇಶನಲ್‌ ಆ್ಯಂಡ್‌ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಸ್ತ್ರ ವಿತರಣೆ, ಸಹಭೋಜನ “ಸೇವಾ ಸೌರಭ” ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಮಾತನಾಡಿ, ದಾನ ಧರ್ಮದ ಜತೆಗೆ ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುವ ಬಡ ಕುಟುಂಬದ ಸಾಧಕರನ್ನು ಸಮ್ಮಾನಿಸಿರುವುದು ಶ್ಲಾಘನೀಯ ಸಂಗತಿ. ಕರಾವಳಿಯ ಕಂಬಳವನ್ನು ರಾಜಧಾನಿಯ ಅಂಗಳಕ್ಕೆ ತಲುಪಿಸುವ ಮಹತ್ವದ ಕಾರ್ಯ ಮಾಡಿರುವ ಅಶೋಕ್‌ ರೈ ಅವರ ಪ್ರಯತ್ನ ಪುತ್ತೂರಿಗೆ ಹೆಮ್ಮೆ ತರುವಂತಹದು ಎಂದರು. 1 ಲಕ್ಷ ಜನರಿಗೆ ವಸ್ತ್ರದಾನದ ಗುರಿ ಅಧ್ಯಕ್ಷತೆ ವಹಿಸಿದ್ದ ರೈ ಎಸ್ಟೇಟ್ಸ್‌ ಎಜುಕೇಶನಲ್‌ ಆ್ಯಂಡ್‌ ಚಾರಿಟೆಬಲ್‌…

Read More

ಇದಕ್ಕೆ ಎರಡೇ ಪದಗಳಲ್ಲಿ ಉತ್ತರ ಬೇಕೇ? 100 ಪದಗಳಲ್ಲಿ ಹೇಳಬೇಕೇ? ಅಥವಾ ಎರಡು ಪುಟಗಳಲ್ಲಿ ವಿವರವಾಗಿ ಉತ್ತರ ನೀಡಬೇಕೇ? ಎಂದು ಮರು ಪ್ರಶ್ನೆ ಹಾಕಬಹುದು. ಯಾಕೆಂದರೆ ಮೂರು ಮಾದರಿಯಲ್ಲಿ ಉತ್ತರ ಕೊಡಬಹುದಾದ ಪ್ರಶ್ನೆ. ಎರಡೇ ಪದಗಳೆಂದುಕೊಳ್ಳಿ. ಬದುಕು ನಾಶ. ನೂರು ಪದಗಳಲ್ಲಿ ಎಂದುಕೊಳ್ಳಿ. ಆಗ ನದಿ ಕಾಣೆಯಾಗುವುದರಿಂದ ಉದ್ಭವಿಸುವ ಪರಿಣಾಮಗಳನ್ನು ಸ್ಥೂಲವಾಗಿ ವಿವರಿಸಬಹುದು. ಅದೇ ಎರಡು ಪುಟಗಳಲ್ಲಿ ಎಂದರೆ ಸುಮಾರು 1,500 ಪದಗಳಲ್ಲಿ ನದಿ ಹುಟ್ಟುವ ಮೊದಲು ಅಥವಾ ಆ ನಿರ್ದಿಷ್ಟ ಪ್ರದೇಶದಲ್ಲಿ ಹರಿದು ಬರುವ ಮೊದಲು ಹೇಗಿತ್ತು, ಹರಿಯತೊಡಗಿದ ಮೇಲೆ ಏನೆಲ್ಲ ಬದಲಾವಣೆಯಾಯಿತು? ನಾಳೆ ಒಂದು ವೇಳೆ ಹರಿಯುವುದು ನಿಲ್ಲಿಸಿದರೆ, ಕಾಣೆಯಾದರೆ ಅಥವಾ ಬರಡಾದರೆ ಏನೆಲ್ಲಾ ಆಗಬಹುದು ಎಂಬುದನ್ನು ಭೂತ ಮತ್ತು ವರ್ತಮಾನದ ಸಂಕಲನ ಮತ್ತು ವ್ಯವಕಲನ ಮಾಡಿ, ಭವಿಷ್ಯವನ್ನು ಗುಣಾಕಾರ ಮಾಡಿ, ಭಾಗಾಕಾರವನ್ನೂ ಅನ್ವಯಿಸಿ, ಉಳಿದ ಶೇಷವನ್ನು ಗಮನಿಸಿ ವಿವರಿಸಬಹುದು. ಒಟ್ಟು ಒಂದು ಪ್ರಶ್ನೆಗೆ ಬಿಟ್ಟ ಸ್ಥಳ ತುಂಬಲಿಕ್ಕೂ ಅವಕಾಶವಿದೆ, ದೀರ್ಘ‌ವಾದ ಪ್ರಬಂಧ ಸ್ವರೂಪಿ ಉತ್ತರ ಬರೆಯಲು ಅವಕಾಶವಿದೆ.…

Read More