ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷದ ಅವಧಿಗೆ ನಡೆದ ಆಡಳಿತ ಮಂಡಳಿಯ ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ನಿರ್ದೇಶಕ ಕೆ. ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಮತ್ತು ಉಪಾಧ್ಯಕ್ಷರಾಗಿ ಸ್ವಾಭಿಮಾನಿ ಸಹಕಾರಿ ಸಂಘಟನೆಯ ನವೀನ್ ಕುಮಾರ್ ಶೆಟ್ಟಿ ಶಾನ್ಕಟ್ಟು ಅವರು ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಸ್ವಾಭಿಮಾನಿ ಸಹಕಾರಿ ಸಂಘಟನೆ ಹೀಗೆ ತ್ರಿಕೋನ ಸ್ಪರ್ಧೆ ನಡೆದಿತ್ತು. ಕಾಂಗ್ರೆಸ್ ಪಕ್ಷದ ಬೆಂಬಲಿತ ಆರು ಮಂದಿ ಸ್ವಾಭಿಮಾನಿ ಸಹಕಾರಿ ಬಳಗದಿಂದ ನಾಲ್ಕು ಮಂದಿ ಹಾಗೂ ಬಿಜೆಪಿ ಬೆಂಬಲಿತ ಮೂರು ಮಂದಿ ನಿರ್ದೇಶಕರಾಗಿ ಆಯ್ಕೆಗೊಂಡಿದ್ದರು.ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ನಿರ್ದೇಶಕ ಕೆ. ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಮತ್ತು ಉಪಾದ್ಯಕ್ಷರಾಗಿ ಸ್ವಾಭಿಮಾನಿ ಸಹಕಾರಿ ಸಂಘಟನೆಯ ನವೀನ ಕುಮಾರ ಶೆಟ್ಟಿ ಶಾನ್ಕಟ್ಟು ಅವರು ಆಯ್ಕೆಗೊಂಡರು. ನಿರ್ದೇಶಕರಾಗಿ ಎ. ಕಿರಣ್ ಹೆಗ್ಡೆ, ಮೋಹನ ವೈದ್ಯ, ಅರುಣ್ ಕುಮಾರ್ ಶೆಟ್ಟಿ, ಭಾರತಿ ಶೇಟ್, ಉಮೇಶ ಕೋಠಾರಿ, ಜ್ಯೋತಿ ಉದಯಕುಮಾರ ಶೆಟ್ಟಿ, ಸುನೀಲ್, ಎಚ್. ಮನೋಹರ ಶೆಟ್ಟಿ, ಅಜಿತ್ ಕುಮಾರ್ ಶೆಟ್ಟಿ, ಜಯರಾಮ ಶೆಟ್ಟಿ, ಮಂಜುನಾಥ ನಾಯ್ಕ ಅವರು ಆಯ್ಕೆಗೊಂಡರು.
