ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡ ಬೆಂಗಳೂರಿನ ಜೆಪಿ ನಗರದಲ್ಲಿ ಮುಕ್ತಾಯಗೊಂಡ ಅಖಿಲ ಭಾರತ ಗೋಲ್ಡ್ ಮೆಡಲ್ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಮೇರಿ ಗೋ ರೌಂಡ್ ಬಾಲ್ ಬ್ಯಾಡ್ಮಿಂಟನ್ ಕ್ಲಬ್ನ 50ನೇ ವರ್ಷದ ಸಂಭ್ರಮಾಚರಣೆಯ ಸಲುವಾಗಿ ಬೆಂಗಳೂರಿನ ಜೆಪಿ ನಗರದ ಆರ್ಬಿಐ ಲೇಔಟ್ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ನಡೆದ ಪಂದ್ಯಾವಳಿಯ ಫೈನಲ್ಸ್ನಲ್ಲಿ ಆಳ್ವಾಸ್ ತಂಡ ತಮಿಳುನಾಡುವಿನ ಪಿ.ಎಸ್.ಎನ್.ಎ ದಿಂಡಿಗಲ್ ತಂಡವನ್ನು 35-31 ಅಂಕಗಳಿಂದ ಮಣಿಸಿ ಗೋಲ್ಡ್ ಮೆಡಲ್ ಪ್ರಶಸ್ತಿಯನ್ನು ಪಡೆದುಕೊಂಡಿತು. ವಿಜೇತ ಆಳ್ವಾಸ್ ತಂಡವು ಸೂಪರ್ ಲೀಗ ಹಾಗೂ ಇತರ ಪಂದ್ಯಗಳಲ್ಲಿ ಆತಿಥೇಯ ಮೇರಿ ಗೋ ರೌಂಡ್ ಹಾಗೂ ಟಿಬಿಬಿಸಿ ತಿರುವತ್ತೂರು ತಂಡಗಳನ್ನು ಸೋಲಿಸಿತ್ತು.
ಟೂರ್ನಿಯಲ್ಲಿ ರಾಷ್ಟ್ರದ 10 ಪ್ರಮುಖ ಆಹ್ವಾನಿತ ತಂಡಗಳು ಭಾಗವಹಿಸಿದ್ದವು. ಆಳ್ವಾಸ್ ತಂಡದ ಲಕ್ಷ್ಮೀದೇವಿ ಟೂರ್ನಿಯ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡರು. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.