Author: admin

ವಿದ್ಯಾಗಿರಿ (ಮೂಡುಬಿದಿರೆ): ‘ಕರಾವಳಿಯ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ) ಯುವಜನತೆ ಕೃಷಿ ವಿಮುಖರಾಗುತ್ತಿದ್ದು, ಮಣ್ಣಿನೆಡೆಗೆ ಅವರನ್ನು ಸೆಳೆಯುವ ಇಂತಹ ಕಾರ್ಯಕ್ರಮಗಳು ಆದರ್ಶ ಮತ್ತು ಅನುಕರಣೀಯ’ ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ. ಜಗದೀಶ್ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಡಿ.11 ರಿಂದ ಡಿ. 15ರವರೆಗೆ ಆಯೋಜಿಸಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’30ನೇ ವರ್ಷದ ಅಳ್ವಾಸ್ ವಿರಾಸತ್’ ಅಂಗವಾಗಿ ಹಮ್ಮಿಕೊಂಡ   ಅನ್ವೇಷಣಾತ್ಮಕ ಶತಾಯುಷಿ ಕೃಷಿಕ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಕೃಷಿಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳಗಳ ಉದ್ಘಾಟನೆಯಲ್ಲಿ ಅವರು ಮಾತನಾಡಿದರು. ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುತ್ತಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತಿ ವರ್ಷ 500 ಎಕರೆ ಹಡಿಲು ಭೂಮಿಯನ್ನು…

Read More

ಯಕ್ಷಗಾನದ ವಾಚಿಕ ವಿಭಾಗವಾದ ತಾಳಮದ್ದಳೆಯಲ್ಲಿ ಆಡುವ ಕನ್ನಡ ಭಾಷೆ ಶುದ್ಧ ಸ್ವರೂಪದಲ್ಲಿದ್ದು ಅದು ಇತರ ಕಲಾಪ್ರಕಾರಗಳಿಗೆ ಮಾದರಿಯೆನಿಸಿದೆ. ಈ ದಿಶೆಯಲ್ಲಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಸಹಯೋಗದಲ್ಲಿ ಕಳೆದ 11 ವರ್ಷಗಳಿಂದ ಮಂಗಳೂರಿನಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸುತ್ತಿರುವ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ನಿಜಾರ್ಥದಲ್ಲಿ ಕನ್ನಡದ ನುಡಿ ಹಬ್ಬವಾಗಿ ಆಯೋಜಿಸುತ್ತಾ ಬಂದಿದೆ. ಅದರಂತೆ ಈ ವರ್ಷವೂ ನವೆಂಬರ 11ರಿಂದ 19ರವರೆಗೆ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆದ 12 ನೇ ವರ್ಷದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024’ ವಿಭಿನ್ನ ಸ್ವರೂಪದಿಂದ ಗಮನ ಸೆಳೆಯಿತು. ಸಾಮಾನ್ಯವಾಗಿ ತಾಳಮದ್ದಳೆಯ ದೊಡ್ಡ ಕೂಟಗಳಲ್ಲಿ ಭಾಗವಹಿಸುವ ಜನಪ್ರಿಯ ಅರ್ಥಧಾರಿಗಳನ್ನೇ ಒಟ್ಟುಗೂಡಿಸಿ ಸಪ್ತಾಹಗಳನ್ನು ನಡೆಸುವುದು ವಾಡಿಕೆ. ಅದೇ ಪುನರಾವರ್ತನೆಯಾಗುವುದೂ ಇದೆ. ಯಕ್ಷಾಂಗಣವು ಈ ಹಳೆಯ ದಾರಿಯನ್ನು ಸ್ವಲ್ಪ ಬದಲಾಯಿಸಿ ಈಗಾಗಲೇ ಸ್ಥಾಪಿತರಾದ ಅರ್ಥಧಾರಿಗಳ ಜೊತೆಗೆ ಅಲ್ಲಲ್ಲಿ ಸಂಘ ಸಂಸ್ಥೆಗಳಲ್ಲಿ ಅರ್ಥ ಹೇಳುವ…

Read More

ಕಾರ್ತಿಕ್ ಶೆಟ್ಟಿ ಮಜಿಬೈಲುರವರ ಸಾಮಾಜಿಕ ಸೇವೆಯನ್ನು ಗುರುತಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಡಿಸೆಂಬರ್ 7 ರಂದು ಮುಂಬಯಿಯ ಕುರ್ಲಾದ ಬಂಟರ ಭವನದಲ್ಲಿ ನಡೆದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಪ್ರವೀಣ್ ಭೋಜ ಶೆಟ್ಟಿಯವರ ನೇತೃತ್ವದ ಮುಂಬಯಿ ಬಂಟರ ಸಂಘದ ಸಹಯೋಗದೊಂದಿಗೆ ಜರಗಿದ ‘ವಿಶ್ವ ಬಂಟರ ಸಮಾಗಮ-2024’ ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ಗೌರವಿಸಲಾಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಹಾದಾನಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಬೋಜ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಜತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಮಹಾ ಪೋಷಕರು, ನಿರ್ದೇಶಕರು ಉಪಸ್ಥಿತರಿದ್ದರು. ಕರ್ನೂರು ಮೋಹನ್ ರೈ ಮತ್ತು ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.

Read More

ಉಡುಪಿ : ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಾಗೂ ಕ್ರಿಯೆಟಿವ್ ಪಿ.ಯು.ಕಾಲೇಜು ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ 2024-25ನೇ ಸಾಲಿನಲ್ಲಿ ನಡೆಸಲಾದ ಪದವಿ ಪೂರ್ವ ಕಾಲೇಜುಗಳ ಮೈಸೂರು ವಿಭಾಗೀಯ ಮಟ್ಟದ ವತಿಯಿಂದ ಡಿಸೆಂಬರ್ 9ರಂದು ನಡೆದ 2024-25ನೇ ಸಾಲಿನ ಉಡುಪಿ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಇಂಗ್ಲಿಷ್ ಪ್ರಬಂಧದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಮಯೂರ್.ಎಂ.ಗೌಡ ದ್ವಿತೀಯ ಸ್ಥಾನವನ್ನು ಹಾಗೂ ಪ್ರಥಮ ವಿಜ್ಞಾನ ವಿಭಾಗದ ಜಾಹ್ನವಿ ಜೆ. ಶೆಟ್ಟಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ. ಇವರಿಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭಹಾರೈಸಿದ್ದಾರೆ.

Read More

ಜಾಗತಿಕ ಮಟ್ಟದ ಬಂಟರ ಸಮಾಗಮ 2024 ಸಂಭ್ರಮದಲ್ಲಿ ಪಾಲ್ಗೊಳ್ಳಲು ಅತ್ಯಂತ ಸಂತಸವಾಗುತ್ತಿದೆ. ಕಾರ್ಯಕ್ರಮದ ನೇತೃತ್ವ ವಹಿಸಿದ ಪದಾಧಿಕಾರಿಗಳೆಲ್ಲರನ್ನು ‘ಶೆಟ್ಟೀಜಿ’ ಎಂದು ಕರೆಯುವ ಮೂಲಕ ಎಲ್ಲರಿಗೂ ನಮಿಸುತ್ತಿದ್ದೇನೆ. ಬಂಟ ಸಮಾಜಕ್ಕೆ ಬಂದಾಗಲೆಲ್ಲಾ ನನ್ನಲ್ಲಿ ಉತ್ಸಾಹ ಹೆಚ್ಚುತ್ತದೆ. ಹುಮ್ಮಸ್ಸು ಇಮ್ಮಡಿಯಾಗುತ್ತದೆ. ಇಲ್ಲಿ ಬಂದಾಗ ನನ್ನ ಸ್ವಂತ ಮನೆಗೆ ಬಂದಂತೆ ಅನಿಸುತ್ತದೆ. ಬಂಟ ಸಮಾಜದವರಾದ ತಾವು ನಮ್ಮಂತೆ ರಾಷ್ಟ್ರೀಯ ವಿಚಾರಗಳಿಗೆ ಹೆಚ್ಚು ಒಲವು ತೋರುತ್ತಿದ್ದೀರಿ. ಬಂಟ ಸಮಾಜದ ರಾಜಕೀಯ ನೇತಾರ ಗೋಪಾಲ್ ಸಿ. ಶೆಟ್ಟಿ ನನಗೆ ಹೆಚ್ಚು ಪ್ರಿಯವಾದವರು. ನಾಯಕನೆಂದರೆ ಗೋಪಾಲ್ ಸಿ. ಶೆಟ್ಟಿಯಂತಿರಬೇಕು ಎಂದು ಮಹಾರಾಷ್ಟ್ರ ರಾಜ್ಯದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನುಡಿದರು. ಅವರು ಡಿಸೆಂಬರ್ 7 ರಂದು ಕುರ್ಲಾ ಪೂರ್ವ ಬಂಟರ ಭವನದಲ್ಲಿ ಜರಗಿದ ವಿಶ್ವ ಬಂಟರ ಸಮಾಗಮ 2024 ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಶೆಟ್ಟೀಸ್ ಉಡುಪಿ ರೆಸ್ಟೋರೆಂಟ್ ಹೆಸರಿನಲ್ಲಿ ಹೋಟೆಲ್ ಉದ್ಯಮದಲ್ಲಿ ಪರಿಣಿತರು. ಉಡುಪಿ ರೆಸ್ಟೋರೆಂಟ್ ಹೆಸರಿನ ಮೂಲಕ ವಿಶ್ವದಾದ್ಯಂತ ಹೆಸರು ಮಾಡಿರುವ ಬಂಟರ ಸ್ಟಾರ್ ಹೋಟೆಲಿಗಿಂತ ಉಡುಪಿ ರೆಸ್ಟೋರೆಂಟ್…

Read More

ಅರವತ್ತು ವರ್ಷವು ಮನುಷ್ಯನ ಜೀವನದಲ್ಲಿ ಒಂದು ನಿರ್ಣಾಯಕ ಘಟ್ಟ. ಸರಕಾರಿ ಕೆಲಸದಲ್ಲಿದ್ದವರಿಗೆ ಇದು ನಿವೃತ್ತಿಯ ಸಮಯ. ಬೇರೆ ಬೇರೆ ಹುದ್ದೆಗಳನ್ನು ಹೊತ್ತು ದುಡಿದವರಿಗೆ ಪೂರ್ಣ ವಿಶ್ರಾಂತಿ. ಕೆಲಸದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡವರಿಗೆ ನಿವೃತ್ತಿಯ ಬದು ಕನ್ನು ಕಳೆಯುವುದೂ ತ್ರಾಸದ ಕೆಲಸ. ಸಹಜವಾಗಿ ಹುದ್ದೆಯ ಮೂಲಕ ಕಂಡುಕೊಂಡ ಗೌರವವು ಕಣ್ಮರೆಯಾಗುತ್ತದೆ. ತಾನೇ ದುಡಿದ ಸಂಸ್ಥೆ ಅಥವಾ ಕಚೇರಿಗೆ ಹೋದಾಗಲೂ ಕಹಿ ಅನುಭವ. ಮೊದಲಿನ ಗೌರವವಿಲ್ಲ. ನಿವೃತ್ತರಾದ ಮೇಲೆ ಸಹೋದ್ಯೋಗಿಗಳಾಗಿದ್ದ ಅನೇಕರು ಸಂಪರ್ಕದಿಂದಲೂ ದೂರವಾಗುತ್ತಾರೆ. ನಿವೃತ್ತರಿಗೆ ಈ ವ್ಯತ್ಯಾಸದ ಅರಿವು ಆಗಿಯೇ ಆಗುತ್ತದೆ. ಸಂಸಾರದಲ್ಲಿಯೂ ನಿರೀಕ್ಷಿತ ಸಂಬಂಧಗಳ ಕೊರತೆ. ಈಗೀಗ ಹೆಚ್ಚಿನ ಕುಟುಂಬಗಳಲ್ಲಿ ಹಿರಿಯ ಎರಡು ತಲೆಗಳು ಮಾತ್ರ. ಮಕ್ಕಳಿಗಾದರೋ ದುಡಿಮೆಯ ಹೊಣೆ. ದೂರದ ಊರುಗಳಲ್ಲಿ ಅವರ ಉದ್ಯೋಗ. ಕೆಲವೊಮ್ಮೆ ವಿದೇಶದಲ್ಲಿ ಉದ್ಯೋಗ. ಹಾಗಾಗಿ ಹಿರಿಯರು ತಮ್ಮ ಮನೆಯಲ್ಲಿಯೇ ವಾಸ್ತವ್ಯ. ಮಕ್ಕಳು ಕರೆದರೂ ತಮ್ಮ ಹಿರಿಯರು ಬದುಕಿ ಬಾಳಿದ ಮನೆಯನ್ನು ತೊರೆಯಲು ಒಪ್ಪದ ಮನಸ್ಸು. ಹಾಗಾಗಿ ಹಿರಿಯ ಎರಡು ಜೀವಗಳು ದಿನವೂ ತಮ್ಮೊಳಗೆ ಸಾಂತ್ವನವನ್ನು…

Read More

ಹುಟ್ಟೂರಿನಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಉದ್ದೇಶದಿಂದ ಕಣ್ಣಿನ ಆಸ್ಪತ್ರೆಯನ್ನು ಆರಂಭಿಸಿದ್ದೇವೆ. ಶಂಕರನಾರಾಯಣ ಕನ್‌ಸ್ಟ್ರಕ್ಷನ್‌ ಪ್ರೈ.ಲಿ.(ಎಸ್‌ಎನ್‌ಸಿ) ಸಂಸ್ಥಾಪಕರಾದ ಸಿ. ನಾರಾಯಣ ಶೆಟ್ಟಿ ಅವರ ಹುಟ್ಟೂರಾದ ಇಲ್ಲಿ ಅವರ 100ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಈ ಆಸ್ಪತ್ರೆಯನ್ನು ಜನತೆಯ ಸೇವೆಗಾಗಿ ಆರಂಭಿಸಲಾಗಿದೆ ಎಂದು ಎಸ್‌ಎನ್‌ಸಿ ಚೇರ್ಮನ್‌ ಡಾ| ಎನ್‌. ಸೀತಾರಾಮ ಶೆಟ್ಟಿ ಹೇಳಿದರು. ಅವರು ರವಿವಾರ ಶಂಕರನಾರಾಯಣದಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ಆರಂಭವಾದ 25 ಕೋ.ರೂ. ವೆಚ್ಚದ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಆಸ್ಪತ್ರೆಯ ಕಲ್ಪನೆಯು ಹಿರಿಯ ಸಹೋದರ ನಾರಾಯಣ ನೇತ್ರಾಲಯ ಗ್ರೂಪ್‌ ಆಫ್‌ ಹಾಸ್ಪಿಟಲ್ಸ್‌ನ ಸಂಸ್ಥಾಪಕ ದಿ| ಡಾ| ಭುಜಂಗ ಶೆಟ್ಟಿ ಅವರದ್ದಾಗಿದೆ. ಈ ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶ ಹೊಂದಿದ್ದೇವೆ. ಇಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಲಾಗುವುದು ಎಂದರು. ಈ ಆಸ್ಪತ್ರೆಯಲ್ಲಿ ಬಿಲ್ಲಿಂಗ್‌ ಕೌಂಟರ್‌ ಇರುವುದಿಲ್ಲ. ವರ್ಷಕ್ಕೆ 70 ಸಾವಿರ ಉಚಿತ ಶಸ್ತ್ರಚಿಕಿತ್ಸೆ…

Read More

ವಿದ್ಯಾಗಿರಿ: ಮೂಡಣದ ಬಿದಿರೆಯ ನಾಡಲ್ಲಿ ಮೂರು ದಶಕಗಳ ಹಿಂದೆ ಬೆಳಗಿದ ಸಾಂಸ್ಕೃತಿಕ ಬೆಳಕು ಜನಮಾನಸವ ಬೆಸೆದುಕೊಂಡಿದ್ದು, ಈಗ ಮೂವತ್ತರ ಹರುಷ. ಈ ಸಾಂಸ್ಕೃತಿಕ ಬೆಳಕಿನ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವಾದ 30ನೇ ವರ್ಷದ ‘ಆಳ್ವಾಸ್ ವಿರಾಸತ್’ಗೆ ವಿದ್ಯಾಗಿರಿಯು ವಿದ್ಯುದ್ದೀಪಾಲಂಕಾರ, ಹೂ-ಹಣ್ಣಿನ ಸಿಂಗಾರ, ಗೂಡುದೀಪಗಳ ಬೆಳಕು, ಕಲಾಕೃತಿಗಳ ಮೆರುಗು ಸೇರಿದಂತೆ ಅನನ್ಯತೆ ಹಾಗೂ ಅಚ್ಚರಿಗಳ ಬೆರಗಿನ ಮೂಲಕ ಸಜ್ಜಾಗಿದೆ. ಇಂದಿನಿAದ (ಡಿ.10) ಭಾನುವಾರದ ವರೆಗೆ (ಡಿ.15) ಮಹಾಮೇಳಗಳ ಜೊತೆ ಸಾಂಸ್ಕೃತಿಕ ರಸದೌತಣ. ಈ ಬಾರಿ ಡಿ.10 ರಿಂದ 14ರ ವರೆಗೆ ಮೇಳಗಳ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದ್ದರೆ, ಡಿ.15ರ ಭಾನುವಾರದ ಪೂರ್ಣ ದಿನವನ್ನು ಜನ ಮೇಳಗಳಲ್ಲಿ ಮಿಂದೇಳಲು ಮೀಸಲಿರಿಸಲಾಗಿದೆ. ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾಗಿದ್ದರೆ, ಸಮೀಪದ ಕೃಷಿಸಿರಿ, ನೀಟ್ ಕಟ್ಟಡ, ಅರಮನೆ ಮೈದಾನ ಸೇರಿದಂತೆ ಸುತ್ತಲ ಆವರಣದಲ್ಲಿ ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ…

Read More

ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವತಿಯಿಂದ ಸಮಾಜ ಭಾಂದವರಿಗಾಗಿ ನಡೆಯುವ 12ನೇ ವರ್ಷದ ವಾರ್ಷಿಕ ಕ್ರೀಡಾಕೂಟವು ಡಿಸೆಂಬರ್ 8 ರವಿವಾರದಂದು ವಿವಿಧ ಕ್ರೀಡಾ ಆಟೋಟ ಸ್ಪರ್ದೆಗಳೊಂದಿಗೆ ಪುಣೆಯ ಸಾಳುಂಕೆ ವಿಹಾರ್ ರೋಡ್ ನ ಬ್ಯಾಂಕ್ ಆಫ್ ಮಹಾರಾಷ್ಟ್ರ ಲೇನ್ ವಾನ್ವೋರಿಯಲ್ಲಿರುವ ರೇಸ್ ಸ್ಪೋರ್ಟ್ಸ್ ಕ್ರೀಡಾ ಸಂಕುಲದಲ್ಲಿ ಜರಗಲಿರುವುದು. ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತುರವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭ ಜರಗಲಿದೆ. ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪುಣೆ ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್, ಪುಣೆ ನಗರ ಶಿವಸೇನಾ ಅಧ್ಯಕ್ಷರಾದ ಪ್ರಮೋದ್ ಅಲಿಯಾಸ್ ನಾನಾ ಭಂಗಿರೆರವರು ಆಗಮಿಸಲಿದ್ದಾರೆ. ಗೌರವ ಅತಿಥಿಯಾಗಿ ಪುಣೆಯ ಖ್ಯಾತ ಉದ್ಯಮಿ ಮಂಜುನಾಥ್ ಸಿ ಶೆಟ್ಟಿಯವರು ಉಪಸ್ಥಿತರಿರುವರು. ಅಸೋಸಿಯೇಷನ್ ನ ಕ್ರೀಡಾ ಕಾರ್ಯಾಧ್ಯಕ್ಷರಾದ ರಕ್ಷಿತ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಅಸೋಸಿಯೇಷನ್ ನ ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಸರ್ವ ಸಮಿತಿ ಪಧಾದಿಕಾರಿಗಳ ಸಹಕಾರದೊಂದಿಗೆ…

Read More

ಸಮಾಜದ ಎಲ್ಲರೂ ಒಪ್ಪುವಂತಹ ಸಜ್ಜನಿಕೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬರುವುದು ಅಪರೂಪದ ಕೆಲಸ. ಈ ವ್ಯಕ್ತಿತ್ವವನ್ನು ಸುದೀರ್ಘ ಕಾಲ ಶ್ರದ್ಧೆಯಿಂದ ಪಾಲಿಸಿಕೊಂಡು ಬಂದಿರುವ ಅಪ್ಪಣ್ಣ ಹೆಗ್ಡೆಯವರದ್ದು ಬಣ್ಣಿಸುವ ಪದಗಳ ಹೂರಣ ಎಂದು ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ನುಡಿದರು. ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಆವರಣದಲ್ಲಿ ನಡೆದ ಆಳ್ವಾಸ್ ಸಾಂಸ್ಕೃತಿಕ ಲೋಕ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿಯ ಜಿ.ಶಂಕ‌ರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ.ಶಂಕರ್ ಅವರು, ಸಾಮಾಜಿಕ, ಧಾರ್ಮಿಕ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅಪಾರ ಕೊಡುಗೆ ಸಲ್ಲಿಸಿರುವ ಬಸ್ರೂರು ಅಪ್ಪಣ್ಣ ಹೆಗ್ಡೆಯವರದ್ದು ಅಪರೂಪದ ವ್ಯಕ್ತಿತ್ವ. ಜಾತಿ, ಧರ್ಮಗಳನ್ನು ಮೀರಿದ ವ್ಯಕ್ತಿ. ಅಂತಹ ಪುಣ್ಯ ಪುರುಷರ ಸಮಕಾಲಿನರಾಗಿ ಇರುವುದೇ ನಮ್ಮ ಭಾಗ್ಯ. ಅವರು ನೂರ್ಕಾಲ ಬಾಳಿ, ಸಮಾಜಕ್ಕೆ ಬದುಕಲಿ ಎಂದು ಹಾರೈಸಿದರು. ಬಸ್ರೂರು ಅಪ್ಪಣ್ಣ ಹೆಗ್ಡೆ 90 ರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣಗೊಳಿಸಿ ಮಾತನಾಡಿದ ಮುಂಬಯಿ ಉದ್ಯಮಿ ಎನ್.ಟಿ ಪೂಜಾರಿ ಅವರು, ಸರಳತೆಯ…

Read More