ಬಂಟರ ಸಂಘ ಬೆಂಗಳೂರಿನ ವೈದ್ಯಕೀಯ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ದಾನಿಗಳಾದ ಶ್ರೀ ಎನ್. ಎನ್. ಶೆಟ್ಟಿಯವರು ನೀಡಿದ ಮೊತ್ತ ಸೇರಿ ಒಟ್ಟು ಐವತ್ತೈದು ಸಾವಿರ ರೂ.ಗಳನ್ನು ಮೈಕ್ರೋ ಪ್ಲಾಸ್ಮಾದಂತಹ ಅತಿ ವಿರಳ ಕಾಯಿಲೆಯಿಂದ ಬಳಲುತ್ತಿದ್ದು, ಮಾರತಹಳ್ಳಿಯ ರೇನ್ಬೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕಾಶ್ ಶೆಟ್ಟಿ ಅವರ ಮಗಳಾದ ಪ್ರತೀಕ್ಷಾಳ ನೆರವಿಗೆ ಚೆಕ್ ಮೂಲಕ ಕಾರ್ಯಕಾರಿ ಸಮಿತಿ ಸದಸ್ಯರುಗಳು ಹಸ್ತಾಂತರ ಮಾಡಿ ಆಸ್ಪತ್ರೆಯ ಪ್ರಮುಖ ವೈದ್ಯರಾದ ಡಾ. ರಕ್ಷಯ್ ಶೆಟ್ಟಿ ಅವರನ್ನು ಸಂಪರ್ಕಿಸಿ ಸುಮಾರು ಹತ್ತು ಲಕ್ಷದಷ್ಟು ರಿಯಾಯಿತಿ ಪಡೆಯಲು ಪ್ರಯತ್ನಿಸಿದರು.ಕುಂದಾಪುರ ತಾಲೂಕಿನ ಉಲ್ಲೂರು ೭೪ ಗ್ರಾಮದ ಶ್ರೀಮತಿ ರಾಜೀವಿ ಶೆಟ್ಟಿ ಅವರು ದೀರ್ಘಕಾಲದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಪತಿಯನ್ನು ಕಳೆದುಕೊಂಡಿದ್ದಾರೆ. ತೀರಾ ಆರ್ಥಿಕ ತೊಂದರೆಯಲ್ಲಿದ್ದ ಅವರಿಗೆ ಬೆಂಗಳೂರು ಬಂಟರ ಸಂಘದ ವೈದ್ಯಕೀಯ ವಿಭಾಗ ಮತ್ತು ದಾನಿಗಳಿಂದ ಸಹಾಯ ಪಡೆದ ಸುಮಾರು ಮೂವತ್ತೆರಡು ಸಾವಿರ ರೂಪಾಯಿಗಳನ್ನು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಒಪ್ಪಿಗೆ ಮೇರೆಗೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಸುರೇಂದ್ರ ಶೆಟ್ಟಿ ಹಡಾಳಿಯವರು ವೈದ್ಯಕೀಯ ವಿಭಾಗದ ಪರವಾಗಿ ಅವರ ಸ್ವಗೃಹಕ್ಕೆ ತೆರಳಿ ನೀಡಿದರು.
