Author: admin
ದೇವರ ಸ್ವಂತ ನಾಡಾದ ಕೇರಳ ರಾಜ್ಯದ ಉತ್ತರ ಭಾಗದ ತುಳುನಾಡಿನಲ್ಲಿ ಕುಂಬಳೆ ಸೀಮೆ ಪ್ರಸಿದ್ಧವಾದುದು. ಈ ಸೀಮೆಯ ಉದ್ದಗಲಕ್ಕೂ ತುಳುನಾಡಿನ ರಾಜದೈವಗಳೆಂದು ಪ್ರಖ್ಯಾತವಾದ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳ ಹಲವು ದೈವಸ್ಥಾನಗಳು ಕಾಣಸಿಗುತ್ತವೆ. ಬೆಳೆಂಜದ ಕಿನ್ನಿಗೋಳಿ ಮಾಡವು ಇಂತಹ ಕಾರಣಿಕ ದೈವಸ್ಥಾನಗಳಲ್ಲಿ ಒಂದಾಗಿದೆ. ಬಹಳ ವರ್ಷಗಳ ಹಿಂದೆ ಬಾರಕೂರಿನ ರಾಜನಿಗೆ ಮಕ್ಕಳಿಲ್ಲದೆ ಆತ ತನ್ನ ಸೊಸೆಯನ್ನು ಅಳಿಯ ಸಂತಾನ ಪದ್ಧತಿಯ ಪ್ರಕಾರ ರಾಣಿಯನ್ನಾಗಿ ನೇಮಿಸುತ್ತಾನೆ. ಆಕೆ ಹಲವು ವರ್ಷಗಳ ಕಾಲ ರಾಜ್ಯಭಾರ ಮಾಡುತ್ತಾಳೆ. ಅವಳ 9 ಮಕ್ಕಳಲ್ಲಿ ಒಬ್ಬಳು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳನ್ನು ಬಿಟ್ಟು ಇತರರೆಲ್ಲ ಯುದ್ಧದಲ್ಲಿ ಮಡಿಯುತ್ತಾರೆ. ಸೋಲಿನಿಂದ ಅವಮಾನಿತರಾಗಿ ಆ ಮೂವರು ಕಾಶಿಯಾತ್ರೆ ಕೈಗೊಳ್ಳುತ್ತಾರೆ. ಕಾಶಿ ವಿಶ್ವನಾಥನನ್ನು ಒಲಿಸಿಕೊಂಡು ಪೂಮಾಣಿ – ಕಿನ್ನಿಮಾಣಿ, ದೈಯಾರೆ ಎಂಬ ಹೆಸರನ್ನು ಪಡೆದು, ಕಾರಣಿಕ ಶಕ್ತಿಯನ್ನು ಗಳಿಸಿ ಅಲ್ಲಿಂದ ದಕ್ಷಿಣಕ್ಕೆ ಪ್ರಯಾಣ ಬೆಳೆಸುತ್ತಾರೆ. ಹಾಗೆ ಭಗಂಡ ಕ್ಷೇತ್ರ (ಭಾಗಮಂಡಲ)ಕ್ಕೆ ತಲುಪಿ ಕಾವೇರಮ್ಮನ ದರ್ಶನ ಪಡೆದು ಘಟ್ಟ ಇಳಿದು ಬರುತ್ತಾರೆ. ಬರುತ್ತಿರುವಾಗ…
ಕೃಷಿ ಪ್ರಧಾನ ತೌಳವ ಸಂಸ್ಕೃತಿಯ, ಧಾರ್ಮಿಕ ಐಸಿರಿಯ, ಧರ್ಮದೇವತೆಗಳ ಆಡುಂಬೊಲದ ತುಳುನಾಡಿನಲ್ಲಿ (ಕರಾವಳಿ ಪ್ರದೇಶ) ‘ಪರತ್ ನಿಗಿಪೆರೆ ಬುಡಯ’ (ಹಳೆಯದನ್ನು ಹೊಸಕಿ ಹಾಕಲು ಬಿಡೆವು) ಎಂಬ ದೈವಗಳ ಅಭಯದ ನುಡಿಯೊಂದಿದೆ. ಆರ್ಥಿಕ ಸಂಕಷ್ಟಗಳು ಎಷ್ಟೇ ಬರಲಿ, ಹೇಗೇ ಇರಲಿ ಅವೆಲ್ಲವನ್ನೂ ಮೀರಿ ಶ್ರದ್ಧೆ, ಭಕ್ತಿ, ನಿಷ್ಠೆಯ ಮೂಲ ಮಂತ್ರವಾಗಿ ಮನೆತನದ ಪೂರ್ವಜರಿಂದ ಅನೂಚಾನವಾಗಿ ನಡೆದು ಬಂದಿರುವ ಅನನ್ಯ ಹಿನ್ನೆಲೆಯ ಸಾಂಪ್ರದಾಯಿಕ ಕಂಬಳಗಳನ್ನು ದೈವ-ದೇವತೆಗಳ ಕಟ್ಟುಕಟ್ಟಳೆಯ ಆರಾಧನೆಯೊಂದಿಗೆ, ಗೌಜಿ, ಗದ್ದಲವಿಲ್ಲದ ಧಾರ್ಮಿಕ ಆಚರಣೆಗಳೊಂದಿಗೆ ಈಗಲೂ ಸರಳವಾಗಿ ಆಚರಿಸುತ್ತ ಬಂದಿರುವುದು ದಕ್ಷಿಣದ ಈ ಸಿರಿನಾಡಿನ ಸಾಂಸ್ಕೃತಿಕ ಹಿರಿಮೆ, ದೈವಗಳ ಮಹಿಮೆ, ಜನಪದರ ಭಕ್ತಿಪಂಥದ ಗರಿಮೆ. ರೈತನೆಂದರೆ ‘ಅನ್ನಬ್ರಹ್ಮ’. ಅನ್ನ ಕೊಡುವ ಭೂಮಿಯನ್ನು ಹಸನುಗೊಳಿಸುವ ಕೋಣಗಳೇ ಅವನ ಬದುಕಿನ ಜೀವಾಳ. ವರ್ಷವಿಡೀ ಗದ್ದೆಯ ನಂಟಿಗೆ ಅಂಟಿಕೊಂಡಿರುವ ಆತನ ಆನಂದ, ಉಲ್ಲಾಸಕ್ಕೆ ಹುಟ್ಟಿಕೊಂಡ ಕಂಬಳ ಉತ್ಸವದ ಸುತ್ತ ಈ ಮಣ್ಣಿನ ಜೀವನಾಡಿಯಂತಿರುವ ಜನಪದ ನಂಬಿಕೆಗಳ ದಟ್ಟಐತಿಹ್ಯಗಳಿವೆ. ಮಾನವ ಸಂತಾನ ಪ್ರಕ್ರಿಯೆಯ ಮೇಲೆ ಫಲ ಬೀರುವ ಪ್ರಾಕೃತಿಕ ನಿಷೇಧಗಳಿವೆ.…
ಆಳ್ವಾಸ್ ಕಾಲೇಜಿನಲ್ಲಿ ಸ್ವಯಂ ಸೇವಕರ ದಿನ ಕುರಿತ ವಿಶೇಷ ಉಪನ್ಯಾಸ ‘ಸೇವಾ ಮನೋಭಾವ ಕಟ್ಟಿಕೊಟ್ಟ ವಿವೇಕಾನಂದರು’
ವಿದ್ಯಾಗಿರಿ: ‘ನಮ್ಮ ದೇಶದಲ್ಲಿ ಸೇವೆ ಎಂಬುದನ್ನು ವಿಭಿನ್ನವಾಗಿ ಕಟ್ಟಿಕೊಟ್ಟವರು ಸ್ವಾಮಿ ವಿವೇಕಾನಂದರು’ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಸ್ವಯಂ ಸೇವಕರ ದಿನ-2023ರ ಅಂಗವಾಗಿ ಆಳ್ವಾಸ್ ಕಾಲೇಜಿನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ಆಳ್ವಾಸ್ ಕಾಲೇಜಿನ ಚಿಗುರು ವಿದ್ಯಾರ್ಥಿ ವೇದಿಕೆ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಭಾರತದಲ್ಲಿ ಇನ್ನೊಬ್ಬರಿಗೆ ನಿಸ್ವಾರ್ಥದಿಂದ ಮಾಡುವ ಸಹಾಯಕ್ಕೆ ಸೇವೆ ಎಂದು ಕರೆದರೆ, ವಿದೇಶಗಳಲ್ಲಿ ಇದನ್ನು ಸಾಮಾಜಿಕ ಚಟುವಟಿಕೆ ಎಂದು ಗುರುತಿಸುತ್ತಾರೆ. ಯಾವಾಗ ನಿರೀಕ್ಷೆಗಳು ಶೂನ್ಯವಾಗುತ್ತೋ, ಆಗ ಮಾಡುವ ಸಾಮಾಜಿಕ ಚಟುವಟಿಕೆ ಸೇವೆಯಾಗಿ ಗುರುತಿಸಿಕೊಳ್ಳುತ್ತದೆ’ ಎಂದರು. ‘ಭಗವಂತ ಗರ್ಭಗುಡಿಯಲ್ಲಿ ಇರೋದಿಲ್ಲ, ವ್ಯಕ್ತಿಗಳ ಹೃದಯದಲ್ಲಿರುತ್ತಾನೆ. ಪರಬ್ರಹ್ಮ ಸ್ವರೂಪಿ ಆನಂದ ನೀಡುವ ಏಕೈಕ ಕ್ರಿಯೆ ಸೇವೆ. ಇತರರ ದುಃಖಕ್ಕೆ ಸ್ಪಂದಿಸಿದಾಗ ಸಿಗುವ ಸಂತೋಷ ನಮ್ಮ ಕಷ್ಟಕ್ಕೆ ಸ್ಪಂದಿಸಿದಾಗಲೂ ಸಿಗುವುದಿಲ್ಲ’ ಎಂದರು. ‘ಜೀವ ಸೇವೆಯನ್ನು ಯಾರು ಮಾಡುತ್ತಾರೋ ಅವರು ಶಿವ ಸೇವೆಯನ್ನು ಮಾಡಿದ ಹಾಗೆ. ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ ಹೃದಯಕ್ಕೆ ಅದ್ಭುತ ಆನಂದ ಸಿಗುತ್ತೆ. ಆತ್ಮಕ್ಕೆ ಆನಂದ ಸಿಗುವುದು ಸೇವೆಯಿಂದ…
ಯು.ಎ.ಇ.ಯ ರಾಜಧಾನಿ ಅಬುಧಾಬಿಯಲ್ಲಿ ಕಳೆದ 43 ವರ್ಷಗಳಿಂದ ಕನ್ನಡ ಭಾಷೆ, ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಅಬುಧಾಬಿ ಕರ್ನಾಟಕ ಸಂಘ 44 ನೇ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ನವಂಬರ್ ಐದರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಆಚರಿಸಿತು. ಅಬುಧಾಬಿಯ ಭಾರತೀಯ ರಾಯಭಾರಿಯ ಉಪ ಮುಖ್ಯಸ್ಥ ಗೌರವಯುತ ಎ. ಅಮರನಾಥ ಮತ್ತು ಇಂಡಿಯನ್ ಸೋಶಿಯಲ್ ಸೆಂಟರ್ ನ ಮುಖ್ಯ ಕಾರ್ಯದರ್ಶಿ ಪ್ರದೀಪ್ ಕುಮಾರ್, ಬಾಲಜಿ ರಾಮಸ್ವಾಮಿ ಕೌನ್ಸಿಲರ್ ಇಂಡಿಯನ್ ಅಂಬಾಸಿ ಅಬುಧಾಬಿಯವರು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾವಗೀತೆ, ಹಾಸ್ಯ ಕವಿ ಪುಷ್ಕಲ್ ಕುಮಾರ್ ತೋನ್ಸೆ ದಂಪತಿಗಳು, ಕರ್ನಾಟಕ ಸಂಘ ದುಬೈಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ, ಕನ್ನಡಿಗರು ದುಬೈಯ ಸಾಧನ್ ದಾಸ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಅನಂತ ರಾವ್, ಶ್ರೀಮತಿ ನಮಿತ ಅನಂತ ರಾವ್ ಸಂಘದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು…
ದ್ವೀಪದ ಅನಿವಾಸಿ ಬಂಟ ಸಮುದಾಯದ ಒಕ್ಕೂಟವಾದ “ಬಂಟ್ಸ್ ಬಹರೈನ್” ಸಂಘಟನೆ ಇದೀಗ ಯಶಸ್ವಿಯಾಗಿ ಎರಡು ದಶಕಗಳನ್ನು ಪೂರ್ಣಗೊಳಿಸಿದ್ದು ಇದೀಗ ಸಂಘಟನೆಯ ಇಪ್ಪತ್ತನೇ ವಾರ್ಷಿಕೋತ್ಸವಕ್ಕೆ ಕ್ಷಣಗಣನೆ ಪ್ರಾಂಭವಾಗಿದೆ. ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುತ್ತಾ ದ್ವೀಪದ ಬಂಟ ಬಾಂಧವರನ್ನು ತನ್ನ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಸಂಘಟನೆಯ ಪ್ರಸಕ್ತ ಅಧ್ಯಕ್ಷರಾಗಿ ಸೌಕೂರು ಅರುಣ್ ಶೆಟ್ಟಿಯವರು ಕಾರ್ಯನಿರ್ವಹಿಸುತ್ತಿದ್ದು ಇವರ ಸಾರಥ್ಯದಲ್ಲಿ ಇದೆ ನವೆಂಬರ್ ತಿಂಗಳ 10ನೇ ತಾರೀಖಿನ ಶುಕ್ರವಾರದಂದು ಬೆಳಗ್ಗೆ 10:30ಕ್ಕೆ ಇಲ್ಲಿನ ಪಂಚತಾರಾ ಹೋಟೆಲ್ ”ಕ್ರೌನ್ ಪ್ಲಾಜಾ” ದ ಸಭಾಂಗಣದಲ್ಲಿ ಇಪ್ಪತ್ತನೆಯ ವಾರ್ಷಿಕೋತ್ಸವವನ್ನು ಅದ್ದೊರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಂಟ ಸಮುದಾಯದ ಸಾಧಕರಾದ ಸಮಾಜ ಸೇವಕರೂ, ಕಾಪು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರೂ ಆಗಿರುವ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ನಾಡಿನ ಖ್ಯಾತ ಮೂಳೆ ತಜ್ಞ ಹಾಗೂ ಮುಂಬಯಿಯ ದೀಪಕ್ ಹಾಸ್ಪಿಟಲ್ ನ ಆಡಳಿತ ನಿರ್ದೇಶಕರಾಗಿರುವ ಡಾಕ್ಟರ್ ಭಾಸ್ಕರ್ ಶೆಟ್ಟಿಯವರು ವಿಶೇಷವಾಗಿ ದ್ವೀಪಕ್ಕೆ ಆಗಮಿಸಿ…
ಟಿ.ಸಿ.ಎ ಉಡುಪಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಶಾಲಾ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟದ 2 ನೇ ದಿನವಾದ ಮಂಗಳವಾರ ನಡೆದ ಹೈಸ್ಕೂಲ್ ವಿಭಾಗದ ಪಂದ್ಯಾಟದಲ್ಲಿ ಟಿ.ಎ ಪೈ ಪ್ರೌಢಶಾಲೆ ಉಡುಪಿ ಜಯ ಸಾಧಿಸಿತು. ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಟಿ.ಸಿ.ಎ ಉಡುಪಿ ಅಧ್ಯಕ್ಷ ಗೌತಮ್ ಶೆಟ್ಟಿ “ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೆ, ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ” ಎಂದರು. ಹೈಸ್ಕೂಲ್ ವಿಭಾಗದಲ್ಲಿ ಒಟ್ಟು ಎಂಟು ತಂಡಗಳ ನಡುವೆ ಲೀಗ್ ಹಂತದಲ್ಲಿ ರೋಚಕ ಹಣಾಹಣಿ ಸಾಗಿತ್ತು. ಉಪಾಂತ್ಯ ಪಂದ್ಯದಲ್ಲಿ ಗ್ರೀನ್ ಪಾರ್ಕ್ ಹಿರಿಯಡ್ಕ – ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿಯನ್ನು ಹಾಗೂ ಟಿ.ಎ.ಪೈ – ಸೈಲಸ್ ಉಡುಪಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ವೈದಿಕ್ ಶೆಟ್ಟಿ ಸಮಯೋಚಿತ ಆಟ – ಟಿ.ಎ ಪೈ ತಂಡ ಚಾಂಪಿಯನ್ ಫೈನಲ್ ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಗ್ರೀನ್ ಪಾರ್ಕ್ ಹೈಸ್ಕೂಲ್ ಹಿರಿಯಡ್ಕ ಪವನ್ 34 ರನ್ ನೆರವಿನಿಂದ…
ಮುಂಬಯಿಯ ಚಿಣ್ಣರಬಿಂಬ ಸಂಸ್ಥೆಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಸಂಸ್ಥೆಯ ರೂವಾರಿ, ಮುಂಬಯಿಯ ಮಾಜಿ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಪ್ರಶಸ್ತಿ ಸ್ವೀಕರಿಸಿದರು. ವಾಣಿಜ್ಯ ನಗರಿ ಮುಂಬಯಿಯಲ್ಲಿ ಕನ್ನಡ – ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಚಿಣ್ಣರ ಬಿಂಬ ತಂಡದ ಸದಸ್ಯರು ಶ್ರಮ ವಹಿಸುತ್ತಿದ್ದಾರೆ. ಸಾಮಾಜಿಕವಾಗಿ, ಸಾಂಸ್ಕೃತಿವಾಗಿ ಅನೇಕ ಮೈಲುಗಲ್ಲುಗಳನ್ನು ದಾಟಿ ಮುಂದುವರೆಯುತ್ತಿರುವ ಈ ಸಂಸ್ಥೆ ನಮ್ಮ ಮೌಲ್ಯಧಾರಿತ ಹಳೆಯ ಸಂಪ್ರದಾಯ, ಆಚಾರ ವಿಚಾರಗಳನ್ನು ಮಕ್ಕಳಿಗೆ ಮನದಟ್ಟು ಮಾಡುವ ವಿಷಯದಲ್ಲಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದಾಗಲೇ ಪ್ರವೃತ್ತಿಯಲ್ಲಿ ಕಲಾಪೋಷಕರಾಗಿ ಗುರುತಿಸಿಕೊಂಡಿರುವ ಪ್ರಕಾಶ್ ಭಂಡಾರಿ ಅವರ ಪತ್ನಿ ರೇಣುಕಾ ಭಂಡಾರಿ, ಪುತ್ರಿಯರಾದ ಪೂಜಾ ಭಂಡಾರಿ, ನೇಹ ಭಂಡಾರಿ ಚಿಣ್ಣರ ಬಿಂಬದಲ್ಲಿ ಸಕ್ರಿಯರಾಗಿದ್ದಾರೆ. ವಿಜಯ್ ಕುಮಾರ್ ಶೆಟ್ಟಿ, ಸುರೇಂದ್ರ ಕುಮಾರ್ ಹೆಗ್ಡೆ, ಭಾಸ್ಕರ್ ಶೆಟ್ಟಿ, ವಿನೋಧಿನಿ ಹೆಗ್ಡೆ, ಸತೀಶ್ ಸಾಲಿಯಾನ್ ಮತ್ತಿತರರ ಸಂಪೂರ್ಣ ಸಹಕಾರ ಚಿಣ್ಣರ ಬಿಂಬಕ್ಕಿದೆ.
ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಅರ್ಹವಾದ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರಿಗೆ ಮಾಧ್ಯಮ ಕ್ಷೇತ್ರದ ಸಂಸ್ಥೆ ಸ್ಪೇಸ್ ಮೀಡಿಯಾ ಬೆಂಗಳೂರಿನ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧಿ ಅಂತಾರಾಷ್ಟ್ರೀಯ ಪ್ರಶಸ್ತಿ -2023 ಯನ್ನು ನೀಡಿ ಗೌರವಿಸಿದೆ. ಪ್ರಶಸ್ತಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರದಾನಿಸಿದರು. ಸ್ಪೀಕರ್ ಯು.ಟಿ. ಖಾದರ್, ಎಸ್ ಡಿ ಎಂ ಶೈಕ್ಷಣಿಕ ಸಮೂಹ ಸಂಸ್ಥೆಗಳ ಡಾ. ಡಿ ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು. ಈ ಹಿಂದೆ ಕಿಶೋರ್ ಆಳ್ವ ಅವರು ಪ್ರತಿಷ್ಠಿತ ಬೆಂಗಳೂರು ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಸ್ ನ( ಬಿಸಿಐಸಿ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾಭಿವೃದ್ಧಿಗೆ ಶ್ರಮಿಸಿದ್ದರು. ಪ್ರತಿಷ್ಟಿತ ಕೊಜೆಂಟ್ರಿಕ್ಸ್ ಚೈನಾ ಲೈಟ್ ಆಂಡ್ ಪವರ್, ಯುನೋಕಾಲ್ ಎಂಬ ಪ್ರತಿಷ್ಠಿತ ಸಂಸ್ಥೆಗಳಿಗೆ ಹಿರಿಯ ಸಲಹೆಗಾರರಾಗಿ ಕೈಗಾರಿಕಾಭಿವೃದ್ಧಿಗೆ ಕಿಶೋರ್ ಆಳ್ವ ಅವರು ಕೈಜೋಡಿಸಿದ್ದಾರೆ. ತಮ್ಮ ವಿದ್ಯಾರ್ಥಿ ದೆಸೆಯಲ್ಲೂ ಸಹ ಕಿಶೋರ್ ಆಳ್ವ…
‘ನಂಬಿಕೆ ಇರಲಿ, ಮೌಢ್ಯಕ್ಕೆ ಬಲಿಯಾಗಬೇಡಿ’ ವಿದ್ಯಾಗಿರಿ: ಬದುಕಿನಲ್ಲಿ ನಂಬಿಕೆ ಇರಬೇಕು. ಆದರೆ, ಮೂಢನಂಬಿಕೆಗೆ ಬಲಿಯಾಗದಂತಹ ವೈಜ್ಞಾನಿಕ ಹಾಗೂ ವೈಚಾರಿಕ ಎಚ್ಚರಿಕೆ ಅವಶ್ಯ’ಎಂದು ಆಳ್ವಾಸ್ ಪುನರ್ಜನ್ಮ ಕೇಂದ್ರದ ಆಪ್ತ ಸಮಾಲೋಚಕ ಲೋಹಿತ್ ಬಂಟ್ವಾಳ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಂಗಳವಾರ ಅವರು ‘ಮಾನಸಿಕ ಆರೋಗ್ಯ’ ಕುರಿತು ಮಾತನಾಡಿದರು. ಬದುಕಿಗೆ ನಂಬಿಕೆ ಬೇಕಾಗುತ್ತದೆ. ಆದರೆ, ಅದೇ ನಂಬಿಕೆಯನ್ನು ವ್ಯಾವಹಾರಿಕವಾಗಿ ಬಳಸುವ, ದುರುಪಯೋಗ ಪಡಿಸುವ ಮೂಢನಂಬಿಕೆಗಳಿಗೆ ಬಲಿಯಾಗಬೇಡಿ. ಎಲ್ಲವನ್ನೂ ತಾರ್ಕಿಕವಾಗಿ ಯೋಚಿಸಿ ಎಂದರು. ದೇವರು ಯಾವತ್ತೂ ಲಂಚ ಕೇಳುವುದಿಲ್ಲ. ಕೆಡುಕನ್ನು ಬೋಧಿಸುವುದಿಲ್ಲ. ವೈಭೋಗ ಬಯಸುವುದಿಲ್ಲ. ದೇವರ ಹೆಸರಲ್ಲಿ ಮೋಸ ಮಾಡುವವರ ಬಗ್ಗೆ ಸದಾ ಎಚ್ಚರಿಕೆ ಇರಲಿ ಎಂದರು. ಬದುಕಿನಲ್ಲಿ ಆತ್ಮವಿಶ್ವಾಸ ಇರಬೇಕು. ಕೀಳರಿಮೆಯನ್ನು ದೂರ ಮಾಡಬೇಕು. ಒತ್ತಡ ಮುಕ್ತ ಬದುಕು ಜೀವಿಸಲು ಉತ್ತಮ ಜೀವನಶೈಲಿ ಹೊಂದಬೇಕು ಎಂದು ಅವರು ಸಲಹೆ ನೀಡಿದರು. ವಾಸ್ತವಿಕವನ್ನು ಒಪ್ಪಿಕೊಳ್ಳಬೇಕು. ಭವಿಷ್ಯದ ಬಗ್ಗೆ ಭರವಸೆ ಬೇಕು. ಯಾರದೇ ಜೊತೆ ಹೋಲಿಕೆಯ ಅಥವಾ…
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ಮೂಡಬಿದಿರೆಯು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ವೈಭವದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’. ಈ ವರ್ಷ ಆಳ್ವಾಸ್ ವಿರಾಸತ್‍ಗೆ …29ನೇ ವರ್ಷವಾಗಿದ್ದು ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ, ಸಂಸ್ಕೃತಿ ಪ್ರಿಯರಿಗೆ ರಸದೌತಣವನ್ನು ನೀಡಲು ಯೋಚಿಸಲಾಗಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಯಲ್ಲಿ ತೊಡಗಿದ್ದು ‘ಆಳ್ವಾಸ್ ವಿರಾಸತ್ 2023’ ಅತ್ಯಂತ ಯಶಸ್ವಿ ಉತ್ಸವವಾಗಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ. ‘ಆಳ್ವಾಸ್ ವಿರಾಸತ್ 2023’ ಕ್ಕೆ ದಿನಾಂಕ ನಿಗದಿಯಾಗಿದ್ದು ಡಿಸೆಂಬರ್ 14ರಂದು ಪ್ರಾರಂಭವಾಗಿ 17ರಂದು ಮುಕ್ತಾಯಗೊಳ್ಳಲಿದೆ. ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರಗಳು ಸೇರಿ ನಾಲ್ಕು ದಿನಗಳ ಕಾಲ ಈ ಸಾಂಸ್ಕೃತಿಕ ಉತ್ಸವವು ಜರುಗಲಿದೆ. ಪ್ರತಿದಿನ ಮುಸ್ಸಂಜೆ 6.00 ಗಂಟೆಗೆ ಪ್ರಾರಂಭವಾಗುವ ಈ ಉತ್ಸವವು ರಾತ್ರಿ 9.30ಕ್ಕೆ ಮುಕ್ತಾಯಗೊಳ್ಳುತ್ತವೆ ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ವಿ ರಾಸತ್ ಕಾರ್ಯಕ್ರಮಗಳು ನಡೆಯಲಿದೆ. ಇದು ಬೃಹತ್ ವೇದಿಕೆಯಿದಾಗಿದ್ದು, 50 ಸಾವಿರಕ್ಕಿಂತ ಹೆಚ್ಚಿನ ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಅನುವಾಗುವಂಥಾ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಡಿಸೆಂಬರ್ 14,…