ಮುಂಬಯಿ:- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಂಘಟನಾ ಪುರಸ್ಕೃತ ತುಳುಕೂಟ ಫೌಂಡೇಶನ್, ನಾಲಾಸೋಪರ(ರಿ) ಹಾಗೂ ಶ್ರೀದೇವಿ ಯಕ್ಷ ಕಲಾನಿಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರಿಗೆ ತುಳುನಾಡ ಐಸಿರಿ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು. ಮಹಿಳಾ ವಿಭಾಗದ ಕಾರ್ಯದರ್ಶಿ ಮಲ್ಲಿಕಾ ಪೂಜಾರಿ ಅವರು ಸನ್ಮಾನ ಪತ್ರ ವಾಚಿಸಿದರು. ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಶಿಧರ.ಕೆ ಶೆಟ್ಟಿ ಅವರ ಮುಂದಾಳತ್ವದಲ್ಲಿ ದಿನಪೂರ್ತಿ ನಡೆದ ಪಂಚಕಲಾ ವೈಭವದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿತು.
ವೇದಿಕೆಯಲ್ಲಿ ಗಣ್ಯರಾದ ಬಿಲ್ಲವರ ಅಸೋಸಿಯೇಶನ್ನಿನ ಅಧ್ಯಕ್ಷರಾದ ಹರೀಶ್.ಜಿ.ಅಮೀನ್, ಉದ್ಯಮಿ ಪ್ರವೀಣ್ ಶೆಟ್ಟಿ ಬೊಯಿಸರ್, ವಾಸ್ತುತಜ್ಞರಾದ ಅಶೋಕ್ ಪುರೋಹಿತ್, ಹೆಸರಾಂತ ಉದ್ಯಮಿ ಎನ್.ಟಿ.ಪೂಜಾರಿ, ಉದ್ಯಮಿ ರತ್ನಾಕರ ಶೆಟ್ಟಿ, ಅಶೋಕ್ ಇಂಡಸ್ಟ್ರೀಸ್ನ ಆಡಳಿತ ನಿರ್ದೇಶಕರಾದ ಅಶೋಕ್ ಶೆಟ್ಟಿ, ಪೆರ್ಮುದೆ ಮೊದಲಾದವರ ಗಣ್ಯ ಉಪಸ್ಥಿತಿಯಲ್ಲಿ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ತಂಗಿ ವೈಶಾಲಿ ಶೆಟ್ಟಿ ಹಾಗೂ ಮಗಳು ಸ್ವೀಕೃತಿ ಶೆಟ್ಟಿ ಅವರ ಜೊತೆಗೂಡಿ ಪ್ರಶಸ್ತಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಕುಮಾರಿ ನಿಕಿತಾ ಅಮೀನ್ ಅವರಿಗೆ ತುಳುನಾಡ ರತ್ನ ಪ್ರಶಸ್ತಿ-2025 ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಡಾ.ಪೂರ್ಣಿಮಾ ಶೆಟ್ಟಿ ಅವರು ಮಾತನಾಡುತ್ತಾ ಪ್ರಶಸ್ತಿಯನ್ನು ನಾವು ಹುಡುಕಿಕೊಂಡು ಹೋಗಬಾರದು. ನಮ್ಮಲ್ಲಿ ಪ್ರತಿಭೆಯಿದ್ದರೆ ನಮ್ಮನ್ನು ಹುಡುಕಿಕೊಂಡು ಬರುತ್ತದೆ.
ಇಂದು ಈ ಪ್ರಶಸ್ತಿ ನನ್ನ ಜವಬ್ದಾರಿಯನ್ನು ಹೆಚ್ಚಿಸಿದೆ. ಡಾ.ಸುನೀತಾ ಶೆಟ್ಟಿ ಅವರ ಮೇಲಿನ ಗೌರವದಿಂದ ಇದನ್ನು ಸ್ವೀಕರಿಸಿದ್ದೇನೆ. ನನ್ನನ್ನು ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿ ಬೆಳೆಸಿದ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗಕ್ಕೆ, ನನ್ನ ಮಾತಾಪಿತರಿಗೆ ಹಾಗೂ ನನ್ನ ಕುಟುಂಬಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ ಎಂದು ಶಶಿಧರ ಶೆಟ್ಟಿ ಅವರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿರುವೆ ಎಂದು ನುಡಿದರು. ತುಳುಕೂಟ ಫೌಂಡೇಶನ್ನಿನ ಗೌರವಾಧ್ಯಕ್ಷರಾದ ರಮೇಶ್.ವಿ.ಶೆಟ್ಟಿ, ಕಾಪು, ಓ.ಪಿ. ಪೂಜಾರಿ, ಮಂಜುನಾಥ್ ಎನ್ ಶೆಟ್ಟಿ, ಕೊಡ್ಲಾಡಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ, ಗುರ್ಮೆ, ಗೌರವ ಪ್ರದಾನ ಕಾರ್ಯದರ್ಶಿ ಜಗನ್ನಾಥ್.ಡಿ ಶೆಟ್ಟಿ ಪಲ್ಲಿ, ಗೌರವ ಕೋಶಾಧಿಕಾರಿ ರಾಜೇಶ್ ವೈ ಕರ್ಕೇರ, ಜೊತೆ ಕಾರ್ಯದರ್ಶಿ ನಾರಾಯಣ .ಎಂ ಶೆಟ್ಟಿ, ಜೊತೆ ಕೋಶಾಧಿಕಾರಿ ಸೀತಾರಮ್ ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಸತೀಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಹರ್ಷಿತ್ ಕುಂದರ್, ಉಪಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಗಣೇಶ್.ವಿ.ಸುವರ್ಣ, ದೇವೇಂದ್ರ ಬುನ್ನನ್, ಸತೀಶ್ ಎ ಶೆಟ್ಟಿ, ಉಮೇಶ್ ಕೋಟ್ಯಾನ್, ದಯಾನಂದ ಬೋಂಟ್ರಾ, ದಯಾನಂದ ಶೆಟ್ಟಿ, ವಿಜಯ್ ಎಂ ಶೆಟ್ಟಿ, ನಾಗೇಶ್ ಕೋಟ್ಯಾನ್, ನನೀನ್ ಶೆಟ್ಟಿ ಪಲ್ಲಿ, ವಾಮನ್ ಮೂಲ್ಯ, ಸುಭಾಷ್.ಜೆ.ಶೆಟ್ಟಿ ಎರ್ಮಾಳ್ ಹಾಗೂ ಮಹಿಳಾ ವಿಭಾಗದ ಪಧಾಧಿಕಾರಿಗಳು ಉ¥ಸ್ಥಿತರಿದ್ದರು. ಸಂಘಟಕರಾದ ಪ್ರವೀಣ್ ಶೆಟ್ಟಿ, ಕಣಂಜಾರು, ಸುಪ್ರೀತ್ ಶೆಟ್ಟಿ, ನೀರೆ, ವಿಜಯ ಶೆಟ್ಟಿ, ಕುತ್ತೆತ್ತೂರು ಸಹಕರಿಸಿದರು. ಡಾ.ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು.