Author: admin
ಇಂದು ಜನರು ರೋಗ ಮುಕ್ತರಾಗಲು ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಹೀಗೆ ಹಲವಾರು ವೈದ್ಯಕೀಯ ಮತ್ತು ಚಿಕಿತ್ಸಾ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಇವುಗಳಲ್ಲಿ ಪ್ರಕೃತಿ ಚಿಕಿತ್ಸೆ ಅಥವಾ ನ್ಯಾಚುರೋಪಥಿ ಕೂಡ ಒಂದು. ಮಾನವನು ತನ್ನ ಜೀವನದ ಭೌತಿಕ, ಮಾನಸಿಕ, ನೈತಿಕ ಮತ್ತು ಆಧ್ಯಾತ್ಮಿಕ ಆಯಾಮಗಳಲ್ಲಿ ನಿಸರ್ಗದ ರಚನಾತ್ಮಕ ನಿಯಮಗಳೊಂದಿಗೆ ಸಾಮರಸ್ಯವನ್ನು ಇರಿಸಿಕೊಂಡು ಚಿಕಿತ್ಸೆ ನೀಡುವ ಪದ್ಧತಿಯೇ ಪ್ರಕೃತಿ ಚಿಕಿತ್ಸೆ. ಇದು ಆರೋಗ್ಯಕರ ಜೀವನಶೈಲಿಯ ಬಗ್ಗೆ ಶಿಕ್ಷಣ ನೀಡುವ ಮಾರ್ಗವಾಗಿದೆ. ಆರೋಗ್ಯಕರ ಆಹಾರ, ಶುದ್ಧ ನೀರು, ವ್ಯಾಯಾಮ, ಉಪವಾಸ, ಸೂರ್ಯನ ಬೆಳಕು ಮತ್ತು ಒತ್ತಡ ನಿರ್ವಹಣೆ ಪ್ರಕೃತಿ ಚಿಕಿತ್ಸೆಯ ಮೂಲ ಆಧಾರ ಸ್ತಂಭಗಳಾಗಿವೆ. ನಿಸರ್ಗವೇ ಶ್ರೇಷ್ಠ ಚಿಕಿತ್ಸಕ ಎಂಬ ಅಂಶವೇ ಪ್ರಕೃತಿ ಚಿಕಿತ್ಸೆಯಲ್ಲಿ ಪ್ರಧಾನವಾಗಿದೆ. ಈ ಚಿಕಿತ್ಸಾ ಪದ್ಧತಿಯಲ್ಲಿ ಆಹಾರವೇ ಔಷಧವಾಗಿದ್ದು, ಹೊರಗಿನ ಯಾವುದೇ ಔಷಧಗಳನ್ನು ಬಳಸುವುದಿಲ್ಲ. ಇದೊಂದು ನೈಸರ್ಗಿಕ ಚಿಕಿತ್ಸಾ ವ್ಯವಸ್ಥೆಯಾಗಿದ್ದು ಇದರಲ್ಲಿ ಯಾವುದೇ ರಾಸಾಯನಿಕಜನ್ಯ ಔಷಧಗಳನ್ನು ಬಳಸಲಾಗುವುದಿಲ್ಲ. ಬದಲಾಗಿ ಈ ವಿಶಿಷ್ಟ ಚಿಕಿತ್ಸಾ ವಿಧಾನವು ದೇಹವನ್ನು ಒಳಗಿನಿಂದ ಬಲಪಡಿಸುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು,…
ನವೆಂಬರ್ ದಿನಾಂಕ 18 ಮತ್ತು 19 ರಂದು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಉಡುಪಿಯಲ್ಲಿ ಆಯೋಜಿಸಲಾದ “ಉದ್ಯೋಗ ಮೇಳ” ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರನ್ನು ಅತಿಥಿಯಾಗಿ ಭಾಗವಹಿಸಿದ ಸಂದರ್ಭ ವೇದಿಕೆಯಲ್ಲಿ ನೆರೆದಿರುವ ಗಣ್ಯತಿ ಗಣ್ಯರು ಗೌರವದಿಂದ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಯವರಾದ ಶ್ರೀಮತಿ ಡಾ. ಕೆ. ವಿದ್ಯಾಕುಮಾರಿ, ಎಂ.ಆರ್.ಜಿ. ಗ್ರೂಪ್ಸ್ ನ ಆಡಳಿತ ನಿರ್ದೇಶಕ ಶ್ರೀ ಕೆ. ಪ್ರಕಾಶ್ ಶೆಟ್ಟಿ, ಶಾಸಕರಾದ ಸನ್ಮಾನ್ಯ ಶ್ರೀ ಸಿ. ಟಿ. ರವಿ, ಶ್ರೀ ಯಶ್ ಪಾಲ್ ಸುವರ್ಣ, ಶ್ರೀ ಪ್ರಮೋದ್ ಮಧ್ವರಾಜ್, ಶ್ರೀ ಪ್ರಸಾದ್ ರಾಜ್ ಕಾಂಚನ್, ಶ್ರೀ ಮನೋಹರ್ ಶೆಟ್ಟಿ ಸಾಯಿರಾಧ, ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಶ್ರೀ ವಿಜಿತ್ ಶೆಟ್ಟಿ, ಶ್ರೀ ಉಪೇಂದ್ರ ಶೆಟ್ಟಿ, ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಶ್ರೀ ನವೀನ್ ಚಂದ್ರ ಜೆ ಶೆಟ್ಟಿ ಪಡುಬಿದ್ರಿ, ಶ್ರೀ ಕಾರ್ತಿಕ್ ಶೆಟ್ಟಿ…
ಯುವ ಜನರಿಗೆ ಇಂದು ಬದುಕು ಕಟ್ಟಿಕೊಳ್ಳಲು ಹಿಂದಿನವರಂತೆ ಉದ್ಯೋಗವನ್ನು ಅರಸಿ ವಲಸೆ ಹೋಗಲೇಬೇಕೆಂಬ ಸ್ಥಿತಿ ಇಲ್ಲ. ಸಮರ್ಥರಿಗೆ ಈಗ ವಿಪುಲ ಉದ್ಯೋಗ ಅವಕಾಶಗಳಿವೆ. ಮನೆ ಬಾಗಿಲಿಗೆ ಉದ್ಯೋಗವಕಾಶವನ್ನು ಒದಗಿಸುವ ಕೆಲಸ ಮಾಡುತ್ತಿರುವ ಉಡುಪಿ ಗ್ರಾಮೀಣ ಬಂಟರ ಸಂಘದ ಪ್ರಯತ್ನ ಶ್ಲಾಘನೀಯ ಎಂದು ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಕುಂತಳ ನಗರ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ನಲ್ಲಿ ಬೆಂಗಳೂರು ಎಂಆರ್ ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಬಡವನಾಗಿ ಹುಟ್ಟುವುದು ತಪ್ಪಲ್ಲ. ಆ ಆಯ್ಕೆ ನಮ್ಮ ಕೈಯಲ್ಲಿ ಇಲ್ಲ. ಆದರೆ ಬಡವನಾಗಿ ಸಾಯಬಾರದು. ಎಲ್ಲರಿಗೂ ಅವಕಾಶ ಇರುತ್ತದೆ. ಅದನ್ನು ಬಳಸಿಕೊಂಡು ಬದುಕಿನಲ್ಲಿ ಮೇಲೆ ಬರಬೇಕು ಎಂದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಉಡುಪಿ…
ಮಕ್ಕಳಿಗೆ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯೂ ಅಗತ್ಯ. ಸಮಾಜದ ಅನೇಕ ಮಂದಿ ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಸ್ತ್ರೀ – ಪುರುಷರೆಂಬ ಬೇಧವಿಲ್ಲದೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಾಧನೆ ಇತರರಿಗೆ ಮಾದರಿಯಾಗಬೇಕು ಎಂದು ಉದ್ಯಮಿ, ಮೂಡಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಹೇಳಿದರು. ಅವರು ಬಂಟರ ಸಂಘ ವಾಮದಪದವು ವಲಯ ವತಿಯಿಂದ ಮಹಿಳಾ ಬಂಟರ ಸಂಘ, ಯುವ ಬಂಟರ ಸಂಘ ನೇತೃತ್ವದಲ್ಲಿ ಆಲದಪದವು ನಿವೇಶನದಲ್ಲಿ ಆಯೋಜಿಸಿದ್ದ ಪುರುಷರ ಮತ್ತು ಮಹಿಳೆಯರ ತಾಲೂಕು ಮಟ್ಟದ ಹಗ್ಗಜಗ್ಗಾಟ ಮತ್ತು ವಲಯ ಮಟ್ಟದ ಆಟೋಟ ಸ್ವರ್ಧೆ ಬಂಟ ಕ್ರೀಡೋತ್ಸವವನ್ನು ಉದ್ಘಾಟಿಸಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಾಮದಪದವು ವಲಯ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಅಮ್ಮು ರೈ ಹರ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಇರಾ ವಲಯ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ರೈ ಬಾಲಾಜಿಬೈಲು ಶುಭ ಹಾರೈಸಿದರು. ಮಂಗಳೂರು ಬಂಟರ…
ಜೀವನ ಒಂದು ಸುಂದರವಾದ ಉದ್ಯಾನವನದಂತೆ. ಅದರಲ್ಲಿ ನಮ್ಮೆಲ್ಲರ ಪಾತ್ರ ಬಹುಮುಖ್ಯ. ಅಲ್ಲಿ ಮೊಳೆವ ಕಳೆಗಳನ್ನು ಸಮಯಕ್ಕೆ ಸರಿಯಾಗಿ ತೆಗೆದು ಹಾಕದಿದ್ದರೆ ಜೀವನ ಸೌಂದರ್ಯ ಹಾಳಾಗುತ್ತದೆ. ಮಾನವನ ಯೋಚನೆ, ಯೋಜನೆಯು ವಿಚಿತ್ರವಾದದು. ಸಾಕೆನಿಸದ ಸ್ವಪ್ರತಿಷ್ಠೆ, ಸ್ವಾರ್ಥ, ದುರಾಸೆಯನ್ನು ನಿಯಂತ್ರಿಸಲಾಗದೆ ಸುಲಭದಲ್ಲಿ ಸುಖ ಸೌಕರ್ಯ ಪಡೆಯುವ ಹಪಾಹಪಿಯಲ್ಲಿ ಕಿರುದಾರಿ, ಅಡ್ಡದಾರಿಯ ಓಟದಲ್ಲಿ ಅಮೂಲ್ಯವಾದುದು ಕಳೆದು ಹೋದದ್ದು ಗೊತ್ತೇ ಆಗುವುದಿಲ್ಲ. ಸುಖ, ಶಾಂತಿ ಮತ್ತೆಲ್ಲೋ ಯಾವುದರಲ್ಲೋ ಇರುವುದಿಲ್ಲ. ಅವರವರ ಮನಸ್ಸಿನಲ್ಲಿ ಅಡಗಿರುತ್ತದೆ. ಕೆಲವರಂತೂ ನಿರ್ದಾಕ್ಷಿಣ್ಯವಾಗಿ ನಕಾಲರಾತ್ಮಕ ಆಲೋಚನೆಗಳಿಂದ ತುಂಬಿರುತ್ತಾರೆ. ಸಂತೋಷಕರ ಜೀವನಕ್ಕಾಗಿ ಒಳ್ಳೆಯ ಆಲೋಚನೆಗಳನ್ನು ಮಾಡಿ ನಿರಂತರ ಆಶಾವಾದಿಗಳಾಗಿರೋಣ. ಕರ್ತವ್ಯದ ಬಗ್ಗೆ ಆಲೋಚಿಸಿ ಫಲಿತಾಂಶಗಳ ಮೇಲೆ ಆಧಾರವಾಗಿರಬೇಡಿ. ಯಾವುದೇ ಕೆಲಸದಲ್ಲಿ ಏಕಾಗ್ರತೆ ಎಷ್ಟು ಮುಖ್ಯವೋ ಕರ್ತವ್ಯ ನಿರ್ವಹಣೆ ಕೂಡ ಅಷ್ಟೇ ಮುಖ್ಯ. ಈ ಪ್ರಪಂಚಕ್ಕೆ ಒಡೆಯನಾದರೂ ಕೆಲವರು ಸಂತೋಷದಿಂದ ಇರುತ್ತಾರೆ ಅನ್ನೋ ಗ್ಯಾರಂಟಿ ಏನು ಇಲ್ಲ . ಸಂತೋಷ ಅಂತರಂಗದಲ್ಲಿ ಅಡಗಿದ ಒಂದು ಭಾವನೆ. ಅದರ ಇರುವಿಕೆಯನ್ನು ತಿಳಿದುಕೊಂಡು ವಿಶಾಲ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು. ಸಣ್ಣ ಪುಟ್ಟ…
‘ಯಕ್ಷಗಾನ ಹಲವು ರೋಗಗಳಿಗೆ ಔಷಧ ರೂಪದಲ್ಲಿ ಪರಿಣಾಮ ಬೀರುತ್ತದೆ. ಯಕ್ಷಗಾನ ವೀಕ್ಷಣೆಯಿಂದ ಮಾನಸಿಕ ಒತ್ತಡ ದೂರವಾಗಿ ನೆಮ್ಮದಿ ಪಡೆಯಬಹುದು. ತಾಳಮದ್ದಳೆ ಸಪ್ತಾಹದ ಮೂಲಕ ಯಕ್ಷಾಂಗಣ ಸಂಸ್ಥೆ ಕನ್ನಡವನ್ನು ಉಳಿಸುವ ಕೆಲಸ ಮಾಡುತ್ತಿದೆ’ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಬಾಳಿಕೆ ಹೇಳಿದರು. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿ.ವಿ ಡಾ. ದಯಾನಂದ ಪೈ, ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದೊಂದಿಗೆ ನಡೆಸುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ, ಹನ್ನೊಂದನೇ ವರ್ಷದ ನುಡಿ ಹಬ್ಬ ‘ಶ್ರೀಹರಿ ಚರಿತ್ರೆ’ ಯಕ್ಷಗಾನ ತಾಳಮದ್ದಳೆ ಸಪ್ತಾಹ – ೨೦೨೩ನ್ನು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲಿ ಆಸಕ್ತಿ ಬೆಳೆಯಲಿ: ಮುಖ್ಯ ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ‘ಇಂದಿನ ಪೀಳಿಗೆ ಮೊಬೈಲ್ ವೀಕ್ಷಣೆಗೆ ಸಮಯ ಮೀಸಲಿಡುತ್ತಿದೆ.…
ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಯುವ ಸಂಸತ್ ‘ಪ್ರಜಾಸತ್ತಾತ್ಮಕ ಜವಾಬ್ದಾರಿಯ ಕಲಿಕೆ: ಕೋಟ್ಯಾನ್
ವಿದ್ಯಾಗಿರಿ: ‘ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಜವಾಬ್ದಾರಿ ಮೂಡಿಸುವುದು ಯುವ ಸಂಸತ್ತಿನ ಆಶಯ’ ಎಂದು ಶಾಸಕ ಉಮಾನಾಥ್.ಏ.ಕೋಟ್ಯಾನ್ ಹೇಳಿದರು. ರಾಜ್ಯ ಸಂಸದೀಯ ವ್ಯವಹಾರಗಳ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಆಳ್ವಾಸ್ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಇಲ್ಲಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರ ನಡೆದ ‘ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಸಮಾಜದ ಅಭಿವೃದ್ಧಿ ನಿಟ್ಟಿನಲ್ಲಿ ಶಾಸನಗಳನ್ನು ಅನುμÁ್ಠನಗೊಳಿಸುವ ಕಾರ್ಯವನ್ನು ಜನಪ್ರತಿನಿಧಿಗಳು ಮುಖ್ಯವಾಗಿ ಮಾಡಬೇಕು’ ಎಂದರು ‘ಸದ್ಯದ ಸ್ಥಿತಿಗತಿಯಲ್ಲಿ ನೋಟಿನ ಮೂಲಕ ವೋಟನ್ನು ವಿನಿಮಯ ಮಾಡಿಕೊಳ್ಳುವ ತರಾತುರಿಯಲ್ಲಿ ಜನಪ್ರತಿನಿಧಿಗಳಿದ್ದಾರೆ. ಆದರೆ, ಜನಪ್ರತಿನಿಧಿಗಳು ಸಮಾಜಕ್ಕೆ ಮಾದರಿ ಕೆಲಸ ಮಾಡಬೇಕು ಎಂಬ ಆಶಯದಲ್ಲಿ ಮತದಾರರು ಮತ ಹಾಕಿರುತ್ತಾರೆ’ ಎಂದರು. ಜನಪ್ರತಿನಿಧಿ ತಮ್ಮ ಮತಕ್ಷೇತ್ರಕ್ಕೆ, ಸಮಾಜಕ್ಕೆ, ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯದನ್ನು ಮಾಡಲಿ ಎಂಬುದು ಜನರ ಆಶಯ. ಅದಕ್ಕೆ ಜನಪ್ರತಿನಿಧಿಗಳು ಸ್ಪಂದಿಸಬೇಕು. ಈ ಈ ನಿಟ್ಟಿನಲ್ಲಿ ಯುವಜನತೆಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ಅಧ್ಯಕ್ಷ ಡಾ.ಎಂ. ಮೋಹನ…
‘ನಮ್ಮ ವ್ಯವಸ್ಥೆಯನ್ನು ನಾವು ಪ್ರೀತಿಸಬೇಕು’ ಮೂಡುಬಿದಿರೆ: ‘ಇತರರಿಗೆ ಕಲಿಸುವ ಮೊದಲು ನಾವು ನಮ್ಮ ವ್ಯವಸ್ಥೆಯನ್ನು ಪ್ರೀತಿಸುವುದು ಮುಖ್ಯ’ ಎಂದು ಉಡುಪಿಯ ತೋನ್ಸೆ ಹೆಲ್ತ್ ಸೆಂಟರ್‍ನ ವೈದ್ಯಕೀಯ ಅಧಿಕಾರಿ ಡಾ. ಶ್ರುತ ಮಾನ್ಯ ಹೇಳಿದರು. ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜಿನ ಯೋಗ ಸಭಾಂಗಣದಲ್ಲಿ ನಡೆದ ಪ್ರಕೃತಿ ಚಿಕಿತ್ಸಾ ದಿನಾಚರಣೆಯಲ್ಲಿ ‘ಸಮಗ್ರ ವಿಧಾನಕ್ಕಾಗಿ ಪ್ರಕೃತಿ ಚಿಕಿತ್ಸೆ’ ಧ್ಯೇಯ ಕುರಿತು ಅವರು ಶನಿವಾರ ಅವರು ಮಾತನಾಡಿದರು. ‘ಕೋವಿಡ್ ನಂತರದ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಸುತ್ತಮುತ್ತಲಿರುವ ವಿವಿಧ ರೀತಿಯ ಚಿಕಿತ್ಸೆಯನ್ನು ಕೇಳುವ ಮನೋಭಾವವಿದ್ದರೂ ಮನಸ್ಸಿಗೆ ತೋಚಿದಂತೆ ಚಿಕಿತ್ಸೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಚಿಕಿತ್ಸಾ ವಿಧಾನ ಆಯ್ಕೆ ಮಾಡಿಕೊಳ್ಳುವಾಗ ವೈಜ್ಞಾನಿಕ ಮನೋಭಾವ ಮುಖ್ಯ’ ಎಂದರು. ‘ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳಿಗೆ ನೀಡುವ ಆದ್ಯತೆಯನ್ನು ಆರೋಗ್ಯಕ್ಕೆ ನೀಡುತ್ತಿಲ್ಲ. ಆರೋಗ್ಯ ಪಾಲನೆಯಲ್ಲಿ ‘ಪಂಚತಂತ್ರ’ ಪಾಲನೆ ಅತ್ಯವಶ್ಯ’ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ಆರೋಗ್ಯದ ಕುರಿತು…
ಈಚೆಗೆ ವಿಶ್ವ ಬಂಟ ಸಮ್ಮೇಳನದಲ್ಲಿ ನಿರುದ್ಯೋಗ ಸಮಸ್ಯೆ ಕೇಂದ್ರೀಕರಿಸಿ ಒಂದು ವಿಚಾರಗೋಷ್ಠಿ ನಡೆದಿತ್ತು. ಅದರಲ್ಲಿ ಖ್ಯಾತ ಉದ್ಯಮಿಗಳು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಅವರೆಲ್ಲರೂ ಮಂಡಿಸಿದ ಒಂದು ಸಮಾನ ವಿಚಾರವೆಂದರೆ – ಈಗಿನ ಸುಶಿಕ್ಷಿತ ಪದವೀಧರರಲ್ಲಿ ಉದ್ಯೋಗಕ್ಕೆ ಬೇಕಾದ ಕೌಶಲಗಳಿಲ್ಲ ಎಂಬುದು! ನಮ್ಮ ಮಕ್ಕಳು ಉನ್ನತ ಶಿಕ್ಷಣ ಮಾಡಿ ದೊಡ್ಡ ದೊಡ್ಡ ಪದವಿಗಳನ್ನು ಪಡೆದುಕೊಂಡಿರುತ್ತಾರೆ. ಉತ್ತಮ ಅಂಕ ಪಟ್ಟಿಯೂ ಅವರಲ್ಲಿದೆ. ಆದರೆ ಕಲಿತ ವಿಷಯದಲ್ಲಾಗಲೀ, ಉದ್ಯೋಗಕ್ಕೆ ಅಗತ್ಯವಿರುವ ವಿಷಯದಲ್ಲಾಗಲೀ ಅವರಲ್ಲಿ ಕೌಶಲ ಇರುವುದಿಲ್ಲ. ಆದ್ದರಿಂದಲೇ ಕಂಪೆನಿಗಳಲ್ಲಿ ಉದ್ಯೋಗ ಖಾಲಿ ಇದ್ದರೂ ಸೂಕ್ತ ಅಭ್ಯರ್ಥಿಗಳು ಸಿಗದೆ ಅವುಗಳನ್ನು ತುಂಬಿಸಲಾಗುತ್ತಿಲ್ಲ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಕೆಲವರನ್ನು ಉದ್ಯೋಗಕ್ಕೆ ಸೇರಿಸಿಕೊಂಡ ಬಳಿಕ ತಮಗೆ ಬೇಕಾದಷ್ಟು ತರಬೇತಿ ಕೊಟ್ಟು ಕೆಲಸ ಮಾಡಿಸುತ್ತೇವೆ ಎಂಬುದು ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯವಾಗಿತ್ತು. ಇಂದು ಎಂಜಿನಿಯರಿಂಗ್ ಸಹಿತ ಬೇರೆ ಬೇರೆ ಉನ್ನತ ಕೋರ್ಸ್ ಮಾಡಿದವರಿಗೆ ಕೊರತೆಯಿಲ್ಲ. ಜತೆಗೆ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗವೂ ಇದೆ. ಕೆಲವರು ತಾವು ಮಾಡಿರುವ ಕೋರ್ಸ್ ಬಿಟ್ಟು ಬೇರೆಯೇ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುತ್ತಾರೆ.…
ಜೀವನದಲ್ಲಿ ಎಲ್ಲ ಮಜಲುಗಳಿಗೂ ನಾವು ಮತ್ತೆ -ಮತ್ತೆ ಕರ್ಮವನ್ನೇ ಹೋಲಿಸಿ ತಳುಕು ಹಾಕುತ್ತೇವೆ. ನಮ್ಮ ಪುರಾಣ ಕಥೆಗಳು, ಪುರಾಣ ಪಾತ್ರಗಳು ಮತ್ತು ದೇವರುಗಳು ಆವತರಿಸಿದ ಮರ್ಮ ಕರ್ಮವೇ ಆಗಿರುವುದರಿಂದ ಕರ್ಮವನ್ನು ಹೊರತುಪಡಿಸಿ ನಾವು ಜೀವನವನ್ನು ಪೃಥಕ್ಕರಿಸುವುದು ಕಷ್ಟ ಸಾಧ್ಯ. ದೇವತೆಗಳಿಗೂ ಹಾಗೆಯೇ ಕರ್ಮವನ್ನು ಹೊರತುಪಡಿಸಿ ಧರ್ಮವನ್ನು ರಕ್ಷಿಸಿಕೊಂಡು ಹೋಗಲು ಸಾಧ್ಯವಿಲ್ಲ. ಯಾಕೆಂದರೆ ಅವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಇದಕ್ಕೆ ಪೂರಕವಾಗಿ ಯಮಧರ್ಮ ಮತ್ತು ಅಣಿಮಾಂಡವ್ಯರ ಕಥೆಯನ್ನು ನೋಡೋಣ. ಯಾವುದೇ ವಿಷಯ, ವಸ್ತು, ರಾಕ್ಷಸ, ಮಾನವ ಮತ್ತು ದೇವತೆಗಳಲ್ಲಾದರೂ ಸರಿಯೆ, ಅವರವರ ತಪ್ಪು ಕರ್ಮಗಳನ್ನು ನಿರ್ಧರಿಸಿ ನ್ಯಾಯವನ್ನೇ ಹೇಳುವ ಧರ್ಮದ ಅಧಿಕಾರಿ ಯಮ, ಯೂರ್ಯ ಹೇಗೆ ಲೋಕವನ್ನು ತನ್ನ ಬೆಳಕಿನಲ್ಲಿ ನಡೆಸುತ್ತಾನೆಯೋ ಹಾಗೆ ತಮ್ಮ, ತನ್ನ ಧರ್ಮದ ತಕ್ಕಡಿಯಲ್ಲಿ ಲೋಕವನ್ನು ಸಮತೋಲನ ಮಾಡುತ್ತಾನೆ. ಯಮನಿಗೆ ಧರ್ಮವನ್ನು ಹೊರತುಪಡಿಸಿ ಮಾತನಾಡುವ ಯಾವುದೇ ದಾರಿಗಳೂ ತಿಳಿದಿಲ್ಲ. ಇಂತಹ ಒಂದು ಧರ್ಮದ ಪರಿಸ್ಥಿತಿಯಿಂದಾಗಿ ಯಮನು ಶಾಪಗ್ರಸ್ಥನಾಗುತ್ತಾನೆ. ದ್ವಾಪರಯುಗದ ಆರಂಭದಲ್ಲಿ ಅಣಿಮಾಂಡ್ಯ ಎಂಬ ಋಷಿಯೊಬ್ಬರು ಕಾಶೀ ದೇಶದ…