ಸಾಲಿಗ್ರಾಮದ ವಾಣಿಜ್ಯ ಸಂಕೀರ್ಣದಲ್ಲಿ ಮಾಂಸಾಹಾರಿ ಹೋಟೆಲ್ ಫೆಬ್ರವರಿ 21ರಂದು ಉದ್ಘಾಟನೆಗೊಂಡಿತು. ಕೋಟ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ ಸಿ ಕುಂದರ್ ಹೋಟೆಲ್ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.

ಸಂಸ್ಥೆಯ ಮುಖ್ಯಸ್ಥ ವಿಜಯ ಶೆಟ್ಟಿ ಹವರಾಲು ಮಾತನಾಡಿ, ಸಂಸ್ಥೆ ಮಾಂಸಾಹಾರಿ ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದ್ದು ರಾಜ್ಯದ ನಾಲ್ಕು ಶಾಖೆಗಳನ್ನು ಹೊಂದಿದೆ ಎಂದರು. ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು, ಚಿತ್ರ ಸಾಹಿತ್ಯ ರಚನೆಗಾರ ಪ್ರಮೋದ್ ಮರವಂತೆ, ಬಿಗ್ ಬಾಸ್ ರನ್ನರ್ ಅಪ್ ತ್ರಿವಿಕ್ರಮ್, ಝೀ ಕನ್ನಡ ಮಹಾನಟಿಯ ಗಗನ, ಚಿತ್ರನಟ ಕವೀಶ್ ಶೆಟ್ಟಿ, ಪ್ರತಿಮಾ ನಾಯ್ಕ್, ಉದ್ಯಮಿ ವೆಂಕಟೇಶ್, ಕಟ್ಟಡ ಮಾಲಕ ಅಯ್ಯಪ್ಪ ರೋಟರಿ ಕೋಟ ಸಾಲಿಗಾಮ ಅಧ್ಯಕ್ಷ ತಿಮ್ಮ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಅಲ್ತಾರು ಕಾರ್ಯಕ್ರಮ ನಿರೂಪಿಸಿದರು.