ರಂಗ ಸಂಗಾತಿ ಪ್ರತಿಷ್ಟಾನದ ವತಿಯಿಂದ ಕುದ್ಮಲ್ ರಂಗರಾವ್ ಸಭಾಭವನದಲ್ಲಿ ಇತ್ತೀಚೆಗೆ ಪ್ರಾಧ್ಯಾಪಕಿ ಅಕ್ಷಯ ಆರ್ ಶೆಟ್ಟಿ ಅವರ ಕಥಾ ಸಂಕಲನ ಅವಳೆಂದರೆ ಬರಿ ಹೆಣ್ಣೆ ಕೃತಿಯನ್ನು ಭಾರತಿ ಶೆಟ್ಟಿ ಮುಂಡಬೆಟ್ಟು ಗುತ್ತು ಲೋಕಾರ್ಪಣೆಗೊಳಿಸಿದರು.

ಕೃತಿಯ ಕುರಿತು ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ನ ಪ್ರಾಧ್ಯಾಪಕಿ ಡಾ. ಸುಧಾರಾಣಿ ಕೃತಿಯ ಕುರಿತು ಮಾತನಾಡಿದರು. ಈ ಸಂದರ್ಭ ರಂಗ ಸಂಗಾತಿ ಪ್ರತಿಷ್ಟಾನದ ಶಶಿರಾಜ್ ರಾವ್ ಕಾವೂರು, ಎಕ್ಸ್ಪರ್ಟ್ ಕಾಲೇಜಿನ ಉಪಪ್ರಾಂಶುಪಾಲರಾದ ಕರುಣಾಕರ್ ಉಪಸ್ಥಿತರಿದ್ದರು.