Author: admin

ವಿದ್ಯಾಗಿರಿ: ಸಂಶೋಧನೆಯ ಆರಂಭದಲ್ಲಿ ಬರಹಗಾರನ ಪಾತ್ರವನ್ನು ಮುಗಿಸಿ, ಓದುಗನ ಪಾತ್ರವನ್ನು ಮುಂದುವರಿಸಬೇಕು ಎಂದು ಸುರತ್ಕಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ- ಕರ್ನಾಟಕ (ಎನ್‍ಐಟಿಕೆ ) ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೋ. ಅರುಣ್ ಎಂ ಇಸ್ಲೂರ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆದ ಪೋಸ್ಟರ್  ತಯಾರಿಕೆ ಮತ್ತು ಪ್ರಸ್ತುತಿ ಹಾಗೂ ಸಂಶೋಧನಾ ವಿಧಾನ ಮತ್ತು ವೈಜ್ಞಾನಿಕ ಬರವಣಿಗೆ ಕೌಶಲ್ಯ  ಎಂಬ ವಿಷಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಂಶೋಧನೆಯು ಪ್ರಾಧ್ಯಾಪಕರಿಗೆ ಮಾತ್ರ ಸೀಮಿತವಲ್ಲ ವಿದ್ಯಾರ್ಥಿಗಳಿಗೂ ಅವಶ್ಯಕ. ಒಂದು ಸಂಶೋಧನಾ ಗುಂಪಿನ ಕಾರ್ಯವನ್ನು ನೋಡಿ ನಾವು ಕಲಿಯಬೇಕು ಎಂದರು. ಓದುಗರಾಗಿ ದಿನಕ್ಕೆ ಹದಿನೈದು ಲೇಖನಗಳನ್ನು ಓದುವಷ್ಟು ತಾಳ್ಮೆ ಇಂದು ನಮ್ಮಲ್ಲಿಲ್ಲ, ಬರಹದೊಂದಿಗೆ , ಓದುವವರಾಗಿರುವುದು ಕೂಡ ಮುಖ್ಯ. ಓದುವುದನ್ನು ರೂಡಿಸಿಕೊಳ್ಳಬೇಕು ಎಂದರು. ಸಂಶೋಧನೆ, ನಾವೀನ್ಯತೆ ಮತ್ತು ಪ್ರಾರಂಭದ ಪ್ರಾಮುಖ್ಯತೆ ಕುರಿತು ಮಾತನಾಡಿದ  ಮತ್ತು ತಂತ್ರಜ್ಞಾನ ಕಾಲೇಜಿನ ಸಂಶೋಧನಾ ಪ್ರಾಧ್ಯಾಪಕ ಪ್ರೋ. ರಿಚರ್ಡ್ ಪಿಂಟೊ, ಸಂಶೋಧನೆ…

Read More

ಆಧುನಿಕ ಸಮಾಜದ ಇಂದಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಾವು ಗಮನಿಸಬಹುದಾದ ಬಹುಮುಖ್ಯ ವಿಚಾರ, ‘ಸಾಮಾಜಿಕ ಶಾಂತಿ’ ಅಂದರೆ ನಮಗಿಂದು ಸುಖ ಜೀವನಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು ದೊರೆಯುತ್ತದೆ. ಆದರೆ ಮಾನಸಿಕ ನೆಮ್ಮದಿ ದೊರೆಯುತ್ತಿಲ್ಲ. ಮನುಷ್ಯನ ಬದುಕಿನಲ್ಲಿ ವಿಜೃಂಭಿಸುತ್ತಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇತ್ಯಾದಿ, ರಾಕ್ಷಸೀ ಗುಣಗಳು ಇದಕ್ಕೆ ಕಾರಣವಾಗಿರುತ್ತದೆ. ಆದುದರಿಂದ ಇಂದು ನಾವು ಸಾಮಾಜಿಕ ಬದುಕಿನಲ್ಲಿ ಬೇರೆ ಬೇರೆ ರೂಪದ ಹಿಂಸಾ ಕೃತ್ಯಗಳನ್ನು ನೋಡುತ್ತಿದ್ದೇವೆ. ಪ್ರಾಪಂಚಿಕ ಪರಿಜ್ಞಾನವಿಲ್ಲದ ಮುಗ್ಧ ಜನಗಳನ್ನು ಅಮಾನುಷ ರೀತಿಯಲ್ಲಿ ಗುಂಡಿಕ್ಕಿ ಕೊಲ್ಲುವುದು, ಕಳ್ಳತನ, ದರೋಡೆಗಳನ್ನು ನಡೆಸುವುದು ಒಂದು ರೀತಿಯ ಹಿಂಸಾ ಕೃತ್ಯವಾದರೆ, ಹೆಂಡತಿಯೊಡನೆ ಕಠೋರವಾಗಿ ನಡೆಯುವುದು, ಮಕ್ಕಳ ಆರೋಗ್ಯ, ಶಿಕ್ಷಣ, ನೈತಿಕತೆಯ ಬಗ್ಗೆ ನಿರ್ಲಕ್ಷ ತೋರುವುದು, ತನ್ನಿಂದ ಕೆಳ ಮಟ್ಟದವರನ್ನು ಹೀನಾಯಿಸುವುದು, ನೆರೆಕರೆಯವರನ್ನು ಪೀಡಿಸುವುದು, ಸ್ನೇಹಿತರಿಗೆ ಮೋಸ ಮಾಡುವುದು, ಬಡವರನ್ನು ನಿರ್ಲಕ್ಷಿಸುವುದು, ರೋಗಿಗಳು ಮತ್ತು ವೈದ್ಯರ ಸೇವೆ ಮಾಡದಿರುವಿದು, ಪ್ರಾಣಿಗಳನ್ನು ಸರಿಯಾಗಿ ಸಾಕದಿರುವುದು, ಸಸ್ಯಗಳನ್ನು ನಾಶಪಡಿಸುವುದು ಕೂಡಾ ಹಿಂಸಾ ಕಾರ್ಯಗಳಾಗಿವೆಯೆಂದು ಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.…

Read More

ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ ಗಬ್ಬರ್ ಸಿಂಗ್ ತುಳು ಚಲನಚಿತ್ರ ಮೇ 3 ರಂದು ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಸಿನಿಪೊಲೀಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರ ಮಂದಿರಗಳಲ್ಲಿ “ಗಬ್ಬರ್ ಸಿಂಗ್” ಸಿನಿಮಾ ತೆರೆ ಕಾಣಲಿದೆ. ಗಬ್ಬರ್ ಸಿಂಗ್ ತುಳು ಸಿನಿಮಾ ವಿಭಿನ್ನ ಕಥೆಯನ್ನು ಒಳಗೊಂಡಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕಥೆಯನ್ನು ಹೆಣೆಯಲಾಗಿದೆ. ಉತ್ತಮ‌ ಕತೆ, ನವಿರಾದ ಹಾಸ್ಯದೊಂದಿಗೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಸಿನಿಮಾಕ್ಕೆ ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಸಿನಿಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ,…

Read More

ವಿದ್ಯಾಗಿರಿ: ‘ಅನುಭವಿಗಳು ಅಪನಂಬಿಕೆಯನ್ನು ಹೋಗಲಾಡಿಸಬೇಕು’’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸತ್ರೆ ಹಾಗೂ ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮೂಡುಬಿದಿರೆ ಜಿ.ಎಸ್.ಬಿ ಸಮಾಜ, ಭಾರತೀಯ ಜೈನ್ ಮಿಲನ್, ಬ್ರಾಹ್ಮಣ ಸಭಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಮೂಢನಂಬಿಕೆ ಎಂಬುದು ನಮ್ಮ ಸಮಾಜದಲ್ಲಿ ತಾಂಡವವಾಡುತ್ತಿದೆ. ಇದರಿಂದ ಹೊರಬರಲು ನಾವು ಮೊದಲು ಭಯ ಹಾಗೂ ನಿರ್ಲಕ್ಷ್ಯವನ್ನು ಬಿಡಬೇಕು. ನಾನು ಈ ವೃತ್ತಿಗೆ ಬಂದಾಗ ಇದ್ದ ಚಿಕಿತ್ಸೆಗಳಿಗೂ, ಈಗಿನ ಚಿಕಿತ್ಸೆಗಳಿಗಳು ಬಹಳಷ್ಟು ವ್ಯತ್ಯಾಸ ಇವೆ. ಕ್ರಾಂತಿಕಾರಿ ಬದಲಾವಣೆಗಳು ನಡೆದಿವೆ. ಆದರೂ ನಮ್ಮ ಸಮಾಜದಲ್ಲಿ ಕಟ್ಟಕಡೆಯ ಜನ ಹಾಗೂ ಸಮುದಾಯಗಳಿಗೆ ಆರೋಗ್ಯ ಕುರಿತು ಮಾಹಿತಿಯೂ ಇರುವುದಿಲ್ಲ. ಅನುಭವದ ಕೊರತೆ ಇರುತ್ತದೆ ಎಂದರು. ನಾವು ಈ ಆರೋಗ್ಯ ತಪಾಸಣೆಯನ್ನು ಯಾವುದೇ…

Read More

ಮೂಡುಬಿದಿರೆ: ‘ಕೃತಕ ಬುದ್ಧಿಮತ್ತೆ(ಎ.ಐ.) ತಂತ್ರಜ್ಞಾನದೊಂದಿಗೆ ನಾವು ನಡೆಯಬಹುದು. ಅದರ ಮೇಲೆ ಕೂತು ಸಾಗಬಹುದು. ಆದರೆ ಅದನ್ನು ಮಲಗಿಸಲು ಸಾಧ್ಯವಿಲ್ಲ. ಜೊತೆ ಸಾಗುವುದು ಅನಿವಾರ್ಯ ಎಂದು ಮಿಜಾರಿನ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ.ಗಣೇಶ್ ಕೆ ಹೇಳಿದರು. ಇಲ್ಲಿನ ಮಿಜಾರು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಕಂಪ್ಯೂಟರ್ ಪ್ರಯೋಗಾಲಯದಲ್ಲಿ ಸೋಮವಾರ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಭಿವ್ಯಕ್ತಿ ವೇದಿಕೆ ಹಮ್ಮಿಕೊಂಡ ನೆಕ್ಸ್ಟ್-ಜೆನ್ ಜರ್ನಲಿಸಂ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ತಂತ್ರಜ್ಞಾನದ ಕಲಿಕೆಯೊಂದಿಗೆ, ಕಲಿತವರೊಂದಿಗೆ ನಮ್ಮ ಒಡನಾಟವೂ ಮುಖ್ಯ ಎಂದ ಅವರು, ಹದಿನೈದು ವರ್ಷಗಳ ಹಿಂದೆ ಬ್ರಾಂಡ್  ಎನಿಸಿಕೊಂಡಿದ್ದ ನೋಕಿಯಾ ಫೆÇೀನ್‍ನ ಬಳಕೆ ಇಂದು ಕಡಿಮೆಯಾಗಿದೆ. 2014 ರಲ್ಲಿ ಮೈಕ್ರೋಸಾಫ್ಟ್ ಗಳ ಒಡನಾಟದ ನಂತರ ವಿವೊ, ಸ್ಯಾಮ್ ಸಾಂಗ್ ಗಳ ಬಳಕೆ ಹೆಚ್ಚಾದವು ಎಂದರು. ಹೊಸದಾಗಿ ಬಂದ ಕೃತಕಬುದ್ಧಿಮತ್ತೆ (ಎ.ಐ.)ಯು ಪತ್ರಿಕಾರಂಗಕ್ಕೆ ಸವಾಲು. ಐದು ವರ್ಷಗಳ…

Read More

ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಎಪ್ರಿಲ್ 30 ರಂದು ಬೆಳಗ್ಗೆ 11 ಕ್ಕೆ ನಗರದ ಪ್ರತಿಕಾ ಭವನದಲ್ಲಿ ನಡೆಯುವ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಅಧ್ಯಕ್ಷ, ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಭಾಗವಹಿಸಿ ಗೌರವ ಸ್ವೀಕರಿಸಲಿದ್ದಾರೆ. ಹಿರಿಯ ಪತ್ರಕರ್ತ ಯು.ಕೆ. ಕುಮಾರನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿದ್ಯಾಗಿರಿ: ಒಬ್ಬ ವ್ಯಕ್ತಿಯ ಎಲ್ಲಾ ಅಂಗಗಳಲ್ಲಿ ಶ್ರೇಷ್ಠ ಅಂಗ ಕಣ್ಣು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ  ಕಣ್ಣಿನ ಆಸ್ಪತ್ರೆ, ಮಂಗಳೂರು ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಸೌಹಾರ್ದ ಮೂಡುಬಿದಿರೆ ಚಾರಿಟೇಬಲ್ ಟ್ರಸ್ಟ್ (ರಿ.) ನಮ್ಮ ನಾಡ ಒಕ್ಕೂಟ ಚಾರಿಟೇಬಲ್ ಟ್ರಸ್ಟ್ (ರಿ.) ಎಸ್‍ಕೆಎಸ್ ಎಸ್‍ಎಫ್ ಮೂಡುಬಿದಿರೆ ವಲಯ, ಕೆ.ಎಂ.ಜೆ- ಎಸ್‍ವೈಎಸ್- ಎಸ್‍ಎಸ್‍ಎಫ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಅಜಾಗರೂಕತೆಯಿಂದ ನಮ್ಮ ಕಣ್ಣನ್ನು ಕಳೆದುಕೊಳ್ಳುವ ಪ್ರಸಂಗ ಬರಬಹುದು. ಎಚ್ಚರಿಕೆ ಅಗತ್ಯ. ಆರೋಗ್ಯ ದೃಷ್ಟಿಯಿಂದ ಮೂಢನಂಬಿಕೆಯನ್ನು ಬಿಟ್ಟು ತಪಾಸಣೆ ಮಾಡುವುದು ನಮ್ಮ ಕರ್ತವ್ಯ ಎಂದರು. ಈ ಶಿಬಿರ ಯಾವುದೇ ಜಾತಿ ಮತಗಳಿಗೆ ಸೀಮಿತವಾಗಿರದೆ ಎಲ್ಲಾ ಜಾತಿ ಮತಗಳ ಕಟ್ಟಕಡೆಯ ವ್ಯಕ್ತಿಗಳು…

Read More

ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಬಂಟ್ವಾಳ ತಾಲೂಕು ಘಟಕದ ಸಭೆ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಶನಿವಾರ ಸಂಜೆ ಘಟಕದ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೇ 7 ಮಂಗಳವಾರದಂದು ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಬಂಟ್ವಾಳ ಘಟಕದ ಪ್ರಥಮ ವಾರ್ಷಿಕೋತ್ಸವದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಬಳಿಕ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು. ನ್ಯಾಯವಾದಿ ಪ್ರಸಾದ್ ಕುಮಾರ್ ರೈ, ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ಪತ್ರಕರ್ತ ರತ್ನದೇವ್ ಪೂಂಜಲಕಟ್ಟೆ, ಕಲಾವಿದ ನಾರಾಯಣ ಸಿ. ಪೆರ್ನೆ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಭುಜಂಗ ಸಾಲಿಯಾನ್ ಬಿ.ಸಿ.ರೋಡು, ಜಯಪ್ರಕಾಶ್ ಜಕ್ರಿಬೆಟ್ಟು, ಕೋಶಾಧಿಕಾರಿ ಶಂಕರ ಶೆಟ್ಟಿ ಪರಾರಿಗುತ್ತು  ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ ವಂದಿಸಿದರು. ಪ್ರಧಾನ ಕಾರ್ಯದರ್ಶಿ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Read More

ಪೌರಾಣಿಕ ಹಿನ್ನಲೆ ತುರುವರಸು ಮತ್ತು ನಾಗರಾಜನ ಸಹೋದರಿಯರ ಸಂತಾನ ಎಂದು ಕರೆಸಿಕೊಂಡು ನಾಗ ಬಳಿಯವರಾಗಿದ್ದಾರೆ. ಬಂಟರಿಗೆ ಧರ್ಮದಲ್ಲಿ ಕ್ಷಾತ್ರ ತೇಜಸ್ಸು ಇತ್ತು. ಆಕರ್ಷಕ ಮೈಕಟ್ಟು, ನೇರ ನುಡಿ, ದಿಟ್ಟ ಹೆಜ್ಜೆ, ಕಠಿಣ ಪರಿಶ್ರಮ, ಅಚಲ ನಿಷ್ಠೆ, ಸತ್ಯಪರತೆ, ಪರೋಪಕಾರ, ಆದರ್ಶ ಧ್ಯೇಯ, ಕಾರ್ಯ ಪರಾಕ್ರಮ, ಮೇಧಾವಿತನ, ನ್ಯಾಯಪರತೆ, ಧರ್ಮಪಾಲನೆ, ತ್ಯಾಗ ಬುದ್ಧಿ ಹಾಗೂ ನಾಯಕತ್ವ ಗುಣಗಳಿದ್ದುದರಿಂದ ರಾಜರಾಗಿ, ಸಾಮಂತರಸರಾಗಿ, ಸೇನಾಧಿಪತಿಗಳಾಗಿ, ಊರ ಮುಖಂಡರಾಗಿ, ದೈವ ದೇವಾಲಯಗಳ ಮೇಲ್ವಿಚಾರಕರಾಗಿ, ವಿಶ್ವಾಸ ಪಾತ್ರ ಬಲಗೈ ಬಂಟರಾಗಿ ಮೆರೆದರು. ಆದ್ದರಿಂದ ಮಿಕ್ಕ ಭಾರತದ ಎಲ್ಲಾ ಜನಾಂಗದವರನ್ನು ಬ್ರಿಟಿಷರು ಗುಲಾಮರಾಗಿ ಕಂಡರೂ ಬಂಟ ಶ್ರೇಷ್ಠರಿಗೆ ವಿಶೇಷ ಸ್ಥಾನಮಾನ ಮನ್ನಣೆ ನೀಡಿ ಗೌರವದಿಂದ ಕಾಣುತ್ತಿದ್ದರು. Bunts as this name itself implies (Bunt means powerful man a soldier) were originally a military class Bunts are a fine statement race with study independence of manner and comparitivity fair…

Read More

ಮೂಡುಬಿದಿರೆ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಜೈನ ಬಾಂಧವರ ಸಹಯೋಗದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವವನ್ನು  ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಯಿತು. ಸಂಜೆ 4:30ಕ್ಕೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಹೊರನಾಡಿನ ಜಯಶ್ರೀ ಧರಣೇಂದ್ರ ಜೈನ್ ಮತ್ತು ಬಳಗದವರಿಂದ ಜಿನಭಕ್ತಿ ಗಾಯನ ನಡೆಯಿತು. ಉತ್ತರ ಭಾರತದಿಂದ ವಿಶೇಷವಾಗಿ ತರಿಸಿದ ನಾಲ್ಕೂವರೆ ಅಡಿ ಎತ್ತರದ ಮಹಾವೀರ ಸ್ವಾಮಿ ಜಿನಬಿಂಬದ ಮೆರವಣಿಗೆ, ತೋರಣ ಮುಹೂರ್ತ, ದ್ರವ್ಯಾಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಯಿತು. ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ಗೈದ ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಾತ್ವಿಕ ಆಹಾರ, ಸ್ವಚ್ಚ ಚಿಂತನೆಯಿಂದ ಮಾನವ ಧರ್ಮವು ಸುಂದರಗೊಳ್ಳುತ್ತದೆ. ಸರಳವಾದ ಜೀವನ ಕ್ರಮ, ಕರ್ಮಗಳ ಬಂಧನಗಳಿಂದ ಮುಕ್ತಿ ಪಡೆದ ಮಹಾವೀರ ಸ್ವಾಮಿಯ ಜೀವನದ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡು ಬದುಕಿದಾಗ ವೀತರಾಗಿಗಳು ಆಗಲು ಸಾಧ್ಯ ಎಂದರು. ಹಿಂಸೆಯನ್ನು ನಿಗ್ರಹಿಸುವ ನಡತೆ ಇದ್ದಾಗ…

Read More