ಜೀವನವನ್ನು ಸಹಜವಾಗಿ ಆಸ್ವಾಧಿಸುವುದನ್ನು ಕಲಿಸುವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಮೂಡಿಸುವ ಕಲೆ, ನಾಟಕಗಳ ಮೂಲಕ ವಿಶ್ವ ಸಾಂಸ್ಕೃತಿಕ ಪರಂಪರೆಗೆ ರಂಗಭೂಮಿ ನೀಡಿದ ಕೊಡುಗೆ ಅಪಾರ ಎಂದು ಯಕ್ಷಕಲಾ ರಂಗದ ಅಧ್ಯಕ್ಷ ವಿಜಯ ಶೆಟ್ಟಿ ಅಭಿಪ್ರಾಯ ಪಟ್ಟರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಯಕ್ಷ ರಂಗಾಯಣ ಕಾರ್ಕಳ ಹಾಗೂ ರಂಗ ಸಂಸ್ಕೃತಿ ಕಾರ್ಕಳ ಇದರ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಮಂಜುನಾಥ ಪೈ ಸಭಾಂಗಣದಲ್ಲಿ ಮಾರ್ಚ್ 20 ರಿಂದ 35 ರವರೆಗೆ ನಡೆದ 11 ನೆಯ ವರ್ಷದ ಬಿ ಗಣಪತಿ ಪೈ ರಂಗೋತ್ಸವ ‘ಮಾಗಿ ಸುಗ್ಗಿ’ ನಾಟಕ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಈ ಸಂಧರ್ಭ ಭೂಮಿಕಾ ಹಾರಾಡಿ ಮತ್ತು ನಾಟಕ ತಂಡದ ನಿರ್ದೇಶಕ ರಾಮ್ ಶೆಟ್ಟಿಯವರನ್ನು ಗೌರವಿಸಲಾಯಿತು. ರಂಗ ಸಂಸ್ಕೃತಿಯ ಅಧ್ಯಕ್ಷ ನಿತ್ಯಾನಂದ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಾಟಕೋತ್ಸವ ಸಂಚಾಲಕ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಉಪಸ್ಥಿತರಿದ್ದರು.
