Author: admin
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಜುಲೈ 19 ರಂದು ನಾಡಿನ ಹಿರಿಯ ಸಾಹಿತಿ, ಶಿಕ್ಷಕ ಕೆ.ವಿ. ಭಟ್ ಕುದಬೈಲ್ ವಿರಚಿತ ಮಾತನ ಮರ್ಮ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅವರೊಂದಿಗೆ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೃಷ್ಣ ಭಟ್ ಅವರು ಇದು ಬಯಸದೇ ಬಂದ ಭಾಗ್ಯ. ನಾನು ಶಿಕ್ಷಕನಾಗಿ ಬಹು ಕಾಲ ಕೆಲಸ ಮಾಡಿದವನು. ಮಕ್ಕಳ ಮನೋವಿಕಾಸದ ದೃಷ್ಟಿಯಿಂದ ಬರವಣಿಗೆ ಮಾಡಿರುವೆ. ಛಂದೋಬದ್ಧ ಕವಿತೆಗಳನ್ನು ಬರೆಯುವುದು ಅದರಲ್ಲೂ ಭಾಮಿನಿ ಷಟ್ಪದಿ ರಚನೆ ನನಗೆ ಇಷ್ಟ. ಸದ್ಯ ಎಲ್ಲರೂ ಮೊಬೈಲ್ ಮುಖಿಗಳಾಗಿರುವುದರಿಂದ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಅವರು ಇದೇ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದರು. ಮುಂಬಯಿ ವಿವಿ ಕನ್ನಡ ವಿಭಾಗ ಹೊರನಾಡಿನಲ್ಲಿ ಮಾಡುತ್ತಿರುವ ಕನ್ನಡ ಪರಿಚಾರಿಕೆ ದೊಡ್ಡದು ಗುಣಗಾನಗೈದರು. ಮಾತಿನ ಮರ್ಮ ಕೃತಿಯನ್ನು ಬಿಡುಗಡೆಗೊಳಿಸಿದ ನಂತರ ವಿಭಾಗದ ಮುಖ್ಯಸ್ಥ ಪ್ರೊ. ಜಿ. ಎನ್. ಉಪಾಧ್ಯ ಅವರು ಮಾತನಾಡುತ್ತಾ, ಕೃಷ್ಣ ಭಟ್ ಅವರದ್ದು ವಿದ್ವತ್ತಿನಿಂದ ಪ್ರೌಢವೂ ಲೋಕಾನುಭವ ಜೀವನಾನುಭವಗಳಿಂದ…
ಬಂಟರ ಸಂಘ (ರಿ) ಸುರತ್ಕಲ್, ರೋಟರಿ ಕ್ಲಬ್ ಬೈಕಂಪಾಡಿ ಹಾಗೂ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಸುರತ್ಕಲ್ ಇದರ ಸಹಯೋಗದಲ್ಲಿ ಮೇಬೈಲು ಸದಾಶಿವ ಶೆಟ್ಟಿ ನೇತೃತ್ವದಲ್ಲಿ 15ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ ಕಾರ್ಯಕ್ರಮ ಆದಿತ್ಯವಾರ ಇಲ್ಲಿನ ಬಂಟರ ಭವನದಲ್ಲಿ ಜರುಗಿತು. ಉದ್ಘಾಟನೆಯನ್ನು ನೆರವೇರಿಸಿ ಮಾತಾಡಿದ ವಿ.ಕೆ ಸಮೂಹ ಸಂಸ್ಥೆ ಮುಂಬಯಿ ಇದರ ಸಿಎಂಡಿ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಅವರು, “ಸಸಿ ವಿತರಣೆ ಬರೀ ಕಾಟಾಚಾರದ ಕಾರ್ಯಕ್ರಮವಾಗದೆ. ಮನೆಗೆ ಕೊಂಡೊಯ್ದ ಗಿಡವನ್ನು ಮಕ್ಕಳ ಕೈಯಲ್ಲಿ ನೆಡುವಂತೆ ಸಲಹೆ ನೀಡಬೇಕು. ಇದರಿಂದ ಅವರಿಗೂ ಪ್ರಕೃತಿ ಮತ್ತು ಪರಿಸರ ರಕ್ಷಣೆಯ ಕಾಳಜಿ ಮತ್ತು ಪ್ರೀತಿ ಬೆಳೆಯುತ್ತದೆ. ಯಾವ ಗಿಡವೂ ಸಾಯದಂತೆ ನೋಡಿಕೊಳ್ಳಬೇಕು. ಮರಗಳನ್ನು ಬೇಕಾಬಿಟ್ಟಿ ಕಡಿಯುತ್ತಿರುವ ಈ ವೇಳೆಯಲ್ಲಿ ಇದೊಂದು ಸಾರ್ಥಕ ಕಾರ್ಯಕ್ರಮವಾಗಿದೆ. ಸ್ವಚ್ಛ ಪರಿಸರ ಇದ್ದಲ್ಲಿ ನಾವೆಲ್ಲರೂ ಸ್ವಚ್ಛಂದವಾಗಿ ಬದುಕಲು ಸಾಧ್ಯ. ಎಲ್ಲರೂ ಈ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ” ಎಂದರು.…
ಧೋ ಧೋ ಮಳೆಯ ಆರ್ಭಟ! ಅಲ್ಲಲ್ಲಿ ಹೆಂಚಿನ ಮಾಡಿನಿಂದ ಸೋರುವ ಹನಿಗಳು. ಅದರಡಿ ಬಂದು ಕುಳಿತ ವಿಧವಿಧ ಗಾತ್ರದ ಪಾತ್ರೆಗಳು. ದಲಿಯಿಂದ ರಾಚುವ ಮಳೆ ನೀರು. ಧಾರೆ ನೀರಿಗೆ ಅಂಗಳದಲ್ಲಿ ಬಂದು ಕುಳಿತ ಬಾಲ್ಡಿ, ಕೊಡಪಾನಗಳು, ಮನೆಯೊಳಗಿದ್ದ ಕಬ್ಬಿಣದ ಕತ್ತಿಗಳು ಅಂಗಳಕ್ಕೆ ಎಸೆಯಲ್ಪಟ್ಟಿವೆ. ಅಲ್ಲೆಲ್ಲೋ ಜಗಲಿಯಲ್ಲಿ ಮಲಗಿದ್ದ ತೆಂಗಿನ ಗರಿಯ ಪೊರಕೆಗಳು ಒಳಗಡೆ ಅವಿತು ಕುಳಿತುಕೊಳ್ಳುತ್ತಿವೆ . ಮನೆಯ ಟಾಮಿ, ಬಚ್ಚಲಿನ ಒಲೆಯ ಬೂದಿ ಎಳೆದು ಮಲಗಿದೆ. ಮನೆಯ ಅಡುಗೆ ಕೋಣೆಯಲ್ಲಿ, ಒಲೆಯ ಬಿಸಿಗೆ ಬೆಕ್ಕು ಮೈಕಾಸಿಕೊಳ್ಳುತ್ತಿದೆ. ಅಂಗಳದಿಂದ ಹರಿದು ಹೋಗುವ ನೀರಿನಲ್ಲಿ ಗುಳ್ಳೆಗಳು ಎದ್ದೆದ್ದು ಕುಣಿಯುತ್ತಾ, ಅಷ್ಟು ದೂರ ಸಾಗುತ್ತಾ ಹೋಗಿ ಅಲ್ಲಲ್ಲೇ ಒಡೆಯುತ್ತಿವೆ. ಕಸಕಡ್ಡಿ ನೀರಿಗೆ ದಾರಿಬಿಟ್ಟು ಉದ್ದಕ್ಕೆ ಮಲಗಿವೆ. ಗೋಂಕುರು ಕಪ್ಪೆಯ ವಟರ್ ವಟರ್ ಮಳೆಯ ಸದ್ದಿನೊಂದಿಗೆ ಪೈಪೋಟಿ ನಡೆಸುತ್ತಿವೆ. ಅಲ್ಲೆಲ್ಲೋ ಸಳಸಳ ಮಿಂಚು ಛಟೀಲೆಂದು ಹೊಡೆದ ಬೆನ್ನಲ್ಲೇ ಗಡಗಡ ಗುಡುಂಮೆಂದು ಗುಡುಗುವ ಗುಡುಗಿಗೆ ಮನೆಯೊಳಗೇ ಅಮ್ಮನಿಗೆ ಒತ್ತಿ ಕುಳಿತ ಮಕ್ಕಳ ಕಣ್ಣುಗಳು ಭಯದಿಂದ ಅರಳುತ್ತಿವೆ. ಮಳೆಯೆಂದರೆ ನನಗೋ ಬಾಲ್ಯದ ನೆನಪು ಒತ್ತರಿಸಿ ಒತ್ತರಿಸಿ ಬರುವುದು. ಎಂಥಾ ಮಳೆ ! ಅಂತಹ ಮಳೆಯ ಸಂಭ್ರಮವನ್ನು ಈ ದೂರದ ಊರಲ್ಲಿ ಮತ್ತೆ ಆನಂದಿಸಲುಂಟೇ? ಒಂದು…
ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ನೀಡಲಾಗುವ 2024-25 ನೇ ಶೈಕ್ಷಣಿಕ ವರ್ಷದ ‘ಆಸರೆ’ ಯೋಜನೆಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತಂದೆ ಅಥವಾ ತಾಯಿಯನ್ನು ಇಲ್ಲವೇ ಇಬ್ಬರನ್ನೂ ಕಳೆದುಕೊಂಡ ಬಂಟ ಸಮುದಾಯದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ ಶಿಕ್ಷಣ (ಐದನೇ ತರಗತಿಯಿಂದ) ಪ್ರೌಢ ಶಿಕ್ಷಣ, ಪದವಿಪೂರ್ವ, ಪದವಿ ಸ್ನಾತಕೋತ್ತರ ಪದವಿ ಅಥವಾ ಯಾವುದೇ ವೃತ್ತಿಪರ ಕೋರ್ಸ್ ನ ಯಾವುದೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಬಂಟ ಸಮುದಾಯವನ್ನು ಪ್ರತಿನಿಧಿಸುವ ಕುಂದಾಪುರ, ಬೈಂದೂರು ತಾಲೂಕಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ಆದಾಯ 1 ಲಕ್ಷ ರೂ. ಮೀರಿರಬಾರದು. ಅರ್ಜಿ ಸಲ್ಲಿಸಲು ಅಂಕ ಗಳಿಕೆಯ ಯಾವುದೇ ನಿರ್ದಿಷ್ಟ ಮಿತಿ ಇರುವುದಿಲ್ಲ. ಸಂಘದ ಅಧಿಕೃತ ಜಾಲತಾಣ www.youthbuntskundapur.com ಮೂಲಕ ಅರ್ಜಿ ನಮೂನೆಯೊಂದಿಗೆ ಪೂರಕ ದಾಖಲೆಗಳನ್ನು ಲಗತ್ತಿಸಿ youthbunts.aasare@gmail.com ಈಮೇಲ್ ಕಳುಹಿಸಿಕೊಡಬಹುದಾಗಿದೆ. ಇಲ್ಲವೇ ಅಧ್ಯಕ್ಷರು, ಕುಂದಾಪುರ ತಾಲೂಕು ಯುವ…
ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ 2024-25 ನೇ ಸಾಲಿನ ಅಧ್ಯಕ್ಷೆಯಾಗಿ ನಿವೃತ್ತ ಶಿಕ್ಷಕಿ ವೇದಾವತಿ ರಾಜೇಶ್ ಬಂಗೇರ, ಪ್ರಧಾನ ಕಾರ್ಯದರ್ಶಿಯಾಗಿ ವಿದ್ಯಮಾತಾ ಅಕಾಡೆಮಿಯ ಅಧ್ಯಕ್ಷ ಭಾಗ್ಯೇಶ್ ರೈ, ಕೋಶಾಧಿಕಾರಿಯಾಗಿ ವತ್ಸಲಾ ಪದ್ಮನಾಭ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು. ಪ್ರಥಮ ಉಪಾಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿ, ಎರಡನನೇಯ ಉಪಾಧ್ಯಕ್ಷರಾಗಿ ಚಂದ್ರಶೇಖರ್ ಪಿ, ನಿಕಟಪೂರ್ವ ಅಧ್ಯಕ್ಷ ಮತ್ತು ಎಲ್ ಸಿಐಎಫ್ ಛೇರ್ಮನ್ ರವೀಂದ್ರ ಪೈ, ಸರ್ವಿಸ್ ಆಕ್ಟಿವಿಟೀಸ್ ಛೇರ್ಮನ್ ಸುಮಿತ್ರಾ, ಮೆಂಬರ್ ಶಿಪ್ ಛೇರ್ಮನ್ ಆಗಿ ಕೇಶವ ಪೂಜಾರಿ ಬೆದ್ರಾಳ, ಟೈಲ್ ಟ್ವಿಸ್ಟರ್ ಆಗಿ ಮೊಹಮ್ಮದ್ ಹನೀಫ್, ಲಯನ್ಸ್ ಟೇಮರ್ ಆಗಿ ರಂಜಿನಿ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.
ಮಳೆಗಾಲದಲ್ಲಿ ಹರಡುವ ಮಾರಕ ಡೆಂಗಿ ಜ್ವರ, ಮಲೇರಿಯ ಇತ್ಯಾದಿ ಸಾಂಕ್ರಾಮಿಕ ರೋಗ ಲಕ್ಷಣಗಳ ಬಗ್ಗೆ ಹಾಗೂ ಅವುಗಳನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರ್ಥಿಕ ಅಶಕ್ತ ಬಾಲಕರ ವಿದ್ಯಾರ್ಥಿ ನಿಲಯ ವಿಜಯ ಬಾಲನಿಕೇತನ ಆಶ್ರಮ ಮಟಪಾಡಿ ಬ್ರಹ್ಮಾವರ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬ್ರಹ್ಮಾವರದ ಡಾ. ಮಹೇಶ ಐತಾಳ್, ಹಿರಿಯ ಸಹಾಯಕಿ ಶ್ರೀಮತಿ ಗೀತಾ, ಗ್ರಾಮ ಸಹಾಯಕಿ ಶೈಲಜ, ಆಶಾ ಕಾರ್ಯಕರ್ತೆ ಶ್ರೀಮತಿ ಮಮತಾ ಇವರು ಉಪಯುಕ್ತ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ನ ಅಧ್ಯಕ್ಷ ಲಯನ್ ಬಿ ಪ್ರವೀಣ ಹೆಗ್ಡೆಯವರು ವಹಿಸಿದ್ದರು.
ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ “ಐಲೇಸಾ ದಿ ವಾಯ್ಸ್ ಆಫ್ ಓಷ್ಯನ್” ವತಿಯಿಂದ “ಐ-ಲೇಸಾ ವಿಜಯಕಲಾ ರಂಗೋತ್ಸವ”ವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭವು ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜುಲೈ 21 ರಂದು ಭಾನುವಾರ ಬೆಂಗಳೂರಿನ ಬನ್ನೇರುಘಟ್ಟ ಮಾರ್ಗದ ವಿಜಯಾ ಬ್ಯಾಂಕ್ ಲೇಔಟ್ ನ “ಮುಲ್ಕಿ ಸುಂದರ್ ರಾಮ್ ಶೆಟ್ಟಿ ಸಭಾಂಗಣ”ದಲ್ಲಿ ನಡೆಯಲಿದೆ. ಶರತ್ ಶೆಟ್ಟಿ ನೇತೃತ್ವದ ತುಳುನಾಡಿನ ಖ್ಯಾತ ರಂಗಭೂಮಿ ಸಂಸ್ಥೆ “ವಿಜಯ ಕಲಾವಿದರು ಕಿನ್ನಿಗೋಳಿ” ಇವರ 25ನೇ ವಾರ್ಷಿಕ ಸಂಭ್ರಮಾರ್ಥವಾಗಿ ತುಳು ಹಾಸ್ಯಮಯ ಸಾಮಾಜಿಕ ನಾಟಕ “ತೊಟ್ಟಿಲ್” ಪ್ರದರ್ಶನವಿದೆ. “ಐ-ಲೇಸಾ ದಿ ವಾಯ್ಸ್ ಆಫ್ ಓಷ್ಯನ್ (ರಿ)” ನಿರ್ಮಾಣದ ಹೊಸ ತುಳು ಭಾವಗೀತೆಗಳನ್ನು ಖ್ಯಾತ ಸಂಗೀತ ನಿರ್ದೇಶಕ ಶ್ರೀ ವಿ. ಮನೋಹರ್ ಲೋಕಾರ್ಪಣೆ ಗೊಳಿಸಲಿದ್ದಾರೆ. ಬಹು ಭಾಷಾ ತಾರಾ ಗಾಯಕ ಡಾ. ರಮೇಶ್ಚಂದ್ರರೊಂದಿಗೆ ಹಾಡುಗಳ ಮೂಲ ಗಾಯಕರೇ ಸಂಗೀತ ರಸಮಂಜರಿಯನ್ನು ಪ್ರಸ್ತುತ ಪಡಿಸಲಿದ್ದಾರೆ. “ಯಕ್ಷತರಂಗ ಬೆಂಗಳೂರು (ರಿ)” ಸಂಸ್ಥೆಯ ಬಾಲ ಕಲಾವಿದರಿಂದ “ಶ್ರೀ ಕೃಷ್ಣ ಲೀಲೆ-ಕಂಸ ವದೆ” ಯಕ್ಷಗಾನ…
ಅಯ್ಯೋ ದೇವ್ರೇ ಏನ್ ಸಂಗತಿ ಮಾರ್ರೆ.. ಎಲ್ಲಿ ನೋಡಿದರೂ ಕಳ್ಳರು, ದರೋಡೆಕೋರರು. ಅಂದ್ರೆ ಡಕಾಯಿತರು. ನಾನು 2019ರ ಸೆಪ್ಟೆಂಬರ್ ನಲ್ಲಿ ನೈಜೀರಿಯಾಕ್ಕೆ ಬರುವುದೆಂದು ನಿರ್ಧಾರ ಮಾಡಿದೆ. ಬರುವ ಮೊದಲಿನ ದಿವಸ ನನ್ನ ಯೋಗ ಗುರುಗಳೊಬ್ಬರು ಹೀಗೆಂದರು, ಶರತಣ್ಣ ನೀವು ಬೇರೆಲ್ಲಾದರೂ ಹೋಗಿ ಆದರೆ ನೈಜೀರಿಯಾಕ್ಕೆ ಮಾತ್ರ ಬೇಡ. ಯಾಕೆಂದರೆ ಅಲ್ಲಿ ದುಡ್ಡಿಗಾಗಿ ಏನು ಬೇಕಾದರೂ ಮಾಡ್ತಾರೆ. ನೀವು ಎಲ್ಲಾದರೂ ಕಾರು ನಿಲ್ಲಿಸಿದ್ರೆ ಇನ್ನೊಂದು ಬದಿಯಲ್ಲಿ ನಿಮ್ಮ ಕಾರ್ ನ ಟಯರನ್ನೇ ಕದ್ದು ಮತ್ತೆ ಅದನ್ನೇ ನಿಮಗೆ ಮತ್ತೆ ಮಾರಿ ಬಿಡುವಂತ ಖದೀಮ ಕಳ್ಳರು ಅಲ್ಲಿದ್ದರಂತ ಕೇಳಿದ್ದೆ. ನೀವು ಇಲ್ಲಿ ಭಜನೆ ಹರಿಕಥೆ, ನಿರೂಪಣೆ, ಭಾಗವತಿಕೆ ಅಂತ ಮಾಡಿಕೊಂಡಿರುವವರು. ಆದರೆ ಅಲ್ಲಿ ಜನಗಳು ಸರಿಯಿಲ್ಲ. ಕೊಲೆ, ಸುಲಿಗೆ, ಕಳ್ಳತನ ಎಲ್ಲವೂ ಇದೆ. ನಿಮ್ಮಂತವರಿಗೆ ಕಷ್ಟ ಎಂದ್ರು ಯಾರೂ ಬರಲ್ಲ. ನಾನಂದೆ ಗುರುಗಳೇ ನನ್ನ ನಿರ್ಧಾರವೂ ಆಗಿದೆ. ಮತ್ತೆ ವಿಮಾನದ ಟಿಕೆಟ್ಟೂ ಬಂದಿದೆ. ಎಲ್ಲವೂ ಹರಿ ಚಿತ್ತ. ನೋಡುವ ಆಗುವುದನ್ನು ತಪ್ಪಿಸಲು ಯಾರಿಂದಲೂ ಅಸಾಧ್ಯವಲ್ವೇ…
ಪುತ್ತೂರು ಮಹಿಳಾ ಬಂಟರ ಸಂಘದ ಮಹಾಸಭೆ ನಡೆದಿದ್ದು, ಮುಂದಿನ 2 ವರ್ಷಗಳ ಕಾಲ ಕಾರ್ಯಕಾರಿಣಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಗೀತಾ ಮೋಹನ್ ರೈ, ಕಾರ್ಯದರ್ಶಿಯಾಗಿ ಕುಸುಮಾ ಪಿ. ಶೆಟ್ಟಿ, ಖಜಾಂಚಿಯಾಗಿ ವಕೀಲರಾದ ಅರುಣಾ ಡಿ ರೈ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರಾದ ಗೀತಾ ಮೋಹನ್ ರೈ ಅವರು ಬಂಟರ ಸಂಘದ ಹಿರಿಯ ನಿರ್ದೇಶಕ, ಸಹಕಾರಿ, ರಾಜಕೀಯ ಧುರೀಣ ಎಂ. ಮೋಹನ್ ರೈ ಅವರ ಪತ್ನಿ. ಇವರ ಮಗ ಮನು ಎಂ. ರೈ ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷರಾಗಿದ್ದು, ಹಲವು ಸಮಾಜಮುಖಿ ಕಾರ್ಯಗಳ ಮುಂದಾಳುವಾಗಿದ್ದರೆ. ಕಾರ್ಯದರ್ಶಿಯಾದ ಕುಸುಮಾ ಪಿ. ಶೆಟ್ಟಿಯವರು ಸವಣೂರು ಪದ್ಮನಾಭ ಶೆಟ್ಟಿಯವರ ಪತ್ನಿ, ಸವಣೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಖಜಾಂಚಿ ಅರುಣಾ ಡಿ ರೈ ವಕೀಲರಾಗಿದ್ದು, ಖ್ಯಾತ ವಕೀಲರಾದ ದಿವಾಕರ ರೈ ಅವರ ಪತ್ನಿ. ಈ ವೇಳೆ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತುಳುನಾಡಿನಾದ್ಯಂತ ಕಾರಣಿಕದ ಶಕ್ತಿ ಸ್ವರೂಪನಾಗಿ ನಂಬಿದ ಭಕ್ತರ ಕೈ ಹಿಡಿದು ಪೊರೆವ ದೈವವಾಗಿ, ಭಕ್ತ ಕುಲ ಕೋಟಿ ಜನರನ್ನೂ ಉದ್ದರಿಸುತ್ತಾ, ಇಷ್ಟ ಕಷ್ಟಗಳಿಗೆ ಜೊತೆ ನಿಂತು ರಕ್ಷಾ ಕವಚವಾಗಿ ಕೊರಗಜ್ಜ ದೈವ ಪೊರೆಯುತ್ತಿರುವಾಗ, ಮುಂಬಯಿಯಂತಹ ಮಹಾನಗರವನ್ನು ನಂಬಿ ಅದನ್ನೇ ತಮ್ಮ ಕರ್ಮ ಭೂಮಿಯನ್ನಾಗಿಸಿಕೊಂಡು ದುಡಿಯುತ್ತಿರುವ ಅದೆಷ್ಟೋ ತುಳುನಾಡ ಭಕ್ತ ಜನರ ಆರಾಧ್ಯ ದೈವವಾಗಿ ಇಂದಿಗೂ ನಂಬಿಕೆಯನ್ನು ಮತ್ತಷ್ಟು ಬಲವಾಗಿಸಿಕೊಳ್ಳುತ್ತಿರುವ ಸ್ವಾಮಿ ಕೊರಗಜ್ಜನ ಕುರಿತಾದ ತಾಳಮದ್ದಳೆಯ ಕಾರ್ಯಕ್ರಮ ಆಯೋಜನೆಗೊಳಿಸಿದ ಉದ್ದೇಶ ನಿಜವಾಗಿಯೂ ಭಕ್ತರ ಭಕ್ತಿಗೆ ಪುಷ್ಟಿ ನೀಡಿದಂತಾಗಿದೆ ಎಂದು ರೀಜೆನ್ಸಿ ಬ್ಯಾಂಕ್ವೆಟ್ ಹಾಲ್ ನಾಲಾಸೋಪಾರದಲ್ಲಿ ನಡೆದ ಸ್ವಾಮಿ ಕೊರಗಜ್ಜನ ತಾಳಮದ್ದಳೆ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ನೆರವೇರಿಸುತ್ತಾ ಶಶಿಧರ್ ಕೆ ಶೆಟ್ಟಿ ಇನ್ನಂಜೆಯವರು ಮಾತನಾಡಿದರು.ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಂಕರ್ ಆಳ್ವ ಅವರು ಮಾತನಾಡುತ್ತಾ, ಕಥೆ ಸಂಭಾಷಣೆ ಎಲ್ಲವೂ ಕೂಡಾ ಅರ್ಥಪೂರ್ಣವಾಗಿದ್ದು ತಾಳಮದ್ದಳೆ ವೀಕ್ಷಕರಿಗೆ ಹೊಸ ಅನುಭವದೊಂದಿಗೆ ಕೊರಗಜ್ಜನ ಬಗೆಗಿದ್ದ ಭಕ್ತಿ ಭಾವ ಖಂಡಿತವಾಗಿಯೂ ಮತ್ತಷ್ಟು ವೃದ್ಧಿಯಾಗುತ್ತದೆ. ತಾಳಮದ್ದಳೆಯ ಆಯೋಜನೆಯ ಪಾತ್ರಧಾರಿಗಳಿಗೂ ಸೂತ್ರಧಾರಿಗಳಿಗೂ ನೆರೆದ ಸರ್ವರಿಗೂ…