ವಿದ್ಯಾಗಿರಿ: ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಆತಿಥ್ಯದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಟ್ಟದ ೨೪ನೇ ಅಂತರ ಕಾಲೇಜು ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದರು. ಏಕಾದಶಾನನ ಏಕಾಂತ ನಾಟಕ ಹಾಗೂ ಮರ ಮತ್ತು ಮಗು ಕಿರುಪ್ರಹಸನ ಎರಡೂ ಪ್ರಥಮ ಪ್ರಶಸ್ತಿಯನ್ನು ಪಡೆದವು. ಜನಪದ ವಾದ್ಯಮೇಳ ದ್ವಿತೀಯ ಸ್ಥಾನ ಪಡೆದರೆ, ಜನಪದ ನೃತ್ಯ ದಲ್ಲಿ ತೃತೀಯ ಸ್ಥಾನ ಪಡೆದರು.

ಈ ಸ್ಪರ್ಧೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜಿತ ೧೪೦ಕ್ಕೂ ಅಧಿಕ ಕಾಲೇಜುಗಳು ಭಾಗವಹಿಸಿದ್ದವು. ಶಶಿರಾಜ್ ರಾವ್ ಕಾವೂರು ರಚಿಸಿದ ಏಕಾದಶಾನನವನ್ನು ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದರು. ಮಗು ಮತ್ತು ಮರ ಕಿರು ಪ್ರಹಸನವನ್ನು ರಾಜೇಂದ್ರ ಪ್ರಸಾದ್ ಮಂಡ್ಯ ಹಾಗೂ ಪ್ರಶಾಂತ್ ಕೋಟ ನಿರ್ದೇಶಿಸಿದ್ದರು. ಸಾತ್ವಿಕ್ ನೆಲ್ಲಿತೀರ್ಥ ಮತ್ತು ಮಧುಸೂದನ(ನೀನಾಸಂ) ಕೊಡಗು ರಂಗವಿನ್ಯಾಸ ಮಾಡಿದ್ದರು. ಎರಡೂ ನಾಟಕಗಳಿಗೆ ಆಳ್ವಾಸ್ ಪಿ.ಯು.ವಿದ್ಯಾರ್ಥಿ, ಸುಳ್ಯ ರಂಗಮನೆಯ ಮನುಜ ನೇಹಿಗ ಸಂಗೀತ ನೀಡಿದ್ದರು. ವಿಜೇತ ತಂಡವನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.
ಬಾಕ್ಸ್ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ಡಾ.ಜೀವನ್ ರಾಂ ಸುಳ್ಯರಿಂದ ತರಬೇತುಗೊಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ಕಲಾವಿದರು ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ೧೨ ಬಾರಿ ಪ್ರಶಸ್ತಿ ಪಡೆದಿರುವುದು ಒಂದು ದಾಖಲೆಯಾಗಿದೆ. ಶಿಕ್ಷಣದ ಜೊತೆಜೊತೆಗೇ ರಂಗಕಲೆಯ ಕಠಿಣ ಅಭ್ಯಾಸ ಮಾಡುವ, ನಿರ್ದೇಶಕರ ರಂಗಬದ್ಧತೆ,ವಿದ್ಯಾರ್ಥಿಗಳ ಪರಿಶ್ರಮದ ಪಲವೇ ಈ ಪ್ರಶಸ್ತಿ. ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ಅನಿಸುತ್ತದೆ -ಡಾ.ಎಂ.ಮೋಹನ ಆಳ್ವ