Author: admin
ಎಕ್ಸ್‌ಲೆಂಟ್ ಮತ್ತು ಲಿಟ್ಲ್ ಸ್ವಾರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರತ್ವಿತಾ ಪಿ. ಶೆಟ್ಟಿ ಎಸ್.ಎಸ್.ಎಲ್.ಸಿ -2024 ಪರೀಕ್ಷೆಯಲ್ಲಿ 625ಕ್ಕೆ 621 ಅಂಕ ಪಡೆಯುವುದರ ಮೂಲಕ ರಾಜ್ಯಕ್ಕೆ 5ನೇ ರ‍್ಯಾಂಕ್ ಮತ್ತು ಕುಂದಾಪುರ ತಾಲೂಕಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ವಿದ್ಯಾರ್ಥಿನಿಯನ್ನು ಸನ್ಮಾನಿಸಿ, 10 ಸಾವಿರ ನಗದು ಬಹುಮಾನ ನೀಡುವುದರ ಮೂಲಕ ವಿದ್ಯಾರ್ಥಿಯನ್ನು ಗೌರವಿಸಲಾಯಿತು. ಐ.ಎ.ಎಸ್. ಅಧಿಕಾರಿಯಾಗುವ ಆಸೆ: ಈ ಸಂದರ್ಭದಲ್ಲಿ ಮಾತನಾಡಿದ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಪ್ರತ್ವಿತಾ ಪಿ. ಶೆಟ್ಟಿ ಮುಂದೆ ಯು.ಪಿ.ಎಸ್.ಸಿ. ಪರೀಕ್ಷೆ ಬರೆದು ಐ.ಎ.ಎಸ್ ಅಧಿಕಾರಿಯಾಗುವ ಆಸೆಯಿದೆ ಎನ್ನುತ್ತಾ, ನಮ್ಮ ಶಾಲೆಯ ಶಿಕ್ಷಕರು ನಮ್ಮೊಂದಿಗೆ ಸಂಜೆ 6 ರ ನಿಂತು ನಿರಂತರ ತರಬೇತಿ ನೀಡಿರುವುದರಿಂದ ಈ ಅಂಕ ಗಳಿಸಲು ಸಹಕಾರಿಯಾಯಿತು ಎಂದರು. ಎಮ್.ಎಮ್.ಹೆಗ್ಡೆ ಎಜ್ಯುಕೇಶನಲ್ ಹಾಗೂ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಎಮ್. ಮಹೇಶ ಹೆಗ್ಡೆ ಶುಭ ಹಾರೈಸಿದರು. ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಡಾ.ರಮೇಶ್…
ದಕ್ಷಿಣ ಕನ್ನಡ ಸಂಸದ, ಕರ್ನಾಟಕದ ಬಿಜೆಪಿಯ ಮಾಜಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕ್ ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರು ಶಾಲು ಮತ್ತು ಪುಷ್ಪಗುಚ್ಛ ನೀಡಿ ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಂಬೈಯ ಕಾರ್ಯದರ್ಶಿ ಮೋಹನ ಗೌಡ ಮತ್ತು ಬ್ಯಾಂಕ್ ನ ಆಡಳಿತ ಮಂಡಳಿ, ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
2023-24 ನೇ ಶೈಕ್ಷಣಿಕ ಸಾಲಿನ ಐಸಿಎಸ್ ಇ 10 ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಸಾಂತಾಕ್ರೂಜ್ ಪಶ್ಚಿಮದ ಲೀಲಾವತಿ ಬಾಯಿ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ನ ಸುವಿದ್ ಎಸ್. ಶೆಟ್ಟಿ ಮಾರ್ನಾಡ್ ಟ್ಯೂಷನ್ ಪಡೆಯದೇ ಶೇ. 94 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿರುವ ಇವರು ಇಂಗ್ಲಿಷ್, ಫ್ರೆಂಚ್, ಉರ್ದು, ನೇಪಾಲಿ, ಅರೇಬಿಕ್ ಅಲ್ಲದೇ ಭಾರತೀಯ ಎಲ್ಲಾ ಭಾಷೆಗಳ ಜಾಹೀರಾತುಗಳಿಗೆ ಮತ್ತು ಕಾರ್ಟೂನು ಫಿಲಂ, ಚಾನಲ್ ಪ್ರೊಮೊಗಳಿಗೂ ಕಂಠದಾನ ಮಾಡಿದ್ದಾರೆ. ಐಲೇಸಾ ಸಂಸ್ಥೆಯ ಸಕ್ರಿಯ ಸದಸ್ಯರಾಗಿರುವ ಸುವಿದ್ ನಾಟಕ, ಸಂಗೀತ, ಇನ್ನಿತರ ಕ್ಷೇತ್ರಗಳಲ್ಲೂ ಮುಂದಿದ್ದು ಇವರ ಹಲವಾರು ಹಾಡುಗಳು ಯೂಟ್ಯೂಬ್ ನಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಇವರು ಮಾಟುಂಗ – ಮಾಹಿಮ್ ನ ಸಿತ್ಲಾದೇವಿ ಮಂದಿರ ರೋಡ್ ನಿವಾಸಿಗಳಾದ ಪ್ರಸಿದ್ಧ ಕಂಠದಾನ ಕಲಾವಿದ, ರಂಗಕರ್ಮಿ ಸುರೇಂದ್ರ ಕುಮಾರ್ ಶೆಟ್ಟಿ ಮಾರ್ನಾಡ್ ಮತ್ತು ಭಾಂಡೂಪ್ ನ್ಯಾಷನಲ್ ಕಾಲೇಜಿನ ಉಪನ್ಯಾಸಕಿ ಡಾ. ವಿದ್ಯಾ ಸೂರಿ…
ಮೂಡುಬಿದಿರೆ: ಅವಕಾಶ ಸಿಕ್ಕಾಗ ಉಪಯೋಗಿಸಿಕೊಳ್ಳಿ, ನಾಳೆಯ ದಿನಕ್ಕಾಗಿ ಕಾದು, ಇಂದಿನ ಸಮಯ ವ್ಯರ್ಥ ಮಾಡಬೇಡಿ ಎಂದು ನೆದಲ್ರ್ಯಾಂಡ್‍ನ ಅಟ್ಲಾಸಿಯನ್ ಸಂಸ್ಥೆಯ ಎಂಟರ್‍ಪ್ರೈಸ್ ಡೀಲ್ ಮ್ಯಾನೇಜರ್ ಹಾಗೂ ವಿಭಾಗದ ಹಿರಿಯ ವಿದ್ಯಾರ್ಥಿ ಐಶ್ವರ್ಯ ಶೆಟ್ಟಿ ನುಡಿದರು. ಆಳ್ವಾಸ್ ಕಾಲೇಜಿನ ಮೋಹಿನಿ ಅಪ್ಪಾಜಿ ಸ್ಮಾರಕ ಸಭಾಂಗಣದಲ್ಲಿ ವ್ಯವಹಾರ ನಿರ್ವಹಣಾ ವಿಭಾಗವು ಹಮ್ಮಿಕೊಂಡ ವ್ಯವಹಾರ ನಿರ್ವಹಣೆ ಹಾಗೂ ಸಾಂಸ್ಕøತಿಕ ಸಮಾವೇಶ ಎಂತೂಸಿಯಾ 2024ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಾಯೋಗಿಕ ಚಟುವಟಿಕೆಗಳು ನಮಗೆ ಹೊಸ ಜಗತ್ತನ್ನು ಪರಿಚಯಿಸುತ್ತದೆ. ಆಳ್ವಾಸ್‍ನಲ್ಲಿ ವಿದ್ಯಾರ್ಥಿಯ ನೆಲೆಯಲ್ಲಿ ಅವಕಾಶ ಸಿಕ್ಕಾಗ ಹಲವಾರು ಕೌಶಲಗಳನ್ನು ಕಲಿತಿದ್ದೇನೆ. ಇಲ್ಲಿ ಪ್ರಾಯೋಗಿಕ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶವಿದೆ. ಇಂತಹ ಅವಕಾಶವನ್ನು ನೀವು ಉಪಯೋಗಿಸಿಕೊಳ್ಳಿ. ಕಲಿಕೆ ಮತ್ತುಅನುಭವಗಳೊಂದಿಗೆ ಈ ಮೂರು ವರ್ಷದ ಸಮಯವನ್ನು ಸದಪಯೋಗಪಡಿಸಿಕೊಳ್ಳಿ. ಪ್ರತಿ ಕ್ಷಣವನ್ನು ಉಪಯೋಗಿಸಿಕೊಳ್ಳಿ ಎಂದರು ಎಸ್‍ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ವಿಭಾಗದ ಹಿರಿಯ ವಿದ್ಯಾರ್ಥಿ ಪ್ರಜ್ವಲ್ ಆಚಾರ್ ಮಾತನಾಡಿ, ಕೌಶಲಗಳ ಅಭಿವೃದ್ಧಿಗಾಗಿ ಇದು ಒಂದು ಒಳ್ಳೆ ವೇದಿಕೆಯಾಗಿದೆ. ಇಂತಹ…
ವಿದ್ಯಾಗಿರಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸಿದ್ದು, ಆಳ್ವಾಸ್ ಪ್ರೌಢಶಾಲೆಯು 100 ಶೇಕಡಾ ಫಲಿತಾಂಶ ದಾಖಲಿಸಿದೆ. ಆಳ್ವಾಸ್ ಶಾಲೆಯ 51 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಇಶಾನ್ (619), ಮನೀಷಾ ಎನ್ (618), ಮಾನ್ಯ ಎನ್ ಪೂಜಾರಿ (617), ಋತುರಾಜ್ ರಾಮಕೃಷ್ಣ (617), ಮುರುಗೇಶ್ ಬಿರಾದರ್ (616), ಗೋಪಾಲ್ ಕೆಂಚಪ್ಪ(617), ಮಲ್ಲಿಕಾರ್ಜುನ ರಾಮಲಿಂಗಯ್ಯ (614), ಅನ್ನಪೂರ್ಣ ಕಾಮತ್ (612), ಪ್ರಣೀತಾ (612), ಭೂಮಿಕಾ (612), ಗೋಪಾಲ ಪರಮಾನಂದ (611), ಲಕ್ಷ್ಮಿ ಹನಮಂತ ( 611), ಅರ್ಪಿತಾ (610), ಪ್ರಜ್ವಲ್ ಗಣಪತಿ(610), ಸುಪ್ರೀಯಾ ಮಹಾಂತೇಶ್ (610) ಅಂಕಗಳನ್ನು ಪಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ. 15 ವಿದ್ಯಾರ್ಥಿಗಳು 610ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. 92 ವಿದ್ಯಾರ್ಥಿಗಳು ಶೇ95ಕ್ಕೂ ಅಧಿಕ,…
“ಕಾಪಾಡುವ ಧೈವವೇ ಕಾಡುವ ವಿಧಿ ಆದಾಗ ಹಿಡಿದ ಹೂಮಾಲೆಯೂ ಹಾವಾಗಿ ಕಾಡುತ್ತೆ” ಅನ್ನುವುದಕ್ಕೆ ಸಾಕ್ಷಿ ಆದವರು ಕುಂದಾಪುರದ ಕಂಡ್ಲೂರು ಸಮೀಪದ ಜಯರಾಮ ಶೆಟ್ಟಿ. ಮುಂಬಯಿಯಿಂದ ಇವತ್ತು ಬಹಳ ಸುಲಭವಾಗಿ ನಾವು ಕರಾವಳಿಗೆ ತಲುಪಲು ಕೊಂಕಣ ರೈಲ್ವೆ ಇದೆ. ಆ ಕೊಂಕಣ ರೈಲ್ವೆಯ ಕಾಮಗಾರಿಯಲ್ಲಿ ತನ್ನ ಬದುಕನ್ನು ಕಳೆದುಕೊಂಡ ಜಯರಾಮಣ್ಣನ ಕರುಣಾಜನಕ ಕಥೆಯಿದು. ಹತ್ತಿರ ಹತ್ತಿರ ಮೂವತ್ತೈದು ವರ್ಷಗಳ ಹಿಂದೆ ಒಬ್ಬ ಸಜ್ಜನ ವ್ಯಕ್ತಿ ವಿಧಿಯ ಕ್ರೂರತೆಗೆ ಸಿಕ್ಕಿ ಬದುಕು ಮೂರಾ ಬಟ್ಟೆಯಾಗಿಸಿಕೊಂಡವರು.ಕೊಂಕಣ ರೈಲ್ವೆಯ ಹೊಸ ಮಾರ್ಗದ ಶರವೇಗದ ಕಾರ್ಯ ನಡೆಯುತ್ತಿತ್ತು. ರೈಲ್ವೆ ಹಳಿ ಹೊದಿಸುವ ಜವಾಬ್ದಾರಿ ಒಂದು ಖಾಸಗಿ ಸಂಸ್ಥೆಗೆ ಸರಕಾರ ಕಾಂಟ್ರಾಕ್ಟ್ ಕೊಟ್ಟಿತ್ತು. ಆ ಖಾಸಗಿ ಕಂಪೆನಿಯಲ್ಲಿ ಶಿಸ್ತಿನ ಸಿಪಾಯಿಯಾಗಿದ್ದ ಜಯರಾಮ ರೈಲ್ವೆ ಹಳಿಯ ಮೇಲ್ವಿಚಾರಣೆ ಜವಾಬ್ದಾರಿಯಲ್ಲಿ ನಿರತರಾಗಿದ್ದಾಗ ದೊಡ್ಡದೊಂದು ಬಂಡೆ ಅವರ ಬೆನ್ನ ಮೇಲಿ ಬಿದ್ದು ಜಯರಾಮರನ್ನು ಮತ್ತೆಂದೂ ಮೇಲೇಳದಂತೆ ಮಾಡಿ ವಿಧಿ ತನ್ನ ಅಟ್ಟಹಾಸ ಮೆರೆದಿತ್ತು. ಭವಿಷ್ಯದ ಬಗ್ಗೆ ಒಂದಷ್ಟು ಕನಸು ಕಂಡಿದ್ದ ಜಯರಾಮ ಹಾಸಿಗೆ ಹಿಡಿದು…
ಅಹಂಕಾರ ಜೀವನದಿಂದ ವಿನಾಶದ ಹಾದಿ. ತ್ರೇತಾಯುಗದಲ್ಲಿ ಮಹಾಶಿವಭಕ್ತನಾದ ಲಂಕಾಧಿಪತಿ ರಾವಣ ತನ್ನ ಅಹಂಕಾರದ ಮತ್ತಿನಲ್ಲಿ ಲೋಕಮಾತೆ ಸೀತಾ ಮಾತೆಯನ್ನು ಅಪಹರಿಸಿದ ಕಾರಣ ವಿನಾಶದ ಹಾದಿ ತಲುಪಿದ ಎನ್ನುವುದು ಗೊತ್ತಿರುವ ಸಂಗತಿ. ಈ ಸಂದರ್ಭದಲ್ಲಿ ಸ್ವಾಭಿಮಾನದ ಪ್ರಜ್ಞೆಯಿಂದ ಧರ್ಮದ ಉಳಿವಿಗಾಗಿ ಪ್ರಭು ಶ್ರೀ ರಾಮನು ಯುದ್ಧದಲ್ಲಿ ಜಯಿಸಿ ಸೀತಾ ಮಾತೆಯನ್ನು ಕರೆತಂದನು. ಒಂದು ವೇಳೆ ತನ್ನ ಭಕ್ತನಾದ ಮಹಾ ಪರಾಕ್ರಮಿ ಆಂಜನೇಯನಿಗೆ ಒಂದು ಆಜ್ಞೆ ಮಾಡಿದ್ದರೇ ಸಾಕು ಲಂಕಾನಗರವನ್ನು ಸುಟ್ಟ ಸಂದರ್ಭದಲ್ಲಿಯೇ ಸೀತಾಮಾತೆಯನ್ನು ಕರೆತರುತ್ತಿದ್ದ. ಆದರೆ ರಾವಣನ ಅಹಂಕಾರಕ್ಕೆ ಅಂತ್ಯ ಹೇಳುವ ಸಂದರ್ಭ ಬಂದ ಕಾರಣದಿಂದ ಯುದ್ಧವು ಅನಿವಾರ್ಯವಾಯಿತು. ಯುದ್ಧದಲ್ಲಿ ರಾವಣನ ಜತೆ ಅವನ ಅಹಂಕಾರವು ಸಹಿತ ಮಣ್ಣಾಯಿತು. ಶ್ರೀ ರಾಮನ ಸ್ವಾಭಿಮಾನದ ಯುದ್ಧವು ಜಯ ಸಾಧಿಸಿತು. ಇನ್ನು ದ್ವಾಪರಯುಗದಲ್ಲಿ ಅಹಂಕಾರ, ವೈಷಮ್ಯ, ಸ್ವಾರ್ಥದ ಜೀವನ ಸಾಗಿಸಿದ ಕೌರವರು, ಸ್ವಾಭಿಮಾನ ಮತ್ತು ಧರ್ಮದ ರಕ್ಷಣೆಗೆ ನಿಂತ ಪ್ರಭು ಶ್ರೀ ಕೃಷ್ಣನ ಮುಂದಾಳತ್ವದಲ್ಲಿ ಪಾಂಡವರ ಕೈಯಿಂದ ಮಣ್ಣಾಗಿ ಹೋದರು. ಇನ್ನು ಕಲಿಯುಗದಲ್ಲಿ ಮನುಷ್ಯ ಜೀವಿಯು…
ಆಳ್ವಾಸ್ ಕಾಲೇಜಿನಲ್ಲಿ ವ್ಯವಹಾರ ನಿರ್ವಹಣೆ ಹಾಗೂ ಸಾಂಸ್ಕೃತಿಕ ಸಮಾವೇಶ ‘ಎಂತೂಸಿಯಾ’ ‘ಉದ್ಯಮ ಕೌಶಲ್ಯ ಅಭಿವೃದ್ದಿ ಫೆಸ್ಟ್ ನಿಂದ ಸಾಧ್ಯ’
ವಿದ್ಯಾಗಿರಿ: ಫೆಸ್ಟ್ (ಶೈಕ್ಷಣಿಕ ಹಬ್ಬ) ಗಳಿಂದ ವಿದ್ಯಾರ್ಥಿಗಳ ವೈಯಕ್ತಿಕ ಕೌಶಲ ವೃದ್ಧಿಸಿ, ಉದ್ಯಮದಲ್ಲಿ ಔದ್ಯೋಗಿಕ ಅಂಶಗಳನ್ನು ಕಲಿಯಲು ಸಹಕಾರಿ ಎಂದು ಜೆ. ವಿ. ಸಮೂಹ ಸಂಸ್ಥೆಯ ನಿರ್ದೇಶಕಿ ಆತ್ಮಿಕಾ ಅಮೀನ್ ಹೇಳಿದರು. ಆಳ್ವಾಸ್ ಕಾಲೇಜಿನ ಮೋಹಿನಿ ಅಪ್ಪಾಜಿ ಸ್ಮಾರಕ ಸಭಾಂಗಣದಲ್ಲಿ ವ್ಯವಹಾರ ನಿರ್ವಹಣಾ ವಿಭಾಗವು ಹಮ್ಮಿಕೊಂಡ ವ್ಯವಹಾರ ನಿರ್ವಹಣೆ ಹಾಗೂ ಸಾಂಸ್ಕೃತಿಕ ಸಮಾವೇಶ ‘ಎಂತೂಸಿಯಾ 2024′ ದಲ್ಲಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಗುಣವನ್ನು ಹೆಚ್ಚಿಸುವ ಜೊತೆಗೆ, ಸ್ಪರ್ಧೆಯಲ್ಲಿ ಭಾಗವಹಿಸುವ ಇತರರ ಜತೆ ಕಲಿಯುವುದು ಮುಖ್ಯ. ಇದರಿಂದ ಅನೇಕ ರೀತಿಯ ವಿಷಯಗಳನ್ನು ತಿಳಿಯಲು ಸಾಧ್ಯ ಎಂದರು. ವ್ಯವಹಾರ ನಿರ್ವಹಣಾ ವಿದ್ಯಾರ್ಥಿಗಳಿಗೆ ಸಂವಹನವೂ ಅವಶ್ಯಕವಾಗಿದ್ದು, ಈ ರೀತಿಯ ಸ್ಪರ್ಧೆಗಳನ್ನು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗ ಸಹಕಾರಿಯಾಗುತ್ತದೆ ಎಂದು ಹೇಳಿದರು. ದಕ್ಷಿಣ ಕನ್ನಡದಿಂದ ಹೆಚ್ಚು ಉದ್ಯಮಿಗಳು ಮುನ್ನಲೆಗೆ ಬರಬೇಕಿದೆ. ಇದರಿಂದ ಜಿಲ್ಲೆಯಲ್ಲಿ ಹೆಚ್ಚು ಉದ್ಯಮವೂ ಸೃಷ್ಟಿಯಾಗಿ ಆರ್ಥಿಕತೆಯ ಬೆಳವಣಿಗೆಯಾಗುತ್ತದೆ ಎಂದರು. ಮೂಡುಬಿದಿರೆಯ ನೋವ ಟ್ರೀ ಸಮಾಲೋಚನಾ ಸಂಸ್ಥೆ ಸ್ಥಾಪಕ ನಾಗರಾಜ್ ಬಿ ಮಾತನಾಡಿ, ವಿದ್ಯಾರ್ಥಿಯಾಗಿ ದಿನ ನಿತ್ಯದ…
ಉಡುಪಿ ಜಿಲ್ಲೆಯ ಬೆಳ್ಳಂಪಳ್ಳಿ ಹಳೆಮನೆ ಪೆರ್ಡೂರು ನಿವಾಸಿ ಶತಾಯುಷಿ ರುದ್ರಮ್ಮ ಹೆಗ್ಡೆ (102 ವರ್ಷ) ಮೇ 6 ರಂದು ನಿಧನರಾದರು. ಮುಂಬಯಿ ಬಂಟರ ಸಂಘದ ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ಸಹಿತ 4 ಗಂಡು, 6 ಹೆಣ್ಣು ಹಾಗೂ ಸಹೋದರಿಯರು, ಸಹೋದರು, ಅಳಿಯಂದಿರು, ಸೊಸೆಯರು, ಮೊಮ್ಮಕ್ಕಳು, ಮರಿ ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ರುದ್ರಮ್ಮ ಹೆಗ್ಡೆ ನಿಧನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮತ್ತು ಪದಾಧಿಕಾರಿಗಳು, ಬೋಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ, ಉದ್ಯಮಿ ರವೀಂದ್ರನಾಥ್ ಭಂಡಾರಿಯವರು ದುಃಖ ಸಂತಾಪ ಸೂಚಿಸಿದ್ದಾರೆ.
ಇಲ್ಲಿನ ಒಮಾನ್‌ನಲ್ಲಿರುವ ಕರಾವಳಿ ಬಾಂಧವರು ಹಾಗೂ ಬಂಟ್ಸ್ ಸಮುದಾಯದವರು ವಿಷು ಯುಗಾದಿಯನ್ನು ಆಚರಿಸಿದರು. ಒಮಾನ್‌ನ ಬಂಟ್ಸ್ ಸಮುದಾಯವು ಶ್ರೀಮಂತ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ, ಸದಸ್ಯರು ಪಾಲಿಸಬೇಕಾದ ನೆನಪುಗಳನ್ನು ಜೀವಂತಗೊಳಿಸುವಂತಹ ಹಬ್ಬಗಳು ಮತ್ತು ಸಾಂಪ್ರದಾಯಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಚರಿಸುತ್ತಾ ಬಂದಿದೆ. ಇವುಗಳಲ್ಲಿ ಕರಾವಳಿ ಸಮುದಾಯಕ್ಕೆ ವಿಶೇಷ ಪ್ರಾಮುಖ್ಯ ಹೊಂದಿರುವ ಯುಗಾದಿ ಅಥವಾ ವಿಷುವನ್ನು, ವಿಶೇಷವಾಗಿ ಬಂಟ್ಸ್ ತುಳುವ ಹೊಸ ವರ್ಷವನ್ನು ಸಂತೋಷದ ಉತ್ಸಾಹದಿಂದ ಗುರುತಿಸುತ್ತದೆ. ಯುಗಾದಿಯು ಹೊಸ ಆರಂಭಕ್ಕೆ ಒಂದು ಸಂದರ್ಭವಾಗಿದೆ. ವಸಂತ ಋತುವಿನಲ್ಲಿ ಹೊಸ ವರ್ಷವನ್ನು ಪ್ರಾರಂಭಿಸುತ್ತದೆ. ಪ್ರಕೃತಿ ಮಾತೆಯ ಪುನರುತ್ಪಾದನೆ. ವಸಂತ ಕಾಲದ ಆಗಮನದೊಂದಿಗೆ, ಪ್ರಕೃತಿ ತಾಯಿಯು ನಮಗೆ ತರಕಾರಿಗಳು, ಹಣ್ಣುಗಳು, ಎಲೆಗಳು ಮತ್ತು ಸಸ್ಯಗಳ ಋತುವನ್ನು ನೀಡುತ್ತದೆ. ಎಪ್ರಿಲ್ 14ರಂದು ಒಮಾನ್‌ನ ಶ್ರೀ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಹೊಸ ವರ್ಷವನ್ನು ಪ್ರಾರಂಭಿಸಲು ವಿಷು ತುಳುವವರನ್ನು ಒಗ್ಗೂಡಿಸಿತು. ನವೀಕರಣ ಮತ್ತು ಸಮೃದ್ಧಿಯ ಚೈತನ್ಯವು ಆಚರಣೆಗಳಲ್ಲಿ ವ್ಯಾಪಿಸಿದೆ. ವಿಶಿಷ್ಟವಾದ ಪದ್ಧತಿಗಳಿಂದ ಈ ಹಬ್ಬವು ನಿರೂಪಿಸಲ್ಪಟ್ಟಿದೆ. ಕನ್ನಡಿ, ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳು…