ಬಂಟರ ಸಂಘ ಮುಂಬಯಿಯ ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿಯ ವತಿಯಿಂದ ಮಾರ್ಚ್ 30ರ ಆದಿತ್ಯವಾರದಂದು ಚೈತ್ರ ನವರಾತ್ರಿಯ ಆರಂಭದ ದಿನದಂದು ಸಂಜೆ ಪೊವಾಯಿಯ ಎಸ್.ಎಂ ಶೆಟ್ಟಿ ಕಾಲೇಜಿನ ಸಭಾಂಗಣದಲ್ಲಿ ‘ಮಾತಾ ಕಿ ಚೌಕಿ’ ಭಕ್ತಿಪೂರ್ಣ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ದುರ್ಗಾ ಮಾತೆಗೆ ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಈ ಶುಭ ದಿನದಂದು ನಡೆಯಲಿರುವ ಈ ಭಕ್ತಿ ಪ್ರಧಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಹಾಗೂ ಇಂತಹ ಧಾರ್ಮಿಕ ಕಾರ್ಯಗಳು ನಾವು ನಡೆಸಿಕೊಂಡು ಬಂದಾಗ ಸಮಾಜ ಮತ್ತು ಬದುಕು ಭದ್ರವಾಗಿ ಸುಂದರವಾಗುತ್ತದೆ ಎಂದು ಶುಭ ಹಾರೈಸಿದರು. ಬಂಟರ ಸಂಘದ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿಯವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸೂರಜ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶೋಭಾ ಅಮರನಾಥ್ ಶೆಟ್ಟಿ ಮುಂದಾಳತ್ವದಲ್ಲಿ ಯಶಸ್ವಿಯಾಗಿ ನೆರವೇರಿತು.ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರಾದ ಲತಾ ಜಯರಾಮ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ವನಿತಾ ನೋಂಡ ಹಾಗೂ ಮಹಿಳಾ ವಿಭಾಗದ ಮಾಜಿ ಪದಾಧಿಕಾರಿಗಳು, ವಿವಿಧ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು, ಥಾಣೆ ಬಂಟ್ಸ್ ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮೋಹಿನಿ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆಗಮಿಸಿದ ಅತಿಥಿಗಳನ್ನು ಗೌರವಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದು ಭಕ್ತಿ ಭಾವ ಪರವಶರಾಗಿ ತಾಯಿ ದುರ್ಗೆಯ ಸ್ತುತಿ, ಭಜನೆ, ಕೀರ್ತನೆ, ಕಥೆ, ಪ್ರಾರ್ಥನೆಯ ಮೂಲಕ ನಾಮ ಸ್ಮರಣೆಯನ್ನು ಮಾಡಿ ಕೃತಾರ್ಥರಾದರು. ಈ ಭಕ್ತಿ ಪ್ರಧಾನ ಕಾರ್ಯಕ್ರಮವು ಆಧ್ಯಾತ್ಮಿಕ ಪರಿಸರವನ್ನು ಸೃಷ್ಟಿಸಿ ಎಲ್ಲರೂ ಭಕ್ತಿ ಸಾಗರದಲ್ಲಿ ಮುಳುಗುವಂತೆ ಮಾಡಿದ್ದು ಅಂದಿನ ವಿಶೇಷವಾಗಿತ್ತು.
ಮುಂಬಯಿ ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಶಶಿಧರ ಕೆ ಶೆಟ್ಟಿ ಇನ್ನಂಜೆ, ಪ್ರಾದೇಶಿಕ ಸಮಿತಿಗಳ ಸಂಚಾಲಕ ರವೀಂದ್ರನಾಥ ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್ ಶೆಟ್ಟಿ ಇವರೆಲ್ಲರ ಪ್ರೋತ್ಸಾಹದೊಂದಿಗೆ, ಸಮಿತಿಯ ಸಂಯೋಜಕ ರವೀಂದ್ರ ಶೆಟ್ಟಿ, ಉಪಾಧ್ಯಕ್ಷ ಯಶವಂತ ಶೆಟ್ಟಿ, ರಮೇಶ್ ರೈ, ಕಾರ್ಯದರ್ಶಿ ತಾರಾನಾಥ ಶೆಟ್ಟಿ, ಕೋಶಾಧಿಕಾರಿ ಮೋಹನದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಅಮರನಾಥ ಶೆಟ್ಟಿ, ಜೊತೆ ಕೋಶಾಧಿಕಾರಿ ಅಭಿಷೇಕ್ ಶೆಟ್ಟಿ, ಯುವ ವಿಭಾಗದ ಅದ್ವಿತ್ ಪೂಂಜಾ ಇವರೆಲ್ಲರ ಸಹಕಾರದಿಂದ ಸರಳ ಸುಂದರ ಕಾರ್ಯಕ್ರಮ ನೆರೆದ ಭಕ್ತರ ಮನಸೂರೆಗೊಂಡಿತು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರನಾಥ ಶೆಟ್ಟಿ ನೇತೃತ್ವದಲ್ಲಿ, ಸಲಹೆಗಾರರಾದ ವಜ್ರ ಪೂಂಜಾ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಜಯಲಕ್ಷ್ಮೀ ಜೆ. ಶೆಟ್ಟಿ, ಕಾರ್ಯದರ್ಶಿ ವೃಕ್ಷಾ ಭಂಡಾರಿ, ಕೋಶಾಧಿಕಾರಿ ಪ್ರಮೀಳಾ ಆರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಪುಷ್ಪಲತಾ ಎಸ್. ಶೆಟ್ಟಿ, ಜೊತೆ ಕೋಶಾಧಿಕಾರಿ ಮಮತಾ ಎಸ್. ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಅನುಸೂಯ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷೆ ಭಾರತಿ ಶೆಟ್ಟಿ ಹಾಗೂ ಸಮಿತಿಯ ಎಲ್ಲಾ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಡಾ| ಪೂರ್ಣಿಮಾ ಎಸ್. ಶೆಟ್ಟಿ, ನಿರೂಪಿಸಿದರು. ನೆರೆದ ಭಕ್ತಾದಿಗಳು ತಾಯಿ ದುರ್ಗೆಯನ್ನು ಭಕ್ತಿಯಿಂದ ಸ್ತುತಿಸಿದರು. ಸದಸ್ಯರ ಮಕ್ಕಳಿಂದ ಕುಣಿತ ಭಜನೆ ವಿಶೇಷ ಆಕರ್ಷಣೆಯಾಗಿತ್ತು. ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸೂರಜ್ ಶೆಟ್ಟಿ ಹಾಗೂ ಜೊತೆ ಕಾರ್ಯದರ್ಶಿ ಅಮರನಾಥ ಶೆಟ್ಟಿ ಪ್ರಾಯೋಜಕತ್ವದಲ್ಲಿ ಅನ್ನದಾನ ಪ್ರಸಾದ ವಿತರಣೆ ನಡೆಯಿತು.
