ಮೇ 6ರಿಂದ 12ರವರೆಗೆ ನಡೆಯುವ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಅಗತ್ಯವಿರುವ ಮಡಲು ಹಾಗೂ ಪೊರಕೆ ತಯಾರಿಕೆ ಬ್ರಹ್ಮಕಲಶೋತ್ಸವ ಮಾತೃ ಸಮಿತಿ ನೇತೃತ್ವದಲ್ಲಿ ಭಾನುವಾರ ಚಾಲನೆ ನೀಡಲಾಗಿದೆ. ದೇವಳದ ಆಡಳಿತ ಮೊಕ್ತೇಸರ ತಾರನಾಥ ರೈ ಪಡ್ಡಂಬೈಲ್ ಗುತ್ತು ಚಾಲನೆ ನೀಡಿದರು. ಕಲ್ಲಗದ್ದೆ, ಚನಿಯಪ್ಪ ಪರಗುಡ್ಡೆ, ಮಾತೃ ಮಂಡಳಿ ಅಧ್ಯಕ್ಷೆ ರಾಜಶ್ರೀ ಟಿ. ರೈ ಪೆರ್ಲ, ಚೇತನಾ, ಯಶೋದ ಕಾನ, ನಿರ್ಮಲ ಶೇಷಪ್ಪ ಭಾಗವಹಿಸಿದ್ದರು.ನಾಲ್ಕು ಗ್ರಾಮಗಳ ಪ್ರಾದೇಶಿಕ ಸಮಿತಿಗಳ ಮಹಿಳಾ ಸದಸ್ಯೆಯರು ಮಡಲು ಹೆಣೆಯುವ, ಹಿಡಿಸೂಡಿ ತಯಾರಿಸುವ ಕೈಂಕರ್ಯದಲ್ಲಿ ತೊಡಗಿಕೊಂಡರು. ಪ್ರೇಮ ಕಲ್ಲಗದ್ದೆ, ಲೀಲಾವತಿ ಆಚಾರ್ಯ, ರೇಣುಕಾ ಕಲ್ಲಗದ್ದೆ, ಯಶೋಧ ಕಾನ, ಸಾವಿತ್ರಿ ಕುರೆಡ್ಕ, ಸರೋಜಿನಿ ಮುಗೇರು ಪ್ರಾತ್ಯಕ್ಷಿಕೆ ನೀಡಿದರು. ಮಕ್ಕಳು ಕೂಡ ಮಡಲು ಹೆಣೆಯುವ ಕಾಯಕದಲ್ಲಿ ಭಾಗಿಯಾದರು.
ಬ್ರಹ್ಮಕಲಶೋತ್ಸಕ್ಕೆ ಸುಮಾರು 600 ಹೆಣೆದ ಮಡಲು ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಮಾತೃ ಸಂಘದ ನಾನಾ ಪ್ರಾದೇಶಿಕ ಸಮಿತಿಗಳ ನೇತೃತ್ವದಲ್ಲಿ ಅಲ್ಲಲ್ಲಿ ಮಡಲು ಹೆಣೆದು, ಹಿಡಿಸೂಡಿ ತಯಾರಿಸಿ ಕ್ಷೇತ್ರಕ್ಕೆ ತಂದೊಪ್ಪಿಸುವ ಯೋಜನೆ ಇರಿಸಲಾಗಿದೆ ಎಂದು ಮಾತೃ ಸಮಿತಿ ಅಧ್ಯಕ್ಷೆ ರಾಜಶ್ರೀ ಟಿ. ರೈ ಪೆರ್ಲ ತಿಳಿಸಿದ್ದಾರೆ.
