ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಇನ್ನಾ ಗ್ರಾಮದ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮುಂದಿನ ಮೂರು ವರ್ಷಗಳ ಅವಧಿಗೆ 2025 – 28 ನೂತನ ಅಧ್ಯಕ್ಷರಾಗಿ ದಿವಾಕರ್ ಆರ್. ಶೆಟ್ಟಿ ಕಾಚೂರ ಪರಾಡಿ ಅವರು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಿಗೆ ದೇವಳದ ಸಂಪೂರ್ಣ ಪ್ರಭಾರವನ್ನು ಹಸ್ತಾಂತರಿಸುವಂತೆ ಆಡಳಿತಾಧಿಕಾರಿಯವರಿಗೆ ಉಡುಪಿ ಜಿಲ್ಲಾ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಾಯಕ ಆಯುಕ್ತೆ ಟಿ. ಎನ್. ಮಂಜುಳಾ ತಿಳಿಸಿದ್ದಾರೆ.

ಸಮಿತಿಯ ಸದಸ್ಯರಾಗಿ ಜಯ ಎಸ್. ಕೋಟ್ಯಾನ್ ಬೈಲುಮನೆ, ಹರೀಶ್ ಶೆಟ್ಟಿ ದಡ್ಡು ಮನೆ, ವಿಮಲಾ ರವಿ ಮಡ್ಮಣ್, ಸುಜಾತ ಗಿರಿಯಪ್ಪ ಪೂಜಾರಿ, ಮಂಜುಳಾ ಕುಶ ಮೂಲ್ಯ, ಗಣೇಶ್ ಆಚಾರ್ಯ, ಮಹೇಶ್ ಪುತ್ರನ್ ಇರ್ಮಾಡಿ ಆಯ್ಕೆಯಾಗಿದ್ದಾರೆ.