ವಂಜಾರ ಕಟ್ಟೆ ಆಂಗ್ಲ ಮಾಧ್ಯಮ ಶಾಲೆಯ ಹೊಸ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಮಾರ್ಚ್ 27 ಬೆಳಿಗ್ಗೆ 9:30ಕ್ಕೆ ನಡೆಯಿತು. ವೈದಿಕ ವೃಂದದವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆ ಕೇವಲ ಒಂದು ಕಟ್ಟಡವಲ್ಲ, ಇದು ಗ್ರಾಮೀಣ ಭಾಗದ ಅನೇಕ ಮಕ್ಕಳ ಕನಸುಗಳನ್ನು ನನಸಾಗಿಸುವ ಜ್ಞಾನ ಮಂದಿರ, ಭವಿಷ್ಯದ ಪೀಳಿಗೆಗಳಿಗೆ ಗುರಿಯನ್ನು ರೂಪಿಸುವ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಸಾಂಸ್ಕೃತಿಕವಾಗಿ, ಅಕ್ಷರ ದೀಪ ಬೆಳಗಿಸುವ ದೇಗುಲ. ಈ ನಿಟ್ಟಿನಲ್ಲಿ ಎಲ್ಲರ ಪ್ರೇರಣೆ ಜೊತೆಗೆ, ಸ್ಪೂರ್ತಿಯ ಬೆಂಬಲದ ಅಗತ್ಯವಿದೆ ಎಂದು ಶಾಲಾ ಸಂಚಾಲಕರಾದ ಅಕ್ಷಯ ಅಡ್ಯಂತಾಯ ತಿಳಿಸಿದರು.ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥ ಅಶೋಕ ಅಡ್ಯಂತಾಯ, ರಶ್ಮಿತಾ ಅಡ್ಯಂತಾಯ, ಕರುಣಾಕರ ಶೆಟ್ಟಿ, ಲೇಖಾ ಪಕ್ಕಲ, ಸೋಮಶೇಖರ್ ಶೆಟ್ಟಿ, ಪ್ರೋ ಪದ್ಮನಾಭ ಗೌಡ, ಕಾರ್ತಿಕ ಆಳ್ವ, ವಂಜಾರ ಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಜಗದೀಶ್ ಆಚಾರ್, ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಪ್ರಕಾಶ್, ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಉದಯ ಶೆಟ್ಟಿ, ಜಯರಾಮ ಸಾಲ್ಯಾನ್, ಸಂಜೀವ ಶೆಟ್ಟಿ, ರಮೇಶ್ ಶೆಟ್ಟಿ ಬಡಕಲ ಗುತ್ತು, ಸತೀಶ್ ಪ್ರಭು, ಜಾನ್ ಅಲ್ಫಾನ್ಸೋ, ಸುಧೀರ್ ಶೆಟ್ಟಿ, ಜಗನ್ನಾಥ ಶೆಟ್ಟಿ, ದಿನೇಶ್ ಆಚಾರ್, ಕಿರಣ್ ಶೆಟ್ಟಿ ಹಾಗೂ ಶಿಕ್ಷಕ ವೃಂದದವರು, ವಿದ್ಯಾಭಿಮಾನಿಗಳು, ಸ್ಥಳೀಯರು ಉಪಸ್ಥಿತರಿದ್ದರು.
