Author: admin
ಸಸಿಹಿತ್ಲು ಸಮುದ್ರ ತಟದಲ್ಲಿ ಬೀಚ್ ಕ್ಲೀನಿಂಗ್ ಅಭಿಯಾನ ಹಾಗೂ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸೆಪ್ಟೆಂಬರ್ 15, ಭಾನುವಾರದಂದು ಆಚರಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎನ್.ಸಿ.ಸಿ., ಎನ್.ಎಸ್.ಎಸ್. ನ 120 ವಿದ್ಯಾರ್ಥಿಗಳು ಪಾಲ್ಗೊಂಡು 30-40 ಚೀಲದಷ್ಟು ಕಸವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ಮಾನವ ಸರಪಳಿ ರಚಿಸಿ ಪ್ರಜಾಪ್ರಭುತ್ವದ ಪರವಾದ ಘೋಷಣೆಗಳನ್ನು ಒಟ್ಟಿಗೆ ಕೂಗುವ ಮೂಲಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಯಿತು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಭಾರತ, ಮತ್ತು ಬಹುತ್ವದ ನೆಲೆಯಲ್ಲಿ ರೂಪುಗೊಂಡ ಭಾರತಕ್ಕೆ ಪ್ರಜಾಪ್ರಭುತ್ವ ಒಂದು ವರ. ನಾವು ಯಾವುದೇ ಜಾತಿ, ಮತ ಧರ್ಮ, ಭಾಷೆಗೆ ಸೇರಿದವರಾದರೂ ನಾವೆಲ್ಲ ಭಾರತೀಯರು ಎಂಬ ಹೆಮ್ಮೆ ಮತ್ತು ಐಕ್ಯತಾ ಭಾವ ನಮ್ಮಲ್ಲಿ ಸದಾ ಇರಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ನುಡಿದರು.ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಮಾಣಿಕ್ಯ, ಐ.ಸಿ.ಸಿ. ಸಫಿರ್ಂಗ್ ಸ್ವಾಮಿ ಪ್ರತಿಷ್ಠಾನದ ನಿರ್ದೇಶಕರು ಹಾಗೂ ಸಫಿರ್ಂಗ್ ಸ್ವಾಮಿ ಪ್ರತಿಷ್ಠಾನದ ನಿರ್ದೇಶಕರು ಗೌರವ್ ಹೆಗ್ಡೆ…
ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ, 2023 ರ ಸಾಲಿನ ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಜಯಕರ ಶೆಟ್ಟಿ ಇಂದ್ರಾಳಿ ಅವರಿಗೆ 2024 ರ ಸಾಲಿನ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜಯಕರ ಶೆಟ್ಟಿ ಇಂದ್ರಾಳಿ ಅವರು ಶತಮಾನೋತ್ಸವನ್ನು ಯಶಸ್ವಿಯಾಗಿ ಪೂರೈಸಿರುವ ಉಡುಪಿಯ ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಕಳೆದ 42 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದು, ಸೊಸೈಟಿಯನ್ನು ಉಡುಪಿ ಜಿಲ್ಲೆಯ ಯಶಸ್ವಿ ಸಹಕಾರಿ ಸಂಸ್ಥೆಯಾಗಿ ಜನಮನದಲ್ಲಿ ಪ್ರತಿಷ್ಠಾಪಿಸಿದ್ದಾರೆ. 1918ರಲ್ಲಿ ಸ್ಥಾಪನೆಗೊಂಡ ಈ ಸೊಸೈಟಿ, 1978ರಿಂದ 1981ರವರೆಗೆ ವ್ಯವಹಾರ ಸ್ಥಗಿತಗೊಂಡು ಮುಚ್ಚುವ ಸ್ಥಿತಿಯಲ್ಲಿದ್ದು, ಸರಕಾರದ ಆಡಳಿತಾಧಿಕಾರಿಗಳ ಕಾಲದಿಂದ ವಿವಿಧ ಹುದ್ದೆಗಳ ಮೂಲಕ ಅದಕ್ಕೊಂದು ಹೊಸ ಆಯಾಮ ದೊರಕಿಸಿಕೊಟ್ಟು ಅದೊಂದು ಬೃಹತ್ ಸಂಸ್ಥೆಯಾಗಿ ಬೆಳೆಯಲು ಕಾರಣೀಭೂತರಾಗಿದ್ದಾರೆ. ಶಿವಳ್ಳಿ ಗ್ರಾಮದ ಇಂದ್ರಾಳಿಯ ಪ್ರತಿಷ್ಠಿತ ಕೃಷಿಕ ಬಂಟ ಮನೆತನದಲ್ಲಿ ಜನಿಸಿದ ಜಯಕರ ಶೆಟ್ಟಿ ಇಂದ್ರಾಳಿ ಅವರು ಸಹಕಾರಿ…
ತುಳುಕೂಟ ಪುಣೆಯ ರಜತ ಮಹೋತ್ಸವ ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಹಾಗೂ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮಗಳು ವಿವಿಧ ವಯೋಮಿತಿಗೆ ಅನುಗುಣವಾಗಿ ಸೆಪ್ಟೆಂಬರ್ 15 ರಂದು ರವಿವಾರ ಪುಣೆಯ ಶ್ಯಾಮ್ ರಾವ್ ಕಲ್ಮಾಡಿ ಕನ್ನಡ ಹೈಸ್ಕೂಲ್ ಕೇತ್ಕರ್ ರೋಡ್ ಇಲ್ಲಿ ಬೆಳಿಗ್ಗೆ ಗಂಟೆ 9 ರಿಂದ ಸಂಜೆ ಗಂಟೆ 5 ರವರೆಗೆ ನಡೆಯಲಿದೆ. ಬೆಳಿಗ್ಗೆ ಗಂಟೆ 9 ರಿಂದ ಸ್ಪರ್ಧೆಗಳು ಆರಂಭವಾಗಲಿದ್ದು, ಮೊದಲಾಗಿ 5 ರಿಂದ 15 ವರ್ಷದ ಮಕ್ಕಳಿಗಾಗಿ ತುಳು ಮತ್ತು ಕನ್ನಡ ಭಕ್ತಿಗೀತೆ, 5 ರಿಂದ 15 ವರ್ಷದೊಳಗಿನ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, 20 ವರ್ಷದ ಮೇಲಿನ ಮಹಿಳೆಯರು ಮತ್ತು ಪುರುಷರಿಗಾಗಿ ರಂಗೋಲಿ ಸ್ಪರ್ಧೆ, 1 ರಿಂದ 5 ವರ್ಷದ ವರೆಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, 6 ರಿಂದ 10 ವರ್ಷದೊಳಗಿನ ಮಕ್ಕಳಿಗಾಗಿ ಬಾಲಕೃಷ್ಣ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗಾಗಿ ತುಳುನಾಡಿನ ಸಂಸ್ಕೃತಿಯ ಸೀರೆ ಮತ್ತು ಒಡವೆಗಳನ್ನು ಧರಿಸಿ ನಡೆಸುವ ಫ್ಯಾಷನ್ ಶೋ ಸ್ಪರ್ಧೆ ಮತ್ತು ಕವಿ ಗೋಷ್ಠಿ, 20 ವರ್ಷ…
ನೆನಪುಗಳು ಎಂದಾಗ ಮೊದಲು ಕಣ್ಣ ಮುಂದೆ ಬರುವುದು ಬಾಲ್ಯ ಜೀವನ, ಆಟ ಪಾಠ. ಅದೆಷ್ಟು ಸುಂದರ ಆ ದಿನಗಳು. ಯಾವುದೇ ಜವಾಬ್ದಾರಿ, ಮೋಸ ವಂಚನೆ ತಿಳಿಯದೆ ಸಂತೋಷದಿಂದ ಕಳೆದ ಕ್ಷಣಗಳವು. ನಾವು ಮಕ್ಕಳಾಗಿರುವಾಗ ಯಾವಾಗ ದೊಡ್ಡವರಾಗುತ್ತೇವೋ ಎಂದು ಅಂದುಕೊಳ್ಳುತ್ತಿದ್ದೆವು. ಆದರೆ ಈಗ ಮತ್ತದೇ ಆ ಬಾಲ್ಯವೇ ಬೇಕೆಂದೆನಿಸಿದೆ. ಅಪ್ಪ ಅಮ್ಮನ ಜತೆ ಜಗಳವಾಡಿ ಹತ್ತು ರೂಪಾಯಿಯ ನೋಟನ್ನು ತೆಗೆದುಕೊಂಡು ಅದರಲ್ಲಿ ದೊರೆತ ಚಾಕಲೇಟ್ ಅನ್ನು ತನ್ನ ಜತೆ ಇದ್ದ ಗೆಳೆಯರೊಡನೆ ಕೂಡಿ ತಿಂದು ಆನಂದ ಪಟ್ಟ ಆ ಕ್ಷಣಗಳು ಎಂದಿಗೂ ಮಾಸದು. ಮೊದಲ ಬಾರಿಗೆ ಅಪ್ಪ ಅಮ್ಮನನ್ನು ಬಿಟ್ಟು ಶಾಲೆಗೆ ಹೋಗಬೇಕೆಂದರೆ ಮನದಲ್ಲಿ ಅದೇನೋ ಕಸಿವಿಸಿ. ನೀಲಿ ಬಿಳಿ ಸಮವಸ್ತ್ರವನ್ನು ಧರಿಸಿ, ಬ್ಯಾಗಿಗೆ ಪುಸ್ತಕ, ಪೆನ್ಸಿಲ್ ಮುಂತಾದವುಗಳನ್ನು ತುಂಬಿಸಿಕೊಂಡು ಶಾಲೆಗೆ ಹೊರಟಾಗ ಅಮ್ಮನ ಕಣ್ಣೀರ ವಿದಾಯ ಆದರೂ ಮುಖದಲ್ಲೇನೋ ಒಂದು ಮಂದಹಾಸ. ನಲಿ ಕಲಿ ತರಗತಿಯನ್ನು ಪ್ರವೇಶಿಸಿದಾಗ ಕಂಡ ಹೊಸ ಹೊಸ ಮುಖಗಳಿಂದ ಬೇಸರವಾಗಿ ಕಣ್ಣೀರು ಹಾಕಿದಾಗ ಟೀಚರ್ ಬಂದು ಸಮಾಧಾನಪಡಿಸಿ…
ಪದವಿಪೂರ್ವ ಕಾಲೇಜುಗಳ ಮೂಡುಬಿದಿರೆ ತಾಲೂಕು ಮಟ್ಟದ ಬಾಲಕ- ಬಾಲಕಿಯರ ಕಬಡ್ಡಿ ಪಂದ್ಯಾಟ : ಆಳ್ವಾಸ್ಗೆ ಅವಳಿ ಪ್ರಶಸ್ತಿ
ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಹಾಗೂ ಮೂಡುಬಿದಿರೆಯ ಹೋಲಿರೋಸರಿ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಮೂಡುಬಿದಿರೆಯಲ್ಲಿ ಶನಿವಾರ ನಡೆದ ಮೂಡುಬಿದಿರೆ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು, ಮಹಾವೀರ ಪದವಿ ಪೂರ್ವ ಕಾಲೇಜು ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು, ಹೋಲಿರೋಸರಿ ಪದವಿ ಪೂರ್ವ ಕಾಲೇಜು ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು.
ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ಪ್ರತೀ ವರ್ಷದಂತೆ ನಡೆಯುವ ಪುಣ್ಯ ಕ್ಷೇತ್ರಗಳ ದರ್ಶನದ ತೀರ್ಥಯಾತ್ರೆಯು ಈ ಬಾರಿ ಒರಿಸ್ಸಾದ ಪುರಿ ಜಗನ್ನಾಥ, ಕೊನಾರ್ಕ್ ಸೂರ್ಯ ದೇವಾಲಯ, ಭುಭನೇಶ್ವರ್ ಲಿಂಗರಾಜೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಲಾಯಿತು. ಒಡಿಯೂರಿನ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರ ಶುಭಾಶೀರ್ವಾದದೊಂದಿಗೆ ಪುಣೆ ಶ್ರೀ ಗುರುದೇವ ಸೇವಾ ಬಳಗದ ಅದ್ಯಕ್ಷರಾದ ಪ್ರಭಾಕರ ವಿ ಶೆಟ್ಟಿ, ಪ್ರ ಕಾರ್ಯದರ್ಶಿ ರೋಹಿತ್ ಡಿ ಶೆಟ್ಟಿಯವರ ಮುಂದಾಳತ್ವದಲ್ಲಿ ಸುಮಾರು 50 ಜನ ಯಾತ್ರಾರ್ಥಿಗಳು 4 ದಿನದ ಈ ಯಾತ್ರೆಯಲ್ಲಿ ಪಾಲ್ಗೊಂಡರು. ಈ ಬಾರಿ ಭಾರತದ ಪವಿತ್ರವಾದ ಚಾರ್ ಧಾಮಗಳ ಪೈಕಿ ಅತ್ಯಂತ ವಿಶೇಷತೆಯ ಪುಣ್ಯ ಕ್ಷೇತ್ರ ಪುರಿ ಜಗನ್ನಾಥ, ಬಲರಾಮ, ಸುಭದ್ರೆ ದೇವರ ದರ್ಶನ ಮಾಡಲಾಯಿತು. ಅಲ್ಲದೇ ಭಾರತದ ಚಾರ್ ಧಾಮಗಳಾದ ದ್ವಾರಕಾದೀಶ, ಬದರಿನಾಥ ಹರಿನಾರಾಯಣ, ರಾಮೇಶ್ವರಂ ಸೇರಿದಂತೆ ನಾಲ್ಕು ಚಾರ್…
ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ತ್ರೋಬಾಲ್ ಸ್ಪರ್ಧೆ : ಆಳ್ವಾಸ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ
ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮೂಡುಬಿದಿರೆ ವಲಯ ಹಾಗೂ ಸರ್ಕಾರಿ ಪ್ರೌಢ ಶಾಲೆ, ಪಡುಕೊಣಾಜೆ ಇವರ ಸಹಯೋಗದಲ್ಲಿ ನಡೆದ ತಾಲ್ಲೂಕು ಮಟ್ಟದ ತ್ರೋಬಾಲ್ ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು 14 ಮತ್ತು 17 ವರ್ಷ ವಯೋಮಿತಿಯ ಬಾಲಕರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಮುಂದೆ ನಡೆಯುವ ಜಿಲ್ಲಾ ಮಟ್ಟದ ತ್ರೋಬಾಲ್ ಸ್ಪರ್ಧೆಗೆ ಆಳ್ವಾಸ್ ಶಾಲೆಯಿಂದ ಆಯ್ಕೆಯಾದ 24 ಕ್ರೀಡಾಪಟುವಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.
ಬಂಟ್ಸ್ ಅಸೋಸಿಯೇಷನ್ ಪುಣೆ : ಅಧ್ಯಕ್ಷರಾಗಿ ನಗ್ರಿಗುತ್ತು ರೋಹಿತ್ ಡಿ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆಯಾಗಿ ರೇಷ್ಮಾ ಆರ್ ಶೆಟ್ಟಿ
ಪುಣೆಯ ಬಂಟ ಸಮಾಜದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ನೂತನ ಅಧ್ಯಕ್ಷರಾಗಿ ಪುಣೆಯ ಉದ್ಯಮಿ, ಸಮಾಜ ಸೇವಕ ನಗ್ರಿಗುತ್ತು ರೋಹಿತ್ ಡಿ ಶೆಟ್ಟಿಯವರು ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆಯಾದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ರೇಷ್ಮಾ ಅರ್ ಶೆಟ್ಟಿಯವರು ಅವಿರೋದವಾಗಿ ಆಯ್ಕೆಯಾದರು. ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 8 ರಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರುರವರ ಅಧ್ಯಕ್ಷತೆಯಲ್ಲಿ ಪುಣೆಯ ಕ್ಯಾಂಪ್ ನಲ್ಲಿಯ ಪೂನಾ ಕ್ಲಬ್ ನ ಬ್ಯಾಂಕ್ವೇಟ್ ಹಾಲ್ ನಲ್ಲಿ ಜರಗಿತು. ಈ ಸಂದರ್ಭದಲ್ಲಿ 2024-26 ರ ಸಾಲಿಗೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರನ್ನಾಗಿ ರೋಹಿತ್ ಡಿ ಶೆಟ್ಟಿಯವರನ್ನು ಸಭೆಯಲ್ಲಿ ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆ ಮಾಡಲಾಯಿತು ಹಾಗೂ ಕಾರ್ಯಕಾರಿ ಸಮಿತಿ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರೋಹಿತ್ ಶೆಟ್ಟಿ ಯವರಿಗೆ ಗಣೇಶ್ ಹೆಗ್ಡೆಯವರು ಪುಷ್ಪಗುಚ್ಚ ನೀಡಿ ಅಭಿನಂದಿಸಿ ಗೌರವಿಸಿದರು. ನಗ್ರಿಗುತ್ತು ರೋಹಿತ್…
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ದಿನಾಂಕ 08 ಸೆಪ್ಟೆಂಬರ್ 2024ರಂದು 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ದ್ವಿತೀಯ ದಿನದ ಸಭಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಮಾರಂಭವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ “ಕಳೆದ ಹದಿನೇಳು ವರ್ಷಗಳಿಂದ ಬಂಟರ ಮಾತೃ ಸಂಘವು ಜಾತಿ ಮತ ಭೇದವಿಲ್ಲದೆ ಎಲ್ಲರನ್ನೂ ಒಳಗೊಂಡು ಗಣೇಶೋತ್ಸವವನ್ನು ಆಚರಿಸುತ್ತಿರುವುದು ಮಾನವ ಸಮಾಜಕ್ಕೆ ಮಾದರಿಯಾಗಿದೆ” ಎಂದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಹಾಗೂ ಸಂಘದ ‘ನಮ್ಮ ಸಂಪರ್ಕ’ ಮಾಸಪತ್ರಿಕೆಯ ಸಂಪಾದಕ ಬಿ. ರವೀಂದ್ರ ಶೆಟ್ಟಿ, ಪತ್ರಿಕೆಯ ನಿಕಟ ಪೂರ್ವ ಸಂಪಾದಕ, ಸಾಹಿತಿ ಮತ್ತು ಸಂಘಟಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಧಾರ್ಮಿಕ ಮುಂದಾಳು ಟಿ. ಭಾಸ್ಕರ ರೈ ಬ್ರಹ್ಮಾವರ ಹಾಗೂ ಅಂತಾರಾಷ್ಟ್ರೀಯ ಈಜುಪಟು ಚಿಂತನ್ ಎಸ್. ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು.…
ಯಕ್ಷಗಾನ ಕಲೆಯ ದಿಗ್ವಿಜಯವನ್ನು ಅಮೇರಿಕಾ ದೇಶದಲ್ಲಿ ಕೈಗೊಂಡಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾ ರಾಜ್ಯದ ಫೀನಿಕ್ಸ್ ನಗರದ ಮೇಯರ್ ಜುಲೈ 27 ನೇ ತಾರೀಕನ್ನು ಯಕ್ಷದ್ರುವ ಪಟ್ಲ ಫೌಂಡೇಶನ್ ಡೇ ಎಂದು ಘೋಷಿಸಿದ ಬೆನ್ನಲ್ಲೇ, ಇದೀಗ ವಿಸ್ಕಾನ್ಸಿನ್ ರಾಜ್ಯದ ಬ್ರೂಕ್ಫೀಲ್ಡ್ ನಗರದಲ್ಲಿ ನಡೆದ ಯಕ್ಷಗಾನ ಕಲೆಯನ್ನು ಹಾಗೂ ಪಟ್ಲ ಫೌಂಡೇಶನ್ ಕೈಗೊಂಡಿರುವ ಮಹಾನ್ ಕಾರ್ಯವನ್ನು ಶ್ಲಾಘಿಸಿ ಅಲ್ಲಿಯ ಮೇಯರ್ ಸ್ಟೀವನ್ ವಿ ಪೋಂಟೋ ಅವರು ಕೂಡಾ ಆಗಸ್ಟ್ 18ನೇ ತಾರೀಖು ಬ್ರೂಕ್ಫೀಲ್ಡ್ ನಗರದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ ಎಂದು ಘೋಷಿಸಿದ್ದಾರೆ. ಈ ಸಾಧನೆಯಲ್ಲಿ ನಿರ್ಣಾಯಕ ಬೆಂಬಲ ನೀಡಿದ ಮಿಲ್ವಾಕೀ ಕನ್ನಡ ಸಂಘಕ್ಕೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ತಿಳಿಸಿದ್ದಾರೆ.