Author: admin

ಜೆಸಿಐ ಭಾರತ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿ ಔಟ್ ಸ್ಟ್ಯಾಂಡಿಂಗ್ ಡಿಜಿಟಲ್ ಇನ್ಫ್ಲುಯೆನ್ಸರ್ ಅವಾರ್ಡ್ ಗೆ (OUTSTANDING DIGITAL INFLUENCER AWARD) ಕಾರ್ಕಳದಿಂದ ಜೇಸಿಯೇತರ ವಿಭಾಗದಲ್ಲಿ ನಾಮಿನಿ ಆಗಿ ಜಿಸಿಐ ಶಾಲಾ ಶಿಕ್ಷಕಿ ವಂದನಾ ರೈ ಕಾರ್ಕಳ ಇವರು ಭಾಜನರಾಗಿದ್ದಾರೆ. ಜಿಸಿಐ ಭಾರತವು ರಾಷ್ಟ್ರಮಟ್ಟದಲ್ಲಿ ಐವರಿಗೆ ಈ ಪ್ರಶಸ್ತಿ ಘೋಷಿಸಿದ್ದು, ಅವರಲ್ಲಿ ವಂದನಾ ರೈಯವರು ಕೂಡಾ ಓರ್ವರು. ಸಾಮಾಜಿಕ ಜಾಲತಾಣಗಳಲ್ಲಿ ವಿಷಯಗಳ ಪರಿಕಲ್ಪನೆಗಳು, ಅತೀ ಹೆಚ್ಚು ಫಾಲೋವರ್ಸ್ ಹಾಗೂ ವೀಡಿಯೋಗಳ ಅತೀ ಹೆಚ್ಚಿನ ವೀಕ್ಷಣೆ ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಡಿಸೆಂಬರ್ 27ರಿಂದ 29 ರವರೆಗೆ ಚೆನ್ನೈಯಲ್ಲಿ ನಡೆಯಲಿರುವ ಜೆಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ಹಸ್ತಾಂತರ ಮಾಡಲಾಗುವುದು ಎಂದು ಜೆಸಿಐ ಭಾರತ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ದಾಮೋದರ ನಿಸರ್ಗರು ತಮ್ಮ ತಂದೆಯ ಹೆಸರಿನಲ್ಲಿ ನಡೆಸುತ್ತಿದ್ದ ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರತಿವರ್ಷ ತಾಳಮದ್ದಳೆ ನಡೆಸುತ್ತಿದ್ದರು. ಅಲ್ಲದೆ ತುಳುಕೂಟದ ಆಶ್ರಯದಲ್ಲಿ ತುಳು ಸಂಸ್ಕೃತಿಗೆ ಸಂಬಂಧಿಸಿ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಇದೀಗ ತುಳು ಕೂಟವು ಗರೋಡಿಯ ಬ್ರಹ್ಮ ಬೈದ್ಯರ್ಕಳ ಪುಣ್ಯಸ್ಥಳದಲ್ಲಿ ನಿಸರ್ಗರ ನೆನಪಿನ ಸಪ್ತಾಹ ನಡೆಸುತ್ತಿರುವುದು ಒಂದು ಸಾರ್ಥಕ ಸಂಸ್ಮರಣೆಯೆನಿಸಿದೆ ಎಂದು ಹಿರಿಯ ವಿದ್ವಾಂಸರಾದ ಡಾ| ಎಂ. ಪ್ರಭಾಕರ ಜೋಷಿ ಹೇಳಿದರು. ಕುಡ್ಲ ತುಳುಕೂಟವು ದಿ| ದಾಮೋದರ ನಿಸರ್ಗರ ಸ್ಮರಣಾರ್ಥ ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ನಡೆಸುತ್ತಿರುವ ‘ತುಳು ತಾಳಮದ್ದೊಲಿ’ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಖ್ಯಾತ ಅರ್ಥಧಾರಿ ಜಬ್ಬಾರ್ ಸಮೋ ಅವರನ್ನು ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ನಾಗೇಶ ದೇವಾಡಿಗ, ಮಧುಸೂದನ ಅಲೆವೂರಾಯ, ಶಶಿಧರ ಪೊಯ್ಯತ್ತಬೈಲ್, ನ್ಯಾಯವಾದಿ…

Read More

ಕ್ರಿಯೇಟಿವ್ ಪುಸ್ತಕ ಮನೆ ಕಾರ್ಕಳ ಮತ್ತು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಜಾನಪದ ವಿದ್ವಾಂಸರಾದ ಡಾ| ಕೆ.ಚಿನ್ನಪ್ಪ ಗೌಡ ಅವರ ಸಂಶೋಧನಾ ಕೃತಿ ‘ಭೂತಾರಾಧನೆ’ – ಮಾಯದ ನಡೆ ಜೋಗದ ನುಡಿ ಲೋಕಾರ್ಪಣೆ ಕಾರ್ಯಕ್ರಮವು ಮಂಗಳೂರು ಸಂತ ಅಲೋಶಿಯಸ್ ಪರಿಗಣಿತ ವಿವಿಯ ಎಲ್ಎಫ್ ರಸ್ಕಿನ್ಹ ಸಭಾಂಗಣದಲ್ಲಿ ಡಿಸೆಂಬರ್ 20 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ವಿಶ್ರಾಂತ ಕುಲಪತಿಗಳು, ಜಾನಪದ ವಿದ್ವಾಂಸರಾದ ಪ್ರೊ. ಬಿ.ಎ ವಿವೇಕ್ ರೈ ಕೃತಿ ಲೋಕಾರ್ಪಣೆಗೊಳಿಸಲಿದ್ದು, ಸಾಹಿತಿ ಡಾ| ರಾಜಶೇಖರ್ ಹಳೆಮನೆ ಕೃತಿಯ ಕುರಿತು ಅವಲೋಕನ ಮಾಡಲಿದ್ದಾರೆ. ಅಲೋಶಿಯಸ್ ಪರಿಗಣಿತ ವಿವಿಯ ಕುಲಪತಿ ಡಾ| ಪ್ರವೀಣ್ ಮಾರ್ಟಿಸ್ ಎಸ್‌ಜೆ, ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.]| ನಾಗಪ್ಪ ಗೌಡ, ಲೇಖಕರು, ಜಾನಪದ ವಿದ್ವಾಂಸರಾದ ಡಾ| ಕೆ ಚಿನ್ನಪ್ಪ ಗೌಡ ಅವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್‌.ಎಲ್. ಅವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ…

Read More

ತುಮಕೂರು : ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿಯಲ್ಲಿ ಕಾರ್ಕಳ ತಾಲೂಕು ಮಟ್ಟದ ಕನ್ನಡ ಪ್ರಬಂಧ ಸ್ಪರ್ದೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಇಬ್ಬನಿ ದ್ವಿತೀಯ ಸ್ಥಾನಿಯಾಗಿ ಉಡುಪಿ ಜಿಲ್ಲಾಮಟ್ಟಕ್ಕೆ ಆಯ್ಕೆ ಗೊಂಡಿರುತ್ತಾರೆ.

Read More

ತುಮಕೂರು : ತುಮಕೂರಿನ ಎಂಪ್ರೈಸ್ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ನಡೆದ ಪದವಿ ಪೂರ್ವ ಕಾಲೇಜಿನ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ-2025ರ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಪ್ರಜ್ಞಾಮೋಹನ್ ತೃತೀಯ ಸ್ಥಾನ ಪಡೆದಿರುತ್ತಾರೆ. ಈಕೆ ಹಾಸನದ ಶ್ರೀ ಮೋಹನ್ ಕುಮಾರ್ ಮತ್ತು ಶ್ರೀಮತಿ ಶೀಲಾ ದಂಪತಿಗಳ ಸುಪುತ್ರಿಯಾಗಿದ್ದಾರೆ. ಇವರಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದರೆ.

Read More

ಒಬ್ಬ ವ್ಯಕ್ತಿ ಸುಮ್ಮನೆ ನಾಯಕನಾಗಿ ಗುರುತಿಸಲ್ಪಡುವುದಿಲ್ಲ. ನಾಯಕನಾಗಿ ಕಾಣಿಸಿಕೊಳ್ಳಬೇಕಾದರೆ ಮೂಲತಃ ಆತನಲ್ಲಿ ನಾಯಕತ್ವದ ಗುಣಗಳಿರಬೇಕು. ಅದನ್ನು ಪೋಷಿಸಿ ಬೆಳಕಿಗೆ ತರುವ ವಾತಾವರಣ ಇರಬೇಕು. ಜೊತೆಗೆ ಸದಾ ಪ್ರಯತ್ನಶೀಲತೆ, ದೃಢ ಸಂಕಲ್ಪ, ಛಲ, ಸವಾಲುಗಳನ್ನು ಎದುರಿಸಿ ಅದನ್ನು ಮೀರಿ ನಿಲ್ಲುವ ತಾಕತ್ತು, ಆಕರ್ಷಕ ವ್ಯಕ್ತಿತ್ವ, ನಿಷ್ಕಲ್ಮಶ ಭಾವಶುದ್ಧಿ, ನೇರ ನಡೆ ನುಡಿ, ಯೋಜನೆ ಯೋಚನೆಯ ಬಗ್ಗೆ ಖಚಿತತೆ ಇವೆಲ್ಲವೂ ಮೇಳೈಸಿದಾಗ ಒಬ್ಬ ಸಾಮಾನ್ಯ ಅಸಾಮಾನ್ಯನಾಗುತ್ತಾನೆ. ನಾಯಕನಾಗುತ್ತಾನೆ. ಮಹಾ ನಾಯಕನಾಗುತ್ತಾನೆ. ಇಂತಹ ಒಬ್ಬ ಮಹಾನಾಯಕ ನಮ್ಮೊಂದಿಗಿದ್ದಾರೆ. ಅವರೇ ಜಾಗತಿಕ ಬಂಟರ ಸಂಘಗಳ ಒಕ್ಕೂಟವೆಂಬ ಹೊನ್ನಿನ ತೇರನ್ನೇರಿ ಅದನ್ನು ಯಶಸ್ಸಿನ ಶಿಖರಾಗ್ರಕ್ಕೆ ಸಾಗಿಸುತ್ತಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ‘ಐಕಳದ ಮುತ್ತು ಬಂಟರ ಗತ್ತು ಹರೀಶ್ ಶೆಟ್ಟಿ ಎನ್ನುವ ಸೊತ್ತು’. ವಿಶ್ವದಾದ್ಯಂತ ವಿವಿದೆಡೆ ಸ್ಥಾಪಿಸಲ್ಪಟ್ಟ ಸುಮಾರು 150ಕ್ಕೂ ಹೆಚ್ಚು ಬಂಟರ ಸಂಘಗಳು ಒಂದಾಗಿ ಸೇರಿ ನಿರ್ಮಾಣಗೊಂಡ ತುಳುವ ನಾಡಿನ ಹೆಮ್ಮೆಯ ಬಂಟ ಸಮುದಾಯದ ಏಕೈಕ ಕೇಂದ್ರೀಯ ಪ್ರಧಾನ ಸಂಸ್ಥೆ ಅದು ಜಾಗತಿಕ ಬಂಟರ ಸಂಘಗಳ…

Read More

ದುಬೈನ ಶೇಖ್ ಝಯೀದ್ ರಸ್ತೆಯ ಮಿಲೇನಿಯಂ ಪ್ಲಾಝ ಹೋಟೆಲ್ ನ ಸಭಾಂಗಣದಲ್ಲಿ ಯುಎಇಯ ಒಂದು ಸಾವಿರದ ಐದು ನೂರಕ್ಕೂ ಅಧಿಕ ಬಂಟರು ಸೇರಿ ಯುಎಇ ಬಂಟ್ಸ್ ನ 48 ನೇ ವರ್ಷದ ಕೂಡುಕಟ್ಟ್ “ಭಾವೈಕ್ಯ” ಬಂಟರ ಸಮಾಗಮ ಅದ್ದೂರಿಯಾಗಿ ನಡೆಯಿತು. ಯುಎಇ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರ, ಸಲಹಾ ಸಮಿತಿಯ ಸದಸ್ಯರ ಮತ್ತು 2025 ನೇ ಸಾಲಿನ ಸಂಘಟನಾ ಸಮಿತಿಯ ಸರ್ವ ಸದಸ್ಯರ ಕಳೆದ ನಾಲ್ಕು ತಿಂಗಳುಗಳ ಕಠಿಣ ಪರಿಶ್ರಮದ ಫಲವೇ ಅಷ್ಟೊಂದು ಸಂಖ್ಯೆಯ ಬಂಟರು ಸೇರಲು ಹಾಗೂ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು. ಬೆಳಿಗ್ಗೆ ಹತ್ತು ಗಂಟೆಗೆ 48ನೇ ವರ್ಷದ ಕೂಡುಕಟ್ಟ್ ‘ಭಾವೈಕ್ಯ’ ಕಾರ್ಯಕ್ರಮ‌ದ ಉದ್ಘಾಟನೆಯನ್ನು ಸಂಘದ ಪೋಷಕರಾದ ಸರ್ವೋತ್ತಮ ಶೆಟ್ಟಿ, ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಉಪಾಧ್ಯಕ್ಷರಾದ ಪ್ರೇಮ್ ನಾಥ್ ಶೆಟ್ಟಿ, ಪ್ರದಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಮತ್ತು ಸಂಘಟನಾ ಸಮಿತಿಯ ಮಹಿಳಾ ಸದಸ್ಯೆಯರು ದೀಪ ಬೆಳಗಿಸಿ ಚಾಲನೆ ನೀಡಿದರು. ಸಲಹಾ ಸಮಿತಿಯ ಸದಸ್ಯರಾದ…

Read More

ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ ಭವನದ ಆವರಣದಲ್ಲಿ “ಪರ್ವ – 2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಡ್ ಫೆಸ್ಟಿವಲ್ ನಡೆಯಲಿದೆ ಎಂದು ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಡಿಸೆಂಬರ್ 20 ರಂದು ಶನಿವಾರ ಸಂಜೆ 7 ಕ್ಕೆ ಪೆರ್ಮೆದ ಕಲಾವಿದೆರ್ ಚೇಳಾರ್ ತಂಡದಿಂದ “ಎನ್ನಿಲೆಕ್ಕ ಇಜ್ಜೆರ್” ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಡಿಸೆಂಬರ್ 21 ರಂದು ಸಂಜೆ 6 ಗಂಟೆಗೆ ವಿಶ್ವಾಸ್ ಮ್ಯೂಸಿಕಲ್ ಮಂಗಳೂರು ತಂಡದಿಂದ “ಸಂಗೀತ ರಸ ಮಂಜರಿ” ಬಳಿಕ 7 ಗಂಟೆಗೆ ಉಮೇಶ್ ಮಿಜಾರ್ ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ಈ ವರ್ಷದ ಸೂಪರ್ ಹಿಟ್ ಹಾಸ್ಯ ನಾಟಕ “ವೈರಲ್ ವೈಶಾಲಿ” ಪ್ರದರ್ಶನ ಗೊಳ್ಳಲಿದೆ ಎಂದರು. ಡಿ. 20 ಮತ್ತು 21 ರಂದು ಸಂಜೆ ನಾಲ್ಕು ಗಂಟೆಯಿಂದ ರಾತ್ರಿ…

Read More

ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಸೆವೆನ್ತ್ ಹೆವೆನ್ ಕೇಕ್ ಶಾಪ್ ನ 23ನೇ ಶಾಖೆ ಡಿಸೆಂಬರ್ 12ರಂದು ಕುಂದಾಪುರದ ಪಾರಿಜಾತ ಹೋಟೆಲ್ ಸಮೀಪವಿರುವ ಶಂಕರ್ ಟವರ್ಸ್ ನೆಲಮಹಡಿಯಲ್ಲಿ ಶುಭಾರಂಭಗೊಂಡಿತು. ಮಾಲಕ ಶಮಿತ್ ಶೆಟ್ಟಿ ಕೆಮ್ತೂರು ಅವರ ತಾಯಿ ದೇವಕಿ ಶೆಟ್ಟಿ ನೂತನ ಶಾಖೆಯನ್ನು ಉದ್ಘಾಟಿಸಿದರು. ಕಟ್ಟಡದ ಮಾಲಕ ಉದ್ಯಮಿ ಸುರೇಶ್ ಭಂಡಾರ್ಕರ್ ರವರು ದೀಪ ಬೆಳಗಿದರು. ಅಶೋಕ್ ಶೆಟ್ಟಿ ಕೆಮ್ತೂರು, ರವೀಂದ್ರ ಶೆಟ್ಟಿ ಮೂಲ್ಕಿ, ರತ್ನಾಕರ ಶೆಟ್ಟಿ ಕಟ್ಟಂಗೇರಿ, ಅಶೋಕ್ ಶೆಟ್ಟಿ ಪೂನಾ, ಜೀವನ್ ಬೆಂಗಳೂರು, ಕುಸುಮ ಶೆಟ್ಟಿ ಮೂಲ್ಕಿ, ವನಿತಾ ಶಿರ್ವ, ಮಾಲಕರಾದ ಶಮಿತ್ ಶೆಟ್ಟಿ, ರಶ್ಮಿ ಶೆಟ್ಟಿ, ಸುಕೇಶ್ ಶೆಟ್ಟಿ, ಸರಿತಾ ಶೆಟ್ಟಿ ಉಪಸ್ಥಿತರಿದ್ದರು. ಶುದ್ಧ ಸಸ್ಯಹಾರಿ ಉತ್ಪನ್ನಗಳನ್ನು ತಯಾರಿಸುವ ಈ ಬೇಕರಿಯ ಶಾಖೆಗಳು ದೇಶದ ವಿವಿಧ ನಗರಗಳಲ್ಲಿ ಕಾರ್ಯಾಚರಿಸುತ್ತಿದೆ. ಗ್ರಾಹಕರಿಗೆ ಸ್ಥಳದಲ್ಲಿಯೇ ಬೇಕರಿ ಉತ್ಪನ್ನಗಳನ್ನು ತಯಾರಿಸಿ ಕೊಡುವುದು ಇಲ್ಲಿನ ವಿಶೇಷತೆಯಾಗಿದೆ. ಇಲ್ಲಿ ಶುಚಿ ರುಚಿಯಾದ ವೈವಿಧ್ಯಮಯ ಕೇಕ್ ಐಟಂಗಳು ಗ್ರಾಹಕರ ಕೈಗೆಟಗುವ ಬೆಲೆಯಲ್ಲಿ ದೊರೆಯಲಿದೆ. ಅತ್ಯುತ್ತಮ ಆತಿಥ್ಯ, ರುಚಿಕರ…

Read More

ಇನೋಳಿ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನವು ಅತೀ ಪುರಾತನ ದೇವಾಲಯವಾಗಿದ್ದು, ಪ್ರಕೃತಿಯ ಸೌಂದರ್ಯಮಯವಾದ ದೇವೆಂದಬೆಟ್ಟ ಮೇಲೆ ಶ್ರೀ ಸೋಮನಾಥೇಶ್ವರನ ದೇವಾಲಯವಿದೆ. ನೇತ್ರಾವತಿ ನದಿಯು ದೇವಾಲಯವಿರುವ ಪ್ರದೇಶದ ಮೂರು ಸುತ್ತಾ ಬಳುಕುತ್ತಾ ಹರಿದು ಅರಬ್ಬಿ ಸಮುದ್ರ ಸೇರುವ ದೃಶ್ಯ ಮೈನವಿರೇಳಿಸುತ್ತದೆ. ಹಸಿರು ಪರ್ವತಗಳ ನಡುವೆ ಹರಿಯುವ ನದಿ, ಸೂರ್ಯಾಸ್ತ ಅಥವಾ ಸೂರ್ಯೋದಯದ ವೀಕ್ಷಣೆಯ ದೃಶ್ಯ ನಮ್ಮನ್ನು ಸಮ್ಮೋಹನಗೊಳಿಸುತ್ತದೆ. ಇನೋಳಿ ಅಥವಾ ಇನವಳ್ಳಿ ಎಂಬ ಪುಟ್ಟ ಹಳ್ಳಿ ದಕ್ಷಿಣ ಕನ್ನಡ ಜಿಲ್ಲೆಯ ಪಾವೂರು ಗ್ರಾಮದ ನೇತ್ರಾವತಿ ನದಿಯ ದಂಡೆಯಲ್ಲಿದೆ. ಈ ದೇವಸ್ಥಾನಕ್ಕೆ ಮಂಗಳೂರಿನಿಂದ ತೊಕ್ಕೊಟ್ಟು, ದೇರಳಕಟ್ಟೆ ಕೋಣಾಜೆ ವಿಶ್ವವಿದ್ಯಾಲಯ ಮಾರ್ಗವಾಗಿ ಹೋಗುವುದಾದರೆ ೨೮ಕಿ.ಮೀ ದೂರವಿದೆ ಹಾಗೂ ಬಸ್ ವ್ಯವಸ್ಥೆ ಕೂಡಾ ಇದೆ. ಇತ್ತೀಚೆಗೆ ರಾ. ಹೆ. ೨೭೫ರ ಅಡ್ಯಾರಿನಲ್ಲಿ ನೇತ್ರಾವತಿ ನದಿಗೆ ಕಟ್ಟಲಾದ ಸೇತುವೆ ಹರೇಕಳ ಪಾವೂರು ಎಂಬಲ್ಲಿ ಸೇರುತ್ತದೆ. ಈ ಮೂಲಕ ಮಂಗಳೂರಿನಿಂದ ಬರುವುದಾದರೆ ಕೇವಲ ೧೮ಕಿ.ಮೀ ದೂರದಲ್ಲಿದೆ. ಅಲ್ಲದೇ ಇದೇ ಹೆದ್ದಾರಿಯಲ್ಲಿ ಸಿಗುವ ಫರಂಗಿಪೇಟೆ, ಅರ್ಕುಲ ಎಂಬಲ್ಲಿ ದೋಣಿ ಮೂಲಕ ನದಿ…

Read More