ಗಣಿತನಗರ: ಇದ್ದ ಬದುಕನ್ನು ಬಿದ್ದು ಹೋಗದಂತೆ, ಸಮಸ್ಯೆಯನ್ನು ಒದ್ದು, ಎಲ್ಲವನ್ನೂ ಗೆದ್ದು ಬರಬೇಕು. ಅದೇ ಜೀವನ, ಅದೇ ಸಂಜೀವನ. ವ್ಯಕ್ತಿ ದೃಷ್ಟಿಕೋನದದಲ್ಲಿ ಬದಲಾವಣೆ ತಂದುಕೊಂಡು ಅವಮಾನವನ್ನು ಸವಾಲಾಗಿ ಸ್ವೀಕರಿಸಿ ಸಕರಾತ್ಮಕ ಯೋಚನೆಯ ಹಠ ನಮ್ಮದಾದಾಗ ಗೆಲುವು ಚಟವಾಗಲು ಸಾಧ್ಯ. ಎಂದು ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಶ್ರೀ ಕೋಟ ನರೇಂದ್ರ ಕುಮಾರ್ ರವರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-42ರಲ್ಲಿ ‘ದೀಪ ಹಚ್ಚುವ ಮೊದಲು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ನಾವೆಷ್ಟೂ ಎಷ್ಟು ಬಾಗುತ್ತೇವೋ ಅಷ್ಟು ಜಾಣರಾಗುತ್ತೇವೆ. ಹಿರಿಯರನ್ನು, ಗುರುಗಳನ್ನು ಗೌರವಿಸುವ ಗುಣ ನಮ್ಮದಾಗಲಿ. ಉತ್ತಮ ಕೇಳುಗರಾದರೆ ಅತ್ಯುತ್ತಮ ಮಾತುಗಾರರಾಗುತ್ತೇವೆ. ನಾವು ಸಂಬಂಧಗಳನ್ನು ಬೆಸೆಯುವ ಸೂಜಿಗಳಾಗ ಬೇಕು ಎಂದರು. ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಶ್ರೀ ಅನಿಲ್ ಕುಮಾರ್ ಜೈನ್, ಸಿ.ಇ.ಒ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ ಕೊಡವೂರ್, ಪಿ.ಆರ್.ಒ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ ಉಪಸ್ಥಿತರಿದ್ದರು. ಪ್ರಥಮ ಪಿಯುಸಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಧನ್ಯಾ ಜಿ .ಗೌಡ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
















































































































