Author: admin

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಅನುಗ್ರಹ ಸಂದೇಶ ನೀಡುತ್ತಾ, “ಭಗವಂತನನ್ನು ನೆನೆಯುವುದೇ ಜಪ. ಜಪ ಆಧ್ಯಾತ್ಮದ ಜೀವಾಳ. ದತ್ತ ಎಂದರೆ ಕೊಡಲ್ಪಟ್ಟದ್ದು ಎಂದರ್ಥ. ಭಗವಾನ್ ದತ್ತಾತ್ರೇಯರು ವಿಶ್ವವನ್ನೇ ವಿದ್ಯಾಲಯವಾಗಿಸಿದವರು. ಭಗವಂತನ ಅವತಾರ ಸಮರಸ ತತ್ವದ ಅವತಾರ. ದತ್ತಾವತಾರ ಜ್ಞಾನದ ಅವತಾರ. ಅಂತರಂಗದ ಅಂಧಕಾರ ದೂರವಾಗಲು ಜ್ಞಾನದ ಬೆಳಕು ಅವಶ್ಯ. ಧ್ಯಾನ, ಜ್ಞಾನ ಮತ್ತು ಮಾನವನ್ನು ಗೌರವಿಸುವುದು ಶ್ರೇಷ್ಠತೆ. ಮಮಕಾರ ಮತ್ತು ಅಹಂಕಾರವನ್ನು ದೂರಗೊಳಿಸಲು ಜ್ಞಾನ ಸಹಕಾರಿ. ನಮ್ಮೊಳಗಿನ ಅಂತರಂಗದ ಕತ್ತಲೆ ದೂರಮಾಡಲು ದೀಪಾವಳಿಯ ಆಚರಣೆ” ಎಂದರು. ​ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆದ ಶ್ರೀ ದತ್ತ ಜಯಂತಿ ಮಹೋತ್ಸವ, ಶ್ರೀ ದತ್ತ ಮಹಾಯಾಗ ಸಪ್ತಾಹ, ಶ್ರೀ ದತ್ತ ಕೋಟಿ ನಾಮಜಪಯಜ್ಞದ ಸಮಾಪ್ತಿ ಹಾಗೂ ಶ್ರೀ ಗುರುದೇವದತ್ತ ಲಕ್ಷದೀಪಾವಳಿಯ ಸಮಾರಂಭದಲ್ಲಿ ದಿವ್ಯ ಉಪಸ್ಥಿತಿ ನೀಡಿ ಆಶೀರ್ವಚನವಿತ್ತ ಪೂಜ್ಯ ಶ್ರೀಗಳವರು, “ಸಮಾಜದ ಹಿತ ಕಾಪಾಡುವವರು ಸಂತರು. ಸಂತ ಮತ್ತು ಸಮಾಜ ಬದುಕಿನ ಎರಡು ಮುಖಗಳಿದ್ದಂತೆ. ವಿಶ್ವವನ್ನೇ ತನ್ನದೆನ್ನುವವನು ಗುರು.…

Read More

ಕ್ಲಾಟ್ ಒಕ್ಕೂಟವು ಡಿಸೆಂಬರ್ 7ರಂದು ನಡೆಸಿದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಕ್ಲಾಟ್) 2025 ರಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆಳ್ವಾಸ್‌ನ ದರ್ಶನ್ ಹೆಚ್‌.ಜೆ, ಮಧು, ರಕ್ಷಾ ಕೆ, ರಾಜ್‌ದೀಪ್ ಎಸ್ ನಾಯಕ್, ಕುಂದನಿಕ ಗೌಡ, ಭೂಮಿ, ಗೌರಿ ಎಸ್ ಪಾಟೀಲ್, ಅರ್ವಿನ್, ಅನನ್ಯ ಡಿ, ಅನ್ನಾ ಲಹರಿ, ಮಿಥಾಲಿ ನಾಯ್ಕ ಕ್ಲಾಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಚಾರ‍್ಯ ಮಹಮ್ಮದ್ ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಮ್‌.ಡಿ ಅಭಿನಂದಿಸಿದ್ದಾರೆ.

Read More

ಶಿಕ್ಷಣ ಕ್ಷೇತ್ರದ ಮಹೋನ್ನತ ಗುರಿಯೊಂದಿಗೆ ಏಳು ಜನ ಅತ್ಯಂತ ಅನುಭವಿ ಉಪನ್ಯಾಸಕರುಗಳೇ ಸೇರಿ ಸ್ಥಾಪಿಸಿದ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ 2022ರಲ್ಲಿ ತನ್ನ ಶಿಕ್ಷಣ ಸೇವೆಯನ್ನು ಉಡುಪಿಗೂ ವಿಸ್ತರಿಸುವ ಯೋಜನೆಯೊಂದಿಗೆ ಕಲ್ಯಾಣಪುರದ ತ್ರಿಶಾ ಪ. ಪೂ. ಕಾಲೇಜಿನ ಶೈಕ್ಷಣಿಕ ಸಹಭಾಗಿತ್ವ ವಹಿಸಿಕೊಂಡಿತು. ಈಗಾಗಲೇ ಪಿ. ಯು ಫಲಿತಾಂಶದಲ್ಲಿ ಆರಂಭಿಕ ವರ್ಷದಲ್ಲೇ ರಾಜ್ಯದ ಗಮನ ಸೆಳೆದ ಕ್ರಿಯೇಟಿವ್ ಸಂಸ್ಥೆ ಉಡುಪಿಯ ಶಾಖೆಯಲ್ಲೂ ಆ ಯಶಸ್ಸನ್ನು ಮುಂದುವರೆಸಿದೆ. ತನ್ನ ಪ್ರಥಮ ವರ್ಷದ ಫಲಿತಾಂಶದಲ್ಲೇ 100% ಗಳಿಸುವುದರ ಜೊತೆಗೆ ಪಿ. ಯು. ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ರ್ಯಾಂಕ್ ಗಳಿಸುವ ಮೂಲಕ ಸಂಸ್ಥೆ ಕೀರ್ತಿ ಗಳಿಸಿದೆ. 94 ಮಕ್ಕಳೊಂದಿಗೆ ಪ್ರಾರಂಭವಾದ ವಿದ್ಯಾಸಂಸ್ಥೆಯಲ್ಲಿ ಇಂದು 400ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಕೇವಲ ಅಂಕ ಗಳಿಕೆಯ ಹಸಿವನ್ನು ಮಾತ್ರ ಬೆಳೆಸದೆ ಜೀವನ ಮೌಲ್ಯಗಳು, ನೈತಿಕತೆ, ಸದ್ವಿಚಾರಗಳನ್ನು ಪ್ರತಿನಿತ್ಯ ಬೋಧಿಸುತ್ತಿರುವುದು ಸಂಸ್ಥೆಯು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಉಡುಪಿಯಲ್ಲಿ ಕ್ರಿಯೇಟಿವ್ ಸಂಸ್ಥೆಯ ಯಶಸ್ಸಿನ ಪಯಣ · ಸಂಸ್ಥೆ ಪ್ರಾರಂಭದ ವರ್ಷದಲ್ಲೇ…

Read More

ಬ್ರಹ್ಮಾವರ: ಅಂತಿಮ ಪರೀಕ್ಷೆಯ ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳ ಮನೋಸ್ಥೈರ್ಯವನ್ನು ಹೆಚ್ಚಿಸುವ ಸಲುವಾಗಿ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ ಡಿ. 18 ರಂದು ಪರೀಕ್ಷಾಪೂರ್ವ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ವಾಗ್ಮಿ, ವ್ಯಕ್ತಿತ್ವ, ಕಲಿಕಾ, ಪ್ರೇರಣಾ ಗುರು ಮೈಸೂರಿನ ಶ್ರೀ ಚೇತನ್ ರಾಮ್ ಆರ್. ಎ. ಆಗಮಿಸಿದ್ದರು. ಅವರು ವಿದ್ಯಾರ್ಥಿಗಳಿಗೆ ವೈಯಕ್ತಿಕ ಅಧ್ಯಯನ ಸಮಸ್ಯೆ, ಹೇಗೆ ಓದಬೇಕು, ಆಹಾರ ಮತ್ತು ಆರೋಗ್ಯ ನಿರ್ವಹಣೆ, ಮೆದುಳಿನ ನಿರ್ವಹಣ ತಂತ್ರ, ಪಂಚೇಂದ್ರಿಯಗಳ ನೆರವಿನಿಂದ ವಿಷಯ ಸಂಗ್ರಹಣೆ, ಸಕಾರಾತ್ಮಕ ಚಿಂತನೆ, ಜ್ಞಾನ ಕೌಶಲ ಮನೋಭಾವದ ಕುರಿತು ಮಾಹಿತಿ ನೀಡಿ ಪಠ್ಯ ಪುಸ್ತಕವೇ ತಾಯಿ ಅದನ್ನು ಕೇಳಿ ತಿಳಿದು ನಿರಂತರ ಓದುವುದೇ ಸಾಧನೆಯ ಮಂತ್ರವೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಮಾತನಾಡಿ ಸರಿಯಾದ ಸಮಯದಲ್ಲಿ ಸೂಕ್ತ ವ್ಯಕ್ತಿಯಿಂದ ಮಕ್ಕಳಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಅದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದರು. ಕಾರ್ಯಾಗಾರದಲ್ಲಿ ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್, ಜಿ ಎಮ್ ಗ್ಲೋಬಲ್ ಸ್ಕೂಲ್‍ನ ಪ್ರಾಂಶುಪಾಲೆ ದೀಪ್ತಿ ಶೆಟ್ಟಿ,…

Read More

ಸರ್ವಶಕ್ತ ಭಗವಂತನ ಆಶೀರ್ವಾದದಿಂದ ಈ ಕ್ಷೇತ್ರದ ಜೊತೆಯಲ್ಲಿ ಋಣಾನುಬಂಧವಿದೆ. ಇಲ್ಲಿ ಸಣ್ಣ ಗುಡಿಯಲ್ಲಿ ಪೂಜೆ ಮಾಡುತ್ತಿದ್ದ ಸಂದರ್ಭದ ನಂತರ ಇಲ್ಲಿ ದೇವಸ್ಥಾನದ ಶಂಕುಸ್ಥಾಪನೆಯನ್ನು ಕೂಡ ಮಾಡುವ ಯೋಗ ನನಗೆ ಸಿಕ್ಕಿದೆ. ನಂತರ ನಡೆದ ಜೀರ್ಣೋದ್ದಾರ ಮತ್ತು ಬ್ರಹ್ಮ ಕಲಶೋತ್ಸವದ ಗೌರವಾಧ್ಯಕ್ಷನಾಗಿ ನನ್ನಿಂದಾಗುವ ದೇವತಾ ಕಾರ್ಯವನ್ನು ಮಾಡಿ ಸಂತೃಪ್ತಿಯನ್ನು ಪಡೆದಿದ್ದೇನೆ. ಕ್ಷೇತ್ರದ ವಿಶ್ವಸ್ಥ ಮಂಡಳಿಯ ಗೌರವಾಧ್ಯಕ್ಷನಾಗಬೇಕೆಂಬ ನಿಮ್ಮೆಲ್ಲರ ಪ್ರೀತಿಯ ಮಾತಿಗೆ ಒಪ್ಪಿ ನನ್ನಿಂದಾಗುವ ಸೇವೆಯನ್ನು ನೀಡಲು ಸದಾ ಸಿದ್ದನಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ಚಿರಋಣಿ. ಹಾಗೆಯೇ ಜನವರಿಯಲ್ಲಿ ನಡೆಯುವ ವಾರ್ಷಿಕೋತ್ಸವ ಮಹಾಪೂಜೆಯ ಆಮಂತ್ರಣ ಪತ್ರಿಕೆ ಬಿಡಗಡೆ ಆಗಿದೆ. ಪುಣೆಯ ಸರ್ವ ತುಳು ಕನ್ನಡಗಿರ ಮತ್ತು ಇತರೆ ಬಾಷಿಕರ ಭಕ್ತಿಯ ಪುಣ್ಯ ಕ್ಷೇತ್ರವಾಗಿದೆ ಇದು. ಕಾಲಾನುಸಾರ ಕ್ಷೇತ್ರದ ಜೀರ್ಣೋದ್ದಾರದ ಕಾರ್ಯಗಳು ಸಂಕಲ್ಪದಂತೆ ಆಗಿ ದೇವಸ್ಥಾನ ಕಂಗೊಲಿಸುತ್ತಿದೆ. ಯಾವುದೇ ಆಡಂಬರ ಇಲ್ಲದೆ ಎಲ್ಲರ ಸೇವೆ ನಿಸ್ವಾರ್ಥವಾಗಿ ನಡೆದಾಗ ಸ್ವಾಮಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಮುಂದಿನ ವಾರ್ಷಿಕೋತ್ಸವಕ್ಕೆ ಬಹಳಷ್ಟು ತಯಾರಿ ನಡೆಯಲಿಕ್ಕಿದೆ. ಕ್ಷೇತ್ರದ ಧಾರ್ಮಿಕ, ಸಾಂಸ್ಕ್ರತಿಕ ಮತ್ತು ಎಲ್ಲಾ ಸೇವಾ…

Read More

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಬೆಳ್ತಂಗಡಿ ತಾಲೂಕು ನಾರಾವಿಯ ಬಡ ರೋಗಿಯ ಶಸ್ತ್ರಚಿಕಿತ್ಸೆಗೆ 25,000 ರೂಪಾಯಿ ಆರ್ಥಿಕ ನೆರವನ್ನು ಚೆಕ್ ಮುಖಾಂತರ ನೀಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕಾರ್ಯದರ್ಶಿ ಚೇತನ್ ನಾಯಕ್, ಹಿರಿಯ ದಾನಿಗಳಾದ ತುಕಾರಾಮ ನಾಯಕ್, ಡಾ. ಭರತೇಶ್ ಆದಿರಾಜ್, ಮಾಜಿ ಸಹಾಯಕ ಗವರ್ನರ್ ಗಳಾದ ಹರಿಪ್ರಕಾಶ್ ಶೆಟ್ಟಿ, ಪ್ರಕಾಶ್ ಆಚಾರ್ಯ, ಶೈಲೇಂದ್ರ ರಾವ್ ಹಾಗೂ ರೋಟರಿಯ ಸದಸ್ಯರು ಉಪಸ್ಥಿತರಿದ್ದರು.

Read More

ಸುಜ್ಞಾನ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕಾರ್ಯಕ್ರಮದ ಭಾಗವಾಗಿ ಡಿಸೆಂಬರ್ 16 ರಂದು ವಂಡಾರಿನ ‘ಕೃಷ್ಣ ಪ್ರಸಾದ್ ಕ್ಯಾಶ್ಯೂಸ್ ಪ್ರೈವೇಟ್ ಲಿಮಿಟೆಡ್’ ಕೈಗಾರಿಕಾ ಘಟಕಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳಿಗೆ ಕೈಗಾರಿಕಾ ಕಾರ್ಯಾಚರಣೆಗಳ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ನೀಡುವ ಉದ್ದೇಶದಿಂದ ಈ ಭೇಟಿಯನ್ನು ಆಯೋಜಿಸಲಾಗಿತ್ತು. ಭೇಟಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗೋಡಂಬಿ ಸಂಸ್ಕರಣೆಯ ಸಂಪೂರ್ಣ ಹಂತಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಯಿತು. ಕಾರ್ಖಾನೆಯ ಅಧಿಕಾರಿಗಳು ಅಲ್ಲಿನ ವಿವಿಧ ಯಂತ್ರೋಪಕರಣಗಳ ಕಾರ್ಯವೈಖರಿ, ಗುಣಮಟ್ಟ ನಿಯಂತ್ರಣ ವ್ಯವಸ್ಥೆ ಮತ್ತು ಒಟ್ಟಾರೆ ಉತ್ಪಾದನಾ ಪ್ರಕ್ರಿಯೆಯ ಬಗ್ಗೆ ವಿವರಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಸಂಪತ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವೃತ್ತಿಜೀವನದ ಅವಕಾಶಗಳು, ವೃತ್ತಿಪರ ಬೆಳವಣಿಗೆ ಹಾಗೂ ಜೀವನದಲ್ಲಿ ಶಿಸ್ತು ಮತ್ತು ಸಮರ್ಪಣಾ ಭಾವದ ಮಹತ್ವದ ಬಗ್ಗೆ ಅಮೂಲ್ಯವಾದ ಸಲಹೆಗಳನ್ನು ನೀಡಿ ಪ್ರೇರೇಪಿಸಿದರು. ಈ ಸಂದರ್ಭದಲ್ಲಿ ಸುಜ್ಞಾನ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಮತ್ ಶೆಟ್ಟಿ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು.

Read More

ಯುವಕರು ಸೇನೆಗೆ ಸೇರಿ ಇತರರಿಗೆ ಸ್ಫೂರ್ತಿಯಾಗಬೇಕು, ದೇಶ ಸೇವೆ ಮಾಡುವುದು ಹೆಮ್ಮೆಯ ಸಂಗತಿ. ಅಂತಹ ಸೈನಿಕರನ್ನು ಜನ ಅತ್ಯಂತ ಗೌರವದಿಂದ ಕಾಣುತ್ತಾರೆ ಎಂದು ನಿವೃತ್ತ ಯೋಧ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು. ಅವರು ರೋಟರಿ ಬಾಲ ಭವನದಲ್ಲಿ ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ಬಿನ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿಯವರು ಎಲ್ಲರನ್ನೂ ಸ್ವಾಗತಿಸಿ, ಮಾತನಾಡುತ್ತಾ ಯೋಧ ಪ್ರವೀಣ್ ಕುಮಾರ್ ಶೆಟ್ಟಿ ನಮ್ಮೂರಿನವರೆಂಬುದು ಹೇಳಲು ನಮಗೆ ಹೆಮ್ಮೆ. ಅವರು ನಮ್ಮ ಯುವಕರಿಗೆ ಸ್ಫೂರ್ತಿಯಾಗಲಿ ಎಂದರು. ರೋಟರಿಯ ಹಿರಿಯ ಸದಸ್ಯರೂ ದಾನಿಗಳೂ ಆದ ತುಕಾರಾಮ ನಾಯಕ್, ಸುವರ್ಣ ತುಕಾರಾಮ್ ನಾಯಕ್, ಡಾ. ಭರತೇಶ್ ಆಧಿರಾಜ್ ವೀರ ಯೋಧ ಪ್ರವೀಣ್ ಕುಮಾರ್ ಶೆಟ್ಟಿಯವರನ್ನು ಸನ್ಮಾನಿಸಿದರು. ಪ್ರವೀಣ್ ಕುಮಾರ್ ಶೆಟ್ಟಿಯವರ ಧರ್ಮಪತ್ನಿ, ಹೆತ್ತವರು ಹಾಗೂ ರೋಟರಿ ಕ್ಲಬ್ಬಿನ ಸದಸ್ಯರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ. ಸನ್ಮಾನ ಪತ್ರ ವಾಚಿಸಿದರು.…

Read More

ಮೂಡುಬಿದಿರೆ ಜನಸಾಮಾನ್ಯರ ಆರೋಗ್ಯ ಕಾಳಜಿಯನ್ನು ಮನಗಂಡು ಸೇವೆ ಸಲ್ಲಿಸುತ್ತಿರುವ ಆಳ್ವಾಸ್ ಆರೋಗ್ಯ ಕೇಂದ್ರವು ಮತ್ತೊಂದು ಮಹತ್ವದ ಹೆಜ್ಜೆಯಾಗಿ ಹೃದಯ ಚಿಕಿತ್ಸಾ ಕೇಂದ್ರ (ಕಾರ್ಡಿಯಾಕ್ ಸೆಂಟರ್)ವನ್ನು ಆರಂಭಿಸಿರುವುದು ಅತ್ಯಂತ ಶ್ಲಾಘನೀಯ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್ ವಿನಯ್ ಹೆಗ್ಡೆ ನುಡಿದರು. ಅವರು ಬುಧವಾರ ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ನೂತನವಾಗಿ ಪ್ರಾರಂಭಗೊಂಡ ಆಳ್ವಾಸ್ ಕಾರ್ಡಿಯಾಕ್ ಸೆಂಟರ್ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಮೂಡುಬಿದಿರೆ, ಮುಲ್ಕಿ, ಕಾರ್ಕಳ ಹಾಗೂ ಬೆಳ್ತಂಗಡಿ ಪ್ರದೇಶಗಳಲ್ಲಿಯೇ ಮೊದಲ ಬಾರಿಗೆ ಸ್ಥಾಪನೆಯಾದ ಆಳ್ವಾಸ್ ಕಾರ್ಡಿಯಾಕ್ ಸೆಂಟರ್ ಈ ಭಾಗದ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದರು. ಹೃದಯ ಸಂಬಂಧಿತ ರೋಗಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದ್ದು, ಸಮಯೋಚಿತ ಚಿಕಿತ್ಸೆ ದೊರಕದಿದ್ದರೆ ಅವು ಜೀವಕ್ಕೆ ಅಪಾಯಕಾರಿಯಾಗುತ್ತವೆ. ಇಂತಹ ಸಂದರ್ಭದಲ್ಲಿ ಮೂಡುಬಿದಿರೆಯಲ್ಲೇ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೃದಯ ಚಿಕಿತ್ಸಾ ಕೇಂದ್ರ ಸ್ಥಾಪನೆಯಾಗಿರುವುದು ಈ ಪ್ರದೇಶದ ಜನರಿಗೆ ದೊಡ್ಡ ವರದಾನವಾಗಿದೆ. ಇದರಿಂದಾಗಿ ಈಗ ಚಿಕಿತ್ಸೆಗಾಗಿ ದೂರದ ನಗರಗಳಿಗೆ ತೆರಳುವ ಅನಿವಾರ್ಯತೆ…

Read More

ಯುಎಇ ಬಂಟ್ಸ್ ನ 48 ನೇ ವರ್ಷದ ಕೂಡುಕಟ್ಟ್ ‘ಭಾವೈಕ್ಯ’ ಬಂಟರ ಸಮಾಗಮ ಕಾರ್ಯಕ್ರಮದಲ್ಲಿ ಯುಎಇ ಬಂಟ್ಸ್ ಗಾಗಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಂಟರಿಗೆ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರ ಪರಿಕಲ್ಪನೆಯ ಬಂಟ ಬ್ರಹ್ಮ, ಬಂಟ ಕಲಾ ಮಾಣಿಕ್ಯ ಮತ್ತು ಬಂಟ ಸೇವಾ ರತ್ನ ಪ್ರಶಸ್ತಿಯನ್ನು ಐದು ಮಂದಿ ಸಾಧಕರಿಗೆ ನೀಡಿ ಗೌರವಿಸಲಾಯಿತು. ಈ ಮರಳು ಭೂಮಿಯಲ್ಲಿ ಕಳೆದ ನಲವತ್ತ ನಾಲ್ಕು ವರ್ಷಗಳಿಂದ ಯುಎಇ ಬಂಟ್ಸ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದ ಸರ್ವೋತ್ತಮ ಶೆಟ್ಟಿ ದಂಪತಿಗಳಿಗೆ “ಬಂಟ ಬ್ರಹ್ಮ” ಪ್ರಶಸ್ತಿ ನೀಡಿ ಗೌರವಿಸಲಾಯಿತು.”ಬಂಟ ಕಲಾ ಮಾಣಿಕ್ಯ” ಪ್ರಶಸ್ತಿಯನ್ನು ಮರಳು ಭೂಮಿಯಲ್ಲಿ ಯಕ್ಷಗಾನವನ್ನು ಪೋಷಿಸಿಕೊಂಡು ಬರುತ್ತಿರುವ ದಿನೇಶ್ ಶೆಟ್ಟಿ ಕೊಟ್ಟಿಂಜ ದಂಪತಿ ಮತ್ತು ನಾಟಕ ರಂಗದ ನಿರ್ದೇಶಕ ವಿಶ್ವನಾಥ ಶೆಟ್ಟಿ ದಂಪತಿಗಳಿಗೆ ನೀಡಿ ಗೌರವಿಸಲಾಯಿತು.”ಬಂಟ ಸೇವಾ ರತ್ನ” ಪ್ರಶಸ್ತಿಯನ್ನು ಬಾಲಕೃಷ್ಣ ಶೆಟ್ಟಿ ಮಾಡೂರು ಗುತ್ತು ದಂಪತಿ ಮತ್ತು ವಸಂತ ಶೆಟ್ಟಿಯವರಿಗೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಅಧ್ಯಕ್ಷರಾದ ಪ್ರವೀಣ್…

Read More