Author: admin
ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ನವ್ಯಾ ಶೆಟ್ಟಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕುಂದಾಪುರ ಮತ್ತು ಸೈಂಟ್ ಜೋಸೆಫ್ ಶಾಲೆ ಆಯೋಜಿಸಿದ ತಾಲೂಕು ಮಟ್ಟದ ತ್ರೋ ಬಾಲ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇವಳು ಪ್ರಭಾಕರ ಶೆಟ್ಟಿ ಮತ್ತು ಪ್ರೇಮ ದಂಪತಿಗಳ ಮಗಳಾಗಿದ್ದು ಪ್ರಸ್ತುತ 8ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇವಳನ್ನು ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ| ರಮೇಶ್ ಶೆಟ್ಟಿ, ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿನಿಗೆ ಪ್ರಶಂಸಿಸಿ ಶುಭ ಹಾರೈಸಿದ್ದಾರೆ. ಶಾಲೆಯ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕರಾದ ಸತೀಶ್, ಸೂರ್ಯ ಹಾಗೂ ಜಯಲತಾ ವಿದ್ಯಾರ್ಥಿನಿಗೆ ಮಾರ್ಗದರ್ಶನ ಮಾಡಿರುತ್ತಾರೆ.
ಮೂಡುಬಿದಿರೆ: ಯಾವುದೇ ವಿಷಯದಲ್ಲಿ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಯುಪಿಎಸ್ಸಿ ಹಾಗೂ ಕೆಪಿಎಸ್ಸಿಯ- ಪೂರ್ವಭಾವಿ (ಪ್ರೀಲಿಮ್ಸ್) ಹಾಗೂ ಮುಖ್ಯ ಪರೀಕ್ಷೆಗಳಿಗೆ (ಮೈನ್ಸ್) 9 ತಿಂಗಳ ನಿರಂತರ ಸನಿವಾಸ ತರಬೇತಿಯನ್ನು ನೀಡಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮುಂದಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ನೊಂದಿಗೆ ಈಗಾಗಲೆ ಒಡಂಬಡಿಕೆ ಮಾಡಿಕೊಂಡಿದ್ದು, ಎಲ್ಲರಿಗೂ ಕೈಗೆಟಕುವ ರೀತಿಯಲ್ಲಿ ಉತ್ತಮ ಗುಣಮಟ್ಟದ, ಅತ್ಯುತ್ತಮ ತರಬೇತಿಯನ್ನು ನೀಡಲು ಉದ್ದೇಶಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ತಿಳಿಸಿದರು. ಈ ತರಬೇತಿಯು ಎಸ್ಡಿಎ, ಎಫ್ಡಿಎ, ಬ್ಯಾಂಕಿಂಗ್, ಪೋಲೀಸ್ ಇಲಾಖೆ, ಪಿಡಿಒ, ಕಂದಾಯ ಇಲಾಖೆಗಳ ಪರೀಕ್ಷೆಗಳು ಸೇರಿದಂತೆ ಇನ್ನಿತರ ಎಲ್ಲಾ ಸರ್ಕಾರಿ ಉದ್ಯೋಗಗಳ ಆಯ್ಕೆ ಪ್ರಕ್ರಿಯೆಯ ಪರೀಕ್ಷೆಗಳನ್ನು ಎದುರಿಸಲು ಅನುವುಮಾಡಿಕೊಡಲಿದೆ. ಕಾಲ ಕಾಲಕ್ಕೆ ಬರುವ ಸರ್ಕಾರಿ ಹಾಗೂ ಅರೆ ಸರ್ಕಾರಿ ಹುದ್ದೆಗಳಿಗೆ ತಯಾರುಗೊಳಿಸುವ ನಿಟ್ಟಿನಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವಿನೂತನ ಪ್ರಯತ್ನಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಸಾಧನಾ ಕೋಚಿಂಗ್ ಅಕಾಡೆಮಿ ಮುಂದಾಗಿದೆ ಎಂದು…
ಸತತ 28 ವರ್ಷಗಳಿಂದ ಬೇಳೂರು ದೇಲಟ್ಟು (ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು) ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶ ಉತ್ಸವ ಮತ್ತು ಮಹಾಶಿವರಾತ್ರಿ ಹಬ್ಬದ ದಿನದಂದು ಹೂವಿನ ಅಲಂಕಾರ, ಸಾರ್ವಜನಿಕ ಉಚಿತ ಅನ್ನ ಸಂತರ್ಪಣೆಯ ಸೇವಾಕರ್ತರಾದ ಬಳ್ಳಾರಿಯ ರೇಣುಕಾ ಬೇಕರಿ ಮಾಲೀಕರಾದ ವಸಂತ್ ಶೆಟ್ಟಿ ದಂಪತಿಗಳಿಗೆ ಸೆಪ್ಟೆಂಬರ್ 7 ರಂದು ಗಣೇಶೋತ್ಸವದಂದು ದೇವಳದ ವತಿಯಿಂದ ಸನ್ಮಾನಿಸಿದರು. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾಗಿರುವ ವಸಂತ್ ಶೆಟ್ಟಿಯವರು ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಸಮಾಜಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸ್ಕುತ್ತೂರಿನಲ್ಲಿ ನಡೆದ ಹುಣ್ಸೆಮಕ್ಕಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳಲ್ಲಿ ಒಟ್ಟು 27 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಮ್ಮ ಪ್ರತಿಭೆಯನ್ನ ತೋರ್ಪಡಿಸಿದ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ 11 ಪ್ರಥಮ, 09 ದ್ವಿತೀಯ ಹಾಗೂ 7 ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ. ಪ್ರಥಮ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ತಮ್ಮ ಅರ್ಹತೆಯನ್ನು ಗಳಿಸಿಕೊಂಡಿದ್ದಾರೆ. ಸಾಮೂಹಿಕ ವಿಭಾಗದ ಕವಾಲಿಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಾದ ಋತು ಆರ್ ಎಸ್, ನಿಧಿ ಜೆ. ಶೆಟ್ಟಿ, ಸಾನ್ವಿ ಶೆಟ್ಟಿ, ಮಹಮದ್ ಶಿಝಾನ್, ಭೂಮಿಕಾ, ನಿತ್ಯಶ್ರೀ ಇವರುಗಳು ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ, ಪ್ರತೀಕ್ ಜಿ.ಎಂ (ಚರ್ಚಾ…
ಎಸ್.ಯು. ಪಣಿಯಾಡಿಯವರ ಉತ್ಸಾಹ ಕನಸುಗಳೊಂದಿಗೆ 1928ರ ಸೆಪ್ಟೆಂಬರ್ 23 ರಂದು ಉಡುಪಿಯಲ್ಲಿ ತುಳುವ ಮಹಾಸಭೆ ಸ್ಥಾಪನೆಗೊಂಡಿತು. ತುಳುವ ಮಹಾಸಭೆಯ ಪ್ರಥಮ ವರ್ಷದ ಕಾರ್ಯಕಾರಿ ಸಮಿತಿ ಹೀಗಿತ್ತು. ಅಂಜಾರು ರಾಮಣ್ಣ ಹೆಗ್ಗಡೆ (ಅಧ್ಯಕ್ಷ), ಎಸ್.ಯು. ಪಣಿಯಾಡಿ (ಕಾರ್ಯದರ್ಶಿ), ಸದಸ್ಯರು – ಡಾ. ಯು. ರಾಮಚಂದ್ರ ರಾವ್, ಹಿರಿಯಡ್ಕ ನಾರಾಯಣ ರಾವ್, ಯು. ವೆಂಕಪ್ಪಯ್ಯ, ಮುಂತಾದವರು.1984 ರವರೆಗೆ ಪೊಳಲಿ ಸೀನಪ್ಪ ಹೆಗ್ಡೆ ಮತ್ತು ಬಡಕ ಬಯಲು ಪರಮೇಶ್ವರಯ್ಯನವರು ನಡೆಸಿಕೊಂಡು ಬಂದಿದ್ದರು. ಇನ್ನು ನಾಲ್ಕು ವರ್ಷಗಳಲ್ಲಿ ಐತಿಹಾಸಿಕ ಈ ತುಳು ಚಳುವಳಿಗೆ ನೂರು ವರ್ಷ ತುಂಬಲಿದೆ. ಅವರ ಹೋರಾಟದ ಕಿಚ್ಚು ತುಳುವರಲ್ಲಿ ಸ್ವಾಭಿಮಾನ ಮೂಡಿಸಿ ಇದುವರೆಗೆ ತುಳುವನ್ನು ಉಳಿಸಿಕೊಂಡು ಬಂದಿದೆ. ಆದರೆ ತುಳುವ ಮಹಸಭೆಯ ಯಾವುದೇ ಬೇಡಿಕೆಗಳು ಇದುವರೆಗೆ ಪೂರ್ತಿಯಾಗಿಲ್ಲ ಎನ್ನುವುದು ಖೇದಕರ. ತುಳುವ ಮಹಾಸಭೆಯ 96ನೇ ವರ್ಷದ ಈ ಸಂದರ್ಭದಲ್ಲಿ ಹಿರಿಯರ ಯೋಚನೆ ಯೋಜನೆಗಳನ್ನು ಮರು ಸ್ಥಾಪಿಸಬೇಕು ಎಂಬ ಉದ್ದೇಶದಿಂದ ತುಳುವರ್ಲ್ಡ್ ಫೌಂಡೇಶನ್ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡಿದೆ. ತುಳುವ ಮಹಾಸಭೆಯ ಪ್ರಕಾರ ತುಳುವವರೆಂದರೆ; ತುಳು…
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಉಡುಪಿ ತಾಲೂಕು ಸಮಿತಿಯ ವತಿಯಿಂದ ಜಾನಪದ, ರಂಗಭೂಮಿ, ಸಾಂಸ್ಕೃತಿಕ, ಧಾರ್ಮಿಕ ಮೊದಲಾದ ಹತ್ತು ಹಲವಾರು ಕ್ಷೇತ್ರಗಳಲ್ಲಿ ಸಕ್ರೀಯರಾಗಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಖ್ಯಾತರಾಗಿರುವ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ‘ಬಂಟಕುಲ ರತ್ನ’ ಬಿರುದು ನೀಡಿ ಸನ್ಮಾನಿಸಲಾಯಿತು. ಬಂಟರ ಯಾನೆ ನಾಡವರ ಮಾತೃ ಸಂಘಗಳ ಉಡುಪಿ ತಾಲೂಕು ಸಮಿತಿಯ ವತಿಯಿಂದ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆದ ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ಇವರಿಂದ ಬಡಗುತಿಟ್ಟು ಯಕ್ಷಗಾನ ‘ಜ್ವಾಲಾ ಪ್ರತಾಪ’ ಪ್ರದರ್ಶನದ ಸಂದರ್ಭದಲ್ಲಿ ಈ ಸನ್ಮಾನ ನಡೆಯಿತು. ಈ ಸಂದರ್ಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಡುಪಿ ತಾಲೂಕು ಸಮಿತಿ ಸಂಚಾಲಕ ಶಿವಪ್ರಸಾದ್ ಹೆಗ್ಡೆ, ಉಪ ಸಂಚಾಲಕ ದಿನೇಶ್ ಹೆಗ್ಡೆ, ನಿಕಟ ಪೂರ್ವ ಸಂಚಾಲಕ ಜಯರಾಜ್ ಹೆಗ್ಡೆ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಭುಜಂಗ ಶೆಟ್ಟಿ, ಮಿಥುನ್ ಹೆಗ್ಡೆ, ಸುಭಾಸ್ ಬಲ್ಲಾಳ್, ಶ್ರೀಧರ…
ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಸೆಪ್ಟೆಂಬರ್ 15 ರಂದು ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯರವರ ಜನ್ಮದಿನದ ಅಂಗವಾಗಿ ಇಂಜಿನಿಯರ್ ಪ್ರವೀಣ್ ಕುಮಾರ್ ಶೆಟ್ಟಿ ನಿರಕೋಡ್ಲುರವರನ್ನು ಸನ್ಮಾನಿಸುವ ಮೂಲಕ ಇಂಜಿನಿಯರ್ ದಿನಾಚರಣೆಯನ್ನು ಆಚರಿಸಲಾಯಿತು. ಇಂಜಿನಿಯರ್ ಪ್ರವೀಣ್ ಕುಮಾರ್ ಶೆಟ್ಟಿ ನಿರಕೋಡ್ಲು ಅವರನ್ನು ಕೋಟೇಶ್ವರದ ಅವರ ಸ್ವಗೃಹದಲ್ಲಿ ತಾಲೂಕು ಯುವ ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ, ಜೆ.ಪಿ ಪ್ಯಾಶನ್ ಮಾಲೀಕ ರತ್ನಾಕರ್ ಶೆಟ್ಟಿ ಹಾಗೂ ಗುತ್ತಿಗೆದಾರರಾದ ಪ್ರಭಾಕರ್ ಶೆಟ್ಟಿಯವರು ಸನ್ಮಾನಿಸಿದರು. ಸಂಘದ ಅಧ್ಯಕ್ಷರಾದ ನಿತೀಶ್ ಶೆಟ್ಟಿ ಬಸ್ರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮುರಳೀಧರ ಶೆಟ್ಟಿ ಹುಯ್ಯಾರು, ಖಜಾಂಚಿ ಭರತರಾಜ್ ಶೆಟ್ಟಿ ಜಾಂಬೂರು, ಉಪಾಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಸುನಿಲ್ ಶೆಟ್ಟಿ ಹೇರಿಕುದ್ರು, ಪ್ರಶಾಂತ ಶೆಟ್ಟಿ ಶಿರೂರು ಉಪಸ್ಥಿತರಿದ್ದರು. ದಶಮ ಸಂಭ್ರಮದ ಕೋಶಾಧಿಕಾರಿ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಶ್ರದ್ದಾ ಭಕ್ತಿಯ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರ ಕಾರ್ಯ, ಬ್ರಹ್ಮಕಲಶೋತ್ಸವ ಅಥವಾ ಯಾವುದೇ ರೀತಿಯ ಧಾರ್ಮಿಕ ಕಾರ್ಯಗಳು ನಡೆಯುತ್ತವೆ ಎಂದರೆ ನಂಬಿದ ಭಕ್ತರಾದ ನಮಗೆಲ್ಲರಿಗೂ ಮತ್ತು ಲೋಕ ಕಲ್ಯಾಣಕ್ಕೋಸ್ಕರ ಆಗುತ್ತದೆ. ಕ್ಷೇತ್ರಗಳು ಬೆಳಗಿದಂತೆ ನಾಡು ಸುಭೀಕ್ಷವಾಗುತ್ತದೆ. ನಮಗೆ ನಮ್ಮ ಕಾತ್ರಜ್ ಅಯ್ಯಪ್ಪ ಕ್ಷೇತ್ರದ ಜೀರ್ಣೋದ್ದಾರ ಮಾಡುವ ಸೌಭಾಗ್ಯ ದೇವರು ಒದಗಿಸಿ ಕೊಟ್ಟಿದ್ದಾರೆ. ಪುಣೆಯ ಸರ್ವ ಭಕ್ತಾಭಿಮಾನಿಗಳ ಸಹಕಾರ ಸಿಕ್ಕಿದೆ. ನಮ್ಮ ನಿರೀಕ್ಷೆಗೂ ಮೀರಿ ಜೀರ್ಣೋದ್ದಾರದ ಕಾರ್ಯಗಳು ನಡೆಯುತ್ತಿವೆ. ನಮ್ಮ ಲೆಕ್ಕಾಚಾರಕ್ಕಿಂತ ಹೆಚ್ಚಿನ ಖರ್ಚು ಕೂಡಾ ಆಗುತ್ತಿದೆ. ಆದರೆ ದೇವತಾ ಕಾರ್ಯಕ್ಕೆ ಅರ್ಥಿಕ ಬಲ ತಮ್ಮೆಲ್ಲರ ಸಹಕಾರದಿಂದ ಬರುತ್ತದೆ ಎಂಬ ನಂಬಿಕೆ ನಮ್ಮದು. ಇನ್ನು ಅಂತಿಮ ಹಂತದ ಜೀರ್ಣೋದ್ದಾರ ಕೆಲಸಗಳು ಬಾಕಿ ಇದೆ. ಇದಕ್ಕೆ ಸಾಧಾರಣ ಒಂದೂವರೆ ಕೋಟಿವರೆಗಿನ ಅರ್ಥಿಕ ಸಂಪನ್ಮೂಲದ ಅವಶ್ಯಕತೆ ಇದೆ. ಇದನ್ನು ಕ್ರೂಡೀಕರಿಸುವ ಕೆಲಸ ಮಾಡುತ್ತಿದ್ದೇವೆ. ಕ್ಷೇತ್ರದ ಭಕ್ತರು ತಮ್ಮ ಇಚ್ಚೆಯಂತೆ ಮುಂದೆ ಬಂದು ತನು ಮನ ಧನದ ಸೇವೆ ನೀಡಿ ಸಹಕಾರ ನೀಡಬೇಕು. ತಾವು ನಂಬಿದ ಶ್ರೀ ಅಯ್ಯಪ್ಪ…
ಸೆಪ್ಟೆಂಬರ್ 15 ರಂದು ಆದಿತ್ಯವಾರ ಸಂಜೆ ‘ಇಂಜಿನಿಯರ್ಸ್ ಡೇ’ ಪ್ರಯುಕ್ತ, ಸಮಾಜಮುಖಿ ಸೇವಾ ಮನೋಭಾವದ, ಪರೋಪಕಾರಿ, ಪ್ರಾಮಾಣಿಕ, ಕರ್ತವ್ಯ ಪ್ರಜ್ಞೆಯ ಸರಕಾರಿ ಅಧಿಕಾರಿ, ಕೋಟ ಮೆಸ್ಕಾಂ ನಲ್ಲಿ ಇಂಜಿನಿಯರ್ ಆಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ, ಜನಮನ್ನಣೆ ಗಳಿಸಿದ ಇಂಜಿನಿಯರ್ ಹಾಲಾಡಿ ಪ್ರಶಾಂತ್ ಶೆಟ್ಟಿಯವರನ್ನು ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ವತಿಯಿಂದ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಬನ್ನಾಡಿ ಪ್ರವೀಣ್ ಹೆಗ್ಡೆಯವರು ‘ಇಂಜಿನಿಯರ್ಸ್ ಡೇ’ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು.ಲಯನ್ಸ್ ಕ್ಲಬ್ ನ ಸ್ಥಾಪಕ ಕಾರ್ಯದರ್ಶಿ ಲಯನ್ ಪ್ರೊಫೆಸರ್ ಕಲ್ಕಟ್ಟೆ ಚಂದ್ರ ಶೇಖರ್ ಶೆಟ್ಟಿಯವರು ಸನ್ನಾನಿತಗೊಂಡ ಲಯನ್ ಇಂಜಿನಿಯರ್ ಹಾಲಾಡಿ ಪ್ರಶಾಂತ್ ಶೆಟ್ಟಿಯವರ ಬಗ್ಗೆ ಹಾಗೂ ಇಂಜಿನಿಯರ್ಸ್ ಡೇ ಮಹತ್ವದ ಕುರಿತು ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಲಯನ್ ಇಂಜಿನಿಯರ್ ಹಾಲಾಡಿ ಪ್ರಶಾಂತ್ ಶೆಟ್ಟಿಯವರು, ಸರ್ ಎಮ್. ವಿಶ್ವೇಶ್ವರಯ್ಯರವರ ಜೀವನ ಕುರಿತು ಮಾತನಾಡಿ, ಇಂಜಿನಿಯರ್ಸ್ ಡೇ ಪ್ರಯುಕ್ತ ತನ್ನನ್ನು ಸನ್ಮಾನಿಸಿದ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಸದಸ್ಯರಿಗೆ ಕೃತಜ್ನತೆಗಳನ್ನು ಸಲ್ಲಿಸಿ ಶುಭ ಹಾರೈಸಿದರು.…
ಮುಂಬಯಿ (ಆರ್ಬಿಐ), ಸೆ.15: ಮುಂಬಯಿ ಸಾರಸ್ವತ ಲೋಕದ ಸಜ್ಜನ ಸಾಹಿತಿ, ‘ಶಿಮುಂಜೆ ಪರಾರಿ’ ಕಾವ್ಯ ನಾಮದಿ ಚಿರಪರಿಚಿತ ತುಳು ಕನ್ನಡ ಕವಿ, ಅನುವಾದಕಾರ, ನಾಟಕಕಾರ, ಅಧ್ಯಾಪಕ, ಕಂಠದಾನ ಕಲಾವಿದ ಮತ್ತು ನಟ ಎಂದೆಣಿಸಿ ಬಹುಮುಖ ಪ್ರತಿಭೆಗಳಿಂದ ಜನಮಾನಸದಲ್ಲಿ ಜನಾನುರೆಣಿಸಿರುವ ಶಿಮುಂಜೆ ಪರಾರಿ (ಸೀತಾರಾಮ ಮುದ್ದಣ್ಣ ಶೆಟ್ಟಿ 84.) ಇಂದಿಲ್ಲಿ ಆದಿತ್ಯವಾರ ಬೆಳಿಗ್ಗೆ ಅಂಧೇರಿ ಪಶ್ಚಿಮದ ಜೀವನ್ ನಗರ್ನ ನ್ಯೂ ಚಂದ್ರ ಹೌಸಿಂಗ್ ಸೊಸೈಟಿಯಲ್ಲಿನ ನಿವಾಸದಲ್ಲಿ ನಿಧನರಾದರು.ಉಡುಪಿ ಜಿಲ್ಲೆಯ ಮುಲ್ಕಿಯ ಕಕ್ವ ಗ್ರಾಮ ಅತಿಕಾರಿಬೆಟ್ಟು ಇಲ್ಲಿ ಕಲ್ಯಾಣಿ ಶೆಟ್ಟಿ ಮತ್ತು ಶಿಮುಂಜೆ ಮುದ್ದಣ್ಣ ಶೆಟ್ಟಿ ದಂಪತಿಗಳ ಸುಪುತ್ರನಾಗಿ ಜನ್ಮತಾಳಿ ಸಜ್ಜನ ಸಾಹಿತಿ ಎಂದೇ ಪ್ರಸಿದ್ಧರಾದ ‘ಶಿಮುಂಜೆ ಪರಾರಿ’ ಕಾವ್ಯನಾಮದಿಂದ ಜನಮಾನಸದಲ್ಲಿ ನೆಲೆ ನಿಂತವರು.ಕಳೆದ ಹಲವಾರು ವರ್ಷಗಳಿಂದ ಅಂಧೇರಿ ಪೂರ್ವದ ಚಕಲಾ ಇಲ್ಲಿನ ಹವಾ ಮಹಲ್ನಲ್ಲಿ ವಾಸವಾಗಿದ್ದ ಮೃತರು ಪತ್ನಿ ಚಂದ್ರಿಕಾ ಶೆಟ್ಟಿ, ಮಕ್ಕಳಾದ ಅರ್ಚನಾ ಶೆಟ್ಟಿ ಮತ್ತು ಅಪರ್ಣಾ ಶೆಟ್ಟಿ ಸೇರಿದಂತೆ ಅಪಾರ ಬಂಧು ಬಳಗ, ಶಿಷ್ಯವರ್ಗವನ್ನು ಅಗಲಿದ್ದಾರೆ.ಶಿಮುಂಜೆ ಅವರಿಗೆ ಮರಾಠಿ ಗುಜರಾತಿ…