Author: admin
ಕ್ರಿಯಾಶೀಲ ಜನಪ್ರತಿನಿಧಿಗಳಿಂದ ಬದಲಾವಣೆ ಸಾಧ್ಯ ಎನ್ನುವುದಕ್ಕೆ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ನೇತೃತ್ವದಲ್ಲಿ ನಡೆಯುತ್ತಿರುವ ಬೈಂದೂರು ಉತ್ಸವ ಸಾಕ್ಷಿಯಾಗಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹೇಳಿದರು. ನವೆಂಬರ್ 1ರಿಂದ 3ರ ವರೆಗೆ ಬೈಂದೂರಿನ ಗಾಂಧೀ ಮೈದಾನದಲ್ಲಿ ಆಯೋಜಿಸಿರುವ ಬೈಂದೂರು ಉತ್ಸವ 2024ರ ಅಧೀಕೃತ ಲಾಂಛನವನ್ನು ಸೋಮವಾರ ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನದ ಆವರಣದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸಮೃದ್ಧ ಬೈಂದೂರು ಮೂಲಕ ಬೈಂದೂರು ಕ್ಷೇತ್ರದ ಭಾಷೆ, ಕಲೆ, ಸಂಸ್ಕೃತಿಯನ್ನು ಇಡೀ ಜಗತ್ತು ನೋಡಬೇಕು ಎನ್ನುವ ಕಾರಣಕ್ಕೆ ನಡೆಯುವ ಬೈಂದೂರು ಉತ್ಸವಕ್ಕೆ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ ಎಂದರು.ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಬೈಂದೂರು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಿರುವ ಕ್ಷೇತ್ರ. ಬೈಂದೂರು ಉತ್ಸವದಲ್ಲಿ ರಾಜ್ಯದಲ್ಲಿಯೇ ಕುಗ್ರಾಮವಾಗಿದ್ದ ಬೈಂದೂರು ಕ್ಷೇತ್ರ ಕಳೆದ 15 ವರ್ಷಗಳಿಂದ ಅಭಿವೃದ್ಧಿಯತ್ತ ಸಾಗುತ್ತಿದೆ. ಕುಂದಾಪ್ರ ಭಾಷೆಗೆ ಕಿರೀಟವಿದ್ದಂತೆ ನಮ್ಮ ಗ್ರಾಮೀಣ ಕಲೆ, ಸಂಸ್ಕೃತಿಗಳನ್ನು ಪ್ರತಿಬಿಂಬಸುವುದಕ್ಕಾಗಿ ಬೈಂದೂರು ಉತ್ಸವ ಸಜ್ಜಾಗುತ್ತಿದೆ. ಈ ಕಾರ್ಯಕ್ರಮದ ಬೆನ್ನೆಲುಬಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ…
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಮಾನವಿಕ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತಂಡ ವಿಟ್ಲದ ಕನ್ಯಾನದ ಭಾರತ ಸೇವಾಶ್ರಮ ಟ್ರಸ್ಟ್‍ಗೆ ಭೇಟಿ ನೀಡಿದರು. ಭಾರತ ಸೇವಾಶ್ರಮ ಟ್ರಸ್ಟ್‍ನ ಮುಖ್ಯಸ್ಥ ಈಶ್ವರ್ ಭಟ್ ಮಾತನಾಡಿ, ಸೇವಾಹಿ ಪರಮೋ ಧಮರ್ಃ ಎಂಬ ಸಾಲು ಸೇವೆಯೇ ಧರ್ಮಗಳಲ್ಲಿ ಶ್ರೇಷ್ಠ ಎಂದು ಸಾರುತ್ತದೆ. ವಿದ್ಯಾರ್ಥಿಗಳಿಗೆ ಪಾಲಕರ ಮಹತ್ವವನ್ನು ವಿವರಿಸಿದ ಅವರು, ಎಂದೂ ಹೆತ್ತ ತಂದೆ ತಾಯಿಯನ್ನು ಅನಾಥರನ್ನಾಗಿಸಬೇಡಿ. ಕಳೆದ 60 ವರ್ಷಗಳಿಂದ ಭಾರತ ಸೇವಾಶ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈ ಆಶ್ರಮದಲ್ಲಿರುವ ಹೆಚ್ಚಿನ ವೃದ್ಧರ ಮಕ್ಕಳು ಉತ್ತಮ ಸ್ಥಿತಿವಂತರು. ಆದರೆ ತಮ್ಮ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸಿರುವುದು ದುರಾದೃಷ್ಟಕರ ಎಂದರು. ಈ ಆಶ್ರಮದಲ್ಲಿ ಅನಾಥ ಮಕ್ಕಳಿಗೆ, ಅನಾಥರಿಗೆ, ವೃದ್ಧರಿಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, 250ಕ್ಕೂ ಅಧಿಕ ಜನರಿಗೆ ಆಶ್ರಯ ನೀಡಲಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಸೇವಾಶ್ರಮದ ಹುಟ್ಟಿನ ಬಗೆ, ಆಶ್ರಮ ಬೆಳೆದು ಬಂದ ಹಾದಿಯನ್ನು ತಿಳಿಸಿದರು. ನಿವಾಸಿಗಳ ಮನೊರಂಜನೆಗಾಗಿ ವಿದ್ಯಾರ್ಥಿಗಳು ವಿವಿಧ ಚಟುವಟಿಕೆ ಹಾಗೂ ನೃತ್ಯ, ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿದರು.…
ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟ 2024 ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್ಗೆ 46 ಪದಕ
ಮೂಡುಬಿದಿರೆ: ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ (ರಿ.) ವತಿಯಿಂದ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್‍ನ ಕ್ರೀಡಾಪಟುಗಳಿಗೆ 22 ಚಿನ್ನ, 08 ಬೆಳ್ಳಿ, 16 ಕಂಚು ಒಟ್ಟು 46 ಪದಕಗಳು, 2 ನೂತನ ಕೂಟ ದಾಖಲೆ ಹಾಗೂ 2 ಕ್ರೀಡಾಕೂಟದ ವೈಯಕ್ತಿಕ ಪ್ರಶಸ್ತಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದರಲ್ಲಿ ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್‍ನ ಕ್ರೀಡಾಪಟುಗಳು ಮಹತ್ವದ ಕೊಡುಗೆಯನ್ನು ನೀಡಿರುತ್ತಾರೆ. ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್‍ನಿಂದ ಒಟ್ಟು 87 ಕ್ರೀಡಾಪಟುಗಳು ಭಾಗವಹಿಸಿದ್ದರು. ಆಳ್ವಾಸ್ ಸ್ಪೋಟ್ಸ್ ಕ್ಲಬ್ ಕಳೆದ 16 ವರ್ಷಗಳಿಂದ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ಬಂದಿರುತ್ತದೆ. ಸಮಗ್ರ ಚಾಂಪಿಯನ್ಸ್ ಪಟ್ಟ ಪಡೆದ ದಕ್ಷಿಣ ಕನ್ನಡ ಜಿಲ್ಲೆಯು 402 ಅಂಕಗಳಿಂದ ಪ್ರಥಮ ಸ್ಥಾನ ಪಡೆದರೆ, ಬೆಂಗಳೂರು ನಗರ 242 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ಆಳ್ವಾಸ್‍ನ ಆಕಾಶ ಹುಕ್ಕೇರಿ (80 ಮೀ ಅಡೆತಡೆ ಓಟ), ನಾಗೇಂದ್ರ ಅಣ್ಣಪ್ಪ ನಾಯ್ಕ…
ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಸುರತ್ಕಲ್ ಶಾಖೆಯ ನವೀಕೃತ ಶಾಖಾ ಕಛೇರಿಯನ್ನು ಹರುಷ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ದಿನಾಂಕ 12.09.2024ರಂದು ಉದ್ಘಾಟಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಸದಸ್ಯ ಗ್ರಾಹಕರಿಗೆ ಹೆಚ್ಚಿನ ಅನೂಕೂಲಗಳನ್ನು, ಸೌಲಭ್ಯಗಳನ್ನು ಒದಗಿಸುವುದು ಸಂಘದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸುರತ್ಕಲ್ ಶಾಖಾ ಕಛೇರಿಯನ್ನು ಆಧುನೀಕರಿಸಿ, ಹವಾನಿಯಂತ್ರಿತ ಸೌಲಭ್ಯಗಳೊಂದಿಗೆ ನವೀಕರಿಸಿ ಗ್ರಾಹಕರ ಸೇವೆಗೆ ಅರ್ಪಿಸಲಾಗಿದೆ. ಸಂಘವು ಸದಸ್ಯರ ಸಹಕಾರದಿಂದ ರೂ.1,000 ಕೋಟಿ ವ್ಯವಹಾರವನ್ನು ಈಗಾಗಲೇ ದಾಟಿದ್ದು, ಕಳೆದ ಆರು ವರ್ಷಗಳಿಂದ ಶೇ.25 ರಷ್ಟು ಡಿವಿಡೆಂಡನ್ನು ನೀಡುತ್ತಿದ್ದೇವೆ. ಸಂಘವು ಸಣ್ಣ ಮೊಬಲಗಿನ ರಿಟೇಲ್ ಸಾಲ ನೀಡುವಿಕೆಗೆ ಒತ್ತು ನೀಡುತ್ತಿದ್ದು, 40 ಸಾವಿರಕ್ಕಿಂತ ಹೆಚ್ಚು ಸಾಲಗಾರ ಗ್ರಾಹಕರಿದ್ದಾರೆ. ಸಾಲ ವಸೂಲಾತಿ ಅತ್ಯುತ್ತಮವಾಗಿದ್ದು, ಕಳೆದ 17 ವರ್ಷಗಳಿಂದ ನೆಟ್ ಎನ್.ಪಿ.ಎ. ಶೂನ್ಯ ಪ್ರಮಾಣದಲ್ಲಿದೆ. ಸಂಘದ ಈ ಎಲ್ಲಾ ಸಾಧನೆಗೆ ಸಹಕರಿಸುತ್ತಿರುವ ಎಲ್ಲಾ ಸದಸ್ಯ…
ಪುಣೆಯ ಪ್ರತಿಷ್ಠಿತ ಸಾಮಾಜಿಕ ಸೇವಾ ಸಂಸ್ಥೆಯ ಬಂಟರ ಸಂಘ ಪುಣೆಯು ಸುವರ್ಣ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ವಿಶ್ವದಲ್ಲಿನ ಅತ್ಯುತ್ತಮ ಬಂಟರ ಭವನಗಳ ಸಾಲಿನಲ್ಲಿ, ಅತ್ಯಂತ ಸುಂದರವಾದ ವಿನ್ಯಾಸದೊಂದಿಗೆ ಬಂಟರ ಭವನ ಪುಣೆ ಬಂಟರ ಪ್ರತಿಷ್ಠೆಯ ಪ್ರತೀಕದಂತೆ ಕಂಗೊಲಿಸುತ್ತಿದೆ. ಪುಣೆ ಬಂಟರ ಸಂಘ ಸ್ಥಾಪನೆಯಾಗಿ 50 ವರ್ಷಗಳನ್ನು ಪೂರೈಸಿದೆ. ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಸಂಘದ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳು ಶ್ರೀನಿವಾಸ ಕಲ್ಯಾಣೋತ್ಸವದ ಮೂಲಕ ಪ್ರಾರಂಭವಾಗಿವೆ. ನವೆಂಬರ್ 30 ರಂದು ನಡೆಯಲಿರುವ ಸುವರ್ಣ ಮಹೋತ್ಸವ ಮಹಾ ಸಂಭ್ರಮ ಮತ್ತು ಅದಕ್ಕೆ ಪೂರಕವಾಗಿ ನಡೆಯಲಿರುವ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಜನಪರ ಸೇವೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸುವ ಸಂಕಲ್ಪವನ್ನು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಮತ್ತು ಸಮಿತಿಯ ಎಲ್ಲಾ ಪದಾಧಿಕಾರಿಗಳು ಮಾಡಿರುತ್ತಾರೆ. ಇದಕ್ಕಾಗಿ ಸುವರ್ಣ ಮಹೋತ್ಸವ ಸಮಿತಿಯನ್ನು ರಚಿಸಿ ಆ ಮೂಲಕ ಕಾರ್ಯಕ್ರಮಗಳು ನಡೆಯಲಿವೆ. ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಖ್ಯಾತ ಕೈಗಾರಿಕೊದ್ಯಮಿ, ಪುಣೆ ಕನ್ನಡ…
ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ನವ್ಯಾ ಶೆಟ್ಟಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕುಂದಾಪುರ ಮತ್ತು ಸೈಂಟ್ ಜೋಸೆಫ್ ಶಾಲೆ ಆಯೋಜಿಸಿದ ತಾಲೂಕು ಮಟ್ಟದ ತ್ರೋ ಬಾಲ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇವಳು ಪ್ರಭಾಕರ ಶೆಟ್ಟಿ ಮತ್ತು ಪ್ರೇಮ ದಂಪತಿಗಳ ಮಗಳಾಗಿದ್ದು ಪ್ರಸ್ತುತ 8ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇವಳನ್ನು ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ| ರಮೇಶ್ ಶೆಟ್ಟಿ, ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿನಿಗೆ ಪ್ರಶಂಸಿಸಿ ಶುಭ ಹಾರೈಸಿದ್ದಾರೆ. ಶಾಲೆಯ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕರಾದ ಸತೀಶ್, ಸೂರ್ಯ ಹಾಗೂ ಜಯಲತಾ ವಿದ್ಯಾರ್ಥಿನಿಗೆ ಮಾರ್ಗದರ್ಶನ ಮಾಡಿರುತ್ತಾರೆ.
ಮೂಡುಬಿದಿರೆ: ಯಾವುದೇ ವಿಷಯದಲ್ಲಿ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಯುಪಿಎಸ್ಸಿ ಹಾಗೂ ಕೆಪಿಎಸ್ಸಿಯ- ಪೂರ್ವಭಾವಿ (ಪ್ರೀಲಿಮ್ಸ್) ಹಾಗೂ ಮುಖ್ಯ ಪರೀಕ್ಷೆಗಳಿಗೆ (ಮೈನ್ಸ್) 9 ತಿಂಗಳ ನಿರಂತರ ಸನಿವಾಸ ತರಬೇತಿಯನ್ನು ನೀಡಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮುಂದಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್‍ನೊಂದಿಗೆ ಈಗಾಗಲೆ ಒಡಂಬಡಿಕೆ ಮಾಡಿಕೊಂಡಿದ್ದು, ಎಲ್ಲರಿಗೂ ಕೈಗೆಟಕುವ ರೀತಿಯಲ್ಲಿ ಉತ್ತಮ ಗುಣಮಟ್ಟದ, ಅತ್ಯುತ್ತಮ ತರಬೇತಿಯನ್ನು ನೀಡಲು ಉದ್ದೇಶಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ತಿಳಿಸಿದರು. ಈ ತರಬೇತಿಯು ಎಸ್‍ಡಿಎ, ಎಫ್‍ಡಿಎ, ಬ್ಯಾಂಕಿಂಗ್, ಪೋಲೀಸ್ ಇಲಾಖೆ, ಪಿಡಿಒ, ಕಂದಾಯ ಇಲಾಖೆಗಳ ಪರೀಕ್ಷೆಗಳು ಸೇರಿದಂತೆ ಇನ್ನಿತರ ಎಲ್ಲಾ ಸರ್ಕಾರಿ ಉದ್ಯೋಗಗಳ ಆಯ್ಕೆ ಪ್ರಕ್ರಿಯೆಯ ಪರೀಕ್ಷೆಗಳನ್ನು ಎದುರಿಸಲು ಅನುವುಮಾಡಿಕೊಡಲಿದೆ. ಕಾಲ ಕಾಲಕ್ಕೆ ಬರುವ ಸರ್ಕಾರಿ ಹಾಗೂ ಅರೆ ಸರ್ಕಾರಿ ಹುದ್ದೆಗಳಿಗೆ ತಯಾರುಗೊಳಿಸುವ ನಿಟ್ಟಿನಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವಿನೂತನ ಪ್ರಯತ್ನಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಸಾಧನಾ ಕೋಚಿಂಗ್ ಅಕಾಡೆಮಿ ಮುಂದಾಗಿದೆ ಎಂದು…
ಸತತ 28 ವರ್ಷಗಳಿಂದ ಬೇಳೂರು ದೇಲಟ್ಟು (ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು) ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶ ಉತ್ಸವ ಮತ್ತು ಮಹಾಶಿವರಾತ್ರಿ ಹಬ್ಬದ ದಿನದಂದು ಹೂವಿನ ಅಲಂಕಾರ, ಸಾರ್ವಜನಿಕ ಉಚಿತ ಅನ್ನ ಸಂತರ್ಪಣೆಯ ಸೇವಾಕರ್ತರಾದ ಬಳ್ಳಾರಿಯ ರೇಣುಕಾ ಬೇಕರಿ ಮಾಲೀಕರಾದ ವಸಂತ್ ಶೆಟ್ಟಿ ದಂಪತಿಗಳಿಗೆ ಸೆಪ್ಟೆಂಬರ್ 7 ರಂದು ಗಣೇಶೋತ್ಸವದಂದು ದೇವಳದ ವತಿಯಿಂದ ಸನ್ಮಾನಿಸಿದರು. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾಗಿರುವ ವಸಂತ್ ಶೆಟ್ಟಿಯವರು ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಸಮಾಜಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸ್ಕುತ್ತೂರಿನಲ್ಲಿ ನಡೆದ ಹುಣ್ಸೆಮಕ್ಕಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳಲ್ಲಿ ಒಟ್ಟು 27 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಮ್ಮ ಪ್ರತಿಭೆಯನ್ನ ತೋರ್ಪಡಿಸಿದ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ 11 ಪ್ರಥಮ, 09 ದ್ವಿತೀಯ ಹಾಗೂ 7 ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ. ಪ್ರಥಮ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ತಮ್ಮ ಅರ್ಹತೆಯನ್ನು ಗಳಿಸಿಕೊಂಡಿದ್ದಾರೆ. ಸಾಮೂಹಿಕ ವಿಭಾಗದ ಕವಾಲಿಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಾದ ಋತು ಆರ್ ಎಸ್, ನಿಧಿ ಜೆ. ಶೆಟ್ಟಿ, ಸಾನ್ವಿ ಶೆಟ್ಟಿ, ಮಹಮದ್ ಶಿಝಾನ್, ಭೂಮಿಕಾ, ನಿತ್ಯಶ್ರೀ ಇವರುಗಳು ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ, ಪ್ರತೀಕ್ ಜಿ.ಎಂ (ಚರ್ಚಾ…
ಎಸ್.ಯು. ಪಣಿಯಾಡಿಯವರ ಉತ್ಸಾಹ ಕನಸುಗಳೊಂದಿಗೆ 1928ರ ಸೆಪ್ಟೆಂಬರ್ 23 ರಂದು ಉಡುಪಿಯಲ್ಲಿ ತುಳುವ ಮಹಾಸಭೆ ಸ್ಥಾಪನೆಗೊಂಡಿತು. ತುಳುವ ಮಹಾಸಭೆಯ ಪ್ರಥಮ ವರ್ಷದ ಕಾರ್ಯಕಾರಿ ಸಮಿತಿ ಹೀಗಿತ್ತು. ಅಂಜಾರು ರಾಮಣ್ಣ ಹೆಗ್ಗಡೆ (ಅಧ್ಯಕ್ಷ), ಎಸ್.ಯು. ಪಣಿಯಾಡಿ (ಕಾರ್ಯದರ್ಶಿ), ಸದಸ್ಯರು – ಡಾ. ಯು. ರಾಮಚಂದ್ರ ರಾವ್, ಹಿರಿಯಡ್ಕ ನಾರಾಯಣ ರಾವ್, ಯು. ವೆಂಕಪ್ಪಯ್ಯ, ಮುಂತಾದವರು.1984 ರವರೆಗೆ ಪೊಳಲಿ ಸೀನಪ್ಪ ಹೆಗ್ಡೆ ಮತ್ತು ಬಡಕ ಬಯಲು ಪರಮೇಶ್ವರಯ್ಯನವರು ನಡೆಸಿಕೊಂಡು ಬಂದಿದ್ದರು. ಇನ್ನು ನಾಲ್ಕು ವರ್ಷಗಳಲ್ಲಿ ಐತಿಹಾಸಿಕ ಈ ತುಳು ಚಳುವಳಿಗೆ ನೂರು ವರ್ಷ ತುಂಬಲಿದೆ. ಅವರ ಹೋರಾಟದ ಕಿಚ್ಚು ತುಳುವರಲ್ಲಿ ಸ್ವಾಭಿಮಾನ ಮೂಡಿಸಿ ಇದುವರೆಗೆ ತುಳುವನ್ನು ಉಳಿಸಿಕೊಂಡು ಬಂದಿದೆ. ಆದರೆ ತುಳುವ ಮಹಸಭೆಯ ಯಾವುದೇ ಬೇಡಿಕೆಗಳು ಇದುವರೆಗೆ ಪೂರ್ತಿಯಾಗಿಲ್ಲ ಎನ್ನುವುದು ಖೇದಕರ. ತುಳುವ ಮಹಾಸಭೆಯ 96ನೇ ವರ್ಷದ ಈ ಸಂದರ್ಭದಲ್ಲಿ ಹಿರಿಯರ ಯೋಚನೆ ಯೋಜನೆಗಳನ್ನು ಮರು ಸ್ಥಾಪಿಸಬೇಕು ಎಂಬ ಉದ್ದೇಶದಿಂದ ತುಳುವರ್ಲ್ಡ್ ಫೌಂಡೇಶನ್ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡಿದೆ. ತುಳುವ ಮಹಾಸಭೆಯ ಪ್ರಕಾರ ತುಳುವವರೆಂದರೆ; ತುಳು…