Author: admin
ಮಂಗಳೂರಿನ ಕುಲಶೇಖರ ಕೋರ್ಡೆಲ್ ಹಾಲ್ ನಲ್ಲಿ ಸೆಪ್ಟೆಂಬರ್ 18 ರಂದು ನಡೆದ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ 38 ನೇ ವಾರ್ಷಿಕ ಸಭೆಯಲ್ಲಿ ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘವನ್ನು 2023-24 ರ ಸಾಲಿನ ಉಡುಪಿ ಜಿಲ್ಲೆಯ ದ್ವಿತೀಯ ಅತ್ಯುತ್ತಮ ಸಂಘವೆಂದು ಘೋಷಿಸಿದರು. ದ.ಕ. ಸ. ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ.ಪಿ. ಸುಚರಿತ ಶೆಟ್ಟಿಯವರು ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶಿವರಾಮ ಶೆಟ್ಟಿ ಹಾಗೂ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಎನ್. ಭಟ್ ರವರಿಗೆ ಪ್ರಶಸ್ತಿ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷ ಕೆ ರವಿರಾಜ್ ಹೆಗ್ಡೆ, ಉಪಾಧ್ಯಕ್ಷರಾದ ಎಸ್ ಬಿ ಜಯರಾಮ್ ರೈ, ಕೆಎಂಎಫ್ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ್ ಡಿ, ವ್ಯವಸ್ಥಾಪಕರಾದ ಡಾ. ರವಿರಾಜ ಉಡುಪ, ಮಾಜಿ ಅಧ್ಯಕ್ಷರುಗಳು, ನಿರ್ದೇಶಕರುಗಳು, ಉಪ ವ್ಯವಸ್ಥಾಪಕರುಗಳು, ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಮಿತಿ ಹಾಗೂ ಆಂತರಿಕ ಸಮಿತಿ ಆಶ್ರಯದಲ್ಲಿ ಕಾಲೇಜಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ‘ಮಹಿಳೆಯರ ಯೋಗ ಕ್ಷೇಮದ ಅನ್ವೇಷಣೆ’ ವಿಷಯದ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಆಳ್ವಾಸ್ ಸೆಂಟರ್ ಫಾರ್ ವೆಲ್ನೆಸ್ ಟ್ರೈನಿಂಗ್ನ ನಿರ್ದೇಶಕಿ ಡಾ ದೀಪ ಕೊಠಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಹಲವು ಮಹಿಳಾ ಸಾಧಕರನ್ನು ಪರಿಚಯಿಸುತ್ತಾ, ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹುರಿದುಂಬಿಸಿದರು. ವಿದ್ಯಾರ್ಥಿಗಳು ಹೆಚ್ಚು ಸಕರಾತ್ಮಕ ವಿಷಯಗಳನ್ನು ಹೇಗೆ ವಿಸ್ತರಿಸಿಕೊಳ್ಳಬೇಕು, ತಮ್ಮಲ್ಲಿರುವ ಭಾವನೆಗಳನ್ನು ಒಪ್ಪಿಕೊಂಡು ಅದರೊಂದಿಗೆ ಬದುಕುವ ಮನೋಸ್ಥೈರ್ಯ ಹೇಗೆ ಬೆಳೆಸಿಕೊಳ್ಳಬೇಕು ಎಂದು ವಿವರಿಸಿದರು. ಏಕಾಗ್ರತೆ ಮತ್ತು ಸ್ಥಿರತೆಯನ್ನು ಹೇಗೆ ಉಳಿಸಿಕೊಳ್ಳುವುದು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಜೀವನದಲ್ಲಿ ಕೃತಜ್ಞತೆ ಮತ್ತು ನಿರಂತರ ಕಲಿಕೆ ಎಷ್ಟು ಮುಖ್ಯ ಎಂದು ಉದಾಹರಣೆ ಸಹಿತ ಮಕ್ಕಳಿಗೆ ಮನವರಿಗೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ. ಎನ್ ಮಾತನಾಡಿ ಮಹಿಳೆಯರು…
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಇದರ ವತಿಯಿಂದ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ಕುಲಶೇಖರ ಇಲ್ಲಿ 14 ರ ವಯೋಮಾನದ ಬಾಲಕಿಯರ ನೆಟ್ ಬಾಲ್ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು ಶಾಲಾ ವಿದ್ಯಾರ್ಥಿನಿಯಾದ ಮೌಲ್ಯ ಆರ್ ಶೆಟ್ಟಿ (ಎಂಟನೇ ತರಗತಿ) ಇವಳು ರಾಜ್ಯ ಮಟ್ಟದ ನೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಿದ್ಯಾಲತ ತರಬೇತಿ ನೀಡುತ್ತಿದ್ದಾರೆ.
ಸೆಪ್ಟೆಂಬರ್ 13 ರಂದು ಶುಕ್ರವಾರ ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ಕರ್ನಾಟಕ ಸಂಘದ ವತಿಯಿಂದ ನಡೆಸಿಕೊಂಡು ಬರುತ್ತಿರುವ ವಾರಾಂತ್ಯದ ಕನ್ನಡ ತರಗತಿ ಪುನರಾರಂಭೋತ್ಸವ ಸರಳ ರೀತಿಯಲ್ಲಿ ಸುಂದರವಾಗಿ ಜರುಗಿತು. ಮೊದಲಿಗೆ ಪ್ರಸಕ್ತ ಸಾಲಿನ ಕರ್ನಾಟಕ ಸಂಘದ ಕನ್ನಡ ಅಭಿವೃದ್ಧಿ ಕಾರ್ಯದರ್ಶಿಗಳಾದ ಭೀಮಪ್ಪ ಖೋತ ಅವರ ಸಂಕ್ಷಿಪ್ತ ಪ್ರಾಸ್ತವಿಕ ನುಡಿಗಳಿಂದ ಆರಂಭಿಸಿ, ಮಕ್ಕಳನ್ನು, ಪಾಲಕರನ್ನು ಸ್ವಾಗತಿವುದರೊಂದಿಗೆ, ಹೊಸದಾಗಿ ಕನ್ನಡ ಕಲಿಸುವ ಆಸಕ್ತಿ ತೋರಿಸಿ ಯಾವುದೇ ಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥದಿಂದ, ಮಕ್ಕಳಿಗೆ ಕನ್ನಡ ಹೇಳಿಕೊಡಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿರುವ ಕನ್ನಡ ಶಿಕ್ಷಕಿ ವೇದಾವತಿ ಅವರನ್ನು ಸಭೆಗೆ ಪರಿಚಯಿಸಿದರು. ಹಾಗೇ ತರಗತಿಯ ಪುನರಾರಂಭದಲ್ಲಿ ವಿಳಂಬಕ್ಕೆ ಕಾರಣ ನೀಡಿ ವಿಷಾದ ವ್ಯಕ್ತಪಡಿಸಿದರು. ಕನ್ನಡ ನಮ್ಮ ಹೆಮ್ಮೆಯ ಅಸ್ಮಿತೆ. ಅದನ್ನು ದಿನ ನಿತ್ಯ ಬಳಸೋಣ, ಬೆಳೆಸೋಣ. ಆ ಮೂಲಕ ಕನ್ನಡ ಉಳಿಸೋಣವೆಂದು ಕೋರಿದರು ಹಾಗೂ ಈ ನಿಟ್ಟಿನಲ್ಲಿ ಪಾಲಕರ ಸಲಹೆ ಸಹಕಾರ ಮುಕ್ತವಾಗಿ ತಿಳಿಸಲು ಕೋರುತ್ತಾ, ಸರ್ವರಿಗೂ ಸಂಘದ ಸದಸ್ಯರಾಗಲು ಪ್ರೇರೇಪಿಸಿ, ಸಂಘದ ಬೆಳ್ಳಿ ಹಬ್ಬದ ಈ…
ಕಾರ್ಕಳ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಇದರ ಪದಗ್ರಹಣ ಮತ್ತು ಇಂಜಿನಿಯರ್ಸ್ ಡೇ ಆಚರಣೆ ಸ್ಥಳೀಯ ಹೋಟೆಲ್ ಪ್ರಕಾಶ್ ನ ಸಂಭ್ರಮ ಸಭಾಂಗಣದಲ್ಲಿ ಜರಗಿತು. ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಉದ್ಘಾಟಿಸಿ, ಸ್ವಂತ ಕಟ್ಟಡದ ಅಗತ್ಯವಿದ್ದು ಸಿವಿಲ್ ಇಂಜಿನಿಯರ್ ಗಳಿಗೆ ಮಾನವೀಯತೆ ಅಗತ್ಯ ಎಂದರು. ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಸಿವಿಲ್ ಇಂಜಿನಿಯರ್ ಗಳಿಂದ ನಿರಂತರ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಸ್ವರ್ಣ ಕಾರ್ಕಳ ಎಂಬ ಹೊಸ ಕಲ್ಪನೆಯೊಂದಿಗೆ ಕಾರ್ಕಳ ಬೆಳೆಯುತ್ತಿದ್ದು ಅದರ ಮುಂದಿನ ಯೋಜನೆಗಳಿಗೆ ಅಸೋಸಿಯೇಷನ್ ನ ಸಹಕಾರ ಅಗತ್ಯ ಎಂದರು. ಮಂಗಳೂರು ಯೆಯ್ಯಾಡಿ ಮಂಜೇಶ್ವರ ಟೆಕ್ನೋ ಟ್ರೇಡರ್ಸ್ ನ ಅನಿಲ್ ಬಾಳಿಗ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷ ವಿಜಯರಾಜ್ ಶೆಟ್ಟಿ ಮಾತನಾಡಿ, ಪೂರ್ವಾಧ್ಯಕ್ಷರ ಸಹಕಾರದಿಂದ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ನಡೆಸುವುದಾಗಿ ತಿಳಿಸಿದರು. ಮಂಗಳೂರು ಎಂ.ಸಿ.ಎಫ್ ನ ಜಾಯಿಂಟ್ ಜನರಲ್ ಮ್ಯಾನೇಜರ್ ಕೆ.ಬಿ. ಕೀರ್ತನ್ ಕುಮಾರ್, ಟೆಕ್ನಿಕಲ್ ಕಸ್ಟಮರ್ ಸೊಲ್ಯೂಷನ್ಸ್ ನ…
ವಿದ್ಯಾಗಿರಿ: ‘ಪುಟವಿಟ್ಟ ಚಿನ್ನದಂತಿರುವ ಆಳ್ವಾಸ್ ಸಂಸ್ಥೆಯ ಮಾಹಿತಿಯನ್ನು ಹೊತ್ತು ತರುವ ‘ಆಳ್ವಾಸ್ ಹೊಂಗಿರಣ’ವು ಪ್ರಕಾಶಮಾನವಾಗಲಿ’ ಎಂದು ಉಜಿರೆಯ ಎಸ್ಡಿಎಂ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ.ಬಿ.ಎ.ಕುಮಾರಹೆಗ್ಡೆ ಹೇಳಿದರು. ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಗುರುವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸಿದ ಆಳ್ವಾಸ್ ಪದವಿ ಪೂರ್ವ ಕಾಲೇಜು ಹಾಗೂ ಶಾಲೆಗಳ ತ್ರೈಮಾಸಿಕ ಸಂಚಿಕೆ ‘ಆಳ್ವಾಸ್ ಹೊಂಗಿರಣ’ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೂರು ದಶಕಗಳಿಗೂ ಅಧಿಕ ಯಶೋಗಾಥೆ ಹೊಂದಿದ್ದು, ಇಲ್ಲಿನ ಮಾಹಿತಿಯನ್ನು ನೀಡುವ ಪತ್ರಿಕೆಯನ್ನು ನಾನು ಅತ್ಯಂತ ಸಂತಸದಿಂದ ಬಿಡುಗಡೆ ಮಾಡುತ್ತಿದ್ದೇನೆ ಎಂದರು. ಹಾಲನ್ನು ‘ಕ್ಷೀರ’ ಎನ್ನುವುದು ಉತ್ಪ್ರೇಕ್ಷೆಯಲ್ಲ. ಅಂತೆಯೇ ಆಳ್ವಾಸ್ ಅನ್ನು ನೀವು ಎಷ್ಟು ಬಣ್ಣಿಸಿದರೂ, ಅದು ವಿಶೇಷವಲ್ಲ. ಆಳ್ವಾಸ್ ‘ಕ್ಷೀರ ಸಾಗರ’. ಆಳ್ವಾಸ್ ಆವರಣವು ನಮ್ಮೆಲ್ಲರಿಗೂ ಎರಡನೇ ಮನೆ. ಈ ಭಾವನೆ ಮೂಡಿಸಿದ ಡಾ.ಎಂ. ಮೋಹನ ಆಳ್ವರು, ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದಂತೆ ‘ಮಹಾನ್ ಆಳ್ವರು’ ಎಂದು ಸಂತಸ ವ್ಯಕ್ತಪಡಿಸಿದರು. ಶಿಕ್ಷಣ, ಸಂಸ್ಕøತಿ,…
ಮೂಡುಬಿದಿರೆ: ಶಿಕ್ಷಣದಿಂದ ವ್ಯಕ್ತಿ ಹಾಗೂ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ ಎಲ್ ಧರ್ಮ ನುಡಿದರು. ಅವರು ಬುಧವಾರ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮ ‘’ಆಳ್ವಾಸ್ ಆಗಮನ 2024’’ ವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಕೌಶಲ್ಯ ಬಹಳ ಅವಶ್ಯಕ. ಅದರ ಜೊತೆ ಜೊತೆಗೆ ಇನ್ನೊಬ್ಬರನ್ನು ಪ್ರೀತಿಯಿಂದ ಕಾಣುವ ಮನಸ್ಥಿತಿ ಮೂಡಬೇಕು. ಈ ಆಗಮನ ಕಾರ್ಯಕ್ರಮದ ಮೂಲಕ ನಿಮ್ಮೊಳಗೆ ಹುದುಗಿರುವ ಆದಮ್ಯ ಚೇತನವನ್ನು ಉದ್ದೀಪನಗೊಳಿಸುವ ಕೆಲಸವಾಗಬೇಕಿದೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಗಿದೆ. ಈ ವೇದಿಕೆಯ ಮೂಲಕ ನಿಮ್ಮೊಳಗಿನ ಪ್ರತಿಭೆಯ ಅನಾವರಣದ ಜೊತೆಗೆ ಮಾನವೀಯ ಮೌಲ್ಯಗಳು ಇನ್ನಷ್ಟು ವೃದ್ಧಿಸಲಿ. ಧೈರ್ಯಶಾಲಿಗಳಾಗಿರಿ, ನಿಮ್ಮ ಸುತ್ತಮುತ್ತಲಿನವರನ್ನು ಪ್ರೀತಿಸಿ, ಹೆತ್ತ ತಂದೆ ತಾಯಿ, ಶಿಕ್ಷಕರನ್ನು ಗೌರವಿಸಿ. ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡುತ್ತಾ ಬಂದಿರುವ ಇಂಜಿನಿಯರಿಂಗ್ ಕ್ಷೇತ್ರ, ಕೇವಲ ಅವಿಷ್ಕಾರಕ್ಕೆ ಮಾತ್ರ ಸೀಮಿತವಾಗದೆ, ಒಬ್ಬ ಅದ್ಭುತ ಶಿಕ್ಷಕನನ್ನು ರೂಪಿಸುವ ಕೆಲಸವಾಗಬೇಕಿದೆ. ನಾನು ನನ್ನದು ಎಂಬ…
ಕರ್ನಾಟಕ ಸಂಘ ಕತಾರ್ ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ‘ಶಿಕ್ಷಕರ ದಿನ’ವನ್ನು ದೋಹಾದ ವೈಬ್ರೆಂಟ್ ಇಂಡಸ್ಟ್ರಿಯಲ್ ಸೇಫ್ಟಿ ಸೆಂಟರ್ ನಲ್ಲಿ ಆಯೋಜಿಸಿತು. ಸಂಘ ಸ್ಥಾಪನೆಯ 25ನೇ ವರ್ಷಾಚರಣೆ ಹಿನ್ನಲೆಯಲ್ಲಿ 25 ಸದಸ್ಯ ಶಿಕ್ಷಕರನ್ನು ಗೌರವಿಸಲಾಯಿತು. ಸಂಘವು ಆಯೋಜಿಸಿದ ವಾರಾಂತ್ಯದ ಭಾಷಾ ತರಗತಿಗಳನ್ನು ಸ್ವಯಂ ಪ್ರೇರಿತವಾಗಿ ನಡೆಸುತ್ತಿರುವ ಕನ್ನಡ ಶಿಕ್ಷಕರನ್ನೂ ಇದೇ ವೇಳೆ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಇಂಡಿಯನ್ ಕಲ್ಚರಲ್ ಸೆಂಟರ್ ನ ಅಧ್ಯಕ್ಷ ಮಣಿಕಂಠನ್ ಎ.ಪಿ, ಬ್ರಿಲಿಯಂಟ್ ಇಂಡಿಯನ್ ಇಂಟರ್ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲೆ ಆಶಾ ಶಿಜು ಭಾಗವಹಿಸಿದ್ದರು. ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಸಲಹಾ ಮಂಡಳಿ ಅಧ್ಯಕ್ಷ ಮಹೇಶ್ ಗೌಡ, ಸಲಹಾ ಮಂಡಳಿ ಅಧ್ಯಕ್ಷರಾದ ಮನ್ನಂಗಿ ಅರುಣ್ ದೀಪಕ್ ಶೆಟ್ಟಿ ಮಧು, ಡಾ. ಸಂಜಯ್ ಕುದರಿ, ಕರ್ನಾಟಕ ಮೂಲದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಕತಾರ್ ನ ವಿವಿಧ ಅಂತರಾಷ್ಟ್ರೀಯ ಶಾಲೆಗಳ ಶಿಕ್ಷಕರು, ಕರ್ನಾಟಕ ಸಂಘದ ಸದಸ್ಯರು ಹಾಗೂ ಮತ್ತಿತರರು ಈ…
ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಸೆಪ್ಟೆಂಬರ್ 20 ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯುವ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ, ಬೆಂಗಳೂರು ವಿ.ವಿ. ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ| ಗುರುಕಿರಣ್ ಶೆಟ್ಟಿಯವರು ಭಾಗವಹಿಸಿ ಸಂವಾದ ನಡೆಸಲಿದ್ದಾರೆ. ಹಿರಿಯ ಛಾಯಾಚಿತ್ರಗ್ರಾಹಕ ಯಜ್ಞ ಮಂಗಳೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸುವರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ ಉಪಸ್ಥಿತರಿರುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲೈಫ್ ಇನ್ವೆಸ್ಟ್ ಮೆಂಟ್ ಪ್ಲಾನ್ ವಿಭಾಗ ಮಂಗಳೂರು ಇದರ ವತಿಯಿಂದ ಉತ್ತಮ ಕೈಗಾರಿಕಾ ಉದ್ಯಮಿ ಎಂಬ ಪುರಸ್ಕಾರವನ್ನು ಮುಂಬಯಿಯ ಖ್ಯಾತ ಉದ್ಯಮಿ, ಸಮಾಜಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಅವರಿಗೆ ಉಡುಪಿಯ ಕಚೇರಿಯಲ್ಲಿ ನೀಡಲಾಯಿತು. ಎಸ್ ಬಿ ಐ ಲೈಪ್ ಕರ್ನಾಟಕ ವಲಯ ಬೆಂಗಳೂರು ಕೇಂದ್ರ ಕಚೇರಿ ರಿಜನಲ್ ಮ್ಯಾನೇಜರ್ ಪ್ರಕಾಶ್ ದುರ್ಗದಮಠ್, ಮಂಗಳೂರು ಕೇಂದ್ರ ಕಚೇರಿ ಡಿವಿಜನಲ್ ಮ್ಯಾನೇಜರ್ ಪ್ರಕಾಶ್ ಅಚಾರ್ಯ, ಎಲ್ ಎನ್ ಡಿ ಮ್ಯಾನೇಜರ್ ವನಿತಾ ರಾವ್, ವಿವೇಕ್ ಅಧಿಕಾರಿ ಆನಂದ್, ಅಶ್ವಿನಿ ಪಿ ಶೆಟ್ಟಿ ಮಧ್ಯ, ಪುಷ್ಷರಾಜ್ ಶೆಟ್ಟಿ ಮಧ್ಯ ಮುಂತಾದವರು ಉಪಸ್ಥಿತರಿದ್ದರು.