ಪುಣೆ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಮಹಾಸಭೆಯು ನವೆಂಬರ್ 21 ಶನಿವಾರದಂದು ದೇವಸ್ಥಾನದ ಪ್ರಾಂಗಣದಲ್ಲಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಶ್ರೀ ಸುಭಾಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ದೇವಸ್ಥಾನದ ಮುಂದಿನ ಮಹಾಪೂಜೆ ಮತ್ತು ವಾರ್ಷಿಕೋತ್ಸವದ ತಯಾರಿಯ ಬಗ್ಗೆ ಸಭೆಯಲ್ಲಿ ಚರ್ಚಿಸಿ ರೂಪುರೇಷೆಗಳನ್ನು ಸದಸ್ಯರಿಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಅಯ್ಯಪ್ಪ ಸೇವಾ ಸಂಘದ ವಿಶ್ವಸ್ಥ ಮಂಡಳಿಗೆ ಪೂರಕವಾಗಿ ಕಾರ್ಯಗೈಯುವ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಿ ಪ್ರಕಟಿಸಲಾಯಿತು. ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ದೇವಸ್ಥಾನದ ಪ್ರಮುಖ ಸೇವಾಕರ್ತರಲ್ಲಿ ಒಬ್ಬರಾದ ಜಗದೀಪ್ ಎ ಶೆಟ್ಟಿಯವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು. ಉಪ ಕಾರ್ಯಾಧ್ಯಕ್ಷರುಗಳಾಗಿ ವರದ ಕುಮಾರ್ ಎಂ ಶೆಟ್ಟಿ, ಗಣೇಶ್ ವಿ ಶೆಟ್ಟಿ, ಮಹೇಶ್ ಸಿ ಶೆಟ್ಟಿ, ಬಾಲಕೃಷ್ಣ ಕೆ ಶೆಟ್ಟಿ, ಪ್ರಕಾಶ್ ಐ ದೇವಾಡಿಗ, ಶಿವಪ್ರಸಾದ್ ಬಿ ಪೂಜಾರಿ, ದಿನೇಶ್ ಎಸ್ ಶೆಟ್ಟಿ ಅಂಜಾರು, ಆನಂದ್ ಎ ಶೆಟ್ಟಿ, ಕಾರ್ಯದರ್ಶಿಯಾಗಿ ಭಗವಾನ್ ದಾಸ್ ಶೆಟ್ಟಿ, ಕೋಶಾಧಿಕಾರಿಯಾಗಿ ಹರೀಶ್ ಟಿ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ತಾರಾನಾಥ್ ಅರ್ ಶೆಟ್ಟಿ, ಜೊತೆ ಕೋಶಾಧಿಕಾರಿಯಾಗಿ ಸತೀಶ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು. ಅಲ್ಲದೇ ಕಾರ್ಯಕ್ರಮ ನಿರ್ವಾಹಕರಾಗಿ ರಾಘು ಡಿ ಪೂಜಾರಿ, ರತ್ನಾಕರ ಅರ್ ಶೆಟ್ಟಿ, ಮಂಜುನಾಥ್ ಅರ್ ಶೆಟ್ಟಿ, ಪ್ರವೀಣ್ ಬಿ ಶೆಟ್ಟಿ ಹಾಗೂ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಿ ಪ್ರಕಟಿಸಲಾಯಿತು.

ನೂತನ ಕಾರ್ಯಕಾರಿ ಸಮಿತಿ ಕಾರ್ಯಾಧ್ಯಕ್ಷ ಜಗದೀಪ್ ಶೆಟ್ಟಿಯವರಿಗೆ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಸುಭಾಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಹೂಗುಚ್ಛ ನೀಡಿ ಅಭಿನಂದಿಸಿದರು. ವಿಶ್ವಸ್ಥ ಮಂಡಲಿಯ ವಿಶ್ವಸ್ಥ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ರಘುರಾಮ್ ರೈಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ, ವರದಿ : ಹರೀಶ್ ಮೂಡಬಿದ್ರಿ ಪುಣೆ










































































































