Author: admin

ಅನಾದಿ ಕಾಲದಿಂದಲೂ ನಾಯಿ ಮನುಷ್ಯನ ಸಂಗಾತಿ ಎಂದು ಹೇಳಲಾಗುತ್ತದೆ. ನಮ್ಮ ಪ್ರಾಚೀನ ಸಾಹಿತ್ಯದಲ್ಲಿ, ಅಲ್ಲಲ್ಲಿ ನಾಯಿಯ ಪ್ರಸ್ತಾಪವಿದೆ. ಕಾಲಭೈರವನ ಸುತ್ತ ನಾಯಿಗಳಿರುವ ಚಿತ್ರ ನೋಡಿದ್ದೇವೆ. ದತ್ತಾತ್ರೇಯನ ಸುತ್ತಲೂ ನಾಲ್ಕು ನಾಯಿಗಳಿರುತ್ತವೆ. ಮಹಾಭಾರತದಲ್ಲಿ ಯುಧಿಷ್ಠಿರನನ್ನು ಹಿಂಬಾಲಿಸಿ ಸ್ವರ್ಗದ ಬಾಗಿಲಿನವರೆಗೂ ಬರುವ ನಾಯಿಯ ಬಗ್ಗೆ ನಾವು ಓದಿದ್ದೇವೆ. ಆದರೆ, ಅದಕ್ಕೂ ಮುಂಚೆ, ವೇದಸಾಹಿತ್ಯದಲ್ಲೂ ನಾಯಿಯೊಂದು ಮುಖ್ಯ ಪಾತ್ರಧಾರಿಯಾಗಿದ್ದ ಕಥೆ ಇದು. ಸರಮೆ, ದೇವಲೋಕದಲ್ಲಿ ವಾಸವಿದ್ದ ಹೆಣ್ಣು ನಾಯಿ. ಆದುದರಿಂದಲೇ ನಾಯಿ ಜಾತಿಗೆ ‘ಸಾರಮೇಯ’ ಎಂಬ ಹೆಸರು ಬಂದಿರುವುದು. ಋಗ್ವೇದವು ಸರಮೆಯನ್ನು ಸುಪಾದ, ಸುಭಗಾ ಎಂದೂ ಕರೆದಿದೆ. ಋಗ್ವೇದದ ಒಂದು, ಮೂರು, ನಾಲ್ಕು ಮತ್ತು ಐದನೇ ಮಂಡಲಗಳಲ್ಲಿ ಸರಮೆಯ ಉಲ್ಲೇಖವಿದೆ. ಒಮ್ಮೆ ಅಸುರರ ಒಂದು ಗುಂಪು ಅಂಗೀರಸ ಋಷಿಗೆ ಸೇರಿದ ಹಸುಗಳನ್ನು ಆಶ್ರಮದಿಂದ ಅಪಹರಿಸಿ ಕೊಂಡು ಹೋಗಿ, ಗುಹೆಯಲ್ಲಿ ಬಚ್ಚಿಡುತ್ತಾರೆ. ಅಂಗೀರಸರು ಇಂದ್ರನ ಬಳಿ ಬಂದು ಗೋವುಗಳನ್ನು ಹುಡುಕಿಕೊಡುವಂತೆ ಕೇಳಿಕೊಳ್ಳುತ್ತಾರೆ. ಆಗ, ಆ ಹಸುಗಳನ್ನು ಹುಡುಕಲು ಇಂದ್ರನಿಗೆ ಸಹಾಯ ಮಾಡುವುದು ಈ ಸರಮೆ ಎಂಬ ಶ್ವಾನ.…

Read More

ಅವರು ಸ್ಟಂಟ್ ಮಾಡುವಾಗ ಹಲವು ಮೂಳೆಗಳು ಮುರಿದಿದ್ದವು. ಆದ್ರೂ ಮುರಿದ ಕಾಲಿನ ಮೂಳೆಗಳಿಗಿಂತಲೂ ಮುರಿದ ಹೃದಯದ (Broken Heart) ಕಾರಣಕ್ಕಾಗಿ ಫೈಟರ್ ಶೆಟ್ಟಿ ಕುಸಿದು ಬಿದ್ದರು. ಸತತ ಎಂಟು ಬಾರಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗುದ್ದಾಡಿ ಗೆದ್ದ ಶೆಟ್ಟಿ ಜೀವನದ ಹೋರಾಟದಲ್ಲಿ ಫೈಟ್ ಮಾಡದೇ ಕುಡಿದು, ಕುಡಿದೇ ಸೋಲೊಪ್ಪಿಕೊಂಡರು! ಇದು ಬೋಳು ತಲೆಯ ವಿಶಿಷ್ಟ ಖಳನಾಯಕ ಫೈಟರ್ ಶೆಟ್ಟಿಯವರ ಕೊನೆಗಾಲವನ್ನು ನೆನೆಪಿಸಿಕೊಂಡು ಅವರ ಆತ್ಮೀಯರು ಹೇಳುವ ದುಃಖದ ಮಾತುಗಳು. ಮುದ್ದಣ್ಣ ಬಾಬು ಶೆಟ್ಟಿ ಬಡತನದ ಬೇಗೆಯೊಂದಿಗೆ ಎಲ್ಲರಂತೆ ಉಡುಪಿ ಬಿಟ್ಟು ಅಂದಿನ ಬೊಂಬಾಯಿಗೆ ಕಾಲಿಟ್ಟಾಗ ಅವರಿಗೆ ಆಟವಾಡುವ ವಯಸ್ಸು. ಅಂದರೆ ಬರಿಯ ಒಂಬತ್ತು ವರ್ಷ. ಟಾಟಾ ಕ್ಯಾಂಟೀನ್ ನಲ್ಲಿ ಒರೆಸುವ, ತೊಳೆಯುವ, ಸಪ್ಲೈ ಕೆಲಸ ಮಾಡುವಾಗಲೆಲ್ಲಾ ಈ ಬಾಲಕನ ಮನಸಲ್ಲಿ ಇದ್ದುದ್ದೇ ಬೇರೆ ಕಡೆ. ವಯಸ್ಸು ಬೆಳೆಯುತ್ತಿದ್ದಂತೆ ದಷ್ಟಪುಷ್ಟವಾಗಿ ಬೆಳೆದ ಮುದ್ದಣ್ಣನನ್ನು ಮೊದಲು ಗುರುತಿಸಿದವರು ಮುಂಬೈಯ ಖ್ಯಾತ ಬಾಕ್ಸಿಂಗ್ ತರಬೇತುದಾರ ಕೆ ಎನ್ ಮೆಂಡನ್. ತನ್ನ ಗರಡಿಯಲ್ಲಿ ಪಳಗಿಸಿ ಬೆಳಗಿಸಿದ ಶಿಷ್ಯ ಗುರುವಿಗೆ…

Read More

ಸನಕಾದಿಗಳು ಬ್ರಹ್ಮನ ಮಾನಸ ಪುತ್ರರು. ನಾರಾಯಣನು ಪ್ರಜಾವೃದ್ಧಿ ಮಾಡಿಸಲು ಬ್ರಹ್ಮನಿಗೆ ತಿಳಿಸಿದಾಗ ಬ್ರಹ್ಮದೇವನು ಮೊದಲಿಗೆ ಸೃಷ್ಟಿಸಿದ್ದು ಸನಕ, ಸನಂದನ, ಸನಾತನ, ಸನತ್ಸುಜಾತ ಎಂಬ ನಾಲ್ಕು ಜನ ಸನಕಾದಿಗಳು. ಬ್ರಹ್ಮನು ಇವರಿಗೆ ಪ್ರಜಾವೃದ್ಧಿ ಮಾಡಲು ತಿಳಿಸಿದಾಗ ಸನಕಾದಿಗಳು ನಮಗೆ ಅದರ ವಿಷಯವೇ ಬೇಡ ನಾವು ದೇವ ಸ್ಮರಣೆ ಮಾಡುತ್ತಾ ಹರಿನಾಮವೊಂದೇ ಸಾಕೆಮಗೆ ಎಂದು ಅಲ್ಲಿಂದ ಹೊರಡುತ್ತಾರೆ. ಬ್ರಹ್ಮನು ಇರಿಸು ಮುರುಸಾಗಿ ತಾನು ಸೃಷ್ಟಿಸಿದ ಮಕ್ಕಳೇ ತನ್ನ ಮಾತನ್ನ ಕೇಳಲ್ವಲ್ಲ ಎಂದು ಬೇಸರಪಟ್ಟ. ನಂತರ ಈ ಸನಕಾದಿಗಳು ಹರಿನಾಮ ಸ್ಮರಣೆ ಮಾಡುತ್ತಾ ಎಲ್ಲಾ ಲೋಕಗಳನ್ನು ಸುತ್ತುತ್ತಿರುತ್ತಾರೆ. ಇವರು ಅರಿಷಡ್ವರ್ಗಗಳನ್ನು ತಮ್ಮ ಬಳಿಗೆ ಸುಳಿಯಲು ಅವಕಾಶ ಕೊಡದೇ ಐದು ವರ್ಷದ ಬಾಲಕರಿದ್ದಾಲೇ ದೇವರ ಸ್ಮರಣೆ ಮಾಡುತ್ತಿರುತ್ತಾರೆ. ಹೀಗೇ ಸ್ಮರಣೆ ಮಾಡುತ್ತಾ ಸಕಲ ಲೋಕಗಳನ್ನು ಸುತ್ತಿ ದೇವರನ್ನು ಕಾಣಲು ವೈಕುಂಠದ ಆರು ಬಾಗಿಲುಗಳನ್ನ ದಾಟಿ ಏಳನೇ ಬಾಗಿಲಿನ ಬಳಿ ಬಂದಾಗ ಅಲ್ಲಿ ಈ ಸನಕಾದಿಗಳನ್ನು ಒಳಗೆ ಹೋಗಲು ಬಿಡದೆ ತಡೆದವರು ಜಯ ವಿಜಯರು. ಈ ಜಯ ವಿಜಯರು…

Read More

ವಿದ್ಯಾಗಿರಿ: ಪಠ್ಯದ ಜೊತೆಗಿನ ಪಠ್ಯೇತರ ಚಟುವಟಿಕೆಗಳು ಸಮಗ್ರ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬಲ್ಲದು ಎಂದು ದಕ್ಷಿಣ ಕನ್ನಡ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಆಯುಕ್ತ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ನುಡಿದರು. ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಬಾಗಿತ್ವದಲ್ಲಿ ಕೃಷಿ ಸಿರಿ ವೇದಿಕೆಯಲ್ಲಿ ಗುರುವಾರ ‘ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪೋರಿ’ ಕಾರ್ಯಕ್ರಮದ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ, ರೋವರ್ಸ್ ಮತ್ತು ರೇಂಜರ್ಸ್ ಸಮಾಗಮವನ್ನು ಉದ್ಘಾಟಿಸಿ ಮಾತನಾಡಿದರು. ಬಾಲ್ಯದ ಕಲಿಕೆ ಉಜ್ವಲ ಭವಿಷ್ಯವನ್ನು ರೂಪಿಸುತ್ತದೆ. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದಲ್ಲಿ ವಿದ್ಯೆ ಮತ್ತು ಬುದ್ಧಿಯ ಜೊತೆಗೆ ಪಠ್ಯೇತರ ವಿಚಾರಗಳಲ್ಲಿ ತೊಡಗಿಸಿಕೊಂಡಾಗ ಸುಂದರ ಮನಸನ್ನು ಕಟ್ಟಿಕೊಳ್ಳಲು ಸಾಧ್ಯ. ಅವಕಾಶಗಳ ಸದುಪಯೋಗ ಹಾಗೂ ಸಂಸ್ಕಾರದ ಗುಣವನ್ನು ಬೆಳೆಸಿಕೊಳ್ಳಿ.ದೇಶಪ್ರೇಮ, ರಾಷ್ಟ್ರ ಪ್ರೇಮದೊಂದಿಗೆ ಬದುಕೋಣ, ಆದರೆ ಅನ್ಯ ದೇಶದ ನಡುವೆ ಸಂಘರ್ಷ ಬೇಡ ಎಂದರು. ದೇಶಪ್ರೇಮದ ಜೊತೆಗೆ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಿ. ಮನುಷ್ಯ ಬದುಕಲು ನೀರು,ಮಣ್ಣು,ಗಾಳಿ ಅತಿ…

Read More

ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಬ್ಯಾಂಕ್ ನ ಎಲ್ಲಾ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12ರಲ್ಲೂ ಬಿಜೆಪಿ ಸಹಕಾರಿ ಪ್ರಕೋಷ್ಟದ ಬೆಂಬಲಿತ ಅಭ್ಯರ್ಥಿಗಳು ದಿಗ್ವಿಜಯ ಸಾಧಿಸಿದ್ದಾರೆ.ಉದ್ಯಮಿ, ಸಮಾಜಸೇವಕ, ಸಿದ್ದಕಟ್ಟೆ ವಲಯ ಬಂಟರ ಸಂಘದ ಅಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬರವರು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಭರ್ಜರಿ ಜಯಗಳಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ಯುವ ನಾಯಕರಾಗಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಸಂದೇಶ್ ಶೆಟ್ಟಿಯವರು ಸಹೋದರ ಸಿದ್ದಕಟ್ಟೆ ಕೊಡಂಗೆ ವೀರ ವಿಕ್ರಮ ಜೋಡುಕೆರೆ ಕಂಬಳದ ರೂವಾರಿ ಸಂದೀಪ್ ಶೆಟ್ಟಿ ಪೊಡುಂಬರೊಂದಿಗೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

Read More

ಜಿಲ್ಲೆಯ ಕಂಬಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಿದ್ಧಕಟ್ಟೆ ಕೊಡಂಗೆ ವೀರ ವಿಕ್ರಮ ಜೋಡುಕರೆ ಬಯಲು ಕಂಬಳ ಸಮಿತಿ ವತಿಯಿಂದ ಒಂದೇ ವರ್ಷದಲ್ಲಿ ಮೂರು ಕಂಬಳ ಆಯೋಜನೆ ಸೇರಿದಂತೆ ವಿವಿಧ ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ರೂ ೧ ಲಕ್ಷಕ್ಕೂ ಮಿಕ್ಕಿ ಮೊತ್ತದ ದೇಣಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಹೇಳಿದ್ದಾರೆ. ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಹೋಟೆಲ್ ಅಶ್ವಿನಿ ಸಭಾಂಗಣದಲ್ಲಿ ನಡೆದ ಪ್ರಸಕ್ತ ಸಾಲಿನ ಕಂಬಳ ಲೆಕ್ಕಪತ್ರ ಮಂಡನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗೌರವ ಸಲಹೆಗಾರರಾದ ವಾಮದ ಪದವು ವಲಯ ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಕೀಲ ಸುರೇಶ ಶೆಟ್ಟಿ ಸಿದ್ಧಕಟ್ಟೆ, ಉದ್ಯಮಿ ಕಿರಣ್ ಕುಮಾರ್ ಮಂಜಿಲ, ಕಂಬಳ ಕೋಣಗಳ ಯಜಮಾನ ಬಾಬು ರಾಜೇಂದ್ರ ಶೆಟ್ಟಿಯವರು ವಿವಿಧ ಸಲಹೆ ನೀಡಿದರು. ಇದೇ ವೇಳೆ ಸಮಿತಿ…

Read More

ಪುಣೆ ಬಂಟ್ಸ್ ಅಸೋಸಿಯೇಷನ್ ನ ಸಮಾಜ ಕಲ್ಯಾಣ ಸೇವಾ ಕಾರ್ಯದಂಗವಾಗಿ ಗುರುನಾನಕ್ ಮೆಡಿಕಲ್ ಫೌಂಡೇಶನ್ ಸಹಯೋಗದೊಂದಿಗೆ ಸಮಾಜ ಬಾಂಧವರಿಗಾಗಿ ಮಲ್ಟಿಸ್ಪೆಷಾಲಿಟಿ ಉಚಿತ ಅರೋಗ್ಯ ತಪಾಸಣಾ ಶಿಬಿರವು ಜನವರಿ 19 ರವಿವಾರದಂದು ಗುರುನಾನಕ್ ಮೆಡಿಕಲ್ ಫೌಂಡೇಶನ್ ನ ಗುರುನಾನಕ್ ದರ್ಬಾರ್ ಹಾಲ್ (ಹಾಲಿವುಡ್ ಗುರುದ್ವಾರ) ಕ್ಯಾಂಪ್ ಪುಣೆ ಇಲ್ಲಿ ನಡೆಯಿತು. ಈ ಉಚಿತ ಅರೋಗ್ಯ ತಪಾಸಣಾ ಶಿಬಿರದಲ್ಲಿ ಮಲ್ಟಿಸ್ಪೆಷಾಲಿಟಿ ಆರೋಗ್ಯ ತಪಾಸಣೆ, ಸ್ತ್ರೀರೋಗ ಶಾಸ್ತ್ರ, ಮಕ್ಕಳ ರೋಗ ತಪಾಸಣೆ, ಕಣ್ಣು, ಹಲ್ಲು ತಪಾಸಣೆ, ಔಷದಿ ಮತ್ತು ರೋಗಶಾಸ್ತ್ರದ ಬಗ್ಗೆ ಮಾಹಿತಿ, ಸಕ್ಕರೆ ರೋಗ ತಪಾಸಣೆ ನಡೆಸಲಾಯಿತು.ಈ ಶಿಬಿರವನ್ನು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತು, ಶಿಬಿರದ ಸಂಯೋಜಕರಾದ ಸಂಘದ ಉಪಾಧ್ಯಕ್ಷರಾದ ಡಾ ಸುಧಾಕರ್ ಶೆಟ್ಟಿ, ಸತೀಶ್ ರೈ ಕಲ್ಲಂಗಳ ಗುತ್ತು, ಗುರುದ್ವಾರ ಗುರುನಾನಕ್ ದರ್ಬಾರ್ ನ ಅಧ್ಯಕ್ಷ ಸರ್ದಾರ್ ಚರಣ್ ಜೀತ್ ಸಿಂಗ್ ಶೈನಿ, ಗುರುನಾನಕ್ ಮೆಡಿಕಲ್ ಫೌಂಡೇಶನ್ ನ ಕಾರ್ಯಾಧ್ಯಕ್ಷ ಸರ್ದಾರ್ ಸಂತ್ ಸಿಂಗ್ ಮೋಕ್ಷಾ ಮತ್ತು…

Read More

ಯಕ್ಷಗಾನ ದಕ್ಷಿಣ ಕನ್ನಡ ಜಿಲ್ಲೆಯ ಗಂಡುಕಲೆ. ಆದರೆ ಈಗ ಮಹಿಳೆಯರೂ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಯಕ್ಷಗಾನವನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ ಎಂದು ಶ್ರೀ ಗುರುದೇವದತ್ತ ಸಂಸ್ಥಾಮ್ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮಿಜಿ ನುಡಿದರು. ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಯಕ್ಷದ್ಯುತಿ ಅಭಿನಂದನಾ ಸಮಿತಿ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಆಶ್ರಯದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಪೂರ್ಣಿಮಾ ಯತೀಶ್ ರೈಯವರ 35 ವರುಷಗಳ ಯಕ್ಷಯಾನದ ಸಂಭ್ರಮ ಯಕ್ಷದ್ಯುತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನದ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ನಡೆಯಬೇಕಾಗಿದೆ. ಯಕ್ಷಗಾನದಿಂದ ಸಂಸ್ಕೃತಿ, ಆಚಾರ, ವಿಚಾರಗಳನ್ನು ತಿಳಿಯಬಹುದಾಗಿದೆ ಎಂದರು. ಸಮಾರಂಭದಲ್ಲಿ ಹರಿನಾರಾಯಣ ದಾಸ ಅಸ್ರಣ್ಣ, ನಾಗೇಂದ್ರ ಭಾರದ್ವಾಜ್, ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಭುಜಬಲಿ ಧರ್ಮಸ್ಥಳ, ಪಟ್ಲ ಸತೀಶ್ ಶೆಟ್ಟಿ, ಶ್ರೀಪತಿ ಭಟ್ ಮೂಡಬಿದ್ರೆ, ಸುಧಾಕರ ಪೂಂಜ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ಯಶಸ್ವಿನಿ ಶೆಟ್ಟಿ, ಪುರಂದರ ರೈ…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಸದಾಶಿವ ಶೆಟ್ಟಿ ಕನ್ಯಾನ ಸಂಕೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಹವಾ ನಿಯಂತ್ರಿತ ಉನ್ನತ ಸೌಲಭ್ಯಗಳನ್ನು ಒಳಗೊಂಡ ಸದಾಶಿವ ಶೆಟ್ಟಿ ಕನ್ಯಾನ ಕನ್ವೆನ್ಷನ್ ಸೆಂಟರ್ ಸಭಾಭವನದ ನಿರ್ಮಾಣ ಕಾಮಗಾರಿಯ ಕುರಿತು ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿ ಶ್ರೀಮತಿ ಬಿಂದಿಯಾ ನಾಯಕ್ ರವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಪಂಚಾಯತ್ ರಾಜ್ ಅಸಿಸ್ಟೆಂಟ್ ಇಂಜಿನಿಯರ್ ಪ್ರಶಾಂತ್ ಆಳ್ವ ಕಾವೂರು,  ಮತ್ತಿತರರು ಉಪಸ್ಥಿತರಿದ್ದರು.

Read More

ಮೂಡಬಿದಿರೆ: ಅರೆವಾಹಕ ಚಿಪ್‌ಗಳು(ಸೆಮಿಕಂಡಕ್ಟಡ್ ಚಿಪ್) ಅತ್ಯಂತ ಅಗತ್ಯವಾಗಿದ್ದು ಅದನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದು ಇಲ್ಲಿ ತಯಾರಿಸುವುದಕ್ಕಿಂತ ಅಧಿಕವಾಗುತ್ತದೆ. ಪ್ರಸ್ತುತ ಭಾರತ ಸರಕಾರ ಅರೆವಾಹಕ ಚಿಪ್‌ಗಳನ್ನು ತಯಾರಿಸಲು ಎಪ್ಪತ್ತಾರು ಸಾವಿರ ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದ್ದು ಇದು ಮುಂಬರುವ ದಿನಗಳಲ್ಲಿ ಭಾರತ ತಂತ್ರಜ್ಞಾನದ ಮಹತ್ವದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಬೆಂಗಳೂರಿನ ಡಿಆರ್‌ಡಿಒ ಹಾಗೂ ಸಿತಾರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರವಿ ಎಂ. ಆರ್. ಹೇಳಿದರು. ಕರ್ನಾಟಕ ಸರಕಾರದ ವಿಜನ್ ಗ್ರೂಪ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿಯ ಅನುದಾನದೊಂದಿಗೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರೋನಿಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗವು ಆಯೋಜಿಸಿದ “ಮೆಮ್ಸ್ ಕ್ಯಾರಕ್ಟರೈಸೇಶನ್ ಟೆಕ್ನಿಕ್” ಎಂಬ ನಾಲ್ಕು ದಿನಗಳ ಉಪನ್ಯಾಸಕರ ಕೌಶಲ್ಯಾಭಿವೃದ್ಧಿ(ಎಫ್‌ಡಿಪಿ) ಕಾರ್ಯಾಗಾರವನ್ನು ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್  ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ಜ್ಞಾನದ ಸಂಪತ್ತು ಹೇರಳವಾಗಿದ್ದು, ಮೇಮ್ಸ್ ಹಾಗೂ ಸೆಮಿಕಂಡಕ್ಟರ್‌ಗೆ ಸಂಬಂದಿಸಿದ ನೂರೈವತ್ತುಕ್ಕೂ ಅಧಿಕ ಸಂಸ್ಥೆಗಳು ಬೆಂಗಳೂರಿನಲ್ಲಿವೆ. ನಾವು ಅನೇಕ ತಂತ್ರಜ್ಞಾನವನ್ನು ಕಂಡುಕೊಂಡಿದ್ದೇವೆ. ಭಾರತದಲ್ಲಿ ಉಡಾವಣೆಗೊಳ್ಳುವ ಕ್ಷಿಪಣಿಗಳು ಶೇ 99…

Read More