ಕೊಡಗಿನ ಚಿತ್ರ ಶಿಲ್ಪ ಕಲಾವಿದ ಶ್ರೀ ಬಿ. ಕೆ. ಗಣೇಶ್ ರೈ ಯವರ ಶಿಲ್ಪಕಲಾ ವೃತ್ತಿ ಜೀವನದ ೫೦ನೇ ವರ್ಷ ಸುವರ್ಣ ಮಹೋತ್ಸವಕ್ಕೆ ಕಲಾನಗರ ಸಾಂಸ್ಕöÈತಿಕ ವೇದಿಕೆ ಮಡಿಕೇರಿ ಇವರಿಂದ ಹುಟ್ಟೂರ ಸನ್ಮಾನ, “ಚಿತ್ರಶಿಲ್ಪ ಕಲಾ ತಪಸ್ವಿ” ಬಿರುದು ಪ್ರದಾನ, ೫೦ ವರ್ಷಗಳ ಹೆಜ್ಜೆ ಗುರುತುಗಳನ್ನು ದಾಖಲಿಸಿರುವ “ಕಲಾದರ್ಪಣ” ಅಭಿನಂದನಾ ಗ್ರಂಥ ಸಮರ್ಪಣೆ… ಕೊಡಗಿನ ಮಡಿಕೇರಿಯವರಾಗಿರುವ ಚಿತ್ರ ಶಿಲ್ಪ ಕಲಾವಿದ ಹಾಗೂ ಕ್ರಿಯಾತ್ಮಕ ಕಲಾನಿರ್ದೇಶಕರಾಗಿರುವ ಶ್ರೀ ಬಿ.ಕೆ.ಗಣೇಶ್ ರೈ ಯವರು ತಮ್ಮ ಚಿತ್ರ ಶಿಲ್ಪ ಕಲಾ ವೃತ್ತಿಯನ್ನು ೧೯೭೪ರಲ್ಲಿ ಪ್ರಾರಂಭಿಸಿ, ೨೦೨೫ಕ್ಕೆ ತಮ್ಮ ವೃತ್ತಿ ಜೀವನದ ೫೦ನೇ ವರ್ಷದ ಸುವರ್ಣ ಸಂಭ್ರಮ. ಮಡಿಕೇರಿ ಸರ್ಕಾರಿ ಜೂನಿಯರ ಕಾಲೇಜಿನ ಮಹಧ್ವಾರದ ಎರಡು ಬದಿಗಳಲ್ಲಿ ಪುಷ್ಪಾಂಜಲಿ, ಆನೆಗಳು ಉಬ್ಬುಶಿಲ್ಪ ಮತ್ತು ಸಿಂಹಗಳ ವಿಗ್ರಹಗಳನ್ನು ಮಾಡುವಲ್ಲಿ ಕಲಾವಿದರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಸ್ಕೂಲ್ (ಕಾವಾ) ನಲ್ಲಿ ಚಿತ್ರಕಲೆ, ಶಿಲ್ಪಕಲೆ, ಫೋಟೊಗ್ರಫಿ ಯಲ್ಲಿ ಡಿಪ್ಲೋಮಾ ಪಡೆಯುದರ ಜೊತೆಗೆ ಆರ್ಟ್ ಮಾಸ್ಟರ್ ಪದವಿಯನ್ನು ಸಹ ಪಡೆದಿದ್ದಾರೆ. ವಿರಾಜಪೇಟೆಸಂತ ಅನ್ನಮ್ಮ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಅದ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವಿರಾಜಪೇಟೆ ತಾಲೂಕು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಮಡಿಕೇರಿ ವಿದ್ಯುಚ್ಚಕ್ತಿ ಮಂಡಳಿಗೆ ೧೯೮೦ ದಶಕದಲ್ಲಿ ಬೃಹತ್ ಗಣಪತಿ ಮೂರ್ತಿಯನ್ನು ಮಾಡುತ್ತಾ ಮಡಿಕೇರಿ ದಸರ ಉತ್ಸವಕ್ಕೆ ಹಲವು ದೇವಾಸ್ಥಾನಗಳಿಗೆ ವಿವಿಧ ಭಂಗಿಯ ವಿವಿಧ ಅಳತೆಯ ದೇವತಾ ಮೂರ್ತಿಗಳನ್ನು ಮಾಡಿಕೊಟ್ಟಿರುವರು ಮಡಿಕೇರಿ ಪುರಭವನದ ಎದುರಿನಲ್ಲಿರುವ ಎರಡು ಬದಿಯಲ್ಲಿ ಮುಖವಿರುವ ಕಾವೇರಿ ಮಾತೆಯ ಪ್ರತಿಮೆಯನ್ನು ೧೯೮೦ರ ದಶಕದಲ್ಲಿ ಗಣೇಶ್ ರೈಯವರು ನಿರ್ಮಿಸಿದ್ದರು. ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಕಾವೇರಿ ಮಾತೆಯ ವರ್ಣ ಚಿತ್ರಗಳನ್ನು ಶಿವಕಾಶಿಯಲ್ಲಿ ಮುದ್ರಿಸಿ ಬಿಡುಗಡೆ ಮಾಡಿದ್ದಾರೆ. ಬರಹಗಾರರಾಗಿಯೂ ಹಲವಾರು ಲೇಖನಗಳನ್ನು ವಿವಿಧ ಪತ್ರಿಕೆ, ವೆಬ್ ಮಾದ್ಯಮಗಳಲ್ಲಿ ಪ್ರಕಟಿಸಿದ್ದಾರೆ. ಮಡಿಕೇರಿ ಕಾವೇರಿ ಕಲಾಕ್ಷೇತ್ರದ ಎದುರು ಬದಿಯಲ್ಲಿ ಎದುರು ಬದಿ ಹಾಗೂ ಹಿಂಬದಿಯಲ್ಲಿಯೂ ಸಹ ಮುಖವನ್ನು ಹೊಂದಿರುವ ಪೂರ್ಣ ರೂಪವಿರುವ ಶ್ರೀ ಕಾವೇರಿ ಮಾತೆಯ ಶಿಲ್ಪ ಗಣೇಶ್ ರೈಯವರ ಮಾಸ್ಟರ್ ಪೀಸ್ ಶಿಲ್ಪವಾಗಿದೆ. ಪ್ರಸ್ತುತ ದುಬಾಯಿಯಲ್ಲಿ ನೆಲೆಸಿದ್ದು ಜಾಹಿರಾತು ಸಂಸ್ಥೆಯಲ್ಲಿ ಕ್ರಿಯಾತ್ಮಕ ಕಲಾ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ, ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿರುವ ಗಣೇಶ್ ರೈಯವರು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಘಟಕದ ಉಪಾಧ್ಯಕ್ಷರಾಗಿ, ಕರ್ನಾಟಕ ಪ್ರೆಸ್ ಕ್ಲಬ್ ನ ಗಲ್ಫ್ ಘಟಕದ ಉಪಾಧ್ಯಕ್ಷರಾಗಿದ್ದಾರೆ. ಬಹುಮುಖ ವ್ಯಕ್ತಿತ್ವದ ಗಣೇಶ್ ರೈಯವರಿಗೆ ದುಬಾಯಿ ಸರ್ಕಾರ ಕಲ್ಚರಲ್ ಗೋಲ್ಡನ್ ವೀಸಾ ನೀಡಿ ಸನ್ಮಾನಿಸಿ ಗೌರವಿಸಿದೆ.
ಹಲವಾರು ಸಾಧನೆಗಳ ದಾಖಲೆಯನ್ನು ಮಾಡಿರುವ ಇವರಿಅ ಹಲವಾರು ಆಂತರಾಷ್ಟಿçÃಯ ಪ್ರಶಸ್ತಿಗಳ ಸರಮಾಲೆಯನ್ನೆ ಧರಿಸಿದ್ದಾರೆ. ಮಯೂರ ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ, ಶಿಲ್ಪಕಲಾ ಅಂತಾರಾಷ್ಟ್ರೀಯ ಪ್ರಶಸ್ತಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ಇನ್ನೂ ಹಲವಾರು ಅಂತರಾಷ್ಟಿçÃಯ ಪ್ರಶಸ್ತಿಗಳಿಂದ ಪುರಸ್ಕöÈತರಾಗಿದ್ದಾರೆ. ಗಣೇಶ್ ರೈಯವರು ದಿಜಿಟಲ್ ಗ್ರಾಫಿಕ್ಸ್ ನಲ್ಲಿ ವಿನ್ಯಾಸಗೊಳಿಸಿರುವ ಕಾವೇರಿ ಪುರಾಣ ಚಿತ್ರ ಕ್ಥೆ ಪುಸ್ತಕ ಕನ್ನಡ, ಅರೆಭಾಷೆ, ಇಂಗೀಷ್ ಮತ್ತು ತಮಿಳು ಭಾಷೆಗಳಲ್ಲಿ ಬಾಷೆಗಳಲ್ಲಿ ತಲಕಾವೇವೇರಿಯಲ್ಲಿ ತುಲಾ ಸಂಕ್ರಮಣದ ದಿನ ಬಿಡುಗಡೆ ಮಾಡಿದ್ದಾರೆ. ತನ್ನ ೫೦ ವರ್ಷಗಳ ಸುದೀರ್ಘ ಪಯಣದಲ್ಲಿ ತಮ್ಮ ಶಿಲ್ಪ ಕಲಾ ವೃತ್ತಿಯೋದಿಗೆ ಸಮಾಜ ಸೇವೆಯನ್ನು ಸಹ ಸಲ್ಲಿಸಿರುವ ಉತ್ತಮ ಸಂಘಟಕರಾಗಿದ್ದಾರೆ. ಶ್ರೀ ಬಿ. ಕೆ. ಗಣೇಶ್ ರೈಯವರಿಗೆ ಹುಟ್ಟೂರ ಸನ್ಮಾನವನ್ನು ಗೌರವ ಪೂರ್ವಕವಾಗಿ ನೀಡುತ್ತಾ ಚಿತ್ರಶಿಲ್ಪ ತಪಸ್ವಿ ಬಿರುದು ಪ್ರದಾನಿಸಿ ಹಾಗೂ ಐವತ್ತು ವರ್ಷಗಳ ಹೆಜ್ಜೆಗುರುತುಗಳನ್ನು ದಾಖಲಿಸಿ “ಕಲಾ ದರ್ಪಣ” ಅಭಿನಂದನಾ ಗ್ರಂಥವನ್ನು ಗೌರವಪೂರ್ವಕವಾಗಿ ಸಮರ್ಪಣೆ ಮಾಡಲಾಯಿತು. ಸನ್ಮಾನ ಪ್ರಕ್ರಿಯೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಸೂರ್ಯ ಕುಮಾರ್, ಕಲಾನಗರ ಸಾಂಸ್ಕöತಿಕ ವೇದಿಕೆಯ ಅಧ್ಯಕ್ಷ ಶ್ರೀ ಮಹೇಶ್ ಹಾಗೂ ಇನ್ನಿತರ ಗಣ್ಯಾತಿ ಗಣ್ಯರು ಸನ್ಮಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಶ್ರೀಮತಿ ಪ್ರತಿಮಾ ರೈ ಕಾರ್ಯಕ್ರಮ ನಿರೂಪಣೆ ಮಾಡಿದ್ದರು.
ಮಾಧ್ಯಮ ಪ್ರಕಟಣೆ.











































































































