ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಡಿ. ೩ ರಂದು ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳ ವಿವಿಧ ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳ ಪ್ರಾಂಶುಪಾಲರಿಗೆ ಮಕ್ಕಳಲ್ಲಿ ಮೌಲ್ಯಾಧಾರಿತ ಕೌಶಲ್ಯಗಳನ್ನು ಪೋಷಿಸುವುದು ಈ ವಿಷಯದ ಕುರಿತು ಸಮ್ಮೇಳನವನ್ನು ಆಯೋಜಿಸಲಾಗಿದೆ. ಬ್ರಹ್ಮಾವರದ ಲಿಟ್ಲ್ರಾಕ್ ಇಂಡಿಯನ್ ಸ್ಕೂಲ್ನ ನಿರ್ದೇಶಕ ಫ್ರೋ. ಮ್ಯಾಥಿವ್ ಸಿ ನೈನನ್, ಸಮ್ಮೇಳನವನ್ನು ಉದ್ಘಾಟಿಸಿ ಮುಖ್ಯ ಭಾಷಣವನ್ನು ಮಾಡಲಿದ್ದಾರೆ.

ಸಿಬಿಎಸ್ಇ ಮಾಜಿ ನಿರ್ದೇಶಕ ಜಿ ಬಾಲಸುಬ್ರಮಣಿಯನ್ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದು, ತಿರುಪತಿಯ ಆದಿಶಂಕರ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಟಿ ಪಿ ಶಶಿಕುಮಾರ್ ‘ಎಜ್ಯುಕೇಟ್ ಟು ಎಲಿವೇಟ್’ (ಸಾಮರ್ಥ್ಯವುಳ್ಳ ಮನಸ್ಸುಗಳು ಮತ್ತು ಕರುಣಾಳು ಹೃದಯಗಳನ್ನು ಪೋಷಿಸುವುದು), ಅಂತಾರಾಷ್ಟ್ರೀಯ ಮಟ್ಟದ ಕ್ವಿಜ್ ಮಾಸ್ಟರ್ ಗ್ರೇ ಕ್ಯಾಪ್ಸ್ ಸಂಸ್ಥಾಪಕ ಶ್ರೀ ಗಿರಿ ಬಾಲಸುಬ್ರಮಣಿಯಮ್ ಪಿಕ್ಬ್ರೆöನ್ ‘ಫ್ಯೂಚರ್ ಸ್ಕೂಲ್ಸ್’ (ಪಠ್ಯಕ್ರಮದ ಹೊರತಾಗಿ ಜ್ಞಾನದ ಮಹತ್ವ) ಈ ವಿಷಯಗಳ ಕುರಿತು ಪ್ರಬಂಧ ಮಂಡಿಸಲಿದ್ದಾರೆ. ಉಭಯ ಜಿಲ್ಲೆಗಳ ೮೬ ಶಾಲೆಗಳು ನೋಂದಾಯಿಸಿಕೊoಡಿದ್ದು ಪ್ರತೀ ಶಾಲೆಯಿಂದ ಪ್ರಾಂಶುಪಾಲರು, ಉಪಪ್ರಾ0ಶುಪಾಲರು ಮತ್ತು ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ಜಿ ಎಮ್ ನ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.











































































































