ರೋಟರಿ ಅಂತರಾಷ್ಟ್ರೀಯ ಜಿಲ್ಲೆ ವಲಯ -5 ರ ವತಿಯಿಂದ ನಡೆದ ವಲಯ ಮಟ್ಟದ ವಾರ್ಷಿಕ ಕ್ರೀಡಾಕೂಟದಲ್ಲಿ ರೋಟರಿ ಕ್ಲಬ್ ಕಾರ್ಕಳದ ಸದಸ್ಯರು ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ವಲಯ ಮಟ್ಟದ ಕ್ರೀಡಾ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಕ್ಲಬ್ನ ಮಹಿಳಾ ಹಾಗೂ ಪುರುಷ ಸದಸ್ಯರು ಅತ್ಲೇಟಿಕ್ಸ್, ವಾಲಿಬಾಲ್, ಥ್ರೋ ಬಾಲ್, ಶಟಲ್ ಬಾಡ್ಮಿಂಟನ್, ಹಗ್ಗ ಜಗ್ಗಾಟ, ಕ್ರಿಕೆಟ್, ಗುಂಡು ಎಸೆತ, ಉದ್ದ ಜಿಗಿತ, ಚೆಸ್, ಕ್ಯಾರಮ್, ಸೇರಿದಂತೆ ಹಲವು ವಿಭಾಗಗಳಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಕೈ ಸೇರಿಸಿಕೊಂಡರು. ಸಮಗ್ರ ಅಂಕದಲ್ಲಿ ಅಗ್ರಸ್ಥಾನ ಪಡೆದ ಕಾರ್ಕಳ ಕ್ಲಬ್ ಈ ಬಾರಿ ವಲಯ ಮಟ್ಟದಲ್ಲಿ ಅತ್ಯುತ್ತಮ ತಂಡವಾಗಿಯೂ ಹೆಸರು ಮಾಡಿದೆ.

ಕ್ಲಬ್ ಅಧ್ಯಕ್ಷರಾದ ಕೆ ನವೀನ್ ಚಂದ್ರ ಶೆಟ್ಟಿ ಅವರು ಮಾತನಾಡಿ, ಈ ಜಯ ರೋಟರಿ ಸ್ಫೂರ್ತಿ, ಒಗ್ಗಟ್ಟು, ಶಿಸ್ತಿನ ಪ್ರತಿರೂಪ. ಸದಸ್ಯರ ತಯಾರಿ, ಕ್ರೀಡಾಸ್ಫೂರ್ತಿ ಹಾಗೂ ತಂಡಾತ್ಮಕತೆ ನಮ್ಮ ಕ್ಲಬ್ಗೆ ಈ ಗೌರವ ತಂದುಕೊಟ್ಟಿವೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ವಲಯ ಅಧಿಕಾರಿಗಳು, ಕ್ಲಬ್ ಸದಸ್ಯರು ಹಾಗೂ ಕ್ರೀಡಾಪಟುಗಳು ಹಾಜರಿದ್ದರು. ಕ್ಲಬ್ ಕಾರ್ಯದರ್ಶಿ ಚೇತನ್ ನಾಯಕ್ ಅವರು ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ಜಿಲ್ಲಾ ಮಟ್ಟದ ವಿಭಾಗಗಳಲ್ಲಿ ಭಾಗವಹಿಸಿ ಮತ್ತೊಮ್ಮೆ ಚಾಂಪಿಯನ್ ಆಗಿ ಬರಮಾಡಿಕೊಳ್ಳುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.











































































































