Author: admin
ಕ್ರಿಕೆಟ್ ಪಂದ್ಯಕೂಟಗಳನ್ನು ಆಯೋಜನೆ ಮಾಡುವುದರಿಂದ ಯುವ ಮನಸ್ಸುಗಳು ಒಂದೆಡೆ ಸೇರುವಂತೆ ಮಾಡಲು ಅವಕಾಶವನ್ನು ಮಾಡಿಕೊಟ್ಟಂತೆ ಆಗುತ್ತದೆ. ಜತೆಯಲ್ಲಿ ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ಕೆಲಸ ಮಾಡಲು ಒಳ್ಳೆಯ ವೇದಿಕೆಯಾಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು. ಅಂಬಾ ಕ್ರಿಕೆಟರ್ಸ್ ಮುಳ್ಳಿಕಟ್ಟೆ ಹೊಸಾಡು ವತಿಯಿಂದ ಸೀತಾರಾಮ ಶೆಟ್ಟಿ ಕೇರಿಕೊಡ್ಲು ಅವರ ಸ್ಮರಣಾರ್ಥವಾಗಿ ಮುಳ್ಳಿಕಟ್ಟೆಯಲ್ಲಿ ನಡೆದ ರಾಘು ಟ್ರೋಪಿ-2025 ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಉದ್ಯಮಿ ಚಿತ್ತರಂಜನ್ ಹೆಗ್ಡೆ ಹರ್ಕೂರು ಉದ್ಘಾಟಿಸಿದರು. ಅಭಿನಂದನ್ ಶೆಟ್ಟಿ, ಮಂಜು ಪೂಜಾರಿ ಸೇನಾಪುರ, ಪಾತ್ರಿ ಮಂಜಯ್ಯ ಶೆಟ್ಟಿ, ರಘುರಾಮ ಶೆಟ್ಟಿ, ನವೀನ್ ಶೆಟ್ಟಿ ನಾರ್ಕಳಿ, ಕುಶಲ ಶೆಟ್ಟಿ ಬೆಳ್ಳಾಡಿ, ಚಂದ್ರಶೇಖರ್ ಪೂಜಾರಿ ಅರಾಟೆ, ಹರ್ಷವರ್ಧನ್ ಶೆಟ್ಟಿ ಕಾಳವಾರ, ಪ್ರದೀಪ್ ಕುಮಾರ್ ಶೆಟ್ಟಿ, ಕ್ರಿಕೆಟ್ ತಂಡದ ನಾಯಕರುಗಳಾದ ಸತೀಶ ಶೆಟ್ಟಿ, ರಾಘು ಶೆಟ್ಟಿ ಜಾಜಿಮಕ್ಕಿ, ಪ್ರವೀಣ್ ಪೂಜಾರಿ, ಶಶಿಕುಮಾರ್ ಶೆಟ್ಟಿ, ನರಸಿಂಹ ಶೆಟ್ಟಿ, ಸತೀಶ್ ದೇವಾಡಿಗ, ಸುತನ ಕುಮಾರ್ ಶೆಟ್ಟಿ, ಅಮರನಾಥ ಶೆಟ್ಟಿ, ಅಜಿತ್ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕ ರಾಜೇಶ…
ಸೇನಾಪುರ ಗ್ರಾಮದ ಬಂಟ್ವಾಡಿ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವವು ಜನವರಿ 24, 25ರಂದು ನಡೆಯಲಿದೆ. ಜನವರಿ 24 ರಂದು ಬೆಳಗ್ಗೆ ಅಮೃತ ಮಹೋತ್ಸವದ ಸ್ವಾಗತ ಗೋಪುರ ಉದ್ಘಾಟನೆ ನಡೆಯಲಿದೆ. ನಾರಾಯಣ ಶೆಟ್ಟಿ ಅತ್ರಾಡಿ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಲಿದ್ದಾರೆ. ಶಾಲೆಯ ಸಂಚಾಲಕ ಬಿ. ಅರುಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೋಟೇಶ್ವರ ಕಾಲೇಜಿನ ಉಪನ್ಯಾಸಕ ಗಣೇಶ ಹೆಬ್ಬಾರ್ ಕೆಳಾಕಳಿ ಶುಭಾಶಂಶನೆ ಮಾಡುವರು. ಕುಂದಾಪುರ ಉದ್ಯಮಿ ಅಭಿನಂದನ ಎ. ಶೆಟ್ಟಿ, ನಾರಾಯಣ ಎಂ. ಚಂದನ್ ಮುಂಬೈ, ನಿವೃತ್ತ ಮುಖ್ಯ ಶಿಕ್ಷಕಿ ಡೋರಾ ಸುವಾರಿಸ್, ಜಗದೀಶ ಶೆಟ್ಟಿ ಗುಡ್ಡಮ್ಮಾಡಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಸಂಜೆ 6ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಬಿ. ವೈ. ರಾಘವೇಂದ್ರ, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್, ಅಜಿತ್ ಪ್ರಸಾದ್ ಶೆಟ್ಟಿ ಬೆಂಗಳೂರು, ಚಿತ್ತರಂಜನ್ ಹೆಗ್ಡೆ ಹರ್ಕೂರು, ಆದರ್ಶ ದೇವಾಡಿಗ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. 25ರಂದು ಸಂಜೆ ಕಾರ್ಯಕ್ರಮದಲ್ಲಿ…
ತುಳು, ಕನ್ನಡ ಎನ್ನುವ ಭಾಷಿಕವಾದ ಒಳ ಬಿನ್ನತೆ ಸಂಘಟನೆಯಲ್ಲಿ ಬರಬಾರದು. ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಪ್ರಾದೇಶಿಕ ಭಿನ್ನತೆಯನ್ನು ಮೀರಿ ಬಂಟ ಸಮುದಾಯದ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಗೋವಾದ ಲಕ್ಷ್ಮಿ ಎಂಪೈರ್ ಹೋಟೆಲ್ ನಲ್ಲಿ ಜನವರಿ 19 ರಂದು ಆಯೋಜಿಸಿದ ಗೋವಾ ಬಂಟರ ಸಂಘದ ರಜತ ಸಂಭ್ರಮ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದರು. ಜ್ಞಾನ ಸರೋವರ ರೆಸಿಡೆನ್ಸಿಯಲ್ ಸ್ಕೂಲ್ ನ ಆಡಳಿತ ನಿರ್ದೇಶಕ ಸುಧಾಕರ ಶೆಟ್ಟಿ ಮಾತನಾಡುತ್ತಾ, ಬಂಟರು ಸ್ವಂತಿಕೆ, ಸ್ವಾಭಿಮಾನದಡಿಯಲ್ಲಿ ಬದುಕಿದವರು ಹಾಗೂ ಸಂಘಟನಾ ಚತುರರು. ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಚಾಪನ್ನು ಮೂಡಿಸುವುದರ ಜೊತೆಗೆ ನಾಡಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ ವಿಷಯಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದವರು. ಬಂಟರು ಉದ್ಯೋಗಿಗಳಾಗುವುದಕ್ಕಿಂತ ಉದ್ಯೋಗದಾತರಾಗುವ ಮೂಲಕ ಸಾಮಾಜಿಕವಾಗಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡವರು ಎಂದು ಹೇಳಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಗೋವಾ ಬಂಟರ ಸಂಘದ ರಜತ ಸಂಭ್ರಮದ ಅಧ್ಯಕ್ಷರಾದ ಕಾವಡಿ…
ಕರ್ನಾಟಕ ಸರಕಾರ ಡಾ| ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಹಾಗೂ ಕೇಂದ್ರೀಯ ಸಂಸ್ಕೃತ ವಿದ್ಯಾಲಯದ ಕುಲಪತಿಗಳು ಮತ್ತು ವಿಶ್ವವಿದ್ಯಾಲಯದ ಉಪಕುಲಪತಿಗಳ ಸಮಕ್ಷಮದಲ್ಲಿ ಯುವ ಉದ್ಯಮಿ, ಸಮಾಜ ಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಬೆಂಗಳೂರು ಬಂಟರ ಸಂಘದ ಮಾಜಿ ಕೋಶಾಧಿಕಾರಿ ಡಾ. ದೀಪಕ್ ಶೆಟ್ಟಿ ಬಾರ್ಕೂರು ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು.
“ಅವಿಭಕ್ತ ಕುಟುಂಬ ವ್ಯವಸ್ಥೆಯು ನಮ್ಮ ದೇಶದ ಶ್ರೀಮಂತ ಸಂಸ್ಕೃತಿಯ ಭಾಗವಾಗಿದೆ. ಈ ವ್ಯವಸ್ಥೆಯಲ್ಲಿ ಕುಟುಂಬದ ಸದಸ್ಯರಲ್ಲಿ ನಾವು ನಮ್ಮವರು ಎಂಬ ಭಾವನೆ ಮೂಡಿ ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ ಸಹಕಾರ ಮನೋಭಾವದಿಂದ ಜೀವನ ಸಾಗಿಸುತ್ತಾರೆ. ಇದು ಉತ್ತಮ ಸಮಾಜ ಮುನ್ನಡೆಗೆ ಸಹಾಯವಾಗುತ್ತದೆ. ಹಾಗೆಯೇ ಶಾಲೆಯೂ ಕೂಡ ಒಂದು ತುಂಬು ಕುಟುಂಬಕ್ಕೆ ಉದಾಹರಣೆಯಾಗಿದ್ದು, ಇಲ್ಲಿ ಮಕ್ಕಳು, ಪೋಷಕರು, ಶಿಕ್ಷಕರು, ಆಡಳಿತ ಮಂಡಳಿ, ಬೋಧಕೇತರ ಸಿಬ್ಬಂದಿಗಳು ಇಡೀ ಕುಟುಂಬದ ಸದಸ್ಯರು. ಇಲ್ಲಿ ಯಾರಿಗಾದರೂ ಸಮಸ್ಯೆ ಎದುರಾದರೂ ಆಡಳಿತ ಮಂಡಳಿ ಮತ್ತು ಎಲ್ಲರೂ ಜೊತೆಗೆ ನಿಂತು ಸಹಕರಿಸುತ್ತಾರೆ. ಅಂತೆಯೇ ನಮ್ಮ ಸಂಸ್ಥೆಯೂ ಹಿಂದಿನಿಂದಲೂ ಈ ಸಹಕಾರ ತತ್ವದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ರೀತಿ ಸಹಕಾರ ಮತ್ತು ಹೊಂದಾಣಿಕೆಯಿಂದ ಸಂಸ್ಥೆಗಳು ಉತ್ತಮವಾಗಿ ಮುನ್ನೆಡೆಯಲು ಸಾಧ್ಯವಾಗುತ್ತದೆ” ಎಂದು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಡಾ| ರಮೇಶ್ ಶೆಟ್ಟಿ ಹೇಳಿದರು. ಇವರು ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಶಾಲೆಯ ಒಂದನೇ…
ವಿದ್ಯಾಗಿರಿ: ನವದೆಹಲಿಯಲ್ಲಿ ನಡೆಯಲಿರುವ 2025ರ ಗಣರಾಜ್ಯೋತ್ಸವ ದಿನದ ಪಥಸಂಚಲನ ಶಿಬಿರಕ್ಕೆ (ಆರ್‌ಡಿಸಿ) ಆಳ್ವಾಸ್ ಶಿಕ್ಷಣ ಸಂಸ್ಥೆಯ ಎನ್‌ಸಿಸಿ ಘಟಕದ ಐದು ಕೆಡೆಟ್‌ಗಳು ಆಯ್ಕೆಯಾಗಿದ್ದಾರೆ. ವಾಯುದಳ ವಿಭಾಗದಲ್ಲಿ ಎನ್‌ಸಿಸಿ ಕರ್ನಾಟಕ ಹಾಗೂ ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಲಿರುವ ಹಾರ್ದಿಕ್ ಶೆಟ್ಟಿ, ನಿರೂಪ್ ಎಸ್., ಜೇವಿಟಾ ಪರ್ಲ್ ಹಾಗೂ ಪ್ರಶಸ್ತಿ ಪಾಲ್ಗೊಳ್ಳಲಿದ್ದಾರೆ. ಪ್ರಮುಖವಾಗಿ ಪ್ರಶಸ್ತಿ ಈ ಬಾರಿಯ ಪ್ರಧಾನ ಮಂತ್ರಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾಳೆ. ನೌಕಾದಳ ವಿಭಾಗದಲ್ಲಿ 5ನೇ ಕರ್ನಾಟಕ ನೌಕಾ ಘಟಕವನ್ನು ಪ್ರತಿನಿಧಿಸಲಿರುವ ಅಜ್‌ರಾಜ್ ಆಯ್ಕೆಯಾಗಿದ್ದಾರೆ. ಆಳ್ವಾಸ್‌ನಿಂದ ಒಟ್ಟು 49 ಕೆಡೆಟ್‌ಗಳು ಭಾಗಿ ಇಲ್ಲಿಯವರೆಗೆ ಸಂಸ್ಥೆಯಿಂದ 44 ಕೆಡೆಟ್‌ಗಳು ಗಣರಾಜ್ಯೋತ್ಸವ ದಿನದ ಪಥಸಂಚಲನ ಶಿಬಿರದಲ್ಲಿ ಪಾಲ್ಗೊಂಡಿದ್ದು, ಈ ಬಾರಿಯ 5 ಜನರು ಸೇರಿದಂತೆ ಒಟ್ಟು 49 ವಿದ್ಯಾರ್ಥಿಗಳು ಆಳ್ವಾಸ್ ಒಂದೇ ಸಂಸ್ಥೆಯಿAದ ಪಾಲ್ಗೊಳ್ಳುತ್ತಿರುವುದು ಉಲ್ಲೇಖಾರ್ಹ ಸಾಧನೆಯಾಗಿದೆ. ಆಳ್ವಾಸ್ ವಿದ್ಯಾರ್ಥಿಗಳ ಕೊಡುಗೆ ಆಳ್ವಾಸ್ ಸಂಸ್ಥೆಯಲ್ಲಿ ಇಲ್ಲಿಯವರೆಗೆ 57ಕ್ಕೂ ಅಧಿಕ ಸೇನಾ ಶಿಬಿರಗಳು ನಡೆದಿದ್ದು, ಐದು ಸೇನಾ ನೇಮಕಾತಿ ರ‍್ಯಾಲಿಗಳು, ಅಗ್ನಿಪಥ ನೇಮಕಾತಿ ಪರೀಕ್ಷೆ ಸೇರಿದಂತೆ ಹತ್ತು ಹಲವು…
ಕಾರ್ಕಳ : ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು ನಡೆಸಿದ ಸಿ.ಎಸ್.ಇ.ಇ.ಟಿ(ಕಂಪೆನಿ ಸೆಕ್ರೇಟರಿ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್)ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದು, ಸಾಧಕ 28 ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಡುಪಿಯ ಸಿ.ಎ ಮಹೇಂದ್ರ ಶೆಣೈ ಪಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಕಂಪೆನಿ ಸೆಕ್ರೇಟರಿ, ಚಾರ್ಟೆಂಟ್ ಅಕೌಂಟೆನ್ಸ್‍ನ ಅವಕಾಶಗಳ ಬಗ್ಗೆ ಹೇಳಿದರು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಾದ ಕು.ರಕ್ಷಾ ರಾಮಚಂದ್ರ, ಖತಿಜಾತುಲ್ ರಾಫಿಯಾ, ಹೃಷಿಕೇಶ್ ಸತೀಶ್ ಶೆಟ್ಟಿ, ಮ್ಯಾಕ್ಲಿನ್ ಜಾಕ್ ಡಿ’ಮೆಲ್ಲೊ, ಶ್ರೀಧಾ ಶೆಟ್ಟಿ, ರಕ್ಷಿತಾ ಜನ್ನೆ, ಶೋಧನ್ ಕುಮಾರ್ ಶೆಟ್ಟಿ, ಶ್ರಜಿತ್ ಕುಲಾಲ್, ಶ್ರಾವಂತ್ ಕುಮಾರ್ ಶೆಟ್ಟಿ, ಪ್ರಥಮ್ ನಾಯಕ್, ರಕ್ಷಿತ್ ಆರ್, ಪ್ರಜನ್, ಅಜಯ್ ಡಿ. ನಾಯಕ್, ಆಯುಶ್ ಶೆಟ್ಟಿ, ನಮೀಶ್ ಎನ್ ಶೆಟ್ಟಿ, ವಿಘ್ನೇಶ್, ಕೆ.ಆಂಕಿತಾ ಪೈ, ಪ್ರೇರಣಾ ಸುನಿಲ್ ಕುಮಾರ್, ಸಮರ್ಥ್ ವಿಜಯ್ ದೇವಾಡಿಗ, ಅಪೇಕ್ಷಾ, ಹುದಾಹಮ್ರಾ, ಕಾವ್ಯ ಸೆಲ್ಲಾಮುತು,…
ವಿದ್ಯಾಗಿರಿ: ದಿ ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ ನಡೆಸುವ ಕಂಪೆನಿ ಸೆಕ್ರಟರೀಸ್ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್ (ಸಿಎಸ್‌ಇಇಟಿ) ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಶಿಕ್ಷಣ ಸಂಸ್ಥೆಗಳ 24 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕೀರ್ತನ್ ಶೆಟ್ಟಿ (126), ಪವಿತ್ರಾ ಪ್ರಭು (121), ಗಗನ್ ಟಿ.ವಿ., ಅದಿತಿ(119), ಗ್ಲೆನನಿಷಾ ಸ್ಯಾಂಕ್ಟಿಸ್ (115), ಯಶಸ್ ಆರ್ (114), ಸೃಷ್ಟಿ ಎನ್. ಪೂಜಾರಿ (112), ಸೃಷ್ಟಿ ಅಶೋಕ್ (108), ನಿಹಾರಿಕಾ ಎಸ್.ಎಂ., ಶ್ರದ್ಧಾ ಕೋಟ್ಯಾನ್ (106), ಚಿನ್ಮಯಿ ಹೊಳ್ಳ, ಪ್ರಥ್ವಿಕ್ ಶೆಟ್ಟಿ (104), ಮುಕುಲ್ ಸಾಯಿ ಕಟ್ಟಾ ಚಂದ್ರ ಶೇಖರ್ (103), ಚಂದನ್ ವೈ., ನಿಶಿತಾ, ರಾಹುಲ್ ಎಚ್.ಎಸ್., ಶಿವತ್ಮಜಾ ಆರ್, ದೇಷ್ಮಾ, ಕಾವ್ಯ, ಸಂಜನಾ ವಿ., ವೀರವರ್ಧನ ರೆಡ್ಡಿ, ಧನುಷ್ ಎಲ್.ಎಸ್., ಪ್ರಥಮ್ ಎಸ್, ಸನ್ನಿಧಿ (100) ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು. ವಿದ್ಯಾರ್ಥಿಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.
ಮಂದಾರ್ತಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಚ್. ಗಂಗಾಧರ ಶೆಟ್ಟಿ, ಉಪಾಧ್ಯಕ್ಷರಾಗಿ ಕಾಡೂರು ಸುರೇಶ್ ಶೆಟ್ಟಿ
ಮಂದಾರ್ತಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಚ್. ಗಂಗಾಧರ ಶೆಟ್ಟಿ, ಉಪಾಧ್ಯಕ್ಷರಾಗಿ ಕಾಡೂರು ಸುರೇಶ್ ಶೆಟ್ಟಿ ಆಯ್ಕೆಯಾದರು. ಜನವರಿ 20 ರಂದು ಸಂಘದ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅವಿರೋಧವಾಗಿ ಇವರ ಆಯ್ಕೆ ನಡೆಯಿತು. ಇಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ತಂಡದ ಎಲ್ಲಾ 12 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಸಂದರ್ಭ ನಿರ್ದೇಶಕರಾದ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಗಣೇಶ್ ಶೆಟ್ಟಿ ಮಂದಾರ್ತಿ, ಜಲಂದರ ಶೆಟ್ಟಿ ನಡೂರು, ದಿನೇಶ್ ಮರಕಾಲ ಮಂದಾರ್ತಿ, ಚಂದ್ರಶೇಖರ ಪೂಜಾರಿ ಶಿರೂರು, ಶಂಭು ಶಂಕರ್ ರಾವ್ ಮಂದಾರ್ತಿ, ಗುಲಾಬಿ ಬಾಯಿ, ಪ್ರೇಮಾ ಮರಕಾಲ್ತಿ, ಬಸವ ನಾಯ್ಕ ಕಾಡೂರು, ರಾಧಾ ಹೆಗ್ಗುಂಜೆ ಉಪಸ್ಥಿತರಿದ್ದರು. ಚುನಾವಣಾಧಿಕಾರಿ ರೋಹಿತ್‌ಕುಮಾರ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ಶೆಟ್ಟಿ ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಕಾತ್ರಜ್ ಶ್ರೀ ಅಯ್ಯಪ್ಪ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ಜನವರಿ 09 ರಿಂದ 12 ರವರೆಗೆ ನಡೆಯಿತು. ಜನವರಿ 12 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ, ಶಿವ ದೇವರು ಹಾಗೂ ಸಪರಿವಾರ ದೇವರುಗಳ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ವಿಧಿ ವಿಧಾನಗಳು, ಪೂಜಾ ಕಾರ್ಯಗಳು ನಡೆದವು.ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಮಹಾಗಣಪತಿ ಹೋಮ, ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಶಿವ ದೇವರ ಪ್ರತಿಷ್ಠೆ, ಶ್ರೀ ಅಯ್ಯಪ್ಪ ದೇವರ ಪುನಃ ಪ್ರತಿಷ್ಠೆ, ಶ್ರೀ ಮಹಾಗಣಪತಿ ದೇವರ ಪುನಃ ಪ್ರತಿಷ್ಠೆ, ಶ್ರೀ ದುರ್ಗಾ ದೇವಿಯ ಪುನಃ ಪ್ರತಿಷ್ಠೆ, ನಾಗ ಪ್ರತಿಷ್ಠೆ, ಶ್ರೀ ನವಗ್ರಹ ಪ್ರತಿಷ್ಠೆ, ಅಷ್ಠಬಂಧ ಕ್ರಿಯೆ, ಜೀವ ಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ, ಅಶ್ಲೇಷಾಬಲಿ, ಅಲಂಕಾರ ಪೂಜೆ, ಮಧ್ಯಾಹ್ನ ಗಂಟೆ 12.30ರಿಂದ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರಗಿತು. ಸಂಜೆ ದೀಪಾಲಂಕಾರ ಸಹಿತ ರಂಗ ಪೂಜೆ, ಉತ್ಸವ ಬಲಿ, ಪ್ರಸಾದ್ ವಿತರಣೆ ಮತ್ತು ಅನ್ನ…