Author: admin

ತುಳುನಾಡಿನಲ್ಲಿ ಅದೆಷ್ಟೋ ಜಾತಿ, ಧರ್ಮ, ಭಾಷೆ ಆಚಾರ ವಿಚಾರ ಬಹು ಸಂಸ್ಕಾರಗಳಿದ್ದರೂ ಅನೇಕತೆಯಲ್ಲಿ ಏಕತೆಯ ನೆಲ. ದೈವ ದೇವರ ಸಂಗಮ ಭೂಮಿ. ಇಲ್ಲಿನ ಎಲ್ಲಾ ದೇವಸ್ಥಾನಗಳ ವಿಶೇಷ ಎಂದರೆ ಮಾಂಸಾಹಾರಿ ದೈವಗಳಿಗೆ ಗರ್ಭಗುಡಿಯ ಬಲ ಭಾಗದಲ್ಲೇ ನೆಲೆ ನೀಡಿರುವುದು. ಆದ್ದರಿಂದಲೇ ಆ ತನಕ ಯಾವುದೇ ಮಾರಕ ಪ್ರಾಕೃತಿಕ ವಿಕೋಪಗಳು ಇಲ್ಲಿಗೆ ಬಾಧಿಸಿದ ಚರಿತ್ರೆಯಿಲ್ಲ. ಇಲ್ಲಿನ ಯಾವುದೇ ಅತೀ ಪುರಾತನ ದೇವಾಲಯದ ಇತಿಹಾಸ ಸಂಶೋಧಿಸಿದಾಗ ಹೆಚ್ಚೆಂದರೆ 800 ವರ್ಷಗಳ ಹಿಂದೆ ನಿರ್ಮಾಣವಾಗಿರಬಹುದೆಂದು ತಿಳಿಯುತ್ತದೆ. ಆದರೆ ಅದಕ್ಕಿಂತ ಎಷ್ಟೋ ಸಾವಿರ ವರ್ಷಗಳ ಹಿಂದೆಯೇ ಇಲ್ಲಿ ಆದಿ ದ್ರಾವಿಡರು ನೆಲೆಯಾಗಿದ್ದರೆಂದೂ, ಕಾಡಾಡಿಗಳಾದ ಆ ಜನಾಂಗ ಸ್ವಂತ ಬೆಳೆ ಬೆಳೆದು (ಕೃಷಿ) ಬದುಕಲು ಬಯಲು ಪ್ರದೇಶಕ್ಕೆ ಬರುವಾಗ ತಮ್ಮ ವನ ಸಂಸ್ಕಾರದ ನಾಗ ದೈವಗಳನ್ನು ನಾಡಿನಲ್ಲಿಯೂ ಆರಾಧಿಸುತ್ತಿದ್ದರೆಂದೂ, ಆ ಕಾಲವನ್ನು ಇದಮಿತ್ಥ ಎನ್ನಲು ಅಸಾಧ್ಯ. ಆದರೆ ಇಷ್ಟು ಮಾತ್ರ ಸತ್ಯ. ನೇಗಿಲ ಸಂಸ್ಕಾರವೇ ನಾಗರಿಕತೆಯ ಮೂಲ ಆಗಿರಬೇಕಲ್ಲವೇ? ಸರಿ ಸುಮಾರು 1400 ವರ್ಷಗಳಷ್ಟು ಸುಧೀರ್ಘ ಕಾಲ ತೌಳವ…

Read More

ಮೂಡುಬಿದಿರೆ: ಕೇರಳದವರು ತಾವೂ ಎಲ್ಲೇ ನೆಲೆಸಿದ್ದರೂ ತಮ್ಮ ಆಚರಣೆ, ಸಂಸ್ಕøತಿಯನ್ನು ಸದಾ ಪೋಷಿಸುತ್ತಾ ಸಾಗುತ್ತಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ನುಡಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೇರಳ ಸಮಾಜಂ ಸಂಘದ ವತಿಯಿಂದ ನಡೆದ “ಕಲೋತ್ಸವಂ- 2024″ನ್ನು ಉದ್ಘಾಟಿಸಿ ಮಾತನಾಡಿದರು. ಕರಾವಳಿ ಹಾಗೂ ಕೇರಳದ ಆಚರಣೆಗಳಲ್ಲಿ, ಜನರ ನಡವಳಿಕೆಯಲ್ಲಿ ಅನೇಕ ಹೋಲಿಕೆಗಳು ಕಂಡು ಬರುತ್ತವೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯ ಮಲಯಾಳಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಅನ್ಯೋನ್ಯತೆಯಿಂದ ಸಹಜೀವನ ನಡೆಸುತ್ತಿದ್ದಾರೆ. ನಮ್ಮ ಪ್ರತಿಷ್ಠಾನವು ಕೇರಳದ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಇಲ್ಲಿ ಪರಿಚಯಿಸಿ ಪ್ರಚುರ ಪಡಿಸಿದೆ. ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ದೇವರ ಸ್ವಂತ ನಾಡು ಎಂದೆ ಕರೆಸಿಕೊಳ್ಳುವ ಕೇರಳ, ಎಲ್ಲಾ ಸಾಂಸ್ಕೃತಿಕ ಆಚರಣೆಗಳಿಗೆ ಸರಿಯಾದ ಅವಕಾಶವನ್ನು ಕಲ್ಪಿಸಿದೆ. ನಮ್ಮ ದೇಶದ ಸಂವಿಧಾನ ಎಲ್ಲಾ ಧರ್ಮದ ಜನರ ಆಚರಣೆಗಳಿಗೆ ಸಮಾನ ವೇದಿಕೆ ನೀಡಿದೆ. ದ್ವೇಷದಿಂದ…

Read More

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕಾಲೇಜುಗಳ ‘ಆಳ್ವಾಸ್ ಕ್ರೀಡಾಕೂಟ’ ಶನಿವಾರ ಸ್ವರಾಜ್ ಮೈದಾನದಲ್ಲಿ ನಡೆಯಿತು. ಮಂಗಳೂರು ವಿಶ್ವವಿದ್ಯಾಲಯ, ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ವೈಯಕ್ತಿಕ, ಗುಂಪು, ಫೀಲ್ಡ್, ಟ್ರ್ಯಾಕ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಆರಂಭದಲ್ಲಿ ವಿದ್ಯಾರ್ಥಿಗಳ ಪಥಸಂಚಲನವು ಗಮನ ಸೆಳೆಯಿತು. ಬ್ಯಾಂಡ್ ತಂಡ ಹಾಗೂ ಧ್ವಜಧಾರಿಗಳು ಸಾಥ್ ನೀಡಿದರು. ಅತಿಥಿಗಳಿಗೆ ಗೌರವ ವಂದನೆ ನೀಡಲಾಯಿತು. ಆಳ್ವಾಸ್ ಕ್ರೀಡಾಕೂಟವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಕಿಶೋರ್ ಕುಮಾರ್ ಸಿ. ಕೆ. ಮಾತನಾಡಿ, ಆಳ್ವಾಸ್ ಪ್ರಾಯೋಜಿಸುವ ಕ್ರೀಡಾಕೂಟಗಳು ಕ್ರೀಡಾ ಹಬ್ಬಗಳಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ. ಮಂಗಳೂರು ವಿವಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳ ಕೊಡುಗೆ ಅಪಾರ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು…

Read More

ಬೃಹತ್ತಾಗಿದ್ದ ದಟ್ಟಡವಿಗೆ ಹೊಂದಿಕೊಂಡಿದ್ದ ಒಂದು ಗ್ರಾಮ. ಜನಸಂಖ್ಯೆಯೂ ತೀರಾ ಕಡಿಮೆಯಿತ್ತು. ವ್ಯವಸಾಯವೇ ಪ್ರಮುಖ ಕಸುಬಾಗಿತ್ತಾದರೂ ಕೆಲವರು ಕಾಡಿಗೆ ತೆರಳಿ ಒಣ ಮರಗಳನ್ನು ಕಡಿದು ಕಟ್ಟಿಗೆಯನ್ನು ಹೊತ್ತೊಯ್ದು ಕಾಡಿನಿಂದಾಚೆ ಇದ್ದ ನಗರದಲ್ಲಿ ಮಾರಿ ಜೀವನ ಸಾಗಿಸುತ್ತಿದ್ದರು. ಅಂತವರಲ್ಲಿ ನಿಜಗುಣನೂ ಒಬ್ಬ. ಸ್ವಲ್ಪ ಧಡೂತಿ ದೇಹದವನಾದರೂ ಕೆಲಸದಲ್ಲೇನೂ ಕಳ್ಳಾಟವಿರಲಿಲ್ಲ. ಅವನ ಮೈಯೊಂದೇ ಸ್ವಲ್ಪ ಭಾರವೆನಿಸಿ ಕೆಲಸದ ನಡುವೆ ಆಗಾಗ್ಗೆ ವಿಶ್ರಾಂತಿ ಪಡೆಯುತ್ತಿದ್ದುದೊಂದೇ ಅವನ ಅವಗುಣ. ಇಂತಹ ನಿಜಗುಣನು ಅಂದೂ ಸಹ ತನ್ನ ನಿತ್ಯದ ಕಾರ್ಯಕ್ಕಾಗಿ ಕಾಡಿಗೆ ತೆರಳಲು ಸಿದ್ಧವಾದನು. ಅವನ ತಾಯಿ ಅವನಿಗೆ ದೊಡ್ಡದೊಂದು ಡಬ್ಬಿಯಲ್ಲಿ ಆಹಾರವನ್ನು ತುಂಬಿಕೊಟ್ಟು ಮನೆಯಿಂದ ಬೀಳ್ಕೊಟ್ಟಳು. ಕಾಡಿನೊಳಗೆ ಸ್ವಲ್ಪ ದೂರದವರೆಗೂ ನಡೆದ ನಿಜಗುಣನಿಗೆ ತಲೆಯ ಮೇಲೆ ಹೊತ್ತಿದ್ದ ಡಬ್ಬಿ ಹಾಗೂ ಬೃಹತ್‌ ಗಾತ್ರದ ಮೈಯಿಂದಾಗಿ ದೂರ ನಡೆಯುವುದು ಆಯಾಸವಾಗತೊಡಗಿತು. ಸಮೀಪದ ಮರದ ನೆರಳೊಂದರಡಿ ಕುಳಿತ ನಿಜಗುಣನು ಅಮ್ಮ ಕೊಟ್ಟಿದ್ದ ಬುತ್ತಿಯ ಡಬ್ಬಿಯನ್ನು ಬಿಚ್ಚಿ ಅದರಲ್ಲಿದ್ದ ಆಹಾರವನ್ನು ಸೇವಿಸಿದನು. ಕೆಲವು ಸಮಯದ ವಿಶ್ರಾಂತಿಯನ್ನೂ ಪಡೆದ ಅನಂತರ ಅವನಲ್ಲಿ ಹೊಸದೊಂದು ಉತ್ಸಾಹ…

Read More

ಸುಮಾರು ಅರ್ಧ ಶತಮಾನದ ಹಿಂದಿನವರೆಗೆ ತುಳುನಾಡಿನಲ್ಲಿ ಬಂಟರ ತರವಾಡು ಮನೆ ಎಂದರೆ ಕುಟುಂಬಸ್ಥರಿಂದ ತುಂಬಿ ತುಳುಕುತ್ತಿತ್ತು. 1970 ರಲ್ಲಿ ಬಂದ ಭೂ ಮಸೂದೆ, ಕೈಗಾರಿಕೋದ್ಯಮ, ನಗರೀಕರಣ ಇತ್ಯಾದಿ ಕಾರಣಗಳಿಂದ ಹಳ್ಳಿಯ ಯುವಕರು ಉದ್ಯೋಗ ಅರಸಿಕೊಂಡು ದೂರದ ನಗರ ಸೇರಿದರು. ಪರಿಶ್ರಮ ಜೀವಿಗಳಾದ ತುಳುವರು ಅಲ್ಲಿಯೂ ತಮ್ಮ ಪ್ರಭಾವದಿಂದ ಸಂಪಾದಿಸಿ ನೆಲೆ ಕಟ್ಟಿಕೊಂಡರು. ಆದರೆ ತಾಯ್ನೆಲ, ಹುಟ್ಟಿದ ತರವಾಡು, ಕುಟುಂಬದ ದೈವ, ನಾಗಗಳ ಸ್ಮರಣೆ ಮೈಗೂಡಿಸಿಕೊಂಡಿದ್ದರು. ಸಂಪಾದನೆಯ ಒಂದಂಶವನ್ನು ಕೂಡಿಟ್ಟರು. ಪರವೂರಲ್ಲಿದ್ದ ಕುಟುಂಬಸ್ಥರು ಒಟ್ಟಾಗಿ ತವರಿಗೆ ಬಂದು ಊರಲ್ಲಿದ್ದವರನ್ನು ಸೇರಿಸಿಕೊಂಡು ಪಾಳು ಬಿದ್ದ ಮನೆ, ದೈವಸ್ಥಾನ ಹಾಗೂ ನಾಗಬನಗಳನ್ನು ಪುನರುದ್ಧಾರಗೊಳಿಸಿದರು. ಮೂಲ ತರವಾಡು ಮನೆಯನ್ನು ಮುರಿದು ಭವ್ಯ ಬಂಗಲೆ, ದೈವಗಳಿಗೆ ದೈವಸ್ಥಾನ, ಭಂಡಾರಾದಿಗಳನ್ನು ನಿರ್ಮಿಸಲಾಯಿತು. ಒಂದು ವಾರದ ವೈಭವದ ಬ್ರಹ್ಮಕಲಶ, ವಿವಿಧ ಹೋಮಗಳು, ನಾಗಪ್ರತಿಷ್ಠೆ, ದೈವಗಳಿಗೆ ಕೋಲ ನೇಮಗಳನ್ನು ಗ್ರಾಮ ದೇವಸ್ಥಾನದ ಬ್ರಹ್ಮಕಲಶವನ್ನು ಮೀರಿಸುವಂತಿತ್ತು. ದೇಶ ವಿದೇಶಗಳಲ್ಲಿ ದುಡಿಯುತ್ತಿದ್ದ ಉದ್ಯಮಿ, ಉದ್ಯೋಗಸ್ಥರು ಹಣದ ಹೊಳೆಯನ್ನೇ ಹರಿಸಿದರು ಎಂದರೂ ತಪ್ಪಿಲ್ಲ. ಇರಲಿ, ಎಲ್ಲವೂ ತವರಿಗಾಗಿ…

Read More

ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 181 ವಲಯ 5 ರ 2024-2025 ನೇ ಸಾಲಿನ ರೋಟರಿ ಅಸಿಸ್ಟೆಂಟ್ ಗವರ್ನರ್ ಗಳಾಗಿ ರೋಟರಿ ಕ್ಲಬ್ ಪುತ್ತೂರು ಪೂರ್ವದ ಸೂರ್ಯನಾಥ ಆಳ್ವ, ರೋಟರಿ ಕ್ಲಬ್ ಪುತ್ತೂರು ಯುವದ ಹರ್ಷಕುಮಾರ್ ರೈ ಮಾಡಾವು ಮತ್ತು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನ ಕೆ. ವಿನಯ ಕುಮಾರ್ ನಿಯೋಜಿತರಾಗಿದ್ದಾರೆ. ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕಿಗೆ ಒಳಪಟ್ಟ 12 ರೋಟರಿ ಕ್ಲಬ್ ಗಳ ಜವಾಬ್ದಾರಿಯನ್ನು ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಅವರ ನಿರ್ದೇಶನದಂತೆ ಇವರುಗಳಿಗೆ ವಹಿಸಿಕೊಡಲಾಗಿದೆ. ಸೂರ್ಯನಾಥ ಆಳ್ವ : ರೋಟರಿ ಕ್ಲಬ್ ಪುತ್ತೂರು ಪೂರ್ವದ ಸದಸ್ಯರಾಗಿ 1995 ರಲ್ಲಿ ರೋಟರಿ ಸಂಸ್ಥೆಗೆ ಸೇರಿ ರೋಟರಿ ಪೂರ್ವದ ವಿವಿಧ ಹುದ್ದೆಗಳನ್ನು ಅಲಂಕರಿಸಿ 2007-2008 ರಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ನಂತರ ರೋಟರಿವಲಯ ಮತ್ತು ಜಿಲ್ಲೆಯ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿ ಇದೀಗ 2004-2005 ಸಾಲಿಗೆ ಅಸಿಸ್ಟೆಂಟ್ ಗವರ್ನರ್ ಆಗಿ ನೇಮಕಗೊಂಡಿರುತ್ತಾರೆ. 1964ರಲ್ಲಿ ಬಂಟ್ವಾಳ ತಾಲೂಕಿನ ಅಳಕೆ ಗ್ರಾಮದ ಮಿತ್ತಳಿಕೆಯಲ್ಲಿ…

Read More

ಮಲಾಡ್ ಪಶ್ಚಿಮದ ಸಮಾಜ ಸೇವಕ, ಅಯ್ಯಪ್ಪ ಸ್ವಾಮಿಯ ಪರಮ ಭಕ್ತ ದಿವಾಕರ್ ಶೆಟ್ಟಿಗಾರ್ ಗುರುಸ್ವಾಮಿ ಅವರು 49 ವರ್ಷಗಳ ಹಿಂದೆ ಸ್ಥಾಪಿಸಿರುವ ಕನ್ನಡ ನವತಾರಾ ಕಲಾ ಮಂಡಳಿ ಮಲಾಡ್ ಸಂಸ್ಥೆಯನ್ನು ಸ್ಥಾಪಿಸಿ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ಪ್ರತಿ ವರ್ಷದಂತೆ ಮಲಾಡ್ ಪಶ್ಚಿಮದ ಸೋಮವಾರ ಬಜಾರ್ ಶ್ರೀ ಪಾಟ್ಲಾದೇವಿ ಮಂದಿರದ (ರಾಮ ಮಂದಿರ) ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅನ್ನದಾನ ಹಾಗೂ ರಾತ್ರಿ ಸಭಾ ಕಾರ್ಯಕ್ರಮ, ರಾತ್ರಿ ಯಕ್ಷಗಾನ ಪ್ರದರ್ಶನವನ್ನು ನಡೆಸುತ್ತಾ ಬಂದಿದ್ದಾರೆ. ಈ ವರ್ಷ 49 ನೇ ವಾರ್ಷಿಕ ಮಹಾಪೂಜೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಎಪ್ರಿಲ್ 20 ರಂದು ಶನಿವಾರ ಶ್ರೀ ಪಾಟ್ಲಾದೇವಿ ಮಂದಿರ (ರಾಮ ಮಂದಿರ ), ಸೋಮವಾರ ಬಜಾರ್, ಮಾಲಾಡ್ (ಪ) ಇಲ್ಲಿ ಜರಗಲಿರುವುದು. ಪೂಜಾ ಕಾರ್ಯಕ್ರಮಗಳು ಮಧ್ಯಾಹ್ನ ಗಂಟೆ 2.00 ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 3.00 ರಿಂದ ಮಹಾ ಅಭಿಷೇಕ, ಸಾಯಂಕಾಲ ಗಂಟೆ 4.00 ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ,…

Read More

ಮೂಡುಬಿದಿರೆ: ‘ಸಾಮಾಜಿಕ ಪಿಡುಗುಗಳಿಗೆ ಮೂಲ ಕಾರಣ ಮನುಷ್ಯನ ಸ್ವಾರ್ಥ’ ಎಂದು ಸಾಮಾಜಿಕ ಕಾರ್ಯಕರ್ತೆ, ಪದ್ಮಶ್ರೀ ಪುರಸ್ಕೃತೆ ಸೀತವ್ವ ದುಂಡಪ್ಪ ಜೋಡಟ್ಟಿ ವಿಶ್ಲೇಷಿಸಿದರು. ಆಳ್ವಾಸ್ ಎಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ರೋಸ್ಟ್ರಮ್- ಸ್ಪೀಕರ್ಸ್ ಕ್ಲಬ್ ಹಮ್ಮಿಕೊಂಡ ‘ಮಹಿಳೆಯರು, ಮಕ್ಕಳು ಹಾಗೂ ಸಾಮಾಜಿಕ ಸಮಸ್ಯೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಮಾಜಿಕ ಪಿಡುಗುಗಳು ನಗರ ಪ್ರದೇಶಕ್ಕೆ ಹೋಲಿಸಿದರೆ, ಹಳ್ಳಿಗಳಲ್ಲಿ ಹೆಚ್ಚಾಗಿ ಕಾಣಬಹುದು. ಬಾಲ್ಯ ವಿವಾಹವೂ ಒಬ್ಬ ಮಹಿಳೆಗೆ ಮಾತ್ರವಲ್ಲದೆ ಸಮಾಜಕ್ಕೂ ಶಾಪವಾಗಿದೆ ಎಂದರು. ಬಾಲ ಕಾರ್ಮಿಕ ಪದ್ಧತಿಯು ಮಕ್ಕಳ ಸ್ವಾತಂತ್ರ್ಯ ಕಿತ್ತುಕೊಂಡು ಅವರನ್ನು ಗುಲಾಮರಾಗುವಂತೆ ಮಾಡುತ್ತದೆ. ಇದಕ್ಕೆ ಮೂಲ ಗುರಿಯಾಗುವುದು ಮಹಿಳೆಯರು ಹಾಗೂ ಮಕ್ಕಳು ಎಂದರು. ಮಕ್ಕಳು ಸಮಾಜ ಆಸ್ತಿ ಆಗಬೇಕು. ಅದಕ್ಕಾಗಿ ಅವರಿಗೆ ಅಂಗನವಾಡಿಯಿಂದಲೇ ಉತ್ತಮ ಶಿಕ್ಷಣ ಸಿಗುವಂತೆ ಮಾಡಬೇಕು. ಇಂದಿನ ಮಕ್ಕಳು ನಾಳೆಯ ಪ್ರಜೆಗಳು ಎನ್ನುವುದಕ್ಕಿಂತ ಇಂದಿನ ಮಕ್ಕಳು ಇಂದಿನ ಪ್ರಜೆಗಳೇ ಎಂದು ಭಾವಿಸುವುದು ಸೂಕ್ತ. ಇದಕ್ಕಾಗಿ ಅವರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದು ಅಗತ್ಯ ಎಂದು ಹೇಳಿದರು.…

Read More

ಆಕೆ ಆರೋಗ್ಯವಾಗಿದ್ದು, ಇನ್ನೊಬ್ಬರ ಆರೋಗ್ಯ ವಿಚಾರಿಸುವ ವೈದ್ಯೆಯಾಗಿದ್ದವರು. ದಂತ ವೈದ್ಯಕೀಯ ಪದವಿ ಮುಗಿಸಿ ಇನ್ನೇನು ಕೆಲಸಕ್ಕೆ ಸೇರಬೇಕು ಅಂತ ಒಂದು ಕ್ಲಿನಿಕ್‌ಗೆ ಜಾಯಿನ್ ಆಗಿದ್ದಾರೆ. ಆದ್ರೆ ದುರಾದೃಷ್ಟ ಅಂದ್ರೆ ಕೆಲಸಕ್ಕೆ ಜಾಯಿನ್ ಆಗುವ ದಿನವೇ ಆಕೆ ಇಹಲೋಕ ತ್ಯಜಿಸಿದ್ದಾರೆ. ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಆಳ್ವರಬೆಟ್ಟು ನಿವಾಸಿ 24 ವರ್ಷದ ಸ್ವಾತಿ ಶೆಟ್ಟಿ ಇಹಲೋಕ ತ್ಯಜಿಸಿದ ವೈದ್ಯೆಯಾಗಿದ್ದಾರೆ. ಉಳ್ಳಾಲ ತಾಲೂಕಿನ ನರಿಂಗಾನ‌ ಗ್ರಾಮದ ಆಳ್ವರಬೆಟ್ಟು ನಿವಾಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ, ಶಾಂತಿಪಲ್ಕೆ ಶ್ರೀ ಮಹಾಮ್ಮಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಹಾಗೂ ಜ್ಯೋತಿ ಶೆಟ್ಟಿ ದಂಪತಿ ಪುತ್ರಿ ಇವರು. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ಮುಗಿಸಿ ಮಂಗಳವಾರದಿಂದ (16-04-2024) ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ಕೆಲಸಕ್ಕೆ ಜಾಯಿನ್ ಆಗುವವರಿದ್ದರು. ಹೀಗಾಗಿ ಸೋಮವಾರ (15-04-2024) ಸಂಜೆ ಪಾಂಡೇಶ್ವರದ ಪಿಜಿ ಬಂದು ಜಾಯಿನ್ ಆಗಿದ್ದರು. ಮರುದಿನ ಹೊಸ ಕೆಲಸಕ್ಕೆ ಹೋಗುವ ಕಾರಣ ಸಾಕಷ್ಟು ಎಕ್ಸೈಟ್…

Read More

ವಿದ್ಯಾಗಿರಿ: ಸಂಶೋಧನೆಯಲ್ಲಿ ವ್ಯಕ್ತಿಗತ ನೆಲೆಗಳು ಮುಖ್ಯವಲ್ಲ. ಬದಲಾಗಿ ಜ್ಞಾನ ಮತ್ತು ದೃಷ್ಟಿಕೋನದ ಬಿತ್ತರ ಅವಶ್ಯ. ಆವಿಷ್ಕಾರ ಮತ್ತು ಮುಕ್ತತೆ ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ಮಣಿಪಾಲದ ಮಾಹೆಯ ಕಸ್ತೂರ ಬಾ ವೈದ್ಯಕೀಯ ಕಾಲೇಜಿನ ವಿಜ್ಞಾನಿ ಡಾ.ಯಶವಂತಿ ಬೋರ್ಕರ್ ಹೇಳಿದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಆಳ್ವಾಸ್ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗವು ಹಳೇ ವಿದ್ಯಾರ್ಥಿಗಳ ಸಹಕಾರದಲ್ಲಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡ ‘ಸುಸ್ಥಿರ ಭವಿಷ್ಯಕ್ಕಾಗಿ ಜೈವಿಕ ಆವಿಷ್ಕಾರ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಶುಕ್ರವಾರ ಮಾತನಾಡಿದರು. ನಿರ್ದಿಷ್ಟವಾಗಿ ನಿರ್ಮಿತವಾಗಿರುವ ತಡೆಗಳನ್ನು ಮೀರಿ, ಅನುಭವದ ಜ್ಞಾನವನ್ನು ಪಡೆಯಬೇಕು. ಸಂಶೋಧನೆಯಲ್ಲಿ ತಾಳ್ಮೆ, ಒಪ್ಪಿಕೊಳ್ಳುವಿಕೆ, ಧ್ಯೇಯವನ್ನು ಹೊಂದುವುದು ಬಹುಮುಖ್ಯವಾಗುತ್ತದೆ ಎಂದರು. ಕರ್ನಾಟಕ ರಾಜ್ಯ ಮಾಲಿನ್ಯ ತಡೆ ಮಂಡಳಿಯ ಮಂಗಳೂರಿನ ಪರಿಸರ ನಿರೀಕ್ಷಕರಾದ ಡಾ. ಮಹೇಶ್ವರಿ ಸಿಂಗ್ ಮಾತನಾಡಿ, ಪ್ರಾಕೃತಿಕ ಸುಸ್ಥಿರತೆಯಲ್ಲಿ ಜೀವ ವೈವಿಧ್ಯತೆಯನ್ನು ಕಾಪಾಡಲು ಹಲವಾರು ವಿಧಾನ ಮತ್ತು ಸಲಕರಣೆಯನ್ನು ಬಳಸಬೇಕು. ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಏರಿಕೆಯು ಜೀವ ವೈವಿಧ್ಯತೆ ಅಸಮತೋಲನೆಗೆ ಮುಖ್ಯ…

Read More