Author: admin
ಮೊದಲಿಗೆ ಹೇಳುತ್ತೇನೆ ನಾನು ಚಿತ್ರ ವಿಮರ್ಶಕನಲ್ಲ ಆದರೆ ಕಾಂತಾರ ಚಲನಚಿತ್ರದ ಸಫಲತೆ ಎಂದರೆ ಬೌದ್ಧಿಕ ಮಟ್ಟದ ಅಧಃಪತನದ ಕಾರಣದಿಂದ ತಮ್ಮ ಮೂಲ ಮರೆತ ಯುವ ತುಳುವ ಜನಾಂಗಕ್ಕೆ ಕಾಂತಾರ ಚಲನಚಿತ್ರ ಅವರ ಮೂಲವನ್ನು ನೆನಪಿಸಿತು. ಕುಟುಂಬದ ಮೂಲಮನೆಯ ಕಡೆಗೆ ತಲೆಹಾಕಿ ಮಲಗದ ಎಷ್ಟೋ ತುಳುವ ಯುವಜನರನ್ನು ನನ್ನ ವೃತ್ತಿ ಜೀವನದಲ್ಲಿ ಕಂಡಿದ್ದೇನೆ.ಆದೂ ಅಲ್ಲದೆ ತನ್ನ ಮೂಲದ ಶಕ್ತಿಯ ಮೇಲಿನ ನಂಬಿಕೆಯನ್ನು ಬಿಟ್ಟು ಇನ್ಯಾವುದೋ ಶಕ್ತಿಯ ಮೇಲಿನ ಭಕ್ತಿಯ ಪರಾಕಾಷ್ಠೆಗೆ ಹೋದವರನ್ನು ಕಂಡಿದ್ದೇನೆ. ಈ ಎಲ್ಲಾ ಏರಿಳಿತಗಳ ನಡುವೆ ಕಾಂತಾರ ಸಿನಿಮಾ ಕತ್ತಲೆಯ ಕಾಡಿನಲ್ಲಿ ದಾರಿ ತಪ್ಪಿದ ತುಳುವರಿಗೆ ಸತ್ಯ ಜೀಟಿಗೆಯಾಗಿ ಮರೆತು ಹೋದ ಮೂಲದ ಮನೆಯ ದಾರಿ ತೋರಿಸಿದ್ದಂತು ಸತ್ಯ. ತುಳುವರ ಕುಟುಂಬದ ತರವಾಡು ಮನೆಯು ಐದು ಸಮೂಹ ಶಕ್ತಿಗಳ ಆರಾಧನಾ ಕೇಂದ್ರ. ಆ ಶಕ್ತಿಗಳೇ ಕುಟುಂಬದ ಸದಸ್ಯರ ಆಗುಹೋಗುಗಳ ಕಾರಣೀಕರ್ತರು ಎಂದು ತೌಳವ ಸಂಪ್ರದಾಯದ ಅನನ್ಯ ನಂಬಿಕೆ. ಆ ಐದು ಶಕ್ತಿಗಳೇ ನಾಗ, ಮುಡಿಪು, ಪಂಜುರ್ಲಿ, ಗತಿಸಿ ಹೋದ ಗುರು…
ಅಕ್ಟೋಬರ್ 31ರಂದು ಪುರಭವನದಲ್ಲಿ ಜರಗಲಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ನಗರ ಘಟಕದ ಪದಗ್ರಹಣ ಮತ್ತು 4ನೇ ವಾರ್ಷಿಕ ಸಮಾರಂಭದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ನಗರದ ಅಟ್ಟಣೆ ಹೋಟೇಲಿನಲ್ಲಿ ಜರಗಿದ್ದು, ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ HMS ನ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಸುರೇಶ್ಚಂದ್ರ ಶೆಟ್ಟಿಯವರು ಪಟ್ಲ ಫೌಂಡೇಶನಿನ ಕಾರ್ಯಸಾಧನೆಯ ಬಗ್ಗೆ ಜಗತ್ತೇ ಕೊಂಡಾಡುವಂತೆ ಮಾಡಿದ ಪಟ್ಲ ಸತೀಶ್ ಶೆಟ್ಟಿಯವರಿಗೆ ಕಟೀಲು ದುರ್ಗಾಮಾತೆಯ ಸಂಪೂರ್ಣ ಆಶೀರ್ವಾದವಿದೆ. ಸರಸ್ವತಿ ಮಾತೆಯ ಅನುಗ್ರಹದಿಂದ ನಾವೆಲ್ಲರೂ ಯಕ್ಷಗಾನದ ಮಧುರ ಗಾನವನ್ನು ಅವರಿಂದ ಕೇಳುವಂತಾಗಿದೆ. ಫೌಂಡೇಶನಿನ ಪ್ರತಿಯೊಂದು ಘಟಕಗಳು ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅಶಕ್ತ ಕಲಾವಿದರ ನೆರವಾಗುವುದರೊಂದಿಗೆ ಟ್ರಸ್ಟ್ ಇನ್ನಷ್ಟು ಹೆಮ್ಮರವಾಗಿ ಬೆಳೆಯಲೆಂದು ಕಾರ್ಯಕ್ರಮಕ್ಕೆ ಶುಭಕೋರಿದರು. ಮಹೇಶ್ ಮೋಟಾರ್ಸ್ ಮಾಲಕರಾದ ಶ್ರೀ ಜಯರಾಮ ಶೇಖ ದೀಪ ಬೆಳಗಿಸಿ, ಪಟ್ಲ ಫೌಂಡೇಶನ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯುವಂತಾಗಲಿಯೆಂದು ಶುಭ ಹಾರೈಸಿದರು. ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಮಂಗಳಾದೇವಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ Ln ಅನಿಲ್ ದಾಸ್ mjf…
ಆಲ್ ಅಮೇರಿಕಾ ತುಳು ಅಸೋಸಿಯೇಶನ್ ಆಯೋಜಿಸಿದ ತುಳು ಉಚ್ಚಯ ತುಳುನಾಡಿನ ಮಂತ್ರಿ-ಶಾಸಕರು ತುಳುಭಾಷಾ ಮಾನ್ಯತೆಗೆ ಶ್ರಮಿಸಬೇಕು-ಭಾಸ್ಕರ್ ಶೇರಿಗಾರ್
ಮುಂಬಯಿ (ಆರ್‌ಬಿಐ), ಅ.18: ನೆರೆಯ ಗೋವಾದಂತಹ ಸಣ್ಣ ರಾಜ್ಯದ ಭಾಷೆ ಕೊಂಕಣಿಗೆ ಮಾನ್ಯತೆ ಸಿಗುವುದಾದರೆ ಸಾಹಿತ್ಯ, ಸಂಸ್ಕೃತಿ, ಲಿಪಿ ಸಂಪನ್ನ ವಿಸ್ತಾರ ನಾಡಿನ ತುಳು ಭಾಷೆಗೆ ಕೂಡಾ ಅಂತಹುದೇ ಮಾನ್ಯತೆ ಸಿಗಬೇಕು. ಅದಕ್ಕಾಗಿ ತುಳುನಾಡಿನ ರಾಜಕಾರಣಿಗಳು ಎಲ್ಲರೂ ಒಮ್ಮತದಿಂದ ಒತ್ತಾಯಿಸ ಬೇಕು ಎಂದು ಅಮೆರಿಕಾ ಅಲ್ಲಿನ ಆಲ್ ಅಮೇರಿಕಾ ತುಳು ಅಸೋಸಿಯೇಷನ್ (ಎಎಟಿಎ-ಆಟ) ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಕರ್ನಾಟಕ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆಯ ಸಚಿವ ವಿ.ಸುನೀಲ್‍ಕುಮಾರ್ ಮತ್ತು ತುಳುನಾಡಿನ ಮಂತ್ರಿ, ಇತರ ಇತರ ಶಾಸಕರÀನ್ನು ವಿನಂತಿಸಿದರು. ಆಟ ಆಯೋಜಿಸಿದ್ದ ವರ್ಷದ ತುಳು ಉಚ್ಚಯ-2022 ವರ್ಚುಯಲ್ ಕಾರ್ಯಕ್ರಮದಲ್ಲಿ ದೇಶ ವಿದೇಶದ ತುಳು ಅಭಿಮಾನಿಗಳನ್ನು ಉದ್ದೇಶಿಸಿ ಆಟ ನಡೆದುಬಂದ ಮತ್ತು ಅದರ ಉದ್ದೇಶಗಳ ಪರಿಚಯ ಮಾಡುತ್ತಾ ಈ ಮೇಲಿನ ಒತ್ತಾಯವನ್ನು ಮಂಡಿಸಿದರು. ತುಳು ಭಾಷೆ ತುಳು ಲಿಪಿ ಮತ್ತು ಸಾಹಿತ್ಯ ಸಂಸ್ಕೃತಿಯನ್ನು ಉಳಿಸುವುದು ಮತ್ತು ಬೆಳೆಸುವುದು ಆಟ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ವರ್ಷಕ್ಕೆ ಎರಡು ಬಾರಿ …
ನಮಗೆಲ್ಲಾ ಗೋತ್ತಿರುವ ಹಾಗೆ ಆಸ್ತಿ ವಿವಾದ, ವಿಚ್ಛೇದನ ಮತ್ತು ಇತರ ಕೌಟುಂಬಿಕ ವಿವಾದಗಳ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬರುತ್ತಲೇ ಇರುತ್ತವೆ. ಆದರೆ ಈ ಪ್ರಕರಣವು ತುಂಬಾ ವಿಭಿನ್ನವಾಗಿತ್ತು. 70 ವರ್ಷದ ತಮ್ಮನೊಬ್ಬ ತನ್ನ 80 ವರ್ಷದ ಅಣ್ಣನ ಮೇಲೆ ಮೊಕದ್ದಮೆ ಒಂದನ್ನು ಹೂಡಿದ್ದ . ಮೊಕದ್ದಮೆಯು “ನನ್ನ 80 ವರ್ಷದ ಅಣ್ಣನಿಗೆ ಈಗ ವಯಸ್ಸಾಗಿದೆ, ಆದ್ದರಿಂದ ಅವನು ತನ್ನನ್ನು ತಾನೇ ಸರಿಯಾಗಿ ನೋಡಿಕೊಳ್ಳಲು ಸಹ ಸಾಧ್ಯವಿಲ್ಲ, ಹಾಗಿದ್ದಾಗ ಅವನು ನಮ್ಮ 110 ವರ್ಷದ ತಾಯಿಯನ್ನು ಹೇಗೆ ನೋಡಿಕೊಳ್ಳುತ್ತಾನೆ? “ನಾನು ಈಗ ಚೆನ್ನಾಗಿದ್ದೇನೆ, ಹಾಗಾಗಿ ಈಗ ನನಗೆ ತಾಯಿಯ ಸೇವೆ ಮಾಡಲು ಮತ್ತು ತಾಯಿಯನ್ನು ನನ್ನ ಕೈಗೆ ಒಪ್ಪಿಸುವ ಕೆಲಸ ಕೋರ್ಟ್ ಮಾಡಬೇಕು” ಎಂದು ವಾದ ಮಾಡಿದ.. ನ್ಯಾಯಾಧೀಶರು ಅಚ್ಚರಿಯಿಂದ ಪ್ರಕರಣ ಕೈಗೆತ್ತಿಕೊಂಡರು. ನ್ಯಾಯಾಧೀಶರು ಸಹೋದರರಿಬ್ಬರಿಗೂ ಮನವರಿಕೆ ಮಾಡಿ ತಿಂಗಳಲ್ಲಿ 15-15 ದಿನಗಳಂತೆ ತಾಯಿಯನ್ನು ನೋಡಿಕೊಳ್ಳಿ ಎಂದು ಸಲಹೆ ನೀಡಿದರು. 80 ವರ್ಷದ ಅಣ್ಣ ಇದಕ್ಕೆ ಒಪ್ಪಲಿಲ್ಲ, ನನ್ನ ತಾಯಿಯನ್ನು ನನ್ನ ಸ್ವರ್ಗವನ್ನು ನನ್ನಿಂದ…
” ಅನ್ನ ವನ್ನ ನೋಡಿದ್ದಿರಾ ” ? ಅಂತ ಯಾರಲ್ಲಾದರೂ ಪ್ರಶ್ನೆ ಮಾಡಿದರೆ ಇಲ್ಲ ಅನ್ನುವವರು ಯಾರೂ ಸಿಗಲಾರರು. ಭತ್ತ ನೋಡಿದ್ದಿರಾ ? ಅಂದರೆ ಶೇಖಡಾ ತೊಂಬತ್ತೈದು ಜನ “ಎಸ್ ” ಅನ್ನಬಹುದು. ಗದ್ದೆಯಲ್ಲಿ ಭತ್ತದ ತೆನೆ ನೋಡಿದ್ದೀರಾ ? ಅಂದಾಗ ಶೇಖಡಾ ಎಂಬತ್ತೊಂಬತ್ತು ಜನ ಚಿತ್ರದಲ್ಲಾದರೂ ನೋಡಿದ್ದೇನೆ ಅನ್ನಬಹುದು. ಭತ್ತದ ಹೂ ನೋಡಿದ್ದೀರಾ ಅದು ಎಲ್ಲಿರುತ್ತದೆ, ಹೂ ಎಲ್ಲಿಂದ ಅರಳುತ್ತದೆ, ಹೂವಿಗೆ ಎಷ್ಟು ಎಸಳುಗಳಿರುತ್ತವೆ ಎಷ್ಟು ದಿನ ಅರಳಿರುತ್ತದೆ ಅಂತ ಕೇಳಿದರೆ ಬೆರಳೆಣಿಕೆಯಷ್ಟು ಜನ ಮಾತ್ರ ಉತ್ತರಿಸಿಯಾರೋ ಎನೋ. ಬೇಡುವಿನ ಕಥೆಯನ್ನು ನೀವು ಓದಿರಬಹುದು. ಆತ ಗದ್ದೆ ಬಿತ್ತಿದ್ದು ಜುಲೈ 19 ಮಂಗಳವಾರ ಮಧ್ಯಾಹ್ನ 1.53 ಕ್ಕೆ. ಅಂದರೆ ಬಿತ್ತಿದ ದಿನದಿಂದ ಎಂಭತ್ತೆರಡು ದಿನಗಳಿಂದ ಒಂದು ವಾರ ಈ ಭತ್ತದ ತಳಿ ಹೂ ಬಿಟ್ಟಿದೆ ಅಂದಾಯಿತು. ಭತ್ತ ಹೂಬಿಡುವ ಒಂದೆರಡು ವಾರ ಮೊದಲೇ ಅದರ ಗರ್ಭದಲ್ಲಿ ಎಳೆ ತೆನೆ ಸುಪ್ತಾವಸ್ತೆಯಲ್ಲಿರುತ್ತದೆ. ಆಡುಭಾಷೆಯಲ್ಲಿ ” ಭತ್ತ ಪೊಟ್ಟೆಯದ್ದೇ ” ಅಂತ ಕೇಳುವ…
ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ನಡೆಯುವ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದ ೩೬ನೆಯ ಕೃತಿ ಬಿಡುಗಡೆಯಾಯಿತು. ಕನ್ನಡ ಸಹಾಯಕ ಪ್ರಾಧ್ಯಾಪಕ, ಲೇಖಕ ಡಾ. ಎನ್. ಪ್ರವೀಣ್‌ಚಂದ್ರ ಇವರ ಲೇಖನ ಸಂಕಲನ ಸ್ಪೂರ್ತಿಯ ಚಿಲುಮೆಗಳು ಕೃತಿ ಬಿಡುಗಡೆ ಕಾರ್ಯ ಕ್ರಮವು ಮಂಗಳೂರು ಪತ್ರಿಕಾ ಭವನದಲ್ಲಿ ಅಕ್ಟೋಬರ್ ೧೭ರಂದು ಸೋಮವಾರ ಬೆಳಿಗ್ಗೆ ೧೦.೩೦ಕ್ಕೆ ನೆರವೇರಿತು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಹಾಗೂ ಸೂರಜ್ ಎಜುಕೇಶನ್ ಟ್ರಸ್ಟ್ ಮುಡಿಪು ಇದರ ಅಧ್ಯಕ್ಷರಾದ ಡಾ. ಮಂಜುನಾಥ್ ಎಸ್. ರೇವಣಕರ್‌ರವರು ಕೃತಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಳ್ವಾಸ್ ಕಾಲೇಜ್ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಯೋಗೀಶ್ ಕೈರೋಡಿ ಕೃತಿ ಪರಿಚಯ ಮಾಡುತ್ತಾ ಇಂದಿನ ಆಧುನಿಕ ಸಂದರ್ಭದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಚಿತ್ರಿಸುವ ಈ ರೀತಿಯ ಕೃತಿಗಳ ಅಗತ್ಯ ಹೆಚ್ಚು ಇದೆ. ಎಲೆಮರೆಯ ಕಾಯಿಗಳ ಹಾಗೆ ಕೆಲಸ ಮಾಡಿ ಅಪೂರ್ವ ಸಾಧನೆಗೈದ ಮಹನೀಯರುಗಳ ದಾರಿ…
ಮುಂಬಯಿ, ಅ.14: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮೇಲೆ ಕಳೆದ ರಾತ್ರಿ ನಡೆಸಲಾದ ಹತ್ಯೆಯತ್ನವನ್ನು ಬಿಜೆಪಿ ಉತ್ತರ ಮುಂಬಯಿ ಕ್ಷೇತ್ರದ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ. ಕರ್ನಾಟಕ ರಾಜ್ಯದ ಗೃಹ ಇಲಾಖೆ ಮತ್ತು ದ.ಕ ಜಿಲ್ಲಾ ಪೊಲೀಸ್ ಉನ್ನತಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಘಟನೆಗೆ ಕಾರಣಕರ್ತನಾದ ಅಪರಿಚಿತನ ಪತ್ತೆಹಚ್ಚಿ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಎರ್ಮಾಳ್ ಹರೀಶ್ ಶೆಟ್ಟಿ ಒತ್ತಾಯಿಸಿದ್ದಾರೆ. ಓರ್ವ ಯುವನಾಯಕನಾಗಿದ್ದ ಜವಾಬ್ದಾರಿಯುತ ಜನಪ್ರತಿನಿಧಿಯ ಶಾಸಕರ ಕಾರನ್ನು ಅನುಮಾನಾಸ್ಪದವಾಗಿ ಹಿಂಬಾಲಿಸಿ ನಡೆಸಿದ ಹತ್ಯಾಯತ್ನವು ಸಹಿಸುವಂತಹದ್ದಲ್ಲ. ಇಂತಹ ದುಷ್ಕೃತ್ಯಕ್ಕೆ ಮುಂದಾದ ಯಾವನೇ ವ್ಯಕ್ತಿಯಾಗಲಿ, ಸಂಘಟನೆಯನ್ನಾಗಲಿ ಕ್ಷಮಿಸುವ ಮಾತೇ ಇಲ್ಲ. ಸಾಹಸಕ್ಕೆ ಮುಂದಾಗುವವರು ಎದುರು ಬಂದು ತಮ್ಮ ಎದೆಗಾರಿಕೆಯನ್ನು ಸಾರ್ವಜನಿಕವಾಗಿ ತೋರಿಸಲಿ ಎಂದೇಳುವೆ. ಒಂದೇ ಸಮಾಜದಲ್ಲಿದ್ದು ದ್ರೋಹ ಬಗೆಯುವ ಇಂತಹ ಯಾವ ದುಷ್ಕರ್ಮಿಗಳಿಗೂ ಮನ್ನಿಸುವ ಪ್ರೆಶ್ನೆಯೇ ಬಾರದು ಎಂದೂ ಎರ್ಮಾಳ್ ಹರೀಶ್ ತಿಳಿಸಿದ್ದಾರೆ.
ಕಾಪು ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿಗಾಗಿ ರಚಿಸಿದ ಪುಣೆ ಸಮಿತಿಯ ಉದ್ಘಾಟನಾ ಸಮಾರಂಭ ಹಾಗೂ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಮೇಳದ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನವು ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ಸಂಭ್ರಮದಿಂದ ನಡೆಯಿತು. ಪುಣೆ ಬಂಟರ ಸಂಘದ ಅಧ್ಯಕ್ಷ ಹಾಗೂ ಕಾಪು ಮಾರಿಗುಡಿ ಅಭಿವೃದ್ಧಿ ಪುಣೆ ಸಮಿತಿಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ ಆರ್ ಜಿ ಗ್ರೂಪ್ ನ ಸಿಎಂಡಿ ಕೆ ಪ್ರಕಾಶ್ ಶೆಟ್ಟಿ,ಕಾಪು ಮಾರಿಗುಡಿ ಅಭಿವೃದ್ಹಿ ಸಮಿತಿಯ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಮುಂಬಯಿ ಸಮಿತಿಯ ಅಧ್ಯಕ್ಷರಾದ ಸುಧಾಕರ ಹೆಗ್ಡೆ, ಮುಂಬಯಿ ಸಮಿತಿಯ ಕಾರ್ಯಾಧ್ಯಕ್ಷರಾದ ರವಿ ಸುಂದರ್ ಶೆಟ್ಟಿ, ಕಾಪು ಮಾರಿಗುಡಿ ಅಭಿವೃದ್ಹಿ ಪ್ರಚಾರ ಸಮಿತಿ ಅಧ್ಯಕ್ಷರಾದ ಯೋಗೇಶ್ ಶೆಟ್ಟಿ, ಆರ್ಥಿಕ ಸಮಿತಿಯ ಮುಖ್ಯ ಪ್ರಧಾನ ಸಂಚಾಲಕರಾಗಿರುವ ಉದಯ್ ಸುಂದರ್ ಶೆಟ್ಟಿ, ಸಂದೀಪ್ ಶೆಟ್ಟಿ, ರವಿರಾಜ್ ಶೆಟ್ಟಿ,…
ಮುಂಬಯಿ (ಆರ್ ಬಿ ಐ), ಅ.12: ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿನ ಹೆಸರಾಂತ ಆರ್ಥಿಕ ತಜ್ಞ, ಭಾರತೀಯ ಜೀವ ವಿಮಾ ನಿಗಮ (ಎಲ್‍ಐಸಿ ಆಫ್ ಇಂಡಿಯಾ) ಅಧಿಕಾರಿ ಡಾ| ಆರ್.ಕೆ ಶೆಟ್ಟಿ (ರಾಧಾಕೃಷ್ಣ ಕೃಷ್ಣ ಶೆಟ್ಟಿ) ಅವರು ಮಿಲಿಯನ್ ಡಾಲರ್ ರೌಂಡ್ ಟೇಬಲ್ (ಎಂಡಿಆರ್ ಟಿ) ಇದರ ಕ್ವಾರ್ಟರ್ ಸೆಂಚುರಿ ಕ್ಲಬ್ ಸದಸ್ಯರಾಗಿ ಆಯ್ಕೆ ಆಗಿರುತ್ತಾರೆ. ಎಂಡಿಆರ್ ಟಿ ಅಧ್ಯಕ್ಷ ರಾಂಡಿ ಎಲ್.ಸ್ಟ್ರಿಚ್ ಫೀಲ್ಡ್ ಅವರು ಡಾ| ಆರ್.ಕೆ ಶೆಟ್ಟಿ ಅವರಿಗೆ ಆಯ್ಕೆಯ ಅಧಿಕೃತ ಪ್ರಮಾಣ ಪತ್ರವನ್ನು ಕಳುಹಿಸಿ ಅಭಿನಂದಿಸಿರುವುದಾಗಿ ಎಂಡಿಆರ್ ಟಿ ವಕ್ತಾರರು ತಿಳಿಸಿದ್ದಾರೆ. ಎಂಡಿಆರ್ ಟಿಯ ಕ್ವಾರ್ಟರ್ ಸೆಂಚುರಿ ಕ್ಲಬ್ ಸದಸ್ಯರಾಗುವ ಕನಸು ಹೊತ್ತು ಅಂತಹ ಸಾಧನೆಯನ್ನು ಸಾಧಿಸಿದ ಭಾರತದ ಕೆಲವೇ ಸಾಧಕರಲ್ಲಿ ಡಾ| ಆರ್.ಕೆ ಓರ್ವರಾಗಿರುವರು. ಕ್ಲಬ್ ಸದಸ್ಯತ್ವ ಪಡೆಯುವ ಮುಖೇನ ಶೆಟ್ಟಿ ಅವರು ಎಂಡಿಆರ್ ಟಿ ಸ್ಟೋರ್ ನಿಂದ ವಿಶೇಷ ಕ್ವಾರ್ಟರ್ ಸೆಂಚುರಿ ಫಲಕ ಸ್ವೀಕರಿಸಲು ಆರ್ಹರೆಣಿಸಿರುವರು. ಕರ್ನಾಟಕದ ಚಿಕ್ಕಮಗಳೂರು ಇಲ್ಲಿನ ಕಂಬಿಹಳ್ಳಿಯಲ್ಲಿ ಕೃಷ್ಣ ಕೆ.ಶೆಟ್ಟಿ ಮತ್ತು…
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ಅಕ್ಟೋಬರ್ 22 ರಂದು ಶನಿವಾರ ಬೆಳಿಗ್ಗೆ 10.00 ಗಂಟೆಗೆ ಬಂಟ್ಸ್ ಹಾಸ್ಟೇಲ್ ಬಳಿಯ ಸಿ.ವಿ. ನಾಯಕ್ ಹಾಲ್ ನ ಸಭಾಂಗಣದಲ್ಲಿ ಜರಗಲಿದೆ. ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿ ವಹಿಸಲಿದ್ದಾರೆ. ಸಮಾರಂಭದಲ್ಲಿ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಶಿಕ್ಷಣ, ಮದುವೆ, ಮನೆ ನಿರ್ಮಾಣ, ಕ್ರೀಡೆ, ವೈದ್ಯಕೀಯ ಮೊದಲಾದ ಫಲಾನುಭವಿಗಳಿಗೆ ಚೆಕ್ ಗಳನ್ನು ವಿತರಿಸಲಾಗುವುದು. ಮುಖ್ಯ ಅತಿಥಿಗಳಾಗಿ ವಲ್ಡ್ ಬಂಟ್ಸ್ ವೆಲ್ ಫೇರ್ ಎಸೋಸಿಯೇಶನ್ ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಜಾಗತಿಕ ಬಂಟ ಪ್ರತಿಷ್ಠಾನದ ಪೋಷಕ ಡಾ ಬಿ ಆರ್ ಶೆಟ್ಟಿ, ಮಾಜೀ ಅಧ್ಯಕ್ಷ ಡಾ ಎಂ.ಶಾಂತಾರಾಮ ಶೆಟ್ಟಿ, ಪ್ರತಿಷ್ಠಾನದ ಅಧ್ಯಕ್ಷ ಎ.ಜೆ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ…