ಮುಂಬಯಿ ಮಹಾನಗರದ ಸೇವಾ ಸಂಸ್ಥೆ ಶಿವಾಯ ಫೌಂಡೇಶನ್ ವತಿಯಿಂದ ವಾಸಕ್ಕಾಗಿ ರಸ್ತೆ ಮತ್ತು ಬೀದಿ ಬದಿಯ ಫುಟ್ಪಾತ್ ಗಳನ್ನು ಆಶ್ರಯಿಸಿರುವ ನಿರಾಶ್ರಿತರಿಗೆ ಕಂಬಳಿ ವಿತರಿಸುವ ಮೂಲಕ 2025 ರ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಲಾಯಿತು. ಬೈಕಲಾ, ಲಾಲ್ ಭಾಗ್, ಕಾಲಾ ಚೌಕಿ, ಪರೇಲ್, ಮಜ್ಗಾಂವ್, ನವಿಮುಂಬಯಿಯ ಕೆಲವು ಪ್ರದೇಶಗಳಲ್ಲಿ ಶಿವಾಯ ಫೌಂಡೇಶನ್ ಸ್ವಯಂ ಸೇವಕರು ರಾತ್ರಿ ಸುತ್ತಾಡಿ ಅರ್ಹ ನಿರಾಶ್ರಿತರಿಗೆ ಕಂಬಳಿಗಳನ್ನು ವಿತರಿಸಿದರು.
ಮುಂಬಯಿ ಪರಿಸರದ ಸೇವಾ ಚಟುವಟಿಕೆಗಳಲ್ಲಿ ಮಧುಸೂದನ್ ಶೆಟ್ಟಿ ಹಿರಿಯಡ್ಕ, ಪ್ರಶಾಂತ್ ಶೆಟ್ಟಿ ಪಲಿಮಾರು, ಡಾ. ಸ್ವರ್ಣಲತಾ ಶೆಟ್ಟಿ, ಪ್ರಶಾಂತ್ ಶೆಟ್ಟಿ ಪಂಜ, ಪ್ರಶಾಂತ್ ಎ ಶೆಟ್ಟಿ ಬೈಕಲಾ, ರಾಜೇಶ್ ಶೆಟ್ಟಿ ಕಟಪಾಡಿ ಉಪಸ್ಥಿತರಿದ್ದರು.
ನವಿ ಮುಂಬಯಿ ಪರಿಸರದ ಸೇವಾ ಚಟುವಟಿಕೆಗಳಲ್ಲಿ ಹರೀಶ್ ಕೋಟ್ಯಾನ್ ಪಡು ಇನ್ನ, ಕೆ. ವಾಸುದೇವ ಶೆಟ್ಟಿ ಕಟಪಾಡಿ, ಸಂಗೀತಾ ಶೆಟ್ಟಿ, ಪ್ರಭಾವತಿ ಶೆಟ್ಟಿ ಭಾಗವಹಿಸಿದ್ದರು.