ಪುಣೆ ಬಂಟರ ಸಂಘದ ವತಿಯಿಂದ ಜರಗಿದ ಅಂತರಾಷ್ಟ್ರೀಯ ಬಂಟರ ಕ್ರೀಡಾಕೂಟದಲ್ಲಿ ಗುರುಪುರ ಬಂಟರ ಮಾತೃ ಸಂಘವು ತ್ರೋಬಾಲ್ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದು ಕೆ.ಎಸ್.ಎಚ್ ಟ್ರೋಫಿ ಹಾಗು ನಗದನ್ನು ತನ್ನದಾಗಿಸಿಕೊಂಡಿದೆ. ಈ ಕ್ರೀಡಾಕೂಟದಲ್ಲಿ ಅಂತರಾಷ್ಟ್ರೀಯ ಮಟ್ಟದ 14 ಬಂಟರ ಸಂಘಗಳ ತ್ರೋಬಾಲ್ ತಂಡಗಳು ಸ್ಪರ್ಧಿಸಿದ್ದವು.
ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಬಾಳಿಕೆಯವರ ಅಧ್ಯಕ್ಷತೆಯಲ್ಲಿ ಜರಗಿದ ಈ ಕ್ರೀಡಾಕೂಟದಲ್ಲಿ ಪುಣೆ ಮಹಾನಗರದ ಬಂಟ ಸಮಾಜದ ಹಿರಿಯರಾದ ಕುಶಾಲ್ ಹೆಗ್ಡೆ, ಕ್ರೀಡಾಕೂಟದ ಸಂಚಾಲಕ ಚಂದ್ರಹಾಸ ಶೆಟ್ಟಿ ಎರ್ಮಾಳು, ಮಹಿಳಾ ವಿಭಾಗದ ಅಧ್ಯಕ್ಷೆ ಸುಲತಾ ಶೆಟ್ಟಿ, ಸುನೀಲ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಚರಿತ ಶೆಟ್ಟಿ, ಮುಂಬಯಿ ಬಂಟರ ಸಂಘದ ಕ್ರೀಡಾ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರು, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಗುರುಪುರ ಬಂಟರ ಸಂಘದ ಸಾಧನೆಗೆ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ, ಕಾರ್ಯದರ್ಶಿ ಜಯರಾಮ್ ರೈ, ಮಹಿಳಾ ವಿಭಾಗದ ಅಧ್ಯಕ್ಷೆ ಇಂದಿರಾಕ್ಷಿ ಶೆಟ್ಟಿ, ಮಾಜಿ ಸಂಚಾಲಕ ಸುದರ್ಶನ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಜಯಲಕ್ಷ್ಮೀ ಸುಲಾಯ, ತಂಡದ ವ್ಯವಸ್ಥಾಪಕ ತಿಲಕ್ ಶೆಟ್ಟಿ, ತರಬೇತುದಾರ ಯುವ ವಿಭಾಗದ ಅಧ್ಯಕ್ಷ ಸಂದೀಪ್ ಆಳ್ವ, ಕ್ರೀಡಾ ಕಾರ್ಯದರ್ಶಿ ಪ್ರಖ್ಯಾತ್ ಶೆಟ್ಟಿ ಕುಳವೂರು ತಂಡವನ್ನು ಅಭಿನಂದಿಸಿದರು.