Author: admin

“ಭಯಾನಕ ಕಾಯಿಲೆ ಯನ್ನು ಹೊಡೆದೋಡಿಸಿ, ರೈತನಿಗೆ ಹೊಸ ಬದುಕು ತಂದುಕೊಟ್ಟ ಕೃಷಿ ಭೂಮಿ……!”ಕ್ಯಾನ್ಸರ್‌ ರೋಗದಿಂದ ಬದುಕಿನಲ್ಲಿ ಐಷಾರಾಮಿ ಗಲ್ಫ್ ಜೀವನ ಕ್ಯಾನ್ಸಲ್…..!” “ಕೊನೆಗೂ ಕೈ ಹಿಡಿದ ಭೂಮಿತಾಯಿ….!” ✍ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ, ಉಡುಪಿ ಜಿಲ್ಲೆ. (santhoshmolahalli@gmail.com) ಸುದ್ದಿ @ಮಂಗಳೂರು: ಅವರು ಕೃಷಿ ಭೂಮಿಯಲ್ಲಿ ಜೀವ ಕಳೆದುಕೊಂಡ ಕುಟುಂಬ.ಕೃಷಿಗೆ ಜೀವನ  ಎಂದು ನಂಬಿಕೊಂಡು ಬದುಕುವ ಕುಟುಂಬ.ಆದರೆ ಆ ಕಾಲದಲ್ಲಿ ಕೃಷಿಯಿಂದ ಬೇಸತ್ತು ವಿದೇಶದತ್ತ ಪ್ರಯಾಣ ಬೆಳೆಸಿದ ಆ ವ್ಯಕ್ತಿ ಜೀವನವೇ ಬದಲಾಯಿಸಿದ್ದು ಭಯಾನಕ ಕಾಯಿಲೆ.ಕೃಷಿ ಮಾಡುವ ಚಾಕಚಕ್ಯತೆ, ಕೃಷಿಭೂಮಿ ಹದಗೊಳಿಸುವಿಕೆ ,ಕೃಷಿಯಲ್ಲಿ ತಾನು ಪಡೆದುಕೊಂಡಂತಹ ಲಾಭಾಂಶ ಇವೆಲ್ಲವೂ ಆ ವ್ಯಕ್ತಿಗೆ ಕೃಷಿಯ ಲಾಭಾಂಶದ  ಪರಿಜ್ಞಾನವಿದೆ.ಆದರೆ ಅದನ್ನು ಸರಿಯಾಗಿ ವಿನಿಯೋಗ ಮಾಡಿಕೊಳ್ಳದೆ, ಬಹುತೇಕವಾಗಿ ಅದರಲ್ಲಿನ ಕೃಷಿ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲಿಲ್ಲ.ಕೃಷಿ ಬದುಕನ್ನು ದೂರಗೊಳಿಸಿ ದೂರದ ಗಲ್ಫ್ ಪ್ರದೇಶಕ್ಕೆ ಹೋಗಿ ಬದುಕುವ ಆಸೆ ಕಂಡಿದ್ದರು.ಆದರೆ ಕೃಷಿ ಭೂಮಿಯ ಶಾಪವೋ ಏನೋ ಗೊತ್ತಿಲ್ಲ.ಪುನಃ ಆ ವ್ಯಕ್ತಿಯನ್ನ ಕೃಷಿ ಭೂಮಿಯತ್ತ ಸೆಳೆದ ಪರಿ ಆಶ್ಚರ್ಯ  ಸಂಗತಿ.ಹೌದು…

Read More

ಮುಂಬಯಿ (ಆರ್ ಬಿ ಐ), ಅ.09: ಆರ್ಥಿಕವಾಗಿ ಹಿಂದುಳಿದವರ ಮಕ್ಕಳ ವಿದ್ಯಾಭ್ಯಾಸ ಹಾಗೂ ಮನೆ ನಿರ್ಮಾಣಕ್ಕೆ ನೆರವು ನೀಡುವುದರಿಂದ ಸಮಾಜದ ಅಭ್ಯುದಯ ಸಾಧ್ಯ. ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವುದು ನಮ್ಮ ಹೊಣೆಗಾರಿಕೆ ಎಂದು ಮುಂಬಯಿಯಲ್ಲಿನ ಪ್ರತಿಷ್ಠಿತ ಉದ್ಯಮಿ, ಆಲ್‍ಕಾರ್ಗೊ ಸಮೂಹ ಸಂಸ್ಥೆಯ ಸ್ಥಾಪಕ ಕಾರ್ಯಾಧ್ಯಕ್ಷ ಶಶಿಕಿರಣ್ ಶೆಟ್ಟಿ ತಿಳಿಸಿದರು. ಜಾಗತಿಕ ಬಂಟ ಪ್ರತಿಷ್ಠಾನದ ವತಿಯಿಂದ ನಗರದ ಎ.ಜೆ.ಗ್ರ್ಯಾಂಡ್ ಹೋಟೆಲ್‍ನಲ್ಲಿ ಕಳೆದ ಶನಿವಾರ ನಡೆದ ಸಾಧಕರಿಗೆ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಲ್‍ಕಾರ್ಗೊ ಸಮೂಹ ಸಂಸ್ಥೆಯ ವತಿಯಿಂದ ಆರ್ಥಿಕವಾಗಿ ಹಿಂದುಳಿದ 17 ಕುಟುಂಬಗಳಿಗೆ ದಾನದ ರೂಪದಲ್ಲಿ ನೀಡಿದ ಮನೆಗಳ ಕೀಲಿ ಕೈ ಹಸ್ತಾಂತರಿಸಿ ಅವರ ಮಾತನಾಡಿದರು. ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಆರ್ಥಿಕ ಸಂಕಷ್ಟದಿಂದ ಇರುವವರು ಮನೆ ನಿರ್ಮಿಸುವು ದು ಕಷ್ಟ ಸಾಧ್ಯವಾಗುತ್ತದೆ. ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಜಾಗತಿಕ ಬಂಟ ಪ್ರತಿಷ್ಠಾನದ ಕೋರಿಕೆ ಮೇರೆಗೆ ಆಲ್‍ಕಾರ್ಗೊ ಸಂಸ್ಥೆ ಆರ್ಥಿಕವಾಗಿ ಹಿಂದುಳಿದ 17 ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಡುವ ಮೂಲಕ ಸಮಾಜಕ್ಕೆ ತನ್ನ…

Read More

ಮುಂಬಯಿ (ಆರ್ ಬಿ ಐ), ಅ.05: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ (ರಿಜಿಸ್ಟರ್ ) ಆಗಿರುವ ಗಡಿನಾಡ ಕನ್ನಡಿಗ ತುಳುವ ಡಾ| ಸುಬ್ಬಣ್ಣ ರೈ ಅವರು ಪ್ರಪ್ರಥಮ ಮುಂಬಯಿ ವಾಪಸಿಗರ ಸಮ್ಮಿಲನ ಐತಿಹಾಸಿಕ ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿದ್ದಾರೆ ಎಂದು ಸಂಘಟಕ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ, ವಿಶ್ವ ಮಾಧ್ಯಮ ಚಕ್ರವರ್ತಿ ಗೌರವಕ್ಕೆ ಪಾತ್ರರಾಗಿರುವ ಡಾ| ಶೇಖರ ಅಜೆಕಾರು ತಿಳಿಸಿದ್ದಾರೆ. ಕರಾವಳಿಗರ ಎರಡನೇ ತವರು ಎಂದೇ ಖ್ಯಾತವಾಗಿರುವ ಮುಂಬಯಿ ಕನ್ನಡಿಗರು ತುಳು-ಕನ್ನಡ ನಾಡಿನ ಅಭಿವೃದ್ಧಿಯ ಹರಿಕಾರರು. ನಿವೃತ್ತರಾಗಿ, ಊರಿನ ಅನಿವಾರ್ಯತೆಯಿಂದ, ಸೋಲು-ಗೆಲುವುಗಳಿಂದಾಗಿ ಊರಿಗೆ ಬಂದು ನೆಲೆಸಿದ್ದಾರೆ. ಮುಂಬಯಿಯಲ್ಲಿದ್ದು ಬಳಿಕ ಊರಿಗೆ ವಾಪಸು ಬಂದು ನೆಲೆಸಿರುವವರು ಒಂದು ದಿನ ಸಮ್ಮಿಲನವಾಗ ಬೇಕು. ಅಂತ ಮುಂಬಯಿಯಿಂದ ವಾಪಸು ಬಂದು ಊರಲ್ಲಿ ನೆಲೆಸಿರುವರನ್ನು ಒಂದು ಸೂರಿನಡಿ ತರುವ ಪ್ರಯತ್ನ ಇದಾಗಿದೆ. ಉಡುಪಿ ಜಿಲ್ಲೆಯ ರಜತ ಸಂಭ್ರಮ, ಕನ್ನಡ ಸೇವಾ ಸಂಘ ಪೊವಾಯಿ ಇದರ ಬೆಳ್ಳಿ ಹಬ್ಬದ ಸಂಧರ್ಭದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿತವಾಗಿದೆ. ಡಾ|…

Read More

✍ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ಸುದ್ದಿ @ಹೈಕಾಡಿ (ಕುಂದಾಪುರ ) ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಲ್ಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರು ,ಕೃಷಿಕರು ಹೈನುಗಾರರಾದ  ಶ್ರೀಮತಿ ಚೈತ್ರ.ವಿ ಅಡಪ ಇವರಿಗೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಕಾಡಿ ಯಲ್ಲಿ  ಜರುಗಿದ ಹುಯ್ಯಾರು ಪಟೇಲ್ ಚಾರಿಟೆಬಲ್ ಟ್ರಸ್ಟ್ .(ರಿ.) ನವರು ನಡೆಸಿದ ಹತ್ತನೇ ವರ್ಷದ ವಾರ್ಷಿಕೋತ್ಸವ ದಿನಾಚರಣೆಯಲ್ಲಿ ಅಭಿನಂದನಾ ಸನ್ಮಾನ ಮಾಡಿ ಗೌರವಿಸಲಾಯಿತು. ಗ್ರಾಮೀಣ ಭಾಗದ ಕೈಲ್ಕೆರೆ ಪರಿಸರದಲ್ಲಿ ಸುಮಾರು 32  ಜಾನುವಾರುಗಳನ್ನು ಆರೈಕೆ ಮಾಡಿ ಪೋಷಿಸಿ, ಹೈನೋದ್ಯಮದಲ್ಲಿ ತನ್ನ ಹೆಸರನ್ನು ಪ್ರತಿಷ್ಠಾಪಿಸಿ ಕೊಂಡಿರುವುದರಿಂದ  ಈ ಕಾರ್ಯಕ್ರಮದಲ್ಲಿ  ಅಭಿನಂದಿಸಲಾಯಿತು. ಅದೇ ರೀತಿ ಚೈತ್ರ ವಿ. ಅಡಪ ಅವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಹಲವಾರು ಬಾರಿ ಸನ್ಮಾನ ಪುರಸ್ಕಾರಗಳು ದೊರೆತಿವೆ. ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ರೈತ ಸಂಘ ಆಯೋಜನೆ ಆಯೋಜನೆ ಮಾಡಿದ್ದು ,ಕಾರ್ಯಕ್ರಮದ ಅಧ್ಯಕ್ಷರಾಗಿ ಡಾ. ಕೆ. ರತ್ನಾಕರ್ ಶೆಟ್ಟಿ ಹುಯ್ಯಾರು,ಕಾರ್ಯಕ್ರಮದ…

Read More

2016ರ ಒಂದು ದಿನ ಕನ್ನಡದಲ್ಲಿ ರಿಕ್ಕಿ ಎಂಬ ಸಿನೆಮಾವು ಬಿಡುಗಡೆ ಆಗಿತ್ತು. ಆ ಸಿನೆಮಾದ ನಿರ್ದೇಶಕರಾಗಿ ತನ್ನ ಮೊದಲ ಹೆಜ್ಜೆಯನ್ನು ಇಡುತ್ತಿದ್ದ ಈ ಕುಂದಾಪುರದ ಕೆರಾಡಿ ಗ್ರಾಮದ ಹುಡುಗನು ಆ ಸಿನೆಮಾಕ್ಕೆ ಥಿಯೇಟರ್ ಸಿಗಲಿ ದೇವರೇ ಎಂದು ತನ್ನ ಫೇಸ್ ಬುಕ್ ಪುಟದಲ್ಲಿ ತಾನೇ ಬರೆದುಕೊಂಡಿದ್ದರು! ಆ ಸಿನೆಮಾಕ್ಕೆ ಥಿಯೇಟರ್ ಸಿಕ್ಕಿತೋ ಗೊತ್ತಿಲ್ಲ! ಆದರೆ ಇಂದು ಅದೇ ಹುಡುಗ ನಿರ್ದೇಶನ ಮಾಡಿ, ಪ್ರಮುಖ ಪಾತ್ರ ವಹಿಸಿರುವ ‘ ಕಾಂತಾರ ‘ ಎಲ್ಲೆಡೆಯೂ ಬಿಡುಗಡೆಯಾಗಿ ಕೆಲವು ದಿನಗಳು ಆಗಿವೆ. ಆದರೆ ಆ ಸಿನೆಮಾ ನೋಡಲು ಬಂದವರು ಟಿಕೆಟ್ ಸಿಗದೆ ಹಿಂದೆ ಹೋಗುವ ಪರಿಸ್ಥಿತಿಯು ಇಡೀ ರಾಜ್ಯದಲ್ಲಿ ಇಂದು ಇದೆ! ಕಾಂತಾರ ಕನ್ನಡ ಸಿನೆಮಾದ ಸುನಾಮಿ ಎಂದು ಇಂದು ಪ್ರೂವ್ ಆಗಿದೆ! ಸೂಪರ್ ಹಿಟ್ ಆಗಿರುವ ಕಾಂತಾರ ಸಿನೆಮಾ ಒಬ್ಬ ಗ್ರಾಮೀಣ ಹುಡುಗನ ಸಿನೆಮಾ ಬದುಕಿನ ಯಶಸ್ಸಿಗೆ ಭಾರೀ ಮುನ್ನುಡಿಯನ್ನು ಬರೆದಾಗಿದೆ! ಆ ಯುವಕನೆ ರಿಷಭ್ ಶೆಟ್ಟಿ! ನಮ್ಮ ಕುಂದಾಪುರದ ಕೆರಾಡಿ ಗ್ರಾಮದ ಹುಡುಗ!…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿಗಳಾದ ಶ್ರೀ ಕೂಳೂರು ಕನ್ಯಾನ ಶ್ರೀ ಸದಾಶಿವ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ನೂತನ ಪದಾಧಿಕಾರಿಗಳ ಸಭೆಯು ಒಕ್ಕೂಟದ ಕಛೇರಿಯಲ್ಲಿ ಜರಗಿತು. ನಡೆದ ಸಭೆಯಲ್ಲಿ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಸುಮಾರು 65 ಸೆಂಟ್ಸ್ ಜಮೀನನ್ನು ಖರೀದಿಸುವರೆ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಹಾಗೆಯೇ ಜಮೀನಿನ ಮಾಲಕರ ಜೊತೆ ಮಾತುಕತೆ ನಡೆಸಿದಂತೆ MOU ಮಾಡಿಕೊಳ್ಳಲಾಯಿತು. ಸರ್ವಸಮ್ಮತಿಯಂತೆ ಈ ಸ್ಥಳದಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ಕಟ್ಟಡಗಳ ವಿವಿಧ ರಚನೆಗಳನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿ ಶ್ರೀ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಸಂಕೀರ್ಣವೆಂದು ನಾಮಕರಣ ಮಾಡುವುದಾಗಿ ನಿರ್ಣಯಿಸಲಾಯಿತು. ಈ ಬಗ್ಗೆ ಮಹಾದಾನಿ ಶ್ರೀ ಸದಾಶಿವ ಶೆಟ್ಟಿ ಅವರು ತಮ್ಮ ಮನದಾಳದ ಮಾತುಗಳೊಂದಿಗೆ ಸಮ್ಮತಿಯನ್ನು ನೀಡಿದರು. ಹಾಗೆಯೇ ಅವರ ಕೊಡುಗೆಯು ಸಮಾಜದಲ್ಲಿ ಶಾಶ್ವತವಾಗಿ ಉಳಿಯುವಂತೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಕಾಶೆಯಲ್ಲಿ ಮೂಡಿಬರುವುದಾಗಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್…

Read More

ಮುಂಬಯಿ (ಆರ್ ಬಿ ಐ ), ಅ.01: ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ಆಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಹುಟ್ಟೂರು ಬೆಳ್ತಂಗಡಿ ಪಣಕಜೆಗೆ ಭೇಟಿಯನ್ನಿತ್ತ ವಿಜಯ್ ಎಸ್.ಶೆಟ್ಟಿ ಪಣಕಜೆ ಇವರಿಗೆ ತವರೂರ ಜನತೆ ಸನ್ಮಾನಿಸಿ ಗೌರವಿಸಿದರು. ಕಳೆದ ಸುಮಾರು ನಾಲ್ಕು ದಶಕಗಳಿಂದ ಮುಂಬಯಿಯಲ್ಲಿದ್ದು, ಇದೀಗ ಪ್ರತಿಷ್ಠಿತ ಉದ್ಯಮಿಯಾಗಿ ಸಮಾಜ ಸೇವಕರಾಗಿ ಗುರುತಿಸಿಕೊಂಡು, ಯುವ ರಾಜಕೀಯ ನೇತಾರರಾಗಿ ಪದೋನ್ನತ ವಿಜಯ್ ಶೆಟ್ಟಿ ಪಣಕಜೆ ಕಳೆದ ಗುರುವಾರ ಸಂಜೆ ತವರೂರ ಬೆಳ್ತಂಗಡಿಗೆ ಆಗಮಿಸುತ್ತಿದ್ದಂತೆಯೇ ಸೋಣಂದೂರು ಗ್ರಾಮಸ್ಥರು ಭವ್ಯವಾಗಿ ಸ್ವಾಗತಿಸಿ ಆತ್ಮೀಯವಾಗಿ ಬರ ಮಾಡಿಕೊಂಡರು. ಬಳಿಕ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಸಲಾದ ಸರಳ ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಕಾಂತ್ ಶೆಟ್ಟಿ ಮುಂಡಾಡಿ ಅಧ್ಯಕ್ಷತೆಯಲ್ಲಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಲ್ಪಸಂಖ್ಯಾತರ ಮೋರ್ಚಾದ ದ.ಕ ಜಿಲ್ಲಾಧ್ಯಕ್ಷ ಜೋಯಲ್ ಮೆಂಡೋನ್ಸಾ , ಬಿಜೆಪಿ ಬೆಳ್ತಂಗಡಿ ಕಾರ್ಯದರ್ಶಿ ಪ್ರಶಾಂತ್ ಮಡಂತ್ಯಾರು, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಬೇಬಿ ಸುಸಾನ, ಉಪಾಧ್ಯಕ್ಷ ದಿನೇಶ್ ಕರ್ಕೇರ, ಓಡೀಲು…

Read More

ಮುಂಬಯಿ (ಆರ್ ಬಿ ಐ ), ಅ.02: ಉಪನಗರ ಕಾಂದಿವಿಲಿ ಪಶ್ಚಿಮದಲ್ಲಿನ ಚಾರ್‍ಕೋಪ್ ಕನ್ನಡಿಗರ ಬಳಗದ ಉಪಾಧ್ಯಕ್ಷ, ಹಾಗೂ ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಸಕ್ರಿಯ ಕಾರ್ಯಕರ್ತ ಚಂದ್ರಶೇಖರ ಎಸ್.ಶೆಟ್ಟಿ ಅವರ ಮಾತೃಶೀ ಸುಶೀಲಾ ಶುಭಕರ ಶೆಟ್ಟಿ (86.) ಅಲ್ಪಕಾಲದ ಅಸೌಖ್ಯದಿಂದ ಇಂದು ಮಧ್ಯಾಹ್ನ ಉಡುಪಿ ಕೆಮ್ತೂರು ಅಲ್ಲಿನ ಸ್ವಗೃಹ ಶುಭ ನಿಲಯದಲ್ಲಿ ನಿಧನ ಹೊಂದಿದರು. ಮೃತರು ಚಂದ್ರಶೇಖರ ಶೆಟ್ಟಿ ಸಹಿತ ಮೂವರು ಪುತ್ರರು, ಓರ್ವ ಸುಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಅಗಲಿರುತ್ತಾರೆ. ಸುಶೀಲಾ ಅವರ ಅಗಲುವಿಕೆಗೆ ಚಾರ್‍ಕೋಪ್ ಕನ್ನಡಿಗರ ಬಳಗದ ಅಧ್ಯಕ್ಷ ಎಂ.ಕೃಷ್ಣ ಶೆಟ್ಟಿ, ಕಾರ್ಯದರ್ಶಿ ರಘುನಾಥ ಎನ್.ಶೆಟ್ಟಿ ಹಾಗೂ ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ನಿಟ್ಟೆ ಎಂ.ಜಿ ಶೆಟ್ಟಿ ಮತ್ತು ಉಭಯ ಸಂಸ್ಥೆಗಳ ಪಧಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳು ವಿಶ್ವಸ್ಥರು ಸಂತಾಪ ಸೂಚಿಸಿದ್ದಾರೆ.

Read More

ಈ ಚಿತ್ರವನ್ನು ಯಾವುದರ ಜೊತೆ ಹೋಲಿಕೆ ಮಾಡ್ಬೇಕು ಅಂದ್ರೂ ಒಂದೇ ಒಂದು ಚಿತ್ರನೂ ನೆನಪಾಗಲ್ಲ. ಅಲ್ಲಿವರೆಗೆ ಈ ಸಿನೆಮಾ ಮನಸ್ಸನ್ನು ಆವರಿಸಿಕೊಂಡಿದೆ. ಸಿನಿಮಾ ಮುಗಿದು ಆದ್ರೂ ಕಾಂತಾರದ ಗಗ್ಗರದ ಶಬ್ಧ ಇನ್ನೂ ಹಾಗೆ ಬಡಿತಾ‌ನೇ ಇದೆ. ನಾವು ತುಳುವರು ನಮಗೆ ಈ ಮಣ್ಣಿನ ಕಾರ್ಣಿಕದ ಅನುಭವ ಇದೆ. ನಾವು ನಮ್ಮ ಎಲ್ಲಾ ಕಾರ್ಯಗಳ ಆರಂಭದಲ್ಲಿ ಮೊದಲು ನೆನೆಸಿ ನಮಿಸುವುದೇ ದೈವಗಳನ್ನು ನಂತರ ದೇವರು. ಕಾರಣ ಈ ಮಣ್ಣಿನಲ್ಲಿರೋ ಪ್ರತಿಮನೆತನದಲ್ಲೂ ದೈವಗಳಿಗೇ ಆರಾಧ್ಯ ಸ್ಥಾನ, ಕಾರಣ ಈ ಮಣ್ಣೆ ದೈವಗಳ ಭೂಮಿ ಹಾಗಾಗಿ ದೈವಗಳ ಕೋಲಗಳನ್ನು ತೀರ ಹತ್ತಿರದಿಂದ ನೋಡಿದವರಿಗೆ, ಅಥವಾ ನಮ್ಮ ನಂಬಿಕೆಗಳ ಬಗ್ಗೆ ಅಧ್ಯಯನ ಮಾಡಿದವರಿಗೆ ನಮ್ಮ ದೈವಗಳ ಹಿನ್ನೆಳೆ ಬಗ್ಗೆ ಚೆನ್ನಾಗೇ ಗೊತ್ತಿರುತ್ತದೆ. ನಡೆಯಲ್ಲಿ ನಿಂತು ತನ್ನ ಮಕ್ಕಳಿಗೆ ಅಭಯ ನೀಡಿ ಜೊತೆಗೆ ಬರುವ ಹಾಗೆ ದೈವದ ಮುಂದೆ ನಿಂತು ಕೊಟ್ಟ ಮಾತಿಗೆ ತಪ್ಪಿ ನಡೆದರೆ ತಲತಲಾಂತರದ ವರೆಗೆ ಶಿಕ್ಷೆ ನೀಡುವ ದೈವಗಳು ತುಳುನಾಡಿನ ನಮ್ಮ ಜೀವನದ ಒಂದು…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಉಡುಪಿಯಲ್ಲಿ ನಡೆಯುವ ವಿಶ್ವ ಬಂಟರ ಸಮ್ಮೇಳನಕ್ಕೆ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಆಗಮಿಸಲಿದ್ದಾರೆ. ಅಕ್ಟೋಬರ್ 28 ಮತ್ತು 29 ರಂದು ಉಡುಪಿಯ ಅಜ್ಜರಕಾಡು ಮೈದಾನ ಮತ್ತು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವಠಾರದಲ್ಲಿ ಸಮ್ಮೇಳನ ನಡೆಯಲಿದ್ದು, ಸಚಿವ ನಿತಿನ್ ಗಡ್ಕರಿ ಅವರು ಅಕ್ಟೋಬರ್ 29 ರಂದು ವಿಶ್ವಬಂಟರ ಸಮ್ಮೇಳನಕ್ಕೆ ಉಡುಪಿಗೆ ಆಗಮಿಸಲಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ‌ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅ.28 ರಂದು ಆಗಮಿಸಿ ಸಮ್ಮೇಳನ‌ ಉದ್ಘಾಟಿಸಲಿದ್ದಾರೆ. ಎರಡು ದಿನಗಳ ಕಾಲ ಸಮ್ಮೇಳನ‌ ಜರಗಲಿದ್ದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮುಂಬಯಿ ಸಂಸದ ಗೋಪಾಲ ಶೆಟ್ಟಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮೊದಲಾದವರು ಭಾಗವಹಿಸಲಿದ್ದಾರೆ. ಅಲ್ಲದೇ ಬಾಲಿವುಡ್ ನಟ ಸುನಿಲ್ ಶೆಟ್ಟಿ, ರಿಷಬ್ ಶೆಟ್ಟಿ ಸಹಿತ…

Read More