ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಕೋಟೇಶ್ವರ ಸಹನಾ ಗ್ರೂಪ್ ಆಫ್ ಕಂಪನಿಯ ಸಿಎಂಡಿ ಸುರೇಂದ್ರ ಶೆಟ್ಟಿಯವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಒಟ್ಟು 9 ಮಂದಿಯನ್ನು ವ್ಯವಸ್ಥಾಪನಾ ಸಮಿತಿಗೆ ಸರಕಾರ ಆಯ್ಕೆ ಮಾಡಿದೆ.
ಸಮಾಜಸೇವಕ ಸುರೇಂದ್ರ ಶೆಟ್ಟಿಯವರು ಕಾರ್ಕಳ ಹಿರಿಯಂಗಡಿ ನಿವಾಸಿ ಆಗಿದ್ದು ಕೋಟೇಶ್ವರದಲ್ಲಿ ತನ್ನ ಉದ್ಯಮವನ್ನು ಹೊಂದಿದ್ದಾರೆ. ಸುಮಾರು 15 ವರ್ಷಗಳಿಂದ ಅವರು ಕುಂದಾಪುರದಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಕಾರ್ಕಳ ಶಿವತಿಕೆರೆ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಕೂಡಾ ಅವರು ಸೇವೆ ಸಲ್ಲಿಸಿದ್ದರು.