ಬಂಟರ ಯಾನೆ ನಾಡವರ ಸಂಘ (ರಿ) ಬೆಳ್ತಂಗಡಿ, ಬಂಟರ ಯುವ ವಿಭಾಗ ಹಾಗೂ ಬಂಟರ ಮಹಿಳಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಬೆಳ್ತಂಗಡಿ ತಾಲೂಕು ವಲಯ ಮಟ್ಟದ ಬಂಟ ಬಾಂಧವರ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ‘ದೇವು ಪೂಂಜ ಟ್ರೋಫಿ -2026’ ನವೆಂಬರ್ 15ರಂದು ಗುರುವಾಯನಕೆರೆಯ ನವಶಕ್ತಿ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ನವಶಕ್ತಿ ಅವರು ಪಂದ್ಯಾಟವನ್ನು ಉದ್ಘಾಟಿಸಿದರು. ಯುವ ಬಂಟರ ವಿಭಾಗದ ಅಧ್ಯಕ್ಷ ಅಜಯ್ ಜೆ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.





ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ, ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಶ್ರೀಮತಿ ವಸುಧಾ ಪ್ರಶಾಂತ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಬಿ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ವಸಂತ ಶೆಟ್ಟಿ ಶ್ರದ್ಧಾ, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಅಜಿತ್ ಶೆಟ್ಟಿ ಕೊಯ್ಯೂರು ಹಾಗೂ ವಿವಿಧ ವಲಯಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾಗಿ ಶ್ರೇಯಸ್ ಶೆಟ್ಟಿ ಹಾಗೂ ಪುನೀತ್ ಶೆಟ್ಟಿ ಕಾರ್ಯ ನಿರ್ವಹಿಸಿದರು. ವಿವಿಧ ವಲಯಗಳ ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದು, ಬಂಟ ಬಾಂಧವರ ಒಗ್ಗಟ್ಟು ಹಾಗೂ ಕ್ರೀಡಾ ಮನೋಭಾವಕ್ಕೆ ಪಂದ್ಯಾಟ ವೇದಿಕೆಯಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರಾಯೋಜಕರು, ಪದಾಧಿಕಾರಿಗಳು, ವಲಯ ಪ್ರತಿನಿಧಿಗಳು, ಆಟಗಾರರು ಹಾಗೂ ಸ್ವಯಂಸೇವಕರಿಗೆ ಆಯೋಜಕರು ಕೃತಜ್ಞತೆ ಸಲ್ಲಿಸಿದರು. ಹರ್ಷಿತ್ ಶೆಟ್ಟಿ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಯುವ ಬಂಟರ ವಿಭಾಗದ ಕಾರ್ಯದರ್ಶಿ ನಿಧಿಶ್ ಶೆಟ್ಟಿ ವಂದಿಸಿದರು.


















































































































