ಉಳೆಪಾಡಿ ಪುಲ್ಲೋಡಿ ಬೀಡು ಉದಯ ಶೆಟ್ಟಿಯವರ ಮಾಲೀಕತ್ವದ ಕೋಣಗಳು 2026 -27ನೇ ಸಾಲಿನ ಸಾಣೂರು ಸೇನರಬೆಟ್ಟು “ಕೋಟಿ-ಚೆನ್ನಯ” ಜೋಡುಕರೆ ಕಂಬಳದಲ್ಲಿ ನೇಗಿಲು ಕಿರಿಯ ವಿಭಾಗದಲ್ಲಿ ‘A’ ಮತ್ತು ‘B’ ಜೋಡಿ ಕೋಣಗಳು ಪ್ರಥಮ ಹಾಗೂ ದ್ವಿತೀಯ ಎರಡೂ ಬಹುಮಾನಗಳನ್ನು ಗೆದ್ದುಕೊಂಡಿದೆ. ಈ ತಂಡವು ಈ ಹಿಂದೆ ಪಣಪ್ಪಿಲ ಕಂಬಳಗಳಲ್ಲಿಯೂ ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಗಳಿಸಿ ಗಮನ ಸೆಳೆದಿದ್ದವು.






















































































































