Author: admin
ಜನವರಿ 26 ರಂದು ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವಕ್ಕೆ ಸುರತ್ಕಲ್ ಬಂಟರ ಸಂಘದಿಂದ ನೀಡುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಂಟರ ಭವನದಲ್ಲಿ ಮಹೂರ್ತ ನೆರವೇರಿತು. ಸುರತ್ಕಲ್ ಬಂಟರ ಸಂಘದ ಕಟ್ಟಡ ಸಮಿತಿ ಛೇರ್ಮನ್ ಕರುಣಾಕರ ಎಂ ಶೆಟ್ಟಿ ಮದ್ಯಗುತ್ತು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಾವು ನೀಡುವ ಕಾರ್ಯಕ್ರಮದಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಅದಕ್ಕೆ ಪೂರಕವಾಗಿ ಶಿಸ್ತು ಏಕಾಗ್ರತೆ ಛಲಗಳಿಂದ ಸಾಧಿಸಿದಾಗ ಯಶಸ್ಸು ನಮ್ಮದಾಗುತ್ತದೆ. ಪುಣೆಯಲ್ಲಿ ಸುರತ್ಕಲ್ ಬಂಟರ ಸಂಘದ ಸದಸ್ಯರು ನೀಡುವ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಲಿ, ಕಾರ್ಯಕ್ರಮಕ್ಕೆ ತನ್ನಿಂದಾದ ಸಹಾಯ ಮಾಡುವುದಾಗಿ ಶುಭ ಹಾರೈಸಿದರು. ಮಾಜಿ ಅಧ್ಯಕ್ಷ ಎಂ ದೇವಾನಂದ ಶೆಟ್ಟಿ ಮಾತನಾಡಿ, ಸತತ ಪರಿಶ್ರಮ ಪಟ್ಟಾಗ ನಮ್ಮ ಗೆಲುವನ್ನು ತಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ರಂಗದಲ್ಲಿ ಸುರತ್ಕಲ್ ಬಂಟರ ಸಂಘವು ಪ್ರತಿಯೊಂದು ಪ್ರದೇಶದಲ್ಲೂ ಒಳ್ಳೆಯ ಸಾಧನೆ ಮಾಡಿದೆ. ಪುಣೆಯಲ್ಲಿ ಎಲ್ಲಾ ಸದಸ್ಯ ಕಲಾವಿದರು ಉತ್ತಮ ಪ್ರದರ್ಶನ ನೀಡುವಂತಾಗಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಲೋಕಯ್ಯ ಶೆಟ್ಟಿ ಮುಂಚೂರು ಮಾತನಾಡಿ,…
ಪಡುಬಿದ್ರಿ ಆಸ್ಪೆನ್ ವಿಶೇಷ ವಿತ್ತ ವಲಯ ಇದರ ಸೀನಿಯರ್ ಜನರಲ್ ಮ್ಯಾನೇಜರ್ ಮತ್ತು ಮುಖ್ಯಸ್ಥರು ಹಾಗೂ ಮಣಿಪುರ ಕುಂತಳ ನಗರದ ಭಾರತಿ ಹಿರಿಯ ಪ್ರಾಥಮಿಕ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಅವರನ್ನು ಶಾಲಾ ಶತಮಾನೋತ್ಸವ ಸಂಭ್ರಮದ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿ ವೃಂದ, ವಿದ್ಯಾರ್ಥಿಗಳು, ಶಿಕ್ಷಕ ವೃಂದ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.ಈ ಸಂದರ್ಭ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿಗಳಾದ ರಾಜೇಂದ್ರ ವಿ. ಶೆಟ್ಟಿ ಹುಬ್ಬಳ್ಳಿ, ಮಧುಕರ್ ಶೆಟ್ಟಿ ಮುಂಬಯಿ, ಅಶೋಕ್ ಶೆಟ್ಟಿ ಮುಂಬಯಿ, ಸುಭಾಸ್ ಸಾಲಿಯಾನ್, ಬೆಂಗಳೂರು ಉದ್ಯಮಿ ಸಂದೀಪ್ ಶೆಟ್ಟಿ, ಉದ್ಯಮಿ ಸತೀಶ್ ಶೆಟ್ಟಿ ಮಣಿಪುರ, ಸಮಾಜ ಸೇವಕಿ ಬಿಂದು ಶೆಟ್ಟಿ ಬಡಗು ಮನೆ, ರಘು ಪೂಜಾರಿ ಕಲ್ಮಂಜೆ, ಮಣಿಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜೋನ್ ಸಿಕ್ವೇರಾ, ಗ್ರಾ. ಪಂ. ಸದಸ್ಯ ಸಂತೋಷ್ ಶೆಟ್ಟಿ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ವೈ, ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಹಳೆ…
ಪುಣೆ ಬಂಟರ ಸಂಘದ ವತಿಯಿಂದ ಜರಗಿದ ಅಂತರ್ ರಾಷ್ಟ್ರೀಯ ಬಂಟರ ಕ್ರೀಡಾ ಕೂಟದಲ್ಲಿ ಗುರುಪುರ ಬಂಟರ ಮಾತೃ ಸಂಘ ತ್ರೋಬಾಲ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕೆ.ಎಸ್.ಎಚ್ ಟ್ರೋಫಿ ಹಾಗೂ ನಗದನ್ನು ತನ್ನದಾಗಿಸಿಕೊಂಡಿದೆ.
ಬೈಲೂರು : ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್ – ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ವಿಹಾರಾರ್ಥವಾಗಿ ಬೈಲೂರಿನ ಶ್ರೀ ರಾಮಕೃಷ್ಣಾಶ್ರಮಕ್ಕೆ ಮಕ್ಕಳು ಭೇಟಿ ನೀಡಿದರು. ಆಶ್ರಮದ ಪೂಜ್ಯ ಯತಿ ಸ್ವಾಮಿ ವಿನಾಯಕಾನಂದ ಮಹಾರಾಜ್‍ರವರು ಆಶೀರ್ವಚನ ನೀಡಿ, ವ್ಯಕ್ತಿಯ ಸಮಗ್ರ ಬೇಳವಣಿಗೆಯಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ ಹಾಗೂ ಆದ್ಯಾತ್ಮಿಕ ಅಂಶಗಳು ಮುಖ್ಯ. ಈ ನಿಟ್ಟಿನಲ್ಲಿ ಜ್ಞಾನಭಾರತ್ ತಂಡವು ಮಕ್ಕಳ ಶ್ರೇಯೋಭಿವೃದ್ದಿಗಾಗಿ ಇಂತಹ ಕಾರ್ಯವನ್ನು ಕೈಗೊಂಡಿರುವುದು ಪ್ರಶಂಸನೀಯ ಎಂದರು.ಬಾಲ ಸಂಸ್ಕಾರ ವಿಹಾರದಲ್ಲಿ ಉಪಸ್ಥಿತರಿದ್ದ ಸಾಹಿತಿ ಶ್ರೀ ಗಣೇಶ್ ಜಾಲ್ಸೂರು ಮಾತನಾಡಿ, ಇಂತಹ ಆಶ್ರಮಗಳು ಬೇಕು, ವೃದ್ಧಾಶ್ರಮಗಳಲ್ಲ. ಯಾಕೆಂದರೆ ನಾವೇ ನಮ್ಮ ಪ್ರೀತಿಯಿಂದ ಮನೆಯ ಹಿರಿಯರನ್ನು ಗೌರವಿಸಬೇಕು. ಸಂಸಾರದಲ್ಲಿ ಸಂಸ್ಕಾರವಿದ್ದರೆ ಬಹಳ ಸುಂದರವಾದ ಜೀವನವನ್ನು ಸಾಗಿಸಬಹುದು. ಹಣದ ಹಿಂದಿರುವ ಮಾನವ ಇತಿಮಿತಿಯನ್ನರಿಯದೆ ಹೆಣವಾಗುತ್ತಿದ್ದಾನೆ. ಜ್ಞಾನಭಾರತ್-ಬಾಲಸಂಸ್ಕಾರ ವೃಂದದ ಮುಖೇನ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಸುಧಾಕಾರ್ ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದರು.ಮಕ್ಕಳು ಆಶ್ರಮದ ಪ್ರಶಾಂತ ವಾತವರಣದಲ್ಲಿ ವಿಹರಿಸಿ…
ಮೂಡುಬಿದಿರೆ: ವಾರ್ಷಿಕ ಸಂಚಿಕೆಗಳು ಶಿಕ್ಷಣ ಸಂಸ್ಥೆಯ ಸಾಹಿತ್ಯದ ಸೃಜನಾತ್ಮಕ ಚಟುವಟಿಗೆಗಳಿಗೆ ಹಿಡಿದ ಕೈಗನ್ನಡಿ ಎಂದು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ನುಡಿದರು. ಅವರು ಕಾಲೇಜಿನ ಕುವೆಂಪು ಸಭಾಂಗಣ ದಲ್ಲಿ ಶನಿವಾರ ನಡೆದ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ “ಉತ್ತುಂಗ” ಚೊಚ್ಚಲ ವಾರ್ಷಿಕ ಸಂಚಿಕೆ ಬಿಡುಗಡೆ ಕರ‍್ಯಕ್ರಮದಲ್ಲಿ ಮಾತನಾಡಿದರು. ಪ್ರಶಿಕ್ಷಣಾರ್ಥಿಗಳು ಮುಂದೆ ಗುರುಗಳಾಗುವವರು. ಇಂತಹ ಸ್ಮರಣ ಸಂಚಿಕೆಗಳು ಮುಂದೆ ಬರುವ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು. ಈಗಿನ ವಿದ್ಯಾರ್ಥಿಗಳು ಬರವಣಿಗೆಯ ಹವ್ಯಾಸವನ್ನು ಬೆಳೆಸಿಕೊಳ್ಳುವುದಿಲ್ಲ. ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ರೋಬೋಟ್ಗಳಂತೆ ವರ್ತಿಸುತ್ತಾರೆ. ಇಂತಹ ಸಾಹಿತ್ಯ ಕಾರ್ಯಕ್ರಮಗಳು ಸಾಮಾಜಿಕ ವಿಷಯಗಳಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸುತ್ತದೆ ಎಂದರು.ಆಳ್ವಾಸ್ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಎನ್‌ಪಿ ನಾರಾಯಣ ಶೆಟ್ಟಿ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಒಂದು ವಾರ್ಷಿಕ ಸಂಚಿಕೆ ಬಿಡುಗಡೆಯಾಗುವಾಗ ಮೊದಲು ನೋಡುವುದು ವಿನ್ಯಾಸ, ವಿಷಯಗಳ ವೈವಿಧ್ಯತೆ, ಭಾಷಾ ವೈವಿಧ್ಯತೆ. ವಿದ್ಯಾರ್ಥಿಗಳು ಬೇರೆ ಬೇರೆ ವಿಷಯಗಳಲ್ಲಿ ಬರವಣಿಗೆಯನ್ನು ವೃದ್ಧಿಸಿಕೊಂಡಾಗ ಆ ಬರವಣಿಗೆಗಳು ಆಕಾರ…
ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳದಲ್ಲಿ 03-01-2025 ರಂದು ಕ್ರಿಯೇಟಿವ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಉದ್ಘಾಟಕರಾಗಿ ಆಗಮಿಸಿದ ಶ್ರೀ ಗೋಪಾಲಕೃಷ್ಣ ಸಾಮಗ ಬಿ, ಉಪಪ್ರಧಾನ ವ್ಯವಸ್ಥಾಪಕರು, ಮಾನವ ಸಂಪನ್ಮೂಲ ಇಲಾಖೆ, ಕರ್ಣಾಟಕ ಬ್ಯಾಂಕ್, ಪ್ರಧಾನ ಕಚೇರಿ, ಮಂಗಳೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಜ್ಞಾನಾರ್ಜನೆಯ ಜೊತೆಗೆ ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿಯನ್ನು ರೂಢಿಸಿ ಕೊಂಡಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ ಎಸ್ ರವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಾಗಿಬಂದ ಸಾಧನೆಯ ಹಾದಿಯ ಸಮಗ್ರ ಮಾಹಿತಿಗಳನ್ನು ಒದಗಿಸಿದರು. ಮುಖ್ಯ ಅತಿಥಿ ಅಂ ನಿತೇಶ್ ಶೆಟ್ಟಿ, ಸ್ಥಾಪಕರು, ಎನ್ ಸಿ ಎಸ್ ಮತ್ತು ಕೋ. ರವರು ಮಾತನಾಡಿ ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಮತ್ತು ಇದು ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದರು. Ar. ಸುನಿಲ್ ಕುಮಾರ್, ಪ್ರಧಾನ ಶಿಲ್ಪಿಗಳು ಇವರು ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಹಕಾರಿ ಎಂದರು.…
ಉತ್ತರಾಖಂಡ್ ನ ಹರಿದ್ವಾರದಲ್ಲಿ ನಡೆಯುವ 50ನೇ ರಾಷ್ಟ್ರೀಯ ಜ್ಯೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಕುಮಾರಿ ಸಾಕ್ಷಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಈಕೆಗೆ ಕಾಲೇಜಿನ ದೈಹಿಕ ಶಿಕ್ಷಕಿ ಪ್ರಭಾವತಿ ಹೆಗ್ಡೆ ಹಾಗೂ ಕೋಚ್ ಶಶಿಧರ್ ಶೆಟ್ಟಿ ಹಾಗೂ ಉಡುಪಿ ಜಿಲ್ಲಾ ಅಮೆಚೂರ್ ಫೆಡರೇಷನ್ ವತಿಯಿಂದ ತರಬೇತಿಯನ್ನು ನೀಡುತ್ತಿದ್ದಾರೆ.
ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ ‘ಲೈಫ್ ಸ್ಕಿಲ್ ಡೆ’ ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಶಿಕ್ಷಣವೆಂದರೆ ಕೇವಲ ವಿದ್ಯಾಭ್ಯಾಸ ಮಾತ್ರವಲ್ಲ, ಜೀವನ ಕೌಶಲಗಳೊಂದಿಗೆ ಜ್ಞಾನಾರ್ಜನೆ ನಿಜವಾದ ಕಲಿಕೆ ಎಂದರು. ಕೌಶಲ್ಯಗಳು ಯಾವಾಗಲೂ ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ 21ನೇ ಶತಮಾನದ ಲೈಫ್ ಸ್ಕಿಲ್‍ನ ಕುರಿತು ಮಾಹಿತಿಯನ್ನು ನೀಡಿದರು. ಕೋಟ ಸರಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಹೇಮಾರವರು ಮಕ್ಕಳ ಸುರಕ್ಷತೆ ಹಾಗೂ ಪ್ರಥಮ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು. ಉತ್ತಮ ನಾಯಕತ್ವ, ಸಮಸ್ಯೆ ಪರಿಹಾರದ ಕುರಿತು ಕಿರು ನಾಟಕ, ಒತ್ತಡ ನಿರ್ವಹಣೆಯ ಕಿರು ಚಿತ್ರ, ಸೃಜನ ಶೀಲತೆ ವಿಮರ್ಶಾತ್ಮಕ ಚಿಂತನೆಯ ನೀತಿ ಕಥೆಗಳು, ಸಹಾನುಭೂತಿ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಗೀತೆ, ನೃತ್ಯಗಳು ವಿದ್ಯಾರ್ಥಿಗಳಿಂದ ಅದ್ಭುತವಾಗಿ ಮೂಡಿ ಬಂದವು. ಬೆಂಕಿ ಉಪಯೋಗವಿಲ್ಲದೆ ಆಹಾರ ತಯಾರಿಕೆ, ವೆಜಿಟೇಬಲ್ ಆರ್ಟ್, ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಕಾರಿನ ಚಕ್ರವನ್ನು ಬದಲಾಯಿಸುವುದು,…
ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ ದೆಹಲಿಯ ಭಾರತ್ ಮಂಡಪಂನಲ್ಲಿ ಜನವರಿ 11 ಮತ್ತು 12ರಂದು ನಡೆಯಲಿರುವ ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ ಅಧಿವೇಶನದಲ್ಲಿ ಭಾಗವಹಿಸಲು ಕರ್ನಾಟಕದಿಂದ ‘ವಿಶೇಷ ಆಹ್ವಾನಿತ ಯೂತ್ ಐಕಾನ್’ ಆಗಿ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಮನು ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಉದ್ಯಮಿ ಇನ್ನಾ ಉದಯ ಶೆಟ್ಟಿ ಮತ್ತು ಜಿ.ಪಂ ಮಾಜಿ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಅವರ ಪುತ್ರಿ. ವಿಕಸಿತ ಭಾರತದ ನಿರ್ಮಾಣದಲ್ಲಿ ಯುವ ಜನರ ಭಾಗವಹಿಸುವಿಕೆಯನ್ನು ಖಾತ್ರಿಗೊಳಿಸಲು ನಡೆಯುವ ರಾಷ್ಟ್ರೀಯ ಮಟ್ಟದ ಯುವ ಪ್ರತಿಭೆಗಳ ಎರಡು ದಿನದ ಈ ಅಧಿವೇಶನದಲ್ಲಿ ಭಾರತಾದ್ಯಂತದ 3000 ಯುವಕ ಯುವತಿಯರು ಆಯ್ಕೆಯಾಗಿದ್ದಾರೆ. ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಕಸಿತ ಭಾರತದ ವಿವಿಧ ಕ್ಷೇತ್ರಗಳ ವಿಷಯಗಳ ಬಗ್ಗೆ ಚರ್ಚೆ, ವಿಚಾರ ಮಂಡನೆ ಮತ್ತು ಸಂವಾದಗಳು ನಡೆಯಲಿದ್ದು ಆಹ್ವಾನಿತರು ತಮ್ಮ ವಿಚಾರಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ವಿವಿಧ ಇಲಾಖೆಗಳ ಪ್ರದರ್ಶನಗಳು ಇರಲಿವೆ. ಪ್ರಧಾನಿ ನರೇಂದ್ರ ಮೋದಿಯೂ ಸೇರಿದಂತೆ ಕೇಂದ್ರದ ವಿವಿಧ…
ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಡಾ| ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ 2024ನೇ ಸಾಲಿನ ಡಾ| ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಪುತ್ತೂರಿನ ಬಹುಮುಖ ಪ್ರತಿಭೆ, ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಜ್ಞಾನ ರೈ ಆಯ್ಕೆಯಾಗಿದ್ದಾರೆ. ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆಯಾಗಿರುವ ಬಹುಮುಖ ಪ್ರತಿಭೆ ಜ್ಞಾನ ರೈಯವರು ಕುರಿಯ ಗ್ರಾಮದ ಉದ್ಯಮಿ ಜಯರಾಮ್ ರೈ ಹಾಗೂ ಸುದ್ದಿ ನ್ಯೂಸ್ ಚಾನಲ್ ನ ನಿರೂಪಕಿ ಹೇಮಾ ಜಯರಾಮ್ ರೈಯವರ ಪುತ್ರಿ.















