Author: admin
ಕಲಾ ಕ್ಷೇತ್ರದಲ್ಲಿ ನಿರಂತರವಾಗಿ ತನ್ನದೇ ಛಾಪನ್ನು ಮೂಡಿಸುತ್ತಿರುವ ಬಂಟ ಸಮಾಜದ ಹೆಮ್ಮೆಯ ಗರಿ ಶರತ್ ಆಳ್ವ ಕೂರೇಲು. ಕಲೆಯೆನ್ನುವುದು ಮುಗಿಯದ ಅಧ್ಯಾಯ. ತನ್ನಲ್ಲಿರುವ ಕಲಾ ಪ್ರತಿಭೆಯನ್ನು ಸಿಗುವ ಅವಕಾಶಗಳ ಮೂಲಕ ಹೊರಹೊಮ್ಮಿಸಿದರೆ ಉತ್ತಮ ಕಲಾವಿದನೆನಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಮನದೊಳಗೆ ಅದೆಷ್ಟೇ ನೋವುಗಳಿದ್ದರೂ ತನ್ನೆದುರಿಗಿರುವ ಪ್ರೇಕ್ಷಕರ ನೋವನ್ನು ಮರೆಸುವಂತಹ ಅದ್ಭುತ ಶಕ್ತಿಯಿರುವುದು ಓರ್ವ ಕಲಾವಿದನಿಗೆ ಮಾತ್ರ. ಕಲಾ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಾ, ಕಲಾವಿದರಿಗಾಗಿ ತಂಡವನ್ನೂ ರಚಿಸಿ ಅನೇಕ ಪ್ರತಿಭಾವಂತರಿಗೆ ಕಲಾವಿದನ ಸ್ಪರ್ಶ ಕೊಟ್ಟು ಬೆಳೆಸುತ್ತಿರುವವರು ಶರತ್ ಆಳ್ವ ಕೂರೇಲು. 27-05-1989 ರಲ್ಲಿ ಸಂಕಪ್ಪ ಆಳ್ವ ಮತ್ತು ಯಮುನಾ ಆಳ್ವ ದಂಪತಿಗಳ ಪುತ್ರನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೂರೇಲಿನಲ್ಲಿ ಜನಿಸಿದ ಶರತ್ ತಮ್ಮ ಒಂದರಿಂದ ನಾಲ್ಕನೇ ತರಗತಿ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಟ್ಯಾರು, ಐದನೇ ತರಗತಿಯಿಂದ ಏಳನೇ ತರಗತಿ ಶಿಕ್ಷಣವನ್ನು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರಿನಲ್ಲಿ ಪಡೆದು ತಮ್ಮ ಪ್ರೌಢ, ಕಾಲೇಜು ಹಾಗೂ…
ಮಂಗಳೂರು ಮಹಾನಗರಪಾಲಿಕೆಯ ಗುತ್ತಿಗೆದಾರರ ಕುಂದು ಕೊರತೆ ಮತ್ತು ಸಮಸ್ಯೆಯನ್ನು ಪರಿಶೀಲಿಸಲು ಮಹಾನಗರಪಾಲಿಕೆಯ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಯಿತು. ಸಭೆಯಲ್ಲಿ ಗುತ್ತಿಗೆದಾರರಿಗಾಗುವ ಸಮಸ್ಯೆಯನ್ನು ಕೇಳಿ ಇದಕ್ಕೆ ಸಮಜಾಯಿಷಿಕೆಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ, ಅದರಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಡುವೆ ಹಲವು ವಿಷಯಗಳ ಚರ್ಚೆ ನಡೆದಿದ್ದು ಹಲವಾರು ನ್ಯೂನತೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಜರುಗಿಸಲು ಆದೇಶಿಸಲಾಯಿತು. ಸಭೆಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರ್, ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ, ಪಟ್ಟಣ ಯೋಜನೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಲೋಹಿತ್ ಅಮೀನ್, ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ವರುಣ್ ಚೌಟ, ವಿಪಕ್ಷ ನಾಯಕರಾದ ಪ್ರವೀಣ್ ಚಂದ್ರ ಆಳ್ವ ಮತ್ತು ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಂಟರ ಭವನದಲ್ಲಿ ನೆರವೇರಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಾರ್ಷಿಕ ವಿಶ್ವ ಸಮ್ಮಿಲನ ಸ್ನೇಹತ್ವ ಬಂಟರ ಗುಣಧರ್ಮವಾಗಿದೆ : ಮುಖ್ಯಮಂತ್ರಿ ಬೊಮ್ಮಾಯಿ (ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಸೆ.18: ನಾನೂ ಕೂಡಾ ಮುಂಬಯಿನಲ್ಲಿ ಕೈಗಾರಿಕೋದ್ಯಮಿ ಆಗಿದ್ದವನು. ಹಾಗಾಗಿ ನನಗೆ ಬಂಟರ ಮಿತ್ರರೇ ಜಾಸ್ತಿ ಆಗಿದ್ದಾರೆ. ಜಗತ್ತಿನ ಯಾವ ಮೂಲೆಗೂ ಹೋದಾಗಲೂ ಬಂಟರ ಪರಿಚಯಸ್ಥನಾಗುತ್ತೇನೆ. ಸ್ವೇಹತ್ವ ಬಂಟರ ಗುಣಧರ್ಮವಾಗಿದೆ ಆದುದರಿಂದ ಕನ್ನಡನಾಡು ಕಟ್ಟಲು ಮುಂಬಯಿವಾಸಿ ಬಂಟರ ಶಕ್ತಿ ಪಡೆಯಲು ಬಯಸುತ್ತಿದ್ದೇನೆ. ಜಗತ್ತಿನಲ್ಲಿ ಅತೀ ಹೆಚ್ಚು ಗೌರವವುಳ್ಳ ಬಂಟರು ಬಾಂಧವ್ಯಕ್ಕೆ ಬಲಿಷ್ಠರು. ಸದಾ ಭೃಹತ್ವತ್ವವನ್ನು ಯೋಚಿಸುವ ಬಂಟರು ಸಹೃದಯಿಗಳಾಗಿದ್ದಾರೆ ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ತಿಳಿಸಿದರು. ಇಂದಿಲ್ಲಿ ಭಾನುವಾರ ಕುರ್ಲಾ ಇಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿನ ಕುಳೂರು ಕನ್ಯಾನ ಸದಾಶಿವ ಕೆ.ಶೆಟ್ಟಿ ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ (ಫೆಡರೇಶನ್ ಆಫ್ ವರ್ಲ್ಡ್ ಬಂಟ್’ಸ್ ಅಸೋಸಿಯೇಶನ್’ಸ್) ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿಸಲ್ಪಟ್ಟ ವಿಶ್ವ ಬಂಟರ ಸಮ್ಮಿಲನ-2022ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದರು. ನಳೀನ್ಕುಮಾರ್ ಕಟೀಲ್ ಮಾತನಾಡಿ ಉದ್ಯಮಶೀಲರಾಗಿ ಸಾಧಕರಾದ ಬಂಟರು ವಿಶ್ವ ಸುಂದರಿಯಿಂದ ವಿಶ್ವನಾಯಕರಾಗಿ ಬೆಳೆದವರಾಗಿದ್ದಾರೆ.…
ಮುಂಬಯಿ ಧುನಿಯಾದಲ್ಲಿ ತುಳುಕನ್ನಡಿಗರಲ್ಲಿ `ಬಂಟ ಕುಲಭೂಷಣ’ ಮುಂಬಯಿ ತುಳುಕನ್ನಡಿಗರ ನೆಚ್ಚಿನ `ಯಜಮಾನ ಎಂ.ಡಿ ಶೆಟ್ಟಿ’ ಎಂದೇ ಜನಜನಿತ ಮೂಳೂರು ದೇಜು ಶೆಟ್ಟಿ (95) ಅವರು ಸೋಮವಾರ (ಜು.10) ಬಾಂದ್ರಾ ಪಶ್ಚಿಮದ ಎಸ್.ವಿ ರೋಡ್ನಲ್ಲಿನ ವಿಜಯ್ ರಾಜ್ ಅಪಾರ್ಟ್ಮೆಂಟ್ ನಿವಾಸದಲ್ಲಿ ನಿಧನರಾದರು. ದಕ್ಷಿಣ ಕನ್ನಡ ಜಿಲ್ಲೆಯ ಕಾಪು ಮೂಳೂರು ಮನೆತನದವರಾಗಿದ್ದ ಮೃತರು 1973ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಉಪಸ್ಥಿತಿಯಲ್ಲಿ ಇಂದಿರಾ ಬ್ರಿಗೇಡ್ ಇದರ ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿ ನಿಯುಕ್ತಿಗೊಂಡರು. 1977ರಲ್ಲಿ ವಿಶ್ವದ ಹೆಸರಾಂತ ಬಂಟ ಸಮಾಜದ ಸಂಸ್ಥೆಯಾದ ಬಂಟ್ಸ್ ಸಂಘ ಮುಂಬಯಿ ಇದರ ಅಧ್ಯಕ್ಷರಾಗಿ ಚುನಾಯಿತರಾಗಿ ಸಂಸ್ಥೆಯನ್ನು ಪ್ರತಿಷ್ಠಿತ ಮಟ್ಟಕ್ಕೆ ಬೆಳಿಸಿದ್ದು ಇಂದಿಗೂ ಬಂಟ ಸಮಾಜದ ಹಿರಿಯ ಮುತ್ಸದ್ಧಿ ಆಗಿಯೇ ಉಳಿದಿರುವರು. ವರ್ಲಿಯಲ್ಲಿನ ನಿತ್ಯಾನಂದ ರಾತ್ರಿ ಹೈಸ್ಕೂಲು ಇದನ್ನು ಬಂಟ್ಸ್ ಸಂಘಕ್ಕೆ ಸೇರ್ಪಡೆ, ಬಂಟರ ಭವನದಲ್ಲಿ ಸ್ವಾಮಿ ಮುಕ್ತಾನಂದ ಸಭಾಗೃಹ ಮತ್ತು ಮಹಿಳಾ ವಿಭಾಗದ ರಚನೆ, ಬಂಟರ ಸಂಘದ ಮುಖವಾಣಿ ಬಂಟರವಾಣಿ ಪ್ರಕಾಶನ, 2006ರಲ್ಲಿ ಸ್ಥಾಪಿತ ಬಂಟ್ಸ್ ಉನ್ನತ ಶಿಕ್ಷಣ ಯೋಜನೆ,…
ಅಗಣಿತ ಶ್ರಮ,ಅದಕ್ಕೆ ತಕ್ಕುದಾದ ತಯಾರಿ ಮತ್ತು ದೊರೆತ ಸಣ್ಣ ಕಾಯಕವನ್ನು ತನ್ನ ಕಾರ್ಯದಂತೆ ವಿಜೃಂಭಿಸಿ ನಡೆಯುವವನು ಬದುಕಲ್ಲಿ ಎಂದೂ ವಿರಮಿಸಲಾರ.ಅವನ ಹಿಂದಿನ ಶ್ರಮವೇ ಇಂದಿನ ಉತ್ತಮ ವ್ಯಕ್ತಿಯಾಗಿ,ಹಲವರಿಗೆ ಮಾದರಿಯಾಗಿ ಹಲವರಲ್ಲಿ ಒಬ್ಬನನ್ನಾಗಿಸುತ್ತದೆ. ಇನ್ಯಾರೋ ಬಿಟ್ಟ ಕಾರ್ಯ ನನಗೆ ದೊರೆತಿದೆ ಎಂದು ಅಸಹ್ಯ ಪಡದೆ,ಅದನ್ನೇ ನನ್ನ ಕಾರ್ಯವೆಂದು ಭಾವಿಸಿ ತಲ್ಲೀನನಾದಾಗ ಭದ್ರ ಗೆಲುವನ್ನು ಸಾಧಿಸಲು ಸಾಧ್ಯ..! ಯಾವತ್ತು ಒಬ್ಬನ ಗೆಲುವು ಅವನು ಮಾತ್ರ ಸಂಭ್ರಮಿಸುವಂತಿರಬಾರದು, ಅದು ಅವನ ಸುತ್ತಲಿನ ಜಗತ್ತು ಸಂಭ್ರಮಿಸುವಂತಿರಬೇಕು.ಆಗ ತನ್ನ ಪೂರ್ಣ ಪರಿಶ್ರಮದ ದಾರಿಗೆ ಒಂದು ರೀತಿಯ ಅರ್ಥ ದೊರೆದಂತಾಗುತ್ತದೆ..! ದೃಶ್ಯ ಮಾಧ್ಯಮದ ಬೃಹತ್ ವೇದಿಕೆಯಲ್ಲಿ ಹಲವಾರು ವರುಷಗಳ ಕಾಲ,ಸುದೀರ್ಘವಾಗಿ ನೆಲೆಯನ್ನು ಕಂಡುಕೊಳ್ಳುವುದು ಸಾಮಾನ್ಯ ಸಂಗತಿ ಅಲ್ಲವೇ ಅಲ್ಲ! ಅದಕ್ಕೇ ತನ್ನದೇ ಆದ ವೃತ್ತಿ ಪರತೆ,ಕೆಲಸದ ಮೇಲಿನ ಹಿಡಿತ,ತೀಕ್ಷ್ಣ ಮಾತಿನ ಪ್ರಖರ,ಧ್ವನಿಯ ಗಡಸುತನ ಮತ್ತು ಸಮಯಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ಹದು ಬಸ್ತಿನಲ್ಲಿ ಇಡುವ ಚಾಕಚಕ್ಯತೆ ಅತೀ ಅಗತ್ಯವಾಗಿದೆ. ತನ್ನದೇ ಆದ ವಿಷಯವನ್ನು ಪ್ರಸ್ತಾಪಿಸುವ ರೀತಿ ಮತ್ತು ಎಲ್ಲರನ್ನು ಆ ವಿಷಯದ…
ದೇಸಿ ಹಾಗೂ ಇತಿಹಾಸಿಕವಾದ ಕಂಬಳ ಕ್ರೀಡೆಗೆ ಹೆಚ್ಚಿನ ಸಹಕಾರ ಕೊಡಲಾಗುವುದು. ಈ ನಿಟ್ಟಿನಲ್ಲಿ 20 ಕಂಬಳಗಳಿಗೆ ತಲಾ 5ಲಕ್ಷ ರೂ. ಗಳಂತೆ 1 ಕೋಟಿ ರೂ. ಸಹಾಯ ಧನವನ್ನು ಈ ಹಿಂದಿನಂತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ‘ಬೆಂಗಳೂರು ಕಂಬಳ -ನಮ್ಮ ಕಂಬಳ’ದ ಕರೆಪೂಜೆ (ಗುದ್ದಲಿ ಪೂಜೆ) ನೆರವೇರಿಸಿ ಅವರು ಮಾತನಾಡಿ, ಕಂಬಳಕ್ಕೆ ಸಹಾಯಧನ ಬಿಡುಗಡೆ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಜತೆ ಚರ್ಚೆ ನಡೆಸುತ್ತೇವೆ. ದ.ಕ. ಮತ್ತು ಉಡುಪಿ ಜಿಲ್ಲೆಯ ಸಮಾಜಗಳ ಸಂಘಟನೆಗೆ ಒಂದು ನೆಲೆ ಬೇಕು ಎಂದು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ. ಎಲ್ಲರೂ ಒಟ್ಟಾಗಿ ಸರಕಾರಕ್ಕೆ ಮನವಿ ಸಲ್ಲಿಸಿ ಎಂದರು. ದ. ಕ. ದ ಆಚರಣೆ ಬೆಂಗಳೂರಿನಲ್ಲೂ ನಡೆಯಲಿ : ದಕ್ಷಿಣ ಕನ್ನಡ ಶ್ರೀಮಂತ ಜನಪದ ಆಚರಣೆಗಳನ್ನು ಹೊಂದಿದ್ದು, ಅಲ್ಲಿನ ಆಚರಣೆ ಬೆಂಗಳೂರಿನಲ್ಲೂ ನಡೆಯಲಿ. ಕರಾವಳಿಯ ಯುವಕರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದು, ಸಾವಿರಾರು…
ಅಪ್ರತಿಮ ಪ್ರತಿಭೆಯನ್ನು ಮೈಗೂಡಿಸಿಕೊಂಡು ಎಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿದ ಛಲಗಾರ, ಸರ್ವಧರ್ಮ ಕಲಾಭಿಮಾನಿಗಳ ಆಂತರ್ಯವನ್ನು ಮುಟ್ಟಿ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿ ಕೊಂಡು ಕಲಾಮಾತೆಯ ಸೇವೆಗೈಯುತ್ತಿರುವ ನಿಷ್ಠಾವಂತ ಕಲಾವಿದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ. ತನ್ನ ತಂದೆಯಿಂದಲೇ ಬಳುವಳಿಯಾಗಿ ಬಂದ ಕಲೆಗೆ ನಿಷ್ಠಾವಂತನಾಗಿ ನಿಂತು ಸಾಧನೆಯ ಶಿಖರವೇರಿ ಸಾಧಕರಿಗೆ ಸ್ಪೂರ್ತಿ ನಮ್ಮ ಇವತ್ತಿನ ಸಾಧಕರ ಹಾದಿಯ ಅತಿಥಿ. ಇವರ ಜೀವನವು ಬಾಲ್ಯದಿಂದಲೇ ಸುಖೀ ಕುಟುಂಬವಾಗಿದೆ. ಯಾವುದೇ ಕಷ್ಟಗಳಿಂದ ಸೋತವರಲ್ಲ ಇನ್ನೊಬ್ಬರನ್ನು ಸೋಲೋಕು ಬಿಟ್ಟವರಲ್ಲ ಆತ್ಮೀಯ ಮನಸ್ಸಿನ ಅದ್ಭುತ ಸಾಧಕ. ಯಕ್ಷಗಾನ,ಸಾಹಿತ್ಯ, ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಯವರು ವಿರಳ ಪಂಕ್ತಿಗೆ ಸೇರಿದ ಓರ್ವ ಬಹುಶ್ರುತ ವಿದ್ವಾಂಸರು. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಇರ್ದೆ ಬೆಟ್ಟಂಪಾಡಿಯಲ್ಲಿ ದಿ| ಕಲ್ಲಡ್ಕ ಕರಿಯಪ್ಪ ರೈ ಮತ್ತು ಗಿರಿಜಾ ರೈ ದಂಪತಿಯ ಎಂಟು ಮಂದಿ ಮಕ್ಕಳಲ್ಲಿ ಮೂರನೆಯವರಾಗಿ…
ನಮ್ಮ ಜೀವನದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜೀವನದಲ್ಲಿ ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಸುಜ್ಞಾನದ ಬೆಳಕನ್ನು ನೀಡುವ ಗುರುಗಳನ್ನು ನಾವು ಸ್ಮರಿಸಿಕೊಂಡು ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡು ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳೋಣ. ನಮ್ಮ ಬಂಟರ ಭವನದ ಚಾವಡಿಯಲ್ಲಿ ಗುರು ನಿತ್ಯಾನಂದ ಸ್ವಾಮಿ ಹಾಗೂ ಸಾಯಿಬಾಬಾರಿಗೆ ನಿತ್ಯ ಪೂಜೆಗಳನ್ನು ಸಲ್ಲಿಸುತ್ತಿದ್ದೇವೆ. ಜೀವನದಲ್ಲಿ ಸನ್ಮಾರ್ಗದ ದಾರಿ ತೋರಿಸುವವರೇ ಗುರುಗಳು. ಪೂಜ್ಯ ಗುರುಗಳ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅಭಿಪ್ರಾಯಪಟ್ಟರು. ಪುಣೆ ಬಂಟರ ಸಂಘದ ದಕ್ಷಿಣ – ಪೂರ್ವ ಪ್ರಾದೇಶಿಕ ಸಮಿತಿ ವತಿಯಿಂದ ಜುಲೈ 3 ರಂದು ಓಣಿಮಜಲು ಜಗನ್ನಾಥ ಶೆಟ್ಟಿ ಬಂಟರ ಭವನದ ಆರತಿ ಶಶಿಕಿರಣ್ ಶೆಟ್ಟಿ ಚಾವಡಿಯಲ್ಲಿ ನಡೆದ ಗುರು ಪೂರ್ಣಿಮೆ ಆಚರಣೆಯನ್ನುದ್ದೇಶಿಸಿ ಮಾತನಾಡಿದರು. ಸಂಘದ ದಕ್ಷಿಣ ಪೂರ್ವ ಪ್ರಾದೇಶಿಕ ಕಾರ್ಯಾಧ್ಯಕ್ಷ ಶೇಖರ್ ಸಿ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು . ನಂತರ ಪೂಜೆ…
2022ನೇ ಸಾಲಿನ ಆಲ್ ಇಂಡಿಯಾ ಮೆಡಿಕಲ್ ಸೂಪರ್ ಸ್ಪೆಷಾಲಿಟಿ ನೀಟ್ (MCh) ಪ್ರವೇಶ ಪರೀಕ್ಷೆ ಸರ್ಜರಿ ವಿಭಾಗದಲ್ಲಿ ಕುಂದಾಪುರದ ಅತೀಶ್ ಬಿ. ಶೆಟ್ಟಿ ದೇಶದಲ್ಲೇ ಪ್ರಥಮ ರ್ಯಾಂಕ್ ಪಡೆದುಕೊಂಡಿದ್ದಾರೆ. ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಸರ್ಜನ್ ಡಾ. ಬಾಲಕೃಷ್ಣ ಶೆಟ್ಟಿ ಹಾಗೂ ಸುನಿತಾ ಶೆಟ್ಟಿ ಕಂದಾವರ ಅವರ ಪುತ್ರರಾದ ಅತೀಶ್ ಬಿ. ಶೆಟ್ಟಿ ಅವರು ಬ್ರಹ್ಮಾವರ ಲಿಟಲ್ ರಾಕ್ ಸ್ಕೂಲಿನಲ್ಲಿ ಪಿಯುಸಿ ತನಕದ ವಿದ್ಯಾಭ್ಯಾಸ ಪೂರೈಸಿ, ಸಿಇಟಿಯಲ್ಲಿ 13ನೇ ರ್ಯಾಂಕ್ ಪಡೆದುಕೊಂಡಿದ್ದರು. ಬಳಿಕ ಕೆಎಂಸಿ ಮಣಿಪಾಲದಲ್ಲಿ ಎಂಬಿಬಿಎಸ್, ಬೆಂಗಳೂರಿನ ಬಿಎಂಸಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಎಸ್ ಪದವಿಯನ್ನು ಮುಗಿಸಿ ಆಗಸ್ಟ್ ತಿಂಗಳಲ್ಲಿ ‘ಆಲ್ ಇಂಡಿಯಾ ಮೆಡಿಕಲ್ ಸೂಪರ್ ಸ್ಪೆಷಾಲಿಟಿ ನೀಟ್’ ಪರೀಕ್ಷೆ ಬರೆದಿದ್ದರು.
ಲೇಖಕಿ, ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕಿ ಅಕ್ಷಯ ಆರ್. ಶೆಟ್ಟಿಯವರ ಎರಡು ಕೃತಿಗಳ ಲೋಕಾರ್ಪಣೆ ಗುರುವಾರ ನಗರದ ಪತ್ರಿಕಾಭವನದಲ್ಲಿ ಜರುಗಿತು. ಕೃತಿ ಬಿಡುಗಡೆ ನೆರವೇರಿಸಿ ಮಾತಾಡಿದ ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ. ಚಿನ್ನಪ್ಪ ಗೌಡ ಅವರು, “ತುಳು ಭಾಷೆಯಲ್ಲಿ ತುಳು ಸಂಸ್ಕೃತಿಯನ್ನು ಶೋಧನೆ ಮಾಡುವಂತಹ ಕಾರ್ಯ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವುದು ಶ್ಲಾಘನೀಯ ವಿಚಾರ. ತುಳು ನಾಟಕಗಳಿಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆ. ಅಕ್ಷಯ ಶೆಟ್ಟಿಯವರು ಹಿಂದೆ ದೆಂಗ ಅನ್ನುವ ಕಾದಂಬರಿ ಬರೆದಿದ್ದಾರೆ. ಈಗ ಪೆರ್ಗ ಅನ್ನುವ ತುಳು ನಾಟಕವನ್ನು ತುಳು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಹಿಡಿ ಅಕ್ಕಿಯ ಧ್ಯಾನ ಕವನ ಸಂಕಲನ ಕೂಡಾ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಂಡಿದೆ. ಪೆರ್ಗ ಅಂದ್ರೆ ತುಳು ಭಾಷೆಯಲ್ಲಿ ಗೆಲುವು, ಆಕಸ್ಮಿಕವಾಗಿ ಸಿಗುವ ಸಂಪತ್ತು ಅನ್ನುವ ಅರ್ಥವಿದೆ. ಒಂದು ನಿಧಿಯ ಹುಡುಕಾಟದ ಹಿಂದಿನ ಶೋಧ ಮತ್ತು ಅದರ ಸುತ್ತಲಿನ ಸನ್ನಿವೇಶಗಳನ್ನು ಬಹಳ ಚೆನ್ನಾಗಿ ಲೇಖಕಿ ನಿರೂಪಿಸಿದ್ದಾರೆ. ಲೇಖಕಿ ಇನ್ನಷ್ಟು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡಲಿ” ಎಂದು ಶುಭ ಹಾರೈಸಿದರು.…