Author: admin

ಕತಾರ್ ರಾಷ್ಟ್ರದ ಖ್ಯಾತ ಕನ್ನಡಿಗ ಉದ್ಯಮಿ, ಸಮುದಾಯ ನಾಯಕ, ಸಾಮಾಜಿಕ ಚಟುವಟಿಕೆಗಳಲ್ಲಿನ ಕ್ರಿಯಾಶೀಲ, ಸಂಸ್ಕೃತಿ, ಪರಂಪರೆ, ನೆಲ, ಜಲ ಮತ್ತು ನಾಡ ಭಾಷೆಗಳ ಪ್ರತಿಪಾದಕ, ಡಾ.ಮೂಡಂಬೈಲು ರವಿಶೆಟ್ಟಿಯವರ ಬದುಕಿನ‌ ಚಿತ್ರಣದ “ರವಿತೇಜ” ಪುಸ್ತಕದ ಬಿಡುಗಡೆ ಸಮಾರಂಭ ದೋಹಾದಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ಜರುಗಿತು. ಸಾಂಪ್ರದಾಯಿಕ ಜ್ಯೋತಿ ಬೆಳಗುವ ಕಾರ್ಯಕ್ರಮದೊಂದಿಗೆ ಚಾಲನೆಯಾದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕತಾರಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಬಾಬುರಾಜನ್ ವಹಿಸಿದ್ದರು. ಭಾರತೀಯ ಸಮುದಾಯ ಸಹಾಯಾರ್ಥ ವೇದಿಕೆ (ICBF) ಸಂಸ್ಥೆಯ ಹಂಗಾಮಿ ಅಧ್ಯಕ್ಷ ವಿನೋದ್ ನಾಯರ್ ಅತಿಥಿಯಾಗಿ ಆಗಮಿಸಿದ್ದರು. ಕತಾರಿನ ಇನ್ನೋರ್ವ ಉದ್ಯಮಿ, DPS ಶಾಲೆಯ ನಿರ್ದೇಶಕ ರಾಕಿ ಫರ್ನಾಂಡೀಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕತಾರಿನ‌ ಉದ್ಯಮಿಗಳಾದ ಜೆರಾಲ್ಡ್ ಡಿಮೆಲ್ಲೊ,, ಅಬ್ದುಲ್ಲಾ ಮೋನು, ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷೆ ಮಿಲನ್ ಅರುಣ್, ಕತಾರ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಹೆಚ್.ಕೆ ಮಧು ಗೌರವಾನ್ವಿತ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷೆ,…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ.) ಮಂಗಳೂರು ಇದರ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿಯವರ ಸಮರ್ಥ ಸಾರಥ್ಯದಲ್ಲಿ ವಿಶ್ವ ಬಂಟರ ಸಮ್ಮೇಳನ -2023 ರ ಪ್ರಯುಕ್ತ ಅಕ್ಟೋಬರ್ 28 ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ “ವಿಶ್ವ ಬಂಟರ ಕ್ರೀಡಾಕೂಟ” ಹಾಗೂ ಅಕ್ಟೋಬರ್ 29 ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವಠಾರದಲ್ಲಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ “ವಿಶ್ವ ಬಂಟರ ಸಾಂಸ್ಕೃತಿಕ ವೈಭವ” ಕಾರ್ಯಕ್ರಮದ ಕರಪತ್ರವನ್ನು ದುಬೈಯಲ್ಲಿ ಬಿಡುಗಡೆಗೊಳಿಸಲಾಯಿತು. ದುಬೈನಲ್ಲಿ ಅಕ್ಟೋಬರ್ 8 ರಂದು ನಡೆದ ತ್ರಿರಂಗ ಸಂಗಮ ಮುಂಬಯಿಯ ಪ್ರಥಮ ವಾರ್ಷಿಕೋತ್ಸವ ಮತ್ತು ಯಶಸ್ವಿ ಸಂಘಟಕ ಕರ್ನೂರು ಮೋಹನ್ ರೈಯವರ ಗಲ್ಫ್ ರಾಷ್ಟ್ರದ 50 ನೇ ಕಾರ್ಯಕ್ರಮ “ತ್ರಿರಂಗ ಸುವರ್ಣ ಮೋಹನ ಸಂಭ್ರಮ”ದ ಶುಭ ಸಮಾರಂಭದ ವೇದಿಕೆಯಲ್ಲಿ ವಿಶ್ವ ಬಂಟರ ಸಾಂಸ್ಕೃತಿಕ ವೈಭವ” ಕಾರ್ಯಕ್ರಮದ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ಯು.ಎ.ಇ.ಬಂಟ್ಸ್ ನ ಅಧ್ಯಕ್ಷರಾದ ಸರ್ವೋತಮ ಶೆಟ್ಟಿ ಹಾಗೂ…

Read More

ಮಂಗಳೂರು : ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಆಯ್ಕೆಯಾಗಿದ್ದಾರೆ. ಇವರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಆಡಳಿತ ಮಂಡಳಿ ನಿರ್ದೇಶಕ ಹಾಗೂ ಮಂಗಳೂರು ಪ್ರೆಸ್ ಕ್ಲಬ್‌ನ ಉಪಾಧ್ಯಕ್ಷರಾಗಿದ್ದಾರೆ.

Read More

ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಪಕ್ಷ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ವಿಧಾನಸಭಾ ಚುನಾವಣೆಗೆ ಅರ್ಜಿ ಆಹ್ವಾನಿಸಿದ್ದ ಮಾದರಿಯಲ್ಲಿಯೇ ವಿಧಾನ ಪರಿಷತ್ತಿಗೆ ನಡೆಯಲಿರುವ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ವರ್ಧಾ ಆಕಾಂಕ್ಷಿಗಳು ಕೆಪಿಸಿಸಿಗೆ ಎರಡು ಲಕ್ಷ ರೂಪಾಯಿ ಮತ್ತು ಅರ್ಜಿ ಶುಲ್ಕ ಐದು ಸಾವಿರ ರೂ ಪಾವತಿಸಬೇಕಿದೆ. ಕೆಪಿಸಿಸಿಗೆ ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನವಾಗಿದೆ. ಪಕ್ಷದೊಳಗೆ ಆಕಾಂಕ್ಷಿಗಳ ನಡುವೆ ಭಾರೀ ಸ್ವರ್ಧೆ ಏರ್ಪಟ್ಟಿದ್ದು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ದಾವಣಗೆರೆ ವ್ಯಾಪ್ತಿಯನ್ನು ಹೊಂದಿರುವ ನೈಋತ್ಯ ಪದವೀಧರರ ಕ್ಷೇತ್ರದಿಂದ ಮೂಲತಃ ಕೋಡಿಂಬಾಡಿಯ ಮಠಂತಬೆಟ್ಟು ನಿವಾಸಿಯಾಗಿದ್ದು ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ಹರಿಪ್ರಸಾದ್ ರೈ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಇವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಹೆಚ್. ಪಿ. ಆರ್. ಫೌಂಡೇಶನ್ ಮುಖ್ಯಸ್ಥರಾಗಿರುವ ಹರಿಪ್ರಸಾದ್ ರೈ ಅವರು ಪುತ್ತೂರು, ಮಂಗಳೂರು, ಸೊರಬ ಮತ್ತು ಉಡುಪಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ.…

Read More

ಮುಂಬಯಿ, ಆ.27: ಜೀವನದ ಅನುಭವ ಲೇಖನಿ ರೂಪದಲ್ಲಿ ಬರುವುವೇ ಸಾಹಿತ್ಯವಾಗಿದೆ. ಬದುಕಿನ ಜಂಜಾಟವನ್ನ ಅತೀ ಹೆಚ್ಚು ಎದುರಿಸುವ ಹೆಣ್ಣು ತನ್ನನ್ನು ತಾನು ಸ್ವತಂತ್ರಗೊಳಿಸಿ ತನ್ನ ಭಾವನೆಯನ್ನು ಒಂದು ರೂಪದಲ್ಲಿ ಹೊರಗೆ ತರಬೇಕು ಎಂದು ಕಾತರಿಸುತ್ತಿರುವಾಗ ಅವಳಿಗೆ ಸಿಕ್ಕಿದಂತಹ ಬರವಣಿಗೆಯ ಹಾದಿಯೇ ಸಾಹಿತ್ಯ. ಪ್ರಸ್ತುತ ಪ್ರತಿಭಾನ್ವಿತ ಸಾಹಿತಿಗಳು ಮರೆಯಾಗುತ್ತಾರೋ ಅನ್ನುವ ಸಂದೇಹ ನನ್ನನ್ನು ಕಾಡುತ್ತಿದೆ. ಆದರೆ ಅದಾಗದಂತೆ ಸೃಜನದಂತಹ ಸಂಘಟನೆ ಇನ್ನಷ್ಟು ಕೆಲಸ ಮುನ್ನಡೆಸಲಿ ಎಂದು ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಇದರ ಕೆಬಿಇಎಸ್ ವಿದ್ಯಾಲಯದ ಪ್ರಾಂಶುಪಾಲೆ ಅಮೃತಾ ಅಜಯ್ ಶೆಟ್ಟಿ ತಿಳಿಸಿದರು. ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಕಿರು ಸಭಾಗೃಹದಲ್ಲಿ ಬೃಹನ್ಮುಂಬಯಿಯಲ್ಲಿನ ಕನ್ನಡ ಲೇಖಕಿಯರ ಬಳಗ `ಸೃಜನಾ ಮುಂಬಯಿ’ ಆಯೋಜಿಸಿ ದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಅಮೃತಾ ಶೆಟ್ಟಿ ಮಾತನಾಡಿದರು. ಮುಂಬಯಿ ಕನ್ನಡ ಸಂಘ ಅಧ್ಯಕ್ಷ ಗುರುರಾಜ್ ಎಸ್.ನಾಯಕ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಂಬಯಿಯಲ್ಲಿನ ಪದ್ಮಜಾ ಮಣ್ಣೂರ, ಡಾ| ದಾಕ್ಷಾಯಿಣಿ ಯಡಹಳ್ಳಿ, ಶಾರದಾ…

Read More

ತ್ರಿರಂಗ ಸಂಗಮ ಮುಂಬಯಿ ಪ್ರಥಮ ವರ್ಷದ ವಾರ್ಷಿಕೋತ್ಸವ ಮತ್ತು ಯಶಸ್ವಿ ಸಂಘಟಕ ಕರ್ನೂರು ಮೋಹನ್ ರೈಯವರ ಗಲ್ಫ್ ರಾಷ್ಟ್ರದ 50 ನೇ ಕಾರ್ಯಕ್ರಮ “ತ್ರಿರಂಗ ಮೋಹನ ಸುವರ್ಣ ಸಂಭ್ರಮ” ಕಾರ್ಯಕ್ರಮವು ಅಕ್ಟೋಬರ್ 8 ರಂದು ದುಬೈನಲ್ಲಿ ಯಶಸ್ವಿಯಾಗಿ ಜರುಗಿತು. ದುಬೈಯ ಎಮಿರೇಟ್ಸ್‌ ಸ್ಕೂಲ್ ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಎಇಯ ತುಳು ಕನ್ನಡಿಗರು ಮತ್ತು ಮಹಾರಾಷ್ಟ್ರದ ರಾಜ್ಯದಿಂದ ತುಳು ಕನ್ನಡಿಗರು ಉಪಸ್ಥಿತರಿದ್ದರು. ಮುಂಬಯಿ ಬಂಟರ ಸಂಘದ ಮಾಜಿ‌ ಅಧ್ಯಕ್ಷರಾದ ಬಿ ವಿವೇಕ್ ಶೆಟ್ಟಿಯವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಭವಾನಿ ಶಿಪ್ಪಿಂಗ್ ನ ಸಿಎಮ್ ಡಿ ಕುಸುಮೋಧರ ಶೆಟ್ಟಿಯವರು ಮುಖ್ಯ ಅತಿಥಿಯಾಗಿದ್ದರು. ಮುಂಬಯಿಯ ಪ್ರಸಿದ್ದ ಜ್ಯೋತಿಷಿ ಅಶೋಕ್ ಪುರೋಹಿತ್ ಆಶೀರ್ವಚನವಿತ್ತರು. ಎಮ್ ಸಿ ಎ ಯ ಮಾಜಿ ಜೊತೆ ಕಾರ್ಯದರ್ಶಿ ಡಾ.ಪಿ ವಿ ಶೆಟ್ಟಿ, ಯುಎಇ ಬಂಟ್ಸ್ ನ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಫಾರ್ಚೂನ್ ಗ್ರೂಪ್ ಆಫ್ ಹೋಟೇಲ್ಸ್ ನ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಯುಎಇಯ…

Read More

“ಐಕಳ ಹರೀಶ್ ಶೆಟ್ಟಿಯವರು ಹೊರನಾಡಿನ ಪ್ರತಿಸೂರ್ಯ. ಮುಂಬೈನ ತುಳು  ಕನ್ನಡಿಗರ ಧೀಮಂತ ನಾಯಕ. ಅವರು  ತಾರಾಮೌಲ್ಯ ಇರುವ ಕೆಲವೇ ಕೆಲವು ಸಂಘಟಕರಲ್ಲಿ ಒಬ್ಬರು. ಕ್ರಿಯಾಶೀಲ,  ಚಿಂತನಶೀಲ, ಸಹನಶೀಲ ಮತ್ತು ಆಧ್ಯಾತ್ಮಶೀಲಗಳನ್ನು ಮೈಗೂಡಿಸಿಕೊಂಡ ಮಹಾನಾಯಕ. ಇಂತಹ ಅಪರೂಪದ ದಣಿವರಿಯದ ಚೇತನ, ಸಂಘಟನ ಸೀಮಾಪುರುಷ, ಸಾಹಸಪುರುಷನನ್ನು ಗೌರವಿಸುವುದು ವಿಶ್ಕವಿದ್ಯಾಲಯದ ಕರ್ತವ್ಯ ಎಂಬ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂಬುದಾಗಿ ಮುಂಬೈ ವಿಶ್ಕವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಆದ ಡಾ ಜಿ ಎನ್ ಉಪಾಧ್ಯ ಅವರು ಅಭಿಪ್ರಾಯಪಟ್ಟರು. ಐಕಳ ಒಂದು ಸಣ್ಣ ಊರು. ತಮ್ಮ ಕರ್ತೃತ್ವ ಶಕ್ತಿಯಿಂದ ಐಕಳ ಇಂದು ವಿಶ್ವದ ಸಾಂಸ್ಕೃತಿಕ ನಕಾಶೆಯಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದೆ. ಸಹಕಾರ,  ಸಮಾಜಸೇವೆ ಒಂದು ಮಹೋನ್ನತ ತತ್ವ ಎಂದು ದೀನದಲಿತರ ಏಳಿಗೆಗೆ ಶ್ರಮಿಸುತ್ತಿರುವ ಐಕಳ ಹರೀಶ್ ಶೆಟ್ಟಿಯವರು ನಾಡಿಗೆ ಮಾದರಿ ಎಂದು ಡಾ. ಜಿ ಎನ್ ಉಪಾಧ್ಯ ಅವರು ನುಡಿದರು. ಅವರು ಸೆಪ್ಟೆಂಬರ್ 10 ರಂದು ಸಾಂತಕ್ರೂಜ್ ಕಲೀನಾ ಕ್ಯಾಂಪಸ್ ನ ಮುಂಬೈ ವಿಶ್ಕವಿದ್ಯಾನಿಲಯದ ಕವಿ ಕುಸುಮಾಗ್ರಜ ಮರಾಠಿ…

Read More

ಯಾವಾಗ ಗಂಡ-ಹೆಂಡತಿ, ಮಕ್ಕಳೇ ಪರಿವಾರ ಎಂಬ ಸಂಸ್ಕೃತಿ ಹುಟ್ಟಿತೋ ಅಲ್ಲಿಂದ ಮದುವೆಯಲ್ಲಿ  ಸ್ವಾರ್ಥ ಪ್ರಾರಂಭವಾಗಿ ಪರಿವಾರದ ಘನತೆ ಹಾಗೂ ಸಂಸ್ಕಾರ ಮಾಯವಾಯಿತು. ತಂದೆ- ತಾಯಿ; ಅಕ್ಕ-ತಂಗಿ; ಅಣ್ಣ-ತಮ್ಮ; ಸೋದರ ಮಾವ -ಅತ್ತೆ ಹೀಗೆ ಇವರೊಡನಿದ್ದ ಅನ್ಯೋನ್ಯತೆ ಮಾಯವಾಗಿ ಪರಿವಾರ ಎಂಬ ಮೂಲ ಸಂಸ್ಕಾರಯುತ ಪದ್ಧತಿ ಸವಕಳಿಯಾಯಿತು. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಸಂಪಾದನೆಗಾಗಿ ಬೋಧನೆ ವಿನಹ ವಿಶಾಲ ತಿಳುವಳಿಕೆಗೆ ಆಸ್ಪದ ಇಲ್ಲ. ಎಲ್ಲಿ ದೂರದೃಷ್ಠಿ, ತ್ಯಾಗ, ಸಮರ್ಪಣಾ ಮನೋಭಾವನೆ ಇರುತ್ತದೆಯೋ ಅಲ್ಲಿ ಪರಿವಾರದ ಬೇರುಗಳು ಬಲವಾಗಿರುತ್ತದೆ. ಸಂಸಾರದ ದೀರ್ಘ ಬಾಳಿಕೆಗೆ ಬುನಾದಿ ಈ ಅನುಭವ ಸಂಪನ್ನ ಪರಿವಾರದಿಂದ ಸಾಧ್ಯ ಹಾಗೂ ಅದರ ಅವಶ್ಯವಿದೆ. ಇಂದು ಅಂತಹ ವಾತಾವರಣವೇ ಇಲ್ಲವಾಗಿದೆ. ಕೇವಲ ಸೊಬಗು, ಪ್ರಲೋಭನೆ, ಸಂಭ್ರಮ ಆಕರ್ಷಣೆಗಳಿಗೆ ಒಳಗಾಗಿ ತಮ್ಮ ಬದುಕನ್ನು ಪರಿವಾರದಿಂದ ದೂರ ಮಾಡಿಕೊಳ್ಳುತ್ತಾ ಸಮಸ್ಯೆಗೆ ಒಳಗಾಗಲು ಸಮೃದ್ಧ ಪರಿವಾರದ ಮಾರ್ಗದರ್ಶನದ ಕೊರತೆಯು ಕಾರಣ ಎಂದು ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ದಿನಾಂಕ 02.07.2023 ರವಿವಾರ ಕನ್ನಡ ವೆಲ್ಫೇರ್ ಸೊಸಾಯಿಟಿ ಸಭಾಗೃಹ ಫಾಟ್ಕೋಪರ್ ಇಲ್ಲಿ…

Read More

ಮಂಗಳೂರು: ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸಾಮಾನ್ಯ ಜ್ಞಾನ ಬೆಳೆಸಿಕೊಂಡು ಸಮಾಜದ ಎಲ್ಲರೊಂದಿಗೆ ಬೆರೆಯುವ ವಿಶಾಲ ಮನೋಭಾವ ಹೊಂದಬೇಕೆಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಹೇಳಿದರು. ಅವರು ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್ ನಲ್ಲಿರುವ ಶ್ತೀಮತಿ ಗೀತಾ ಎಸ್ ಎಂ ಶೆಟ್ಟಿ ಸಭಾಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಸಿಎ ಶಾಂತರಾಮ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಕ್ರಿಯಾಶೀಲರಾದರೆ ಸಾಧನೆ ಸಾಧ್ಯ. ಪ್ರತಿಭಾ ಪುರಸ್ಕಾರದಿಂದ ಪ್ರತಿಭಾ ಪಲಾಯನ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಅವರು ಮಾತನಾಡಿ ಸಮಾಜದ ಯುವ ಪ್ರತಿಭೆಗಳನ್ನು ಗುರುತಿಸಿ, ಗೌರವಿಸುವ ಕಾರ್ಯ ಪ್ರಶಂಸನೀಯ ಎಂದರು. ಆರ್ಥೊಪೆಡಿಕ್ಸ್ ಸರ್ಜನ್ ಡಾ. ಬಿ. ಸಚ್ಚಿದಾನಂದ ರೈ ಆವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು…

Read More

ದಸರಾ ಹತ್ತಿರಬರುತ್ತಿದೆ. ಮಂಗಳೂರು ಮಧುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. ನವರಾತ್ರಿ ನವಶಕ್ತಿಯನ್ನು ವಿಶೇಷ ರೀತಿಯಲ್ಲಿ ಆರಾಧಿಸಿ ನಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುವ ಪರ್ವಕಾಲ. ಹಿಂದೆ ದಸರಾ ಎಂದರೆ ಮೈಸೂರು ಎನ್ನುವ ಕಾಲವಿತ್ತು. ಆದರೆ ಇಂದು ಜನಾರ್ದನ ಪೂಜಾರಿಯವರ ಕನಸಿನ ಮಂಗಳೂರು ದಸರಾ ವಿಶ್ವದ ಗಮನ ಸೆಳೆದಿರುವುದು ಸುಳ್ಳಲ್ಲ. ಮಂಗಳೂರಿನ ಅಧಿದೇವತೆ ಮಂಗಳಾದೇವಿ ಸನ್ನಿಧಿಯಲ್ಲಿ, ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಪ್ರಮುಖವಾಗಿ ಅದ್ದೂರಿ ದಸರಾವನ್ನು ನಾವು ಕಾಣಬಹುದು. ಅಲ್ಲದೆ ಮಂಗಳೂರಿನಾದ್ಯಂತ ಶಾರದಾ ಉತ್ಸವದ ಮೆರವಣಿಗೆ ಸೇರಿದಂತೆ ದಸರಾ ಶೋಭಯಾತ್ರೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಸೇರುತ್ತಾರೆ. ಶೋಭಾಯಾತ್ರೆಯಲ್ಲಿ ನಮ್ಮ ಸಂಸ್ಕೃತಿ, ಧರ್ಮ, ಪುರಾಣದ ಕಥೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳ ಜೊತೆಗೆ ಹಲವು ಕಲಾ ಪ್ರಕಾರಗಳನ್ನು ನಾವು ಕಾಣಬಹುದು. ಇತ್ತೀಚೆಗೆ ಕುದ್ರೋಳಿ ದಸರಾ ಸಮಿತಿಯ ನಿರ್ಧಾರದ ಒಂದು ವರದಿಯನ್ನು ಓದಿದೆ, ಅದರಲ್ಲಿ ಶೋಭಾಯಾತ್ರೆಯಲ್ಲಿ ದೈವದ ಸ್ತಬ್ಧ ಚಿತ್ರಗಳಿಗೆ ಅವಕಾಶವಿಲ್ಲ. ಅಲ್ಲದೆ ಯಾವುದೇ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸುವಂತಿಲ್ಲ ಎಂದಿತ್ತು. ಈ ನಿರ್ಧಾರ ಸ್ವಾಗತಾರ್ಹ. ಆದರೆ ಇಂತಹ ಧಾರ್ಮಿಕ ಶೋಭಯಾತ್ರೆಯಲ್ಲಿ…

Read More