ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಶಿವಮೊಗ್ಗ ಬಂಟರ ಸಂಘದ ಸದಸ್ಯರಾದ ಸುರೇಶ್ ಶೆಟ್ಟಿ ಹಾಗೂ ಸವಿತಾ ಎಸ್ ಶೆಟ್ಟಿಯವರ ಪುತ್ರ ಶಬರೀಶ್ ಎಸ್ ಶೆಟ್ಟಿ ಅವರು ನವೆಂಬರ್ 2024 ರಲ್ಲಿ ನಡೆದ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಿಎ ಪದವಿಯನ್ನು ಪಡೆದಿದ್ದಾರೆ. ಇವರು ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ಮಾಜಿ ಅಧ್ಯಕ್ಷರಾದ ಅನಿಲ್ ಶೆಟ್ಟಿ ಅವರ ಸಹೋದರನ ಪುತ್ರರಾಗಿದ್ದಾರೆ.