ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಕಳ, ಉಡುಪಿ, ಮಣಿಪಾಲ ಹಾಗೂ ಅಜೆಕಾರು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಂತದ ವಿದ್ಯಾರ್ಥಿ ವೇತನ ರೂ. ೧ ಕೋಟಿ ೪೪ ಲಕ್ಷವನ್ನು ೨೯.೦೫.೨೦೨೬ ರಂದು ಕಾರ್ಕಳ ಜ್ಞಾನಸುಧಾದಲ್ಲಿ ಹಾಗೂ ರೂ. ೬೭ ಲಕ್ಷದ ೮೦ ಸಾವಿರವನ್ನು ೦೩.೦೬.೨೦೨೬ ರಂದು ಅಜೆಕಾರು ಜ್ಞಾನಸುಧಾದಲ್ಲಿ ವಿತರಿಸಲಾಗಿದ್ದು, ಇದೀಗ ದ್ವಿತೀಯ ಹಂತದ ವಿದ್ಯಾರ್ಥಿವೇತನವಾಗಿ ರೂ. ೫೫ ಲಕ್ಷದ ೩೦ ಸಾವಿರವನ್ನು ೧೩.೦೭.೨೦೨೬ ರಂದು ಮಣಿಪಾಲ ಜ್ಞಾನಸುಧಾದಲ್ಲಿ ಹಾಗೂ ರೂ. ೩೯ ಲಕ್ಷದ ೨೦ ಸಾವಿರವನ್ನು ೧೪.೦೭.೨೦೨೬ ರಂದು ಉಡುಪಿ ಜ್ಞಾನಸುಧಾದಲ್ಲಿ ವಿತರಿಸಲಾಗುವುದು.
೨೭೧ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಟ್ರಸ್ಟ್ ವತಿಯಿಂದ ಅಜೆಕಾರು ಜ್ಞಾನಸುಧಾದಲ್ಲಿ ಪ್ರಸಕ್ತ ಸಾಲಿನಲ್ಲಿ ೯ನೇ ತರಗತಿ ಹಾಗೂ ಪ್ರಥಮ ಪಿ.ಯು.ಸಿ.ಯ ೧೧೨ ವಿದ್ಯಾರ್ಥಿಗಳಿಗೆ ಹಾಗೂ ಕಾರ್ಕಳ ಜ್ಞಾನಸುಧಾದಲ್ಲಿ ೬ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ.ಯವರೆಗಿನ ೧೫೯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.


ಶೈಕ್ಷಣಿಕ ಸಾಧನೆ ಅಲ್ಲದೆ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ೨೦೨೫ರಲ್ಲಿ ನೀಟ್ ಬರೆದ ೬೨೨ ವಿದ್ಯಾರ್ಥಿಗಳಲ್ಲಿ ೨೨೭ ವಿದ್ಯಾರ್ಥಿಗಳು ಎಮ್.ಬಿ.ಬಿ.ಎಸ್ ಪ್ರವೇಶ ಪಡೆದಿರುತ್ತಾರೆ ಹಾಗೂ ೨೦೨೬ರಲ್ಲಿ ೫ ವಿದ್ಯಾರ್ಥಿಗಳು ಐ.ಐ.ಟಿ. ಹಾಗೂ ೧೫ ವಿದ್ಯಾರ್ಥಿಗಳು ಎನ್.ಐ.ಟಿ. ಪ್ರವೇಶ ಪಡೆದಿದ್ದು, ೨೦೧ ವಿದ್ಯಾರ್ಥಿಗಳು ಕೆ.ಸಿ.ಇ.ಟಿ. ಇಂಜಿನಿಯರಿAಗ್ನಲ್ಲಿ ೫೦೦೦ ದೊಳಗಿನ ರ್ಯಾಂಕ್ ಪಡೆದಿರುತ್ತಾರೆ.




















































































































