ರಾಷ್ಟ್ರ ರಾಜಧಾನಿಯಲ್ಲಿ ತುಳುನಾಡಿನ ಸಂಸ್ಕೃತಿ ಪರಂಪರೆ ಪ್ರತಿಬಿಂಬಿಸಲು ಅವಿರತ ಶ್ರಮಿಸುತ್ತಿರುವ ಪ್ರತಿಷ್ಠಿತ ಸಂಘಟನೆ ‘ದೆಹಲಿ ತುಳುಸಿರಿ’ಯ ಅಧ್ಯಕ್ಷರಾಗಿ ವಸಂತ ಶೆಟ್ಟಿ ಬೆಳ್ಳಾರೆ ಪುನರಾಯ್ಕೆಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತುಳುನಾಡಿನ ಮಣ್ಣಿನ ಸೊಗಡನ್ನು ಪಸರಿಸುತ್ತಿರುವ ದೆಹಲಿ ತುಳುಸಿರಿಯ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ವಸಂತ ಶೆಟ್ಟಿ ಬೆಳ್ಳಾರೆ ಆಯ್ಕೆಯಾಗಿದ್ದಾರೆ. ಅವರು ದೆಹಲಿ ಕರ್ನಾಟಕ ಸಂಘ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಸಾಂಸ್ಕೃತಿಕ ಸಂಘಟಕರಾಗಿದ್ದಾರೆ.
ಇದೇ ವೇಳೆ, ‘ದೆಹಲಿ ತುಳುಸಿರಿ’ಯ ಉಪಾಧ್ಯಕ್ಷರಾಗಿ ಬಿ. ಪ್ರದೀಪ್, ಮಾಲಿನಿ ಪ್ರಹ್ಲಾದ್, ಕಾರ್ಯದರ್ಶಿಯಾಗಿ ಅರವಿಂದ ಬಿಜೈ, ಜತೆ ಕಾರ್ಯದರ್ಶಿಗಳಾಗಿ ಪ್ರಕಾಶ್ ಶೆಟ್ಟಿ ಉಳೆಪಾಡಿ, ಕೃಷ್ಣರಾಜ್ ಕೆ. ಎನ್., ಖಜಾಂಚಿಯಾಗಿ ವಿಖ್ಯಾತ್ ಸಿ. ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲಕ್ಷ್ಮಣ್ ನಾಯ್ಕ, ಡ್ಯಾರೆಲ್ ಜೆಸಿಕ ಫೆನಾಂಡಿಸ್, ಹರ್ಷಿತಾ ಎಸ್. ಕೆ.. ಪ್ರಶಾಂತ್ ಕುಮಾರ್, ಮೆಲ್ವಿನ್ ಗ್ಯಾಬೆಲ್ ಲೋಬೊ, ಕಾರ್ತಿಕ್ ರೈ, ರವಿ, ಯು.ಎ.ಶರೀಫ್, ರಾಘವೇಂದ್ರ ನಾಯ್ಕ, ಶುಭಾ ದೇವಿಪ್ರಸಾದ್, ನಿರ್ಮಲಾ ನಾಗೇಶ್, ಅಶ್ವಿತಾ ಮಿಥೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ‘ದೆಹಲಿ ತುಳುಸಿರಿ’ ಕಾರ್ಯದರ್ಶಿ ಅರವಿಂದ ಬಿಜೈ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.