Author: admin
ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮದ ಅನ್ವಯ ನಗರದ ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಭವನ ನಿರ್ಮಾಣ ಕಾಮಗಾರಿಗೆ 10 ಲಕ್ಷ ರೂ. ಗಳ ನೆರವು ನೀಡಲಾಗಿದೆ. ನಗರದ ಜಿಲ್ಲಾ ಪಂಚಾಯತ್‍ನ ಮಿನಿ ಸಭಾಂಗಣದಲ್ಲಿ ಬ್ಯಾಂಕ್ ಆಫ್ ಇಂಡಿಯಾದ ಎಚಿಡಿ ಹಾಗೂ ಸಿಇಒ ಅಟನ್ ಕುಮಾರ್ ದಾಸ್ ಅವರು ಭಾರತೀಯ ರೆಡ್ ಕ್ರಾಸ್ ಅವರು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎ. ಶಾಂತಾರಾಮ ಶೆಟ್ಟಿ ಹಾಗೂ ಉಪಾಧ್ಯಕ್ಷ ಜಿಲ್ಲಾ ಪಂಚಾಯತ್ ಸಿಇಒ ಡಾ| ಕುಮಾರ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಡಾ| ಕುಮಾರ್ ಅವರು, ಬ್ಯಾಂಕ್ ಆಫ್ ಇಂಡಿಯಾದಿಂದ ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ಅತ್ಯಂತ ಸೂಕ್ತ ಸಮಯದಲ್ಲಿ ಆರ್ಥಿಕ ಸಹಕಾರ ನೀಡುತ್ತಿರುವುದು ಸ್ವಾಗತಾರ್ಹ, ಇದರಿಂದ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿ, ಇದು ಇತರ ಬ್ಯಾಂಕುಗಳಿಗೂ ಮಾದರಿಯಾಗಲಿದೆ ಎಂದರು. ಬ್ಯಾಂಕ್ ಆಫ್ ಇಂಡಿಯಾದ ಜನರಲ್…
ಬಂಟರ ಸಂಘ ಪಿಂಪ್ರಿ – ಚಿಂಚ್ವಾಡ್ ವತಿಯಿಂದ ಸಮಾಜ ಬಾಂಧವರ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಹಾಗೂ ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇಕಡಾ ೭೫ ಮತ್ತು ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭವು ಜೂನ್ ೧೮ ರಂದು ಸಂಘದ ಕಿರು ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ಪ್ರಧಾನ ಕಾರ್ಯದರ್ಶಿ ಅರವಿಂದ ರೈ ಉಪಸ್ಥಿತರಿದ್ದರು. ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ ಮಾತನಾಡಿ, ನಮ್ಮ ಸಂಘದ ಮೂಲಕ ಪ್ರತೀ ವರ್ಷ ಆರ್ಥಿಕವಾಗಿ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಆರ್ಥಿಕ ನೆರವನ್ನು ನೀಡುತ್ತಾ ಬಂದಿರುತ್ತೇವೆ. ಯಾಕೆಂದರೆ ಸಮಾಜದ ಯಾವುದೇ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದೆಂಬ ಉದ್ದೇಶ ಸಂಘದ್ದಾಗಿದೆ. ಮಕ್ಕಳು ವಿದ್ಯಾವಂತರಾದರೆ ಅವರ ಕುಟುಂಬ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಉತ್ತಮ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಸಂಘದ ಈ ಕಾರ್ಯಕ್ಕೆ ಸಂಘದ…
ಇಂಜಿನಿಯರ್ಸ್ ಡೇ ಅಂಗವಾಗಿ, ಸಾಲಿಗ್ರಾಮದ ಇಂಜಿನಿಯರ್ ನಾಗರಾಜ್ ಸೋಮಯಾಜಿ ಯವರನ್ನು ಸಾಲಿಗ್ರಾಮದ ಅವರ ಕಛೇರಿಗೆ ತೆರಳಿ ಸನ್ಮಾನಿಸಲಾಯಿತು. ಈ ಸಂದರ್ಭ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ರಾಜಾರಾಮ್ ಶೆಟ್ಟಿ ಕಲ್ಕಟ್ಟೆ, ಕಾರ್ಯದರ್ಶಿ ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ, ಕೋಶಾಧಿಕಾರಿ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ, ಸ್ಥಾಪಕಾಧ್ಯಕ್ಷರಾದ ಲಯನ್ adv ಬನ್ನಾಡಿ ಸೋಮನಾಥ ಹೆಗ್ಡೆ, ಮಾಜಿ ಅಧ್ಯಕ್ಷರಾದ ಲಯನ್ Adv ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ, ಲಯನ್ ಯಾಳಕ್ಲು ಚಂದ್ರ ಶೇಖರ್ ಶೆಟ್ಟಿ, ಲಯನ್ ಬನ್ನಾಡಿ ಸುಭಾಶ್ಚಂದ್ರ ಶೆಟ್ಟಿ ಕೆ, ಲಯನ್ ಕೊಮೆ ವಸಂತ್ ಶೆಟ್ಟಿ ಅಚ್ಲಾಡಿ, ಲಯನ್ ಕೊಮೆ ಸುರೇಂದ್ರ ಶೆಟ್ಟಿ ಅಚ್ಲಾಡಿ, ಲಯನ್ ಅಕ್ಷಯ್ ಹೆಗ್ಡೆ, ಲಯನ್ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ, ಲಯನ್ ಬನ್ನಾಡಿ ಜೀವನ್ ಬಿ.ಬಿ., ಲಯನ್ ಗುಂಡ ಶೆಟ್ಟಿ ಮಾನಂಬಳ್ಳಿ, ಲಯನ್ Adv ಬನ್ನಾಡಿ ವಿನಯ್ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಅ. 12 ರಂದು ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಕಾರ್ಯಕ್ರಮಕ್ಕೆ ಉಡುಪಿ ಡಾ. ಎ. ವಿ. ಬಾಳಿಗ ಆಸ್ಪತ್ರೆಯ ಖ್ಯಾತ ಮನೋವೈದ್ಯ ಡಾ. ವಿರುಪಾಕ್ಷ ದೇವರಮನೆ ಆಗಮಿಸಿದ್ದರು. ಅವರು ಹೊಸ ಜನರೇಶನ್ ಪೇರೆಂಟಿಂಗ್ ವಿಷಯದ ಕುರಿತು ಪೋಷಕರಿಗೆ ಮಾಹಿತಿಯನ್ನು ನೀಡಿ, ನಾವು ಮಕ್ಕಳಿಗೆ ಸಮಯವನ್ನು ನೀಡಬೇಕು. ನಮ್ಮ ದಿನಚರಿಯ ಭಾಗದಲ್ಲಿ ಮಕ್ಕಳ ನೆನಪು ಇರಬೇಕು ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ ಮಕ್ಕಳು ಇಂದು ಮೊಬೈಲ್ ದಾಸರಾಗಿದ್ದಾರೆ. ಅವರಿಗೆ ತಾತ್ವಿಕ ಜೀವನದ ಅರಿವನ್ನು, ಸರಿ ತಪ್ಪುಗಳನ್ನು ಗುರುತಿಸುವ ಸಾಮರ್ಥ್ಯವನ್ನು ಬೆಳೆಸಬೇಕೆಂದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಶ್ರೀನಿಧಿ ಸಚಿನ್ ಕುಮಾರ್ ಜಿ ಎಮ್ ವಿದ್ಯಾಸಂಸ್ಥೆಯ ಪ್ರತಿಯೊಂದು ಮಗುವಿಗೂ ಮೌಲ್ಯ ಶಿಕ್ಷಣದ ಜೊತೆಗೆ ವೈಯಕ್ತಿಕ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಡುತ್ತಿದೆ. ಇದು ನಮಗೆಲ್ಲರಿಗೂ ಹೆಮ್ಮೆ ಎಂದರು. ಪಿಟಿಎ ಉಪಾಧ್ಯಕ್ಷ ನಾಗರಾಜ ಸೋಮಯಾಜಿ ಮಾತನಾಡಿ ನಾವೆಲ್ಲರೂ…
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ವತಿಯಿಂದ ಬನ್ನಾಡಿ ದಿ.ಸುಬ್ಬಣ್ಣ ಹೆಗ್ಡೆ ಜನ್ಮ ಶತಾಬ್ದಿ ಸ್ಮಾರಕ ಭವನದಲ್ಲಿ ಮದರ ತೆರೆಸಾ ಅವರ 112ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ರಾಜಾರಾಮ ಶೆಟ್ಟಿ ಕಲ್ಕಟ್ಟೆ, ಕಾರ್ಯದರ್ಶಿ ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ, ಕೋಶಾಧಿಕಾರಿ ಲಯನ್ ಬಾಲಕೃಷ್ಣ ಶೆಟ್ಟಿ ವಡ್ಡರ್ಸೆ, ಮಾಜಿ ವಲಯಾಧ್ಯಕ್ಷರಾದ ಲಯನ್ ಬನ್ನಾಡಿ ಸೋಮನಾಥ ಹೆಗ್ಡೆ, ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಲಯನ್ ಕೊತ್ತಾಡಿ ಉದಯ ಕುಮಾರ್ ಶೆಟ್ಟಿ, ಹಾಗೂ ಕ್ಲಬ್ ನ ಇತರ ಸದಸ್ಯರಾದ ಲಯನ್ ಚಂದ್ರ ಶೇಖರ ಶೆಟ್ಟಿ ಯಾಳಹಕ್ಲು, ಲಯನ್ ಸುಭಾಷ್ ಶೆಟ್ಟಿ ಬನ್ನಾಡಿ, ಲಯನ್ ಪ್ರಭಾಕರ್ ಶೆಟ್ಟಿ ಬನ್ನಾಡಿ, ಲಯನ್ ಶ್ರೀಧರ್ ಶೆಟ್ಟಿ ಉಪ್ಲಾಡಿ, ಲಯನ್ ರಾಜೀವ್ ಶೆಟ್ಟಿ ಅಚ್ಲಾಡಿ, ಲಯನ್ ಜೀವನ ಬಿ.ಬಿ ಉಪ್ಲಾಡಿ, ಲಯನ್ ವಿನಯ್ ಶೆಟ್ಟಿ ಬನ್ನಾಡಿ, ಲಯನ್ ಅಶಿತ್ ಶೆಟ್ಟಿ ಬನ್ನಾಡಿ ಇವರುಗಳು ಉಪಸ್ಥಿತರಿದ್ದರು
ಕಳೆದ ನಾಲ್ಕು ದಶಕಗಳಿಂದ ಮುಂಬಯಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ವೈವಿಧ್ಯಮಯ, ಹಾಗೂ ಅರ್ಥಪೂರ್ಣ ತುಳು ಸಮ್ಮೇಳನ, ತುಳುವರ ಹಬ್ಬಗಳ ಆಚರಣೆ ಮತ್ತು ತುಳುವರ ಆಚಾರ ವಿಚಾರಗಳನ್ನು ತಿಳಿಸುವ ಭಿನ್ನ ರೀತಿಯ ಕಾರ್ಯಕ್ರಮಗಳನ್ನು ನಿರಂತರ ನೀಡುತ್ತಾ ಬಂದಿರುವ ಮುಂಬಯಿ ತುಳು ಕನ್ನಡಿಗರ ಹೆಮ್ಮೆಯ ಸಂಸ್ಥೆ “ಕಲಾ ಜಗತ್ತು ಮುಂಬಯಿ” ಜುಲೈ 23 ರಂದು ಸಾಂತಾಕ್ರೂಸ್ ಪೇಜಾವರ ಮಠ ಸಭಾಗೃಹದಲ್ಲಿ ಏರ್ಪಡಿಸಲಿರುವ ‘ಆಟಿದ ಪೊರ್ಲು ತಿರ್ಲ್ ‘ ತೋನ್ಸೆ ವಿಜಯಕುಮಾರ್ ಶೆಟ್ಟಿಯವರ ನೂತನ ಪರಿಕಲ್ಪನೆಯ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ತಾ.08/07/2023 ರಂದು ಸಂಜೆ ಬಿಲ್ಲವ ಭವನದಲ್ಲಿ ಏರ್ಪಡಿಸಲಾಗಿತ್ತು. ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಪ್ರಸಿದ್ಧ ನಾಟಕ ನಿರ್ದೇಶಕ ಶ್ರೀ ವಿಜಯಕುಮಾರ್ ಶೆಟ್ಟಿ ತೋನ್ಸೆ ಅವರು ಮಾತನಾಡುತ್ತಾ, ಈ ಕಾರ್ಯಕ್ರಮದ ಉದ್ದೇಶ ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಮಾತ್ರವಲ್ಲದೆ ತುಳುವರ ಆರಾಧನೆ, ಆಚರಣೆಗಳ ಬಗ್ಗೆಯೂ ತಿಳುವಳಿಕೆಯನ್ನು ನೀಡುವುದಾಗಿದೆ. ಈ ಕಾರ್ಯಕ್ರಮಕ್ಕೆ ಒಳನಾಡಿನ ಹೆಸರಾಂತ ವಾಗ್ಮಿಗಳು ಆಗಮಿಸಲಿದ್ದು ಇದರ ಪ್ರಯೋಜನವನ್ನು ತುಳುವ ಕನ್ನಡಿಗರು ಪಡೆಯುವಂತಾಗಬೇಕು ಎಂದು ಅವರು…
ಜ್ಞಾನಸರೋವರ ಅಂತರ್ರಾಷ್ಟ್ರೀಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಜ್ಞಾನಸರೋವರ ಅಂತರಾಷ್ಟ್ರೀಯ ವಸತಿ ಶಾಲೆಯ ಸಂಸ್ಥಾಪಕರಾದ ಶ್ರೀ ಸುಧಾಕರ ಎಸ್ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತ, ನಾಯಕತ್ವ ಎನ್ನುವುದು ಒಂದು ರೀತಿಯ ಜವಾಬ್ದಾರಿಯೇ ಹೊರತು ಅಧಿಕಾರವಲ್ಲ ಎಂದು ಹೇಳುವುದರ ಜೊತೆಗೆ ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಮಾರ್ಗದರ್ಶನವನ್ನು, ಆತ್ಮ ವಿಶ್ವಾಸವನ್ನು ತುಂಬಬೇಕು ಎಂದು ಹೇಳಿದರು. ಯಾವುದೇ ಧರ್ಮ ಬೇಧವಿಲ್ಲದೆ ನಾವೆಲ್ಲರೂ ಸಮಾನರು, ನಾವೆಲ್ಲರೂ ಒಂದೇ ಎನ್ನುವಂತಹ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಮೂಡಿ ಬರಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರಿನ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಮತಿ ಸ್ವರ್ಣ ಜಿ ಎಸ್ ರವರು ಮಾತನಾಡುತ್ತ ನಾಯಕತ್ವ ಎಂಬುದು ಒಂದು ಹಡಗಿನಂತೆ ವಿದ್ಯಾರ್ಥಿಗಳು ನಾವಿಕರಂತೆ ಎಂದು ಹೇಳುವುದರ ಜೊತೆಗೆ ಜ್ಞಾನಸರೋವರ ಅಂತರ್ರಾಷ್ಟ್ರೀಯ ವಸತಿ ಶಾಲೆಯು, ಅಂತರರಾಷ್ಟ್ರೀಯ ಮಟ್ಟದ ಶಾಲೆ ಆಗಿದ್ದರೂ ನಮ್ಮ ಭಾರತೀಯ ಸಂಸ್ಕೃತಿಯನ್ನು ಬಿಟ್ಟುಕೊಟ್ಟಿಲ್ಲ ಎಂಬುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆ ತಮ್ಮ ಹದಿಮೂರು ವರ್ಷದ ವೃತ್ತಿಜೀವನದಲ್ಲಿ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಅಕ್ಟೋಬರ್ 28 ಮತ್ತು 29ರಂದು ಉಡುಪಿಯಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮೇಳನ-2023 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಬುಧವಾರ ಸಂಜೆ ನಗರದ ಗೋಲ್ಡ್ ಫಿಂಚ್ ಖಾಸಗಿ ಹೋಟೆಲ್ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, “ಐಕಳ ಹರೀಶ್ ಶೆಟ್ಟಿಯವರು ಬಂಟ ಸಮಾಜದ ಅತ್ಯಧ್ಭುತ ನಾಯಕ. ಅವರಲ್ಲಿನ ಸಂಘಟನಾ ಶಕ್ತಿ ಇತರರಿಗೆ ಮಾದರಿ. ಇಂದು ವಿಶ್ವ ಬಂಟರ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದೇವೆ. ಇದು ಬಂಟ ಸಮಾಜದ ಮನೆ ಮನೆಗೆ ತಲುಪಲಿ ಆ ಮೂಲಕ ಒಂದೇ ವೇದಿಕೆಯಡಿಯಲ್ಲಿ ಸಮಾಜದ ಎಲ್ಲರೂ ಪಾಲ್ಗೊಳ್ಳುವಂತಾಗಲಿ, ಸಮ್ಮೇಳನದಿಂದ ಸಮಾಜಕ್ಕೆ ಪ್ರಯೋಜನವಾಗಲಿ” ಎಂದು ಶುಭ ಹಾರೈಸಿದರು. ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, “ಕಾರ್ಯಕ್ರಮ ಖಂಡಿತಾ ಯಶಸ್ವಿಯಾಗುತ್ತದೆ. ಆದರೆ ದೊಡ್ಡ ಸಂಖ್ಯೆಯಲ್ಲಿ…
ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಕೆ.ಆರ್.ಪಾಟ್ಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಶಿರ್ವ ಗ್ರಾ.ಪಂ. ಅಧ್ಯಕ್ಷ ಗಾದಿಗೆ ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರತನ್ ಕುಮಾರ್ ಶೆಟ್ಟಿ ಕಲ್ಲೊಟ್ಟು ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಹುದ್ದೆಗಾಗಿ ಕಾಂಗ್ರೆಸ್ ಬೆಂಬಲಿತ ರತನ್ ಕುಮಾರ್ ಶೆಟ್ಟಿ ಮತ್ತು ಬಿಜೆಪಿ ಬೆಂಬಲಿತರಾಗಿ ಶ್ರೀನಿವಾಸ ಶೆಣೈ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷರಾಗಿ ರತನ್ ಕುಮಾರ್ ಶೆಟ್ಟಿ 20-14 ಮತಗಳ ಅಂತರದಲ್ಲಿ ಜಯ ಶಾಲಿಯಾಗಿದ್ದಾರೆ. 34 ಸದಸ್ಯಬಲದ ಶಿರ್ವ ಗ್ರಾ.ಪಂ. ನಲ್ಲಿ ಕಾಂಗ್ರೆಸ್ ಬೆಂಬಲಿತ 19 ಗ್ರಾ.ಪಂ.ಸದಸ್ಯರಿದ್ದು, ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಜೆಪಿಯ ಒಂದು ಮತ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮತ್ತು ಕಾಪು ಕ್ಷೇತ್ರಾಧ್ಯಕ್ಷ ನವೀನ್‌ಚಂದ್ರ ಜೆ. ಸುವರ್ಣ ಉಪಸ್ಥಿತರಿದ್ದು ರತನ್‌ಕುಮಾರ್ ಶೆಟ್ಟಿಯವರನ್ನು ಅಭಿನಂದಿಸಿದ್ದಾರೆ. ಚುನಾಣಾಧಿಕಾರಿಯಾಗಿ ಉಡುಪಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಚುನಾವಣೆಯ ಪ್ರಕ್ರಿಯೆ ನಡೆಸಿಕೊಟ್ಟರು.
ಕುಂದ ವರ್ಮನೆಂಬ ಅರಸ ಪಂಚ ಗಂಗಾವಳಿಯ ಹತ್ತಿರ ಕುಂದೇಶ್ವರ ದೇವಾಲಯವನ್ನು ಕಟ್ಟಿಸಿದ್ದು, ಅದರಿಂದಾಗಿ ಕುಂದಾಪುರವೆಂದು ಹೆಸರು ಬಂತು ಎನ್ನಲಾಗುವ ಪರಂಪರೆಯನ್ನು ಮೈಗೂಡಿಸಿಕೊಂಡ ದೇವಸ್ಥಾನ ದೈವಸ್ಥಾನಗಳ ನೆಲೆ ಬೀಡು. ಕಡಲು ನದಿಗಳ ಸುಂದರ ಸಂಗಮ, ಆಕಾಶಕ್ಕೆ ಸಡ್ಡು ಹೊಡೆದು ನಿಂತ ಗುಡ್ಡ ಬೆಟ್ಟಗಳಿಂದ ಆವೃತವಾದ ನಯನ ಮನೋಹರ ಪಶ್ಚಿಮ ಘಟ್ಟಗಳ ದಟ್ಟ ಹಸಿರ ನಿಸರ್ಗದ ಮಡಿಲಲ್ಲಿ ಜಲಧಾರೆಯಾಗಿ ಹರಿವ ನದಿ ತೊರೆಗಳ ನಾಡು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನರ್ಘ ರತ್ನಗಳನ್ನು ನೀಡಿದ ವಿಶಿಷ್ಟತೆಯ ತವರು ಕುಂದಾಪುರ. ನಾಟಕ, ಯಕ್ಷಗಾನ, ಸಾಹಿತ್ಯ, ಶಿಕ್ಷಣ, ಹೀಗೆ ಹಲವಾರು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಕಂಗೊಳಿಸುವ ಕುಂದಾಪುರದ ಆಡು ಭಾಷೆ ಕುಂದಾಪ್ರ ಕನ್ನಡ. ಆಷಾಢ ಅಮಾವಾಸ್ಯೆ ಅಂದರೆ ಕರ್ಕಾಟಕ ಅಮಾವಾಸ್ಯೆಯಂದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಸಂಭ್ರಮ. ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯ ಸಂಭ್ರಮದಲ್ಲಿ ಮನದಂಗಳದ ಭಾಷೆ ಕುಂದ ಕನ್ನಡದ ಸೊಬಗು. ಕುಂದಾಪ್ರ ಕನ್ನಡ ಭಾಷಿ ಅಲ್ಲ ಬದ್ಕ್ ಎಂಬ ಘೋಷ ವಾಕ್ಯವೇ ಇಲ್ಲಿನ ಜನರ ಭಾಷಾ ಪ್ರೀತಿಯನ್ನು ತೋರುತ್ತದೆ.…